قرآن کریم کے معانی کا ترجمہ - کنڑ ترجمہ - بشیر ميسوری

external-link copy
189 : 7

هُوَ الَّذِیْ خَلَقَكُمْ مِّنْ نَّفْسٍ وَّاحِدَةٍ وَّجَعَلَ مِنْهَا زَوْجَهَا لِیَسْكُنَ اِلَیْهَا ۚ— فَلَمَّا تَغَشّٰىهَا حَمَلَتْ حَمْلًا خَفِیْفًا فَمَرَّتْ بِهٖ ۚ— فَلَمَّاۤ اَثْقَلَتْ دَّعَوَا اللّٰهَ رَبَّهُمَا لَىِٕنْ اٰتَیْتَنَا صَالِحًا لَّنَكُوْنَنَّ مِنَ الشّٰكِرِیْنَ ۟

ಅವನೇ ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದವನು ಮತ್ತು ಅದರಿಂದಲೇ ಅದರ ಜೋಡಿಯನ್ನುಂಟು ಮಾಡಿದನು. ಇದು ಆಕೆಯೊಂದಿಗೆ ಅವನು ಮನಃ ಶಾಂತಿಯನ್ನು ಪಡೆಯಲೆಂದಾಗಿದೆ. ನಂತರ ಪತಿಯು ಪತ್ನಿಯನ್ನು ಸಮೀಪಿಸಿದಾಗ ಅವಳಿಗೆ ಹಗುರವಾದ ಗರ್ಭವು ನಿಂತಿತು. ನಂತರ ಅವಳು ಅದನ್ನು ಹೊತ್ತುಕೊಂಡು ನಡೆದಾಡಿದಳು. ತದನಂತರ ಅವಳಿಗೆ ಭಾರವು ಹೆಚ್ಚಾದಾಗ ಪತಿ-ಪತ್ನಿಯರಿಬ್ಬರೂ ತಮ್ಮ ಒಡೆಯನಾದ ಅಲ್ಲಾಹನೊಂದಿಗೆ ನೀನು ನಮಗೆ ಉತ್ತಮ ಹಾಗೂ ಆರೋಗ್ಯವಂತ ಸಂತತಿಯನ್ನು ಕರುಣಿಸಿದರೆ ನಾವು ಕೃತಜ್ಞತೆ ತೋರುವೆವು ಎಂದು ಪ್ರಾರ್ಥಿಸಿದರು. info
التفاسير: