قرآن کریم کے معانی کا ترجمہ - کنڑ ترجمہ - بشیر ميسوری

external-link copy
46 : 4

مِنَ الَّذِیْنَ هَادُوْا یُحَرِّفُوْنَ الْكَلِمَ عَنْ مَّوَاضِعِهٖ وَیَقُوْلُوْنَ سَمِعْنَا وَعَصَیْنَا وَاسْمَعْ غَیْرَ مُسْمَعٍ وَّرَاعِنَا لَیًّا بِاَلْسِنَتِهِمْ وَطَعْنًا فِی الدِّیْنِ ؕ— وَلَوْ اَنَّهُمْ قَالُوْا سَمِعْنَا وَاَطَعْنَا وَاسْمَعْ وَانْظُرْنَا لَكَانَ خَیْرًا لَّهُمْ وَاَقْوَمَ ۙ— وَلٰكِنْ لَّعَنَهُمُ اللّٰهُ بِكُفْرِهِمْ فَلَا یُؤْمِنُوْنَ اِلَّا قَلِیْلًا ۟

ಕೆಲವು ಯಹೂದರು ದೈವ ವಚನಗಳನ್ನು ಅವುಗಳ ನೈಜ ಸ್ಥಾನದಿಂದ ಅಸ್ತವ್ಯಸ್ತಗೊಳಿಸುತ್ತಾರೆ ಮತ್ತು ನಾವು ಆಲಿಸಿದೆವು ಮತ್ತು ಧಿಕ್ಕಾರ ತೋರಿದೆವು. ನೀವು ಕೇಳಿರಿ ನಿಮ್ಮನ್ನು ಕೇಳದಂತಾಗಲೆAದು ಹೇಳುತ್ತಾರೆ. ಮತ್ತು “ರಾಯಿನಾ” (ನಮ್ಮತ್ತ ಲಕ್ಷö್ಯ ಕೊಡಿರಿ) ಎಂಬ ಮಾತನ್ನು ತಮ್ಮ ನಾಲಗೆಯ ಮೂಲಕ ತಿರುಚಿಕೊಳ್ಳುತ್ತಾರೆ ಮತ್ತು ಧರ್ಮನಿಂದನೆ ಮಾಡುತ್ತಾರೆ. ಆದರೆ ಅವರು ಇದರ ಹೊರತು ನಾವು ಆಲಿಸಿದೆವು ಮತ್ತು ವಿಧೇಯತೆ ತೋರಿದೆವು ಮತ್ತು ನೀವು ಕೇಳಿಸಿಕೊಳ್ಳಿರಿ ಮತ್ತು ನಮ್ಮನ್ನು ನೋಡಿರಿರೆಂದು ಅವರು ಹೇಳಿರುತ್ತಿದ್ದರೆ ಅದು ಅವರಿಗೆ ಅತ್ಯುತ್ತಮವೂ, ಅತ್ಯಂತ ಯೋಗ್ಯವೂ ಆಗಿರುತ್ತಿತ್ತು. ಆದರೆ ಅಲ್ಲಾಹನು ಅವರ ನಿಷೇಧದ ನಿಮಿತ್ತ ಅವರನ್ನು ಶಪಿಸಿರುತ್ತಾನೆ. ಆದ್ದರಿಂದ ಅವರು ಅತ್ಯಲ್ಪವೇ ವಿಶ್ವಾಸವಿಡುತ್ತಾರೆ. info
التفاسير: