قرآن کریم کے معانی کا ترجمہ - کنڑ ترجمہ - بشیر ميسوری

صفحہ نمبر:close

external-link copy
41 : 8

وَاعْلَمُوْۤا اَنَّمَا غَنِمْتُمْ مِّنْ شَیْءٍ فَاَنَّ لِلّٰهِ خُمُسَهٗ وَلِلرَّسُوْلِ وَلِذِی الْقُرْبٰی وَالْیَتٰمٰی وَالْمَسٰكِیْنِ وَابْنِ السَّبِیْلِ ۙ— اِنْ كُنْتُمْ اٰمَنْتُمْ بِاللّٰهِ وَمَاۤ اَنْزَلْنَا عَلٰی عَبْدِنَا یَوْمَ الْفُرْقَانِ یَوْمَ الْتَقَی الْجَمْعٰنِ ؕ— وَاللّٰهُ عَلٰی كُلِّ شَیْءٍ قَدِیْرٌ ۟

ಮತ್ತು ನೀವು ಪಡೆದ ಯಾವುದೇ ಸಮರಾರ್ಜಿತ ಸೊತ್ತಿನ ಐದನೇ ಒಂದAಶವು ಅಲ್ಲಾಹನಿಗಾಗಿ, ಅವರ ಸಂದೇಶವಾಹಕರಿಗಾಗಿ, ನಿಕಟ ಸಂಬAಧಿಕರಿಗಾಗಿ, ಅನಾಥರಿಗಾಗಿ, ನಿರ್ಗತಿಕರಿಗಾಗಿ ಮತ್ತು ಯಾತ್ರಿಕರಿಗಾಗಿ ರುವುದೆಂಬುದನ್ನು ಅರಿತುಕೊಳ್ಳಿರಿ; ನೀವು ಅಲ್ಲಾಹನಲ್ಲೂ, ಸತ್ಯಾಸತ್ಯತೆಗಳ ಇತ್ಯಾರ್ಥದ ದಿನದಲ್ಲೂ ಅರ್ಥಾತ್ ಎರಡು ಬಣಗಳು ಎದುರುಗೊಂಡ ದಿನ ನಾವು ನಮ್ಮ ದಾಸನ ಮೇಲೆ ಅವತೀರ್ಣಗೊಳಸಿರುವುದರಲ್ಲೂ (ಆದೇಶಗಳಲ್ಲೂ) ವಿಶ್ವಾಸವಿಡುವುದಾದರೆ ಅಲ್ಲಾಹನು ಸರ್ವ ಸಂಗತಿಗಳ ಮೇಲೆ ಸಾಮಥÀ್ರ್ಯವುಳ್ಳವನಾಗಿದ್ದಾನೆ. info
التفاسير:

external-link copy
42 : 8

اِذْ اَنْتُمْ بِالْعُدْوَةِ الدُّنْیَا وَهُمْ بِالْعُدْوَةِ الْقُصْوٰی وَالرَّكْبُ اَسْفَلَ مِنْكُمْ ؕ— وَلَوْ تَوَاعَدْتُّمْ لَاخْتَلَفْتُمْ فِی الْمِیْعٰدِ ۙ— وَلٰكِنْ لِّیَقْضِیَ اللّٰهُ اَمْرًا كَانَ مَفْعُوْلًا ۙ۬— لِّیَهْلِكَ مَنْ هَلَكَ عَنْ بَیِّنَةٍ وَّیَحْیٰی مَنْ حَیَّ عَنْ بَیِّنَةٍ ؕ— وَاِنَّ اللّٰهَ لَسَمِیْعٌ عَلِیْمٌ ۟ۙ

ನೀವು (ಬದ್ರ್ ಕಣಿವೆಯ) ಸಮೀಪದ ಬದಿಯಲ್ಲಿದ್ದಿರಿ, ಅವರು ದೂರದ ಭಾಗದಲ್ಲಿದ್ದರು ಮತ್ತು ವರ್ತಕ ತಂಡವು ನಿಮಗಿಂತ ಕೆಳಗೆ ಕಡಲ ತೀರದಲ್ಲಿದ್ದಂತಹ ಸಂದರ್ಭ, ನೀವು ಪರಸ್ಪರ ಹೋರಾಟ ಮಾಡಲು ನಿರ್ಧರಿಸುತ್ತಿದ್ದರೆ ಖಂಡಿತವಾಗಿಯು ನೀವು ನಿಶ್ಚಿತ ಸಮಯಕ್ಕೆ ತಲುಪುವುದರಲ್ಲಿ ಭಿನ್ನಾಭಿಪ್ರಾಯ ಹೊಂದುತ್ತಿದ್ದಿರಿ. ಆದರೆ ಅಲ್ಲಾಹನಿಗೆ ನಿಶ್ಚಿತವಾದ ಸಂಗತಿಯನ್ನು ಮಾಡಿಯೇ ಬಿಡಬೇಕಿತ್ತು. ಇದು ನಾಶಹೊಂದಿರುವವರು ಸತ್ಯಾಸತ್ಯೆತೆಯ ಆಧಾರಗಳನ್ನು ನೋಡಿ ನಾಶಹೊಂದಲೆAದೂ, ಬದುಕಿರುವವರು ಸತ್ಯಾಸತ್ಯತೆಗಳ ಆಧಾರಗಳನ್ನು ನೋಡಿ ಬದುಕಲೆಂದಾಗಿದೆ. ಖಂಡಿತವಾಗಿಯು ಅಲ್ಲಾಹನು ಚೆನ್ನಾಗಿ ಆಲಿಸುವವನೂ, ಎಲ್ಲವನ್ನು ಅರಿಯುವವನೂ ಆಗಿದ್ದಾನೆ. info
التفاسير:

external-link copy
43 : 8

اِذْ یُرِیْكَهُمُ اللّٰهُ فِیْ مَنَامِكَ قَلِیْلًا ؕ— وَلَوْ اَرٰىكَهُمْ كَثِیْرًا لَّفَشِلْتُمْ وَلَتَنَازَعْتُمْ فِی الْاَمْرِ وَلٰكِنَّ اللّٰهَ سَلَّمَ ؕ— اِنَّهٗ عَلِیْمٌۢ بِذَاتِ الصُّدُوْرِ ۟

ಓ ಪೈಗಂಬರÀರೇ ಅಲ್ಲಾಹನು ನಿಮಗೆ ನಿಮ್ಮ ಕನಸಿನಲ್ಲಿ ಅವರ ಸಂಖ್ಯೆಯನ್ನು ಕಡಿಮೆ ತೋರಿಸಿದ ಸಂದರ್ಭವನ್ನು ಸ್ಮರಿಸಿರಿ. ಅವರನ್ನು ಬಹುಸಂಖ್ಯಾತರನ್ನಾಗಿ ತೋರಿಸುತ್ತಿದ್ದರೆ ನೀವು ಧೈರ್ಯಗುಂದುತ್ತಿದ್ದಿರಿ ಮತ್ತು ಕಾರ್ಯನಿರ್ವಹಣೆಯಲ್ಲಿ ಪರಸ್ಪರ ಭಿನ್ನಾಭಿಪ್ರಾಯ ತೋರಿಸುತ್ತಿದ್ದಿರಿ. ಆದರೆ ಅಲ್ಲಾಹನು ಕಾಪಾಡಿದನು. ಅವನು ಹೃದಯಗಳಲ್ಲಿರುವ ರಹಸ್ಯಗಳನ್ನು ಚೆನ್ನಾಗಿ ಅರಿಯುವವನಾಗಿದ್ದಾನೆ. info
التفاسير:

external-link copy
44 : 8

وَاِذْ یُرِیْكُمُوْهُمْ اِذِ الْتَقَیْتُمْ فِیْۤ اَعْیُنِكُمْ قَلِیْلًا وَّیُقَلِّلُكُمْ فِیْۤ اَعْیُنِهِمْ لِیَقْضِیَ اللّٰهُ اَمْرًا كَانَ مَفْعُوْلًا ؕ— وَاِلَی اللّٰهِ تُرْجَعُ الْاُمُوْرُ ۟۠

ನೀವು ಪರಸ್ಪರ ಎದುರುಗೊಂಡಾಗ ಅವನು ಅವರನ್ನು ನಿಮ್ಮ ದೃಷ್ಟಿಯಲ್ಲಿ ಅತ್ಯಲ್ಪಸಂಖ್ಯೆಯಲ್ಲಿ ಮತ್ತು ನಿಮ್ಮನ್ನು ಅವರ ದೃಷ್ಟಿಯಲ್ಲಿ ಅಲ್ಪಸಂಖ್ಯೆಯಲ್ಲಿ ತೋರಿಸಿದ ಸಂದರ್ಭವನ್ನು ಸ್ಮರಿಸಿರಿ. ಇದು ಮಾಡಲೇಬೇಕಾದ ಒಂದು ಕಾರ್ಯವನ್ನು ಅಲ್ಲಾಹನು ನೆರವೇರಿಸಲೆಂದಾಗಿತ್ತು. ಮತ್ತು ಸಕಲ ಕಾರ್ಯಗಳು ಅಲ್ಲಾಹುವಿನೆಡೆಗೇ ಮರಳಿಸಲಾಗುವುದು. info
التفاسير:

external-link copy
45 : 8

یٰۤاَیُّهَا الَّذِیْنَ اٰمَنُوْۤا اِذَا لَقِیْتُمْ فِئَةً فَاثْبُتُوْا وَاذْكُرُوا اللّٰهَ كَثِیْرًا لَّعَلَّكُمْ تُفْلِحُوْنَ ۟ۚ

ಓ ಸತ್ಯವಿಶ್ವಾಸಿಗಳೇ, ನೀವು ಯಾವುದಾದರೂ ಸೈನ್ಯವನ್ನು ಎದುರುಗೊಂಡರೆ ನೀವು ಸ್ಥಿರವಾಗಿ ನಿಲ್ಲಿರಿ ಮತ್ತು ಅಲ್ಲಾಹನನ್ನು ಅತ್ಯಧಿಕ ಸ್ಮರಿಸಿರಿ ಪ್ರಾಯಶಃ ನೀವು ಯಶಸ್ಸು ಪಡೆಯಬಹುದು. info
التفاسير: