قرآن کریم کے معانی کا ترجمہ - کنڑ ترجمہ - بشیر ميسوری

صفحہ نمبر:close

external-link copy
77 : 19

اَفَرَءَیْتَ الَّذِیْ كَفَرَ بِاٰیٰتِنَا وَقَالَ لَاُوْتَیَنَّ مَالًا وَّوَلَدًا ۟ؕ

ನಮ್ಮ ಸೂಕ್ತಿಗಳನ್ನು ನಿರಾಕರಿಸಿದ ಮತ್ತು ತನಗೆ ಖಂಡಿತ ಸೊತ್ತು ಸಂತಾನಗಳನ್ನು ನೀಡಲಾಗುವುದೆಂದು ಹೇಳಿದ ವ್ಯಕ್ತಿಯನ್ನು ನೀವು ಕಂಡಿರಾ? info
التفاسير:

external-link copy
78 : 19

اَطَّلَعَ الْغَیْبَ اَمِ اتَّخَذَ عِنْدَ الرَّحْمٰنِ عَهْدًا ۟ۙ

ಅವನಿಗೆ ಅಗೋಚರ ಜ್ಞಾನದ ಸುಳಿವು ಸಿಕ್ಕಿದೆಯೇ? ಅಥವಾ ಪರಮ ದಯಾಮಯನಾದ ಅಲ್ಲಾಹನ ಬಳಿ ಒಪ್ಪಂದವೊAದನ್ನು ಮಾಡಿಕೊಂಡಿರುವನೇ? info
التفاسير:

external-link copy
79 : 19

كَلَّا ؕ— سَنَكْتُبُ مَا یَقُوْلُ وَنَمُدُّ لَهٗ مِنَ الْعَذَابِ مَدًّا ۟ۙ

ಹಾಗಲ್ಲಾ! ಅವನು ಹೇಳುತ್ತಿರವುದನ್ನು ನಾವು ಬರೆದಿಡಲಿದ್ದೇವೆ ಮತ್ತು ನಾವು ಅವನಿಗೆ ಯಾತನೆಯನ್ನು ಇನ್ನಷ್ಟು ಹೆಚ್ಚಿಸುವೆವು. info
التفاسير:

external-link copy
80 : 19

وَّنَرِثُهٗ مَا یَقُوْلُ وَیَاْتِیْنَا فَرْدًا ۟

ಅವನು ಹೇಳುತ್ತಿರುವ ಸೊತ್ತು ಸಂತಾನವನ್ನು ನಾವು ಹಿಂತೆಗೆದುಕೊಳ್ಳುವೆವು.ಮತ್ತು ಅವನು ನಮ್ಮ ಬಳಿ ಒಬ್ಬಂಟಿಯಾಗಿ ಬರಲಿದ್ದಾನೆ. info
التفاسير:

external-link copy
81 : 19

وَاتَّخَذُوْا مِنْ دُوْنِ اللّٰهِ اٰلِهَةً لِّیَكُوْنُوْا لَهُمْ عِزًّا ۟ۙ

ಅವರು ತಮಗೆ ಪ್ರತಿಷ್ಠೆಯ ವಸ್ತುವಾಗಲೆಂದು ಅಲ್ಲಾಹನ ಹೊರತು ಇತರರನ್ನು ಆರಾಧ್ಯರನ್ನಾಗಿ ಮಾಡಿ ಕೊಂಡಿದ್ದಾರೆ. info
التفاسير:

external-link copy
82 : 19

كَلَّا ؕ— سَیَكْفُرُوْنَ بِعِبَادَتِهِمْ وَیَكُوْنُوْنَ عَلَیْهِمْ ضِدًّا ۟۠

ಹಾಗಲ್ಲ! ಅವರಂತು ಇವರ ಆರಾಧನೆಯನ್ನು ನಿರಾಕರಿಸುವರು ಮತ್ತು ಇವರ ವಿರೋಧಿಗಳಾಗುವರು. info
التفاسير:

external-link copy
83 : 19

اَلَمْ تَرَ اَنَّاۤ اَرْسَلْنَا الشَّیٰطِیْنَ عَلَی الْكٰفِرِیْنَ تَؤُزُّهُمْ اَزًّا ۟ۙ

ನಾವು ಸತ್ಯನಿಷೇಧಿಗಳ ಮೇಲೆ ಶೈತಾನರನ್ನು ಅವರ ಹಿಂದೆ ಹಚ್ಚಿಬಿಡಲಾಗಿರುವುದನ್ನು ನೀವು ಕಂಡಿಲ್ಲವೇ?ಅವರು ಇವರನ್ನು ಸತ್ಯದ ವಿರುದ್ಧ ಪ್ರಚೋದಿಸುತ್ತಿದ್ದಾರೆ. info
التفاسير:

external-link copy
84 : 19

فَلَا تَعْجَلْ عَلَیْهِمْ ؕ— اِنَّمَا نَعُدُّ لَهُمْ عَدًّا ۟ۚ

ಆದ್ದರಿಂದ ನೀವು ಅವರ ಬಗ್ಗೆ ಆತುರ ಪಡಬೇಡಿ ಖಂಡಿತವಾಗಿಯು ನಾವು ಅವರ ದಿನಗಳನ್ನು ಎಣಿಸುತ್ತಿದ್ದೇವೆ. info
التفاسير:

external-link copy
85 : 19

یَوْمَ نَحْشُرُ الْمُتَّقِیْنَ اِلَی الرَّحْمٰنِ وَفْدًا ۟ۙ

ಅಂದು ನಾವು ಭಯಭಕ್ತಿಯುಳ್ಳವರನ್ನು ಪರಮ ದಯಾಮಯನಾದ ಅಲ್ಲಾಹನ ಕಡೆಗೆ ಅತಿಥಿಗಳಾಗಿ ಒಟ್ಟುಸೇರಿಸುವೆವು. info
التفاسير:

external-link copy
86 : 19

وَّنَسُوْقُ الْمُجْرِمِیْنَ اِلٰی جَهَنَّمَ وِرْدًا ۟ۘ

ಹಾಗೂ ನಾವು ಅಪರಾಧಿಗಳನ್ನು ತೀವ್ರದಾಹದ ಸ್ಥಿತಿಯಲ್ಲಿ ನರಕದೆಡೆಗೆ ಅಟ್ಟುತ್ತಾ ಹೋಗುವೆವು. info
التفاسير:

external-link copy
87 : 19

لَا یَمْلِكُوْنَ الشَّفَاعَةَ اِلَّا مَنِ اتَّخَذَ عِنْدَ الرَّحْمٰنِ عَهْدًا ۟ۘ

ಪರಮ ದಯಾಮಯನಾದ ಅಲ್ಲಾಹನ ಬಳಿ ಕರಾರನ್ನು ಪಡೆದುಕೊಂಡವನ ಹೊರತು ಅವರು ಯಾರು ಶಿಫಾರಸ್ಸಿನ ಅಧಿಕಾರವನ್ನು ಹೊಂದಿರುವುದಿಲ್ಲ. info
التفاسير:

external-link copy
88 : 19

وَقَالُوا اتَّخَذَ الرَّحْمٰنُ وَلَدًا ۟ؕ

ಪರಮ ದಯಾಮಯನಾದ ಅಲ್ಲಾಹನು ಪುತ್ರನನ್ನು ಹೊಂದಿದಾನೆAದು ಅವರು ಹೇಳುತ್ತಾರೆ. info
التفاسير:

external-link copy
89 : 19

لَقَدْ جِئْتُمْ شَیْـًٔا اِدًّا ۟ۙ

ಖಂಡಿತವಾಗಿಯು ನೀವು ಅತ್ಯಂತ ಘೋರ ಮಾತನ್ನಾಡಿರುವಿರಿ. info
التفاسير:

external-link copy
90 : 19

تَكَادُ السَّمٰوٰتُ یَتَفَطَّرْنَ مِنْهُ وَتَنْشَقُّ الْاَرْضُ وَتَخِرُّ الْجِبَالُ هَدًّا ۟ۙ

ಆಕಾಶಗಳು ಈ ಮಾತಿನ ನಿಮಿತ್ತ ಸಿಡಿದು ಬೀಳುವ, ಭೂಮಿಯು ಬಿರಿಯುವ, ಪರ್ವತಗಳು ಧ್ವಂಸಗೊಳ್ಳುವ ಸಮಯ ಸಮೀಪದಲ್ಲಿದೆ. info
التفاسير:

external-link copy
91 : 19

اَنْ دَعَوْا لِلرَّحْمٰنِ وَلَدًا ۟ۚ

ಏಕೆಂದರೆ ಅವರು ಪರಮ ದಯಾಮಯನಿಗೆ ಪುತ್ರನಿರುವನೆಂದು ವಾದಿಸುತ್ತಾರೆ. info
التفاسير:

external-link copy
92 : 19

وَمَا یَنْۢبَغِیْ لِلرَّحْمٰنِ اَنْ یَّتَّخِذَ وَلَدًا ۟ؕ

ಪುತ್ರನನ್ನು ನಿಶ್ಚಯಿಸಿಕೊಳ್ಳುವುದು ಪರಮ ದಯಾಮಯನಿಗೆ ಶೋಭಿಸುವುದಿಲ್ಲ. info
التفاسير:

external-link copy
93 : 19

اِنْ كُلُّ مَنْ فِی السَّمٰوٰتِ وَالْاَرْضِ اِلَّاۤ اٰتِی الرَّحْمٰنِ عَبْدًا ۟ؕ

ಭೂಮಿ ಆಕಾಶಗಳಲ್ಲಿರುವವರೆಲ್ಲರೂ ಅಲ್ಲಾಹನ ದಾಸರಾಗಿ ಹಾಜರಾಗುವವರಾಗಿದ್ದಾರೆ. info
التفاسير:

external-link copy
94 : 19

لَقَدْ اَحْصٰىهُمْ وَعَدَّهُمْ عَدًّا ۟ؕ

ವಾಸ್ತವದಲ್ಲಿ ಅವನು ಅವರೆಲ್ಲರನ್ನು ಆವರಿಸಿರುತ್ತಾನೆ ಮತ್ತು ಎಲ್ಲರನ್ನು ಎಣಿಸಿಯೂ ಇಟ್ಟಿರುವನು. info
التفاسير:

external-link copy
95 : 19

وَكُلُّهُمْ اٰتِیْهِ یَوْمَ الْقِیٰمَةِ فَرْدًا ۟

ಪುನರುತ್ಥಾನ ದಿನದಂದು ಅವರೆಲ್ಲರೂ ಅವನಲ್ಲಿಗೆ ಒಬ್ಬಂಟಿಗರಾಗಿ ಹಾಜರಾಗುವರು. info
التفاسير: