قۇرئان كەرىم مەنىلىرىنىڭ تەرجىمىسى - كاناداچە تەرجىمىسى- ھەمزە بەتتۇر

بەت نومۇرى:close

external-link copy
101 : 3

وَكَیْفَ تَكْفُرُوْنَ وَاَنْتُمْ تُتْلٰی عَلَیْكُمْ اٰیٰتُ اللّٰهِ وَفِیْكُمْ رَسُوْلُهٗ ؕ— وَمَنْ یَّعْتَصِمْ بِاللّٰهِ فَقَدْ هُدِیَ اِلٰی صِرَاطٍ مُّسْتَقِیْمٍ ۟۠

ನೀವು ಹೇಗೆ ಸತ್ಯನಿಷೇಧಿಗಳಾಗುವಿರಿ? ನಿಮಗೆ ಅಲ್ಲಾಹನ ವಚನಗಳನ್ನು ಓದಿಕೊಡಲಾಗುತ್ತಿದೆ ಮತ್ತು ನಿಮ್ಮ ನಡುವೆ ಅವನ ಸಂದೇಶವಾಹಕರಿದ್ದಾರೆ. ಯಾರು ಅಲ್ಲಾಹನನ್ನು (ಇಸ್ಲಾಂ ಧರ್ಮವನ್ನು) ಬಿಗಿಯಾಗಿ ಹಿಡಿಯುತ್ತಾನೋ ಅವನನ್ನು ನೇರಮಾರ್ಗಕ್ಕೆ ಮುನ್ನಡೆಸಲಾಗಿದೆ. info
التفاسير:

external-link copy
102 : 3

یٰۤاَیُّهَا الَّذِیْنَ اٰمَنُوا اتَّقُوا اللّٰهَ حَقَّ تُقٰتِهٖ وَلَا تَمُوْتُنَّ اِلَّا وَاَنْتُمْ مُّسْلِمُوْنَ ۟

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನನ್ನು ಭಯಪಡಬೇಕಾದಂತೆಯೇ ಭಯಪಡಿರಿ. ಮುಸ್ಲಿಮರಾಗಿಯೇ ಹೊರತು ನೀವು ಇಹಲೋಕ ತ್ಯಜಿಸಬೇಡಿ. info
التفاسير:

external-link copy
103 : 3

وَاعْتَصِمُوْا بِحَبْلِ اللّٰهِ جَمِیْعًا وَّلَا تَفَرَّقُوْا ۪— وَاذْكُرُوْا نِعْمَتَ اللّٰهِ عَلَیْكُمْ اِذْ كُنْتُمْ اَعْدَآءً فَاَلَّفَ بَیْنَ قُلُوْبِكُمْ فَاَصْبَحْتُمْ بِنِعْمَتِهٖۤ اِخْوَانًا ۚ— وَكُنْتُمْ عَلٰی شَفَا حُفْرَةٍ مِّنَ النَّارِ فَاَنْقَذَكُمْ مِّنْهَا ؕ— كَذٰلِكَ یُبَیِّنُ اللّٰهُ لَكُمْ اٰیٰتِهٖ لَعَلَّكُمْ تَهْتَدُوْنَ ۟

ನೀವೆಲ್ಲರೂ ಒಟ್ಟಾಗಿ ಅಲ್ಲಾಹನ ಹಗ್ಗವನ್ನು ಬಿಗಿಯಾಗಿ ಹಿಡಿಯಿರಿ. ವಿಭಿನ್ನ ಪಂಗಡಗಳಾಗಿ ಬೇರ್ಪಡಬೇಡಿ. ನೀವು ವೈರಿಗಳಾಗಿದ್ದಾಗ ಅಲ್ಲಾಹು ನಿಮಗೆ ದಯಪಾಲಿಸಿದ ಅನುಗ್ರಹವನ್ನು ಸ್ಮರಿಸಿರಿ. ಅವನು ನಿಮ್ಮ ಹೃದಯಗಳನ್ನು ಬೆಸೆದು, ಅವನ ಅನುಗ್ರಹದ ನಿಮಿತ್ತ ನೀವು ಪರಸ್ಪರ ಸಹೋದರರಾದಿರಿ. ನೀವು ಅಗ್ನಿಕುಂಡದ ಅಂಚಿನಲ್ಲಿದ್ದಿರಿ. ಆಗ ಅವನು ನಿಮ್ಮನ್ನು ಅದರಿಂದ ರಕ್ಷಿಸಿದನು. ಈ ರೀತಿ ಅಲ್ಲಾಹು ಅವನ ದೃಷ್ಟಾಂತಗಳನ್ನು ನಿಮಗೆ ವಿವರಿಸಿಕೊಡುತ್ತಾನೆ. ನೀವು ಸನ್ಮಾರ್ಗ ಪಡೆಯುವುದಕ್ಕಾಗಿ. info
التفاسير:

external-link copy
104 : 3

وَلْتَكُنْ مِّنْكُمْ اُمَّةٌ یَّدْعُوْنَ اِلَی الْخَیْرِ وَیَاْمُرُوْنَ بِالْمَعْرُوْفِ وَیَنْهَوْنَ عَنِ الْمُنْكَرِ ؕ— وَاُولٰٓىِٕكَ هُمُ الْمُفْلِحُوْنَ ۟

ನಿಮ್ಮಲ್ಲಿ ಒಳಿತಿಗೆ ಆಮಂತ್ರಿಸುವ, ಒಳಿತನ್ನು ಆದೇಶಿಸುವ ಮತ್ತು ಕೆಡುಕನ್ನು ವಿರೋಧಿಸುವ ಒಂದು ಸಮುದಾಯವು ಉಂಟಾಗಲಿ. ಅವರೇ ಯಶಸ್ವಿಯಾದವರು. info
التفاسير:

external-link copy
105 : 3

وَلَا تَكُوْنُوْا كَالَّذِیْنَ تَفَرَّقُوْا وَاخْتَلَفُوْا مِنْ بَعْدِ مَا جَآءَهُمُ الْبَیِّنٰتُ ؕ— وَاُولٰٓىِٕكَ لَهُمْ عَذَابٌ عَظِیْمٌ ۟ۙ

ತಮ್ಮ ಬಳಿಗೆ ಸ್ಪಷ್ಟ ಸಾಕ್ಷ್ಯಾಧಾರಗಳು ಬಂದ ಬಳಿಕವೂ ಪಂಗಡಗಳಾಗಿ ಬೇರ್ಪಟ್ಟು ಭಿನ್ನಮತ ತಳೆದವರಂತೆ ನೀವಾಗಬೇಡಿ. ಅವರಿಗೆ ಭಯಾನಕ ಶಿಕ್ಷೆಯಿದೆ. info
التفاسير:

external-link copy
106 : 3

یَّوْمَ تَبْیَضُّ وُجُوْهٌ وَّتَسْوَدُّ وُجُوْهٌ ۚ— فَاَمَّا الَّذِیْنَ اسْوَدَّتْ وُجُوْهُهُمْ ۫— اَكَفَرْتُمْ بَعْدَ اِیْمَانِكُمْ فَذُوْقُوا الْعَذَابَ بِمَا كُنْتُمْ تَكْفُرُوْنَ ۟

ಕೆಲವು ಮುಖಗಳು ಬೆಳ್ಳಗಾಗುವ ಮತ್ತು ಕೆಲವು ಮುಖಗಳು ಕರ್‍ರಗಾಗುವ ದಿನ! ಮುಖಗಳು ಕರ್‍ರಗಾದವರೊಡನೆ ಕೇಳಲಾಗುವುದು: “ನೀವು ಸತ್ಯವಿಶ್ವಾಸಿಗಳಾದ ಬಳಿಕ ಸತ್ಯನಿಷೇಧಿಗಳಾಗಿ ಬಿಟ್ಟಿರಾ? ನೀವು ಸತ್ಯನಿಷೇಧಿಗಳಾದ ಕಾರಣ ಶಿಕ್ಷೆಯ ರುಚಿಯನ್ನು ಸವಿಯಿರಿ.” info
التفاسير:

external-link copy
107 : 3

وَاَمَّا الَّذِیْنَ ابْیَضَّتْ وُجُوْهُهُمْ فَفِیْ رَحْمَةِ اللّٰهِ ؕ— هُمْ فِیْهَا خٰلِدُوْنَ ۟

ಮುಖಗಳು ಬೆಳ್ಳಗಾದವರು ಯಾರೋ—ಅವರು ಅಲ್ಲಾಹನ ದಯೆಯಲ್ಲಿರುವರು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. info
التفاسير:

external-link copy
108 : 3

تِلْكَ اٰیٰتُ اللّٰهِ نَتْلُوْهَا عَلَیْكَ بِالْحَقِّ ؕ— وَمَا اللّٰهُ یُرِیْدُ ظُلْمًا لِّلْعٰلَمِیْنَ ۟

ಇವು ಅಲ್ಲಾಹನ ವಚನಗಳಾಗಿವೆ. ನಾವು ಇವುಗಳನ್ನು ನಿಮಗೆ ಸತ್ಯವಾಗಿ ಓದಿಕೊಡುತ್ತಿದ್ದೇವೆ. ಅಲ್ಲಾಹು ಸರ್ವಲೋಕದವರಿಗೆ ಅನ್ಯಾಯ ಮಾಡುವ ಇರಾದೆಯನ್ನು ಹೊಂದಿಲ್ಲ. info
التفاسير: