قۇرئان كەرىم مەنىلىرىنىڭ تەرجىمىسى - كاناداچە تەرجىمىسى- ھەمزە بەتتۇر

بەت نومۇرى:close

external-link copy
92 : 4

وَمَا كَانَ لِمُؤْمِنٍ اَنْ یَّقْتُلَ مُؤْمِنًا اِلَّا خَطَأً ۚ— وَمَنْ قَتَلَ مُؤْمِنًا خَطَأً فَتَحْرِیْرُ رَقَبَةٍ مُّؤْمِنَةٍ وَّدِیَةٌ مُّسَلَّمَةٌ اِلٰۤی اَهْلِهٖۤ اِلَّاۤ اَنْ یَّصَّدَّقُوْا ؕ— فَاِنْ كَانَ مِنْ قَوْمٍ عَدُوٍّ لَّكُمْ وَهُوَ مُؤْمِنٌ فَتَحْرِیْرُ رَقَبَةٍ مُّؤْمِنَةٍ ؕ— وَاِنْ كَانَ مِنْ قَوْمٍ بَیْنَكُمْ وَبَیْنَهُمْ مِّیْثَاقٌ فَدِیَةٌ مُّسَلَّمَةٌ اِلٰۤی اَهْلِهٖ وَتَحْرِیْرُ رَقَبَةٍ مُّؤْمِنَةٍ ۚ— فَمَنْ لَّمْ یَجِدْ فَصِیَامُ شَهْرَیْنِ مُتَتَابِعَیْنِ ؗ— تَوْبَةً مِّنَ اللّٰهِ ؕ— وَكَانَ اللّٰهُ عَلِیْمًا حَكِیْمًا ۟

ಒಬ್ಬ ಸತ್ಯವಿಶ್ವಾಸಿ ಇನ್ನೊಬ್ಬ ಸತ್ಯವಿಶ್ವಾಸಿಯನ್ನು ಕೊಲ್ಲಬಾರದು. ಪ್ರಮಾದವಶಾತ್ ಸಂಭವಿಸುವುದರ ಹೊರತು. ಒಬ್ಬ ಸತ್ಯವಿಶ್ವಾಸಿಯನ್ನು ಯಾರಾದರೂ ಪ್ರಮಾದವಶಾತ್ ಕೊಂದುಬಿಟ್ಟರೆ, ಅದಕ್ಕೆ ಪರಿಹಾರವಾಗಿ ಒಬ್ಬ ಸತ್ಯವಿಶ್ವಾಸಿ ಗುಲಾಮನನ್ನು ಸ್ವತಂತ್ರಗೊಳಿಸಬೇಕು ಮತ್ತು ಕೊಲೆಯಾದವನ ಕುಟುಂಬಕ್ಕೆ ರಕ್ತ ಪರಿಹಾರ ಕೊಡಬೇಕು. ಅವರು (ಕೊಲೆಯಾದವನ ಕುಟುಂಬದವರು) ಅದನ್ನು ಉದಾರವಾಗಿ ಬಿಟ್ಟುಬಿಡುವ ಹೊರತು. ಕೊಲೆಯಾದವನು ಶತ್ರು ಪಕ್ಷಕ್ಕೆ ಸೇರಿದ ಸತ್ಯವಿಶ್ವಾಸಿಯಾಗಿದ್ದರೆ, ಒಬ್ಬ ಸತ್ಯವಿಶ್ವಾಸಿ ಗುಲಾಮನನ್ನು ಸ್ವತಂತ್ರಗೊಳಿಸಿದರೆ ಸಾಕು. ಅವನು ನಿಮ್ಮೊಂದಿಗೆ ಒಪ್ಪಂದದಲ್ಲಿರುವ ಪಕ್ಷಕ್ಕೆ ಸೇರಿದವನಾಗಿದ್ದರೆ ಅವನ ಕುಟುಂಬದವರಿಗೆ ರಕ್ತ ಪರಿಹಾರ ಕೊಡಬೇಕು ಮತ್ತು ಒಬ್ಬ ಸತ್ಯವಿಶ್ವಾಸಿ ಗುಲಾಮನನ್ನು ಸ್ವತಂತ್ರಗೊಳಿಸಬೇಕು. ಯಾರಿಗೆ ಇದು ಸಾಧ್ಯವಿಲ್ಲವೋ ಅವನು ಸತತ ಎರಡು ತಿಂಗಳು ಉಪವಾಸ ಆಚರಿಸಬೇಕು. ಇದು ಅಲ್ಲಾಹು ನಿಶ್ಚಯಿಸಿದ ಪಶ್ಚಾತ್ತಾಪವಾಗಿದೆ. ಅಲ್ಲಾಹು ಎಲ್ಲವನ್ನು ತಿಳಿದವನು ಮತ್ತು ವಿವೇಕಪೂರ್ಣನಾಗಿದ್ದಾನೆ. info
التفاسير:

external-link copy
93 : 4

وَمَنْ یَّقْتُلْ مُؤْمِنًا مُّتَعَمِّدًا فَجَزَآؤُهٗ جَهَنَّمُ خَلِدًا فِیْهَا وَغَضِبَ اللّٰهُ عَلَیْهِ وَلَعَنَهٗ وَاَعَدَّ لَهٗ عَذَابًا عَظِیْمًا ۟

ಯಾರು ಒಬ್ಬ ಸತ್ಯವಿಶ್ವಾಸಿಯನ್ನು ಉದ್ದೇಶಪೂರ್ವಕ ಕೊಲ್ಲುತ್ತಾನೋ, ಅವನಿಗೆ ನರಕಾಗ್ನಿಯೇ ಪ್ರತಿಫಲವಾಗಿದೆ. ಅವನು ಅದರಲ್ಲಿ ಶಾಶ್ವತವಾಗಿ ವಾಸಿಸುವನು. ಅವನು ಅಲ್ಲಾಹನ ಕೋಪ ಮತ್ತು ಶಾಪಕ್ಕೆ ಪಾತ್ರನಾಗುವನು. ಅಲ್ಲಾಹು ಅವನಿಗೆ ಅತಿಕಠೋರ ಶಿಕ್ಷೆಯನ್ನು ಸಿದ್ಧಗೊಳಿಸಿದ್ದಾನೆ. info
التفاسير:

external-link copy
94 : 4

یٰۤاَیُّهَا الَّذِیْنَ اٰمَنُوْۤا اِذَا ضَرَبْتُمْ فِیْ سَبِیْلِ اللّٰهِ فَتَبَیَّنُوْا وَلَا تَقُوْلُوْا لِمَنْ اَلْقٰۤی اِلَیْكُمُ السَّلٰمَ لَسْتَ مُؤْمِنًا ۚ— تَبْتَغُوْنَ عَرَضَ الْحَیٰوةِ الدُّنْیَا ؗ— فَعِنْدَ اللّٰهِ مَغَانِمُ كَثِیْرَةٌ ؕ— كَذٰلِكَ كُنْتُمْ مِّنْ قَبْلُ فَمَنَّ اللّٰهُ عَلَیْكُمْ فَتَبَیَّنُوْا ؕ— اِنَّ اللّٰهَ كَانَ بِمَا تَعْمَلُوْنَ خَبِیْرًا ۟

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವಾಗ (ಶತ್ರು ಮತ್ತು ಮಿತ್ರ ಯಾರೆಂದು) ಸ್ಪಷ್ಟವಾಗಿ ಗುರುತಿಸಿರಿ. ನಿಮಗೆ ಸಲಾಮ್ ಹೇಳಿದವನೊಂದಿಗೆ ನೀನು ಸತ್ಯವಿಶ್ವಾಸಿಯಲ್ಲ ಎಂದು ಹೇಳಬೇಡಿ. ನೀವು ಭೌತಿಕ ಲಾಭದ ಹುಡುಕಾಟದಲ್ಲಿದ್ದರೆ, ಅಲ್ಲಾಹನ ಬಳಿ ಯಥೇಷ್ಟ ಐಶ್ವರ್ಯವಿದೆ. ಈ ಹಿಂದೆ ನೀವೂ ಹೀಗೆಯೇ (ಸತ್ಯನಿಷೇಧದಲ್ಲಿ) ಇದ್ದಿರಿ.[1] ನಂತರ ಅಲ್ಲಾಹು ನಿಮಗೆ (ಸನ್ಮಾರ್ಗ ತೋರಿಸಿ) ಉಪಕಾರ ಮಾಡಿದನು. ಆದ್ದರಿಂದ ನೀವು ಸ್ಪಷ್ಟವಾಗಿ ಗುರುತಿಸಿರಿ. ನಿಶ್ಚಯವಾಗಿಯೂ ನೀವು ಮಾಡುವುದನ್ನು ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಿದ್ದಾನೆ. info

[1] ಯುದ್ಧದಲ್ಲಿ ಒಬ್ಬ ಶತ್ರು ಸೈನಿಕನನ್ನು ಕೊಂದರೆ, ಅವನ ಶಸ್ತ್ರ, ಯುದ್ಧಾಂಗಿ ಮುಂತಾದ ವಸ್ತುಗಳು ಕೊಂದವನಿಗೆ ಸಿಗುತ್ತದೆ. ಈ ಭೌತಿಕ ಲಾಭದ ಮೇಲೆ ಕಣ್ಣಿಟ್ಟು ಯಾರನ್ನೂ ಅನ್ಯಾಯವಾಗಿ ಕೊಲ್ಲಬೇಡಿ. ಹಿಂದಿನ ನಿಮಿಷದ ತನಕ ಶತ್ರುವಾಗಿದ್ದವನು, ನಿಮಗೆ ಸಲಾಂ ಹೇಳಿ ಮುಸಲ್ಮಾನನಾಗಲು ಮುಂದಾದರೆ, ಅವನು ತನ್ನ ಜೀವ ಉಳಿಸುವುದಕ್ಕಾಗಿ ಸಲಾಂ ಹೇಳುತ್ತಿದ್ದಾನೆಂದು ಭಾವಿಸಿ ಅವನನ್ನು ಕೊಲ್ಲಬೇಡಿ. ಹಿಂದೆ ನೀವು ಕೂಡ ಅವನಂತೆಯೇ ಸತ್ಯನಿಷೇಧಿಗಳಾಗಿದ್ದಿರಿ.

التفاسير: