قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى

بەت نومۇرى:close

external-link copy
34 : 40

وَلَقَدْ جَآءَكُمْ یُوْسُفُ مِنْ قَبْلُ بِالْبَیِّنٰتِ فَمَا زِلْتُمْ فِیْ شَكٍّ مِّمَّا جَآءَكُمْ بِهٖ ؕ— حَتّٰۤی اِذَا هَلَكَ قُلْتُمْ لَنْ یَّبْعَثَ اللّٰهُ مِنْ بَعْدِهٖ رَسُوْلًا ؕ— كَذٰلِكَ یُضِلُّ اللّٰهُ مَنْ هُوَ مُسْرِفٌ مُّرْتَابُ ۟ۚۖ

ಇದಕ್ಕೆ ಮೊದಲು ಪ್ರವಾದಿ ಯೂಸುಫ್ ಸುಸ್ಪಷ್ಟ ಪುರಾವೆಗಳೊಂದಿಗೆ ಬಂದಿದ್ದರು. ಆದರೆ ನೀವು ಅವರು ತಂದಿರುವುದರಲ್ಲಿ ಸಂದೇಹದಲ್ಲೇ ಬಿದ್ದಿದ್ದಿರಿ. ಕೊನೆಗೆ ಅವರು ಮರಣಗೊಂಡಾಗ ನೀವು ಅವರ ನಂತರ ಅಲ್ಲಾಹನು ಯಾವೊಬ್ಬ ಸಂದೇಶವಾಹಕನನ್ನು ನಿಯೋಗಿಸುವುದಿಲ್ಲವೆಂದು ಹೇಳಿದಿರಿ. ಇದೇ ಪ್ರಕಾರ ಅಲ್ಲಾಹನು ಮಿತಿಮೀರಿದವರನ್ನು ಸಂಶಯಗ್ರಸ್ತರನ್ನು ದಾರಿ ತಪ್ಪಿಸಿಬಿಡುತ್ತಾನೆ. info
التفاسير:

external-link copy
35 : 40

١لَّذِیْنَ یُجَادِلُوْنَ فِیْۤ اٰیٰتِ اللّٰهِ بِغَیْرِ سُلْطٰنٍ اَتٰىهُمْ ؕ— كَبُرَ مَقْتًا عِنْدَ اللّٰهِ وَعِنْدَ الَّذِیْنَ اٰمَنُوْا ؕ— كَذٰلِكَ یَطْبَعُ اللّٰهُ عَلٰی كُلِّ قَلْبِ مُتَكَبِّرٍ جَبَّارٍ ۟

ತಮ್ಮ ಬಳಿ ಬಂದAತಹ ಯಾವುದೇ ಪುರಾವೆಯಿಲ್ಲದೆ ಅಲ್ಲಾಹನ ದೃಷ್ಟಾಂತಗಳಲ್ಲಿ ತರ್ಕಿಸುತ್ತಾರೋ ಅಲ್ಲಾಹನ ಬಳಿ ಹಾಗೂ ಸತ್ಯವಿಶ್ವಾಸಿಗಳ ಬಳಿ ಇದು ಮಹಾ ಅಸಂತುಷ್ಟ ಸಂಗತಿಯಾಗಿದೆ. ಅಲ್ಲಾಹನು ಇದೇ ಪ್ರಕಾರ ಪ್ರತಿಯೊಬ್ಬ ದುರಹಂಕಾರಿ ಮತ್ತು ದುಷ್ಟನ ಹೃದಯದ ಮೇಲೆ ಮುದ್ರೆಯೊತ್ತುತ್ತಾನೆ. info
التفاسير:

external-link copy
36 : 40

وَقَالَ فِرْعَوْنُ یٰهَامٰنُ ابْنِ لِیْ صَرْحًا لَّعَلِّیْۤ اَبْلُغُ الْاَسْبَابَ ۟ۙ

ಮತ್ತು ಫಿರ್‌ಔನನೆಂದನು: ಓ ಹಾಮಾನ್, ನನಗೊಂದು ಉನ್ನತ ಕಟ್ಟಡವನ್ನು ನಿರ್ಮಿಸು. ನಾನು ಮಾರ್ಗಗಳನ್ನು ತಲುಪಬಹುದು. info
التفاسير:

external-link copy
37 : 40

اَسْبَابَ السَّمٰوٰتِ فَاَطَّلِعَ اِلٰۤی اِلٰهِ مُوْسٰی وَاِنِّیْ لَاَظُنُّهٗ كَاذِبًا ؕ— وَكَذٰلِكَ زُیِّنَ لِفِرْعَوْنَ سُوْٓءُ عَمَلِهٖ وَصُدَّ عَنِ السَّبِیْلِ ؕ— وَمَا كَیْدُ فِرْعَوْنَ اِلَّا فِیْ تَبَابٍ ۟۠

ಆ ಆಕಾಶ ಮಾರ್ಗಗಳನ್ನು ತಲುಪಿ ನಾನು ಮೂಸಾನ ಆರಾಧ್ಯನೆಡೆಗೆ ಇಣುಕಿ ನೋಡುವೆನು ಮತ್ತು ಖಂಡಿತವಾಗಿಯು ಅವನನ್ನು ನಾನು ಸುಳ್ಳುಗಾರನೆಂದು ಭಾವಿಸುತ್ತಿರುವೆನು ಮತ್ತು ಹೀಗೆ ಫಿರ್‌ಔನನಿಗೆ ಅವನ ದುಷ್ಕರ್ಮಗಳನ್ನು ಮನಮೋಹಕಗೊಳಿಸಲಾಯಿತು. ಹಾಗೂ ಸರಿದಾರಿಯಿಂದ ಅವನನ್ನು ತಡೆಯಲಾಯಿತು ಮತ್ತು ಫಿರ್‌ಔನನ ಕುತಂತ್ರವು ನಾಶ ಹೊಂದಿತು. info
التفاسير:

external-link copy
38 : 40

وَقَالَ الَّذِیْۤ اٰمَنَ یٰقَوْمِ اتَّبِعُوْنِ اَهْدِكُمْ سَبِیْلَ الرَّشَادِ ۟ۚ

ಮತ್ತು ಆ ಸತ್ಯವಿಶ್ವಾಸಿಯು ಹೇಳಿದನು: ಓ ನನ್ನ ಜನಾಂಗದವರೇ, ನೀವು ನನ್ನನ್ನು ಅನುಸರಿಸಿರಿ. ನಾನು ನಿಮ್ಮನ್ನು ಸನ್ಮಾರ್ಗದೆಡೆಗೆ ಮುನ್ನಡೆಸುವೆನು. info
التفاسير:

external-link copy
39 : 40

یٰقَوْمِ اِنَّمَا هٰذِهِ الْحَیٰوةُ الدُّنْیَا مَتَاعٌ ؗ— وَّاِنَّ الْاٰخِرَةَ هِیَ دَارُ الْقَرَارِ ۟

ಓ ನನ್ನ ಜನಾಂಗದವರೇ, ಈ ಲೌಕಿಕ ಜೀವನವು ತಾತ್ಕಾಲಿಕ ಸುಖಭೋಗವಾಗಿದೆ. ಮತ್ತು ಖಂಡಿತವಾಗಿಯು ಶಾಶ್ವತ ಭವನವು ಪರಲೋಕವೇ ಆಗಿದೆ. info
التفاسير:

external-link copy
40 : 40

مَنْ عَمِلَ سَیِّئَةً فَلَا یُجْزٰۤی اِلَّا مِثْلَهَا ۚ— وَمَنْ عَمِلَ صَالِحًا مِّنْ ذَكَرٍ اَوْ اُ وَهُوَ مُؤْمِنٌ فَاُولٰٓىِٕكَ یَدْخُلُوْنَ الْجَنَّةَ یُرْزَقُوْنَ فِیْهَا بِغَیْرِ حِسَابٍ ۟

ಮತ್ತು ಯಾರು ಪಾಪ ಮಾಡುತ್ತಾನೋ ಅವನಿಗೆ ಅದರಷ್ಟೇ ಪ್ರತಿಫಲ ನೀಡಲಾಗುವುದು. ಮತ್ತು ಪುರುಷನಿರಲಿ ಸ್ತಿçÃಯಿರಲಿ ಯಾರು ಸತ್ಯವಿಶ್ವಾಸಿಯಾಗಿದ್ದುಕೊಂಡು ಸತ್ಕರ್ಮವೆಸಗುವರೋ ಸ್ವರ್ಗವನ್ನು ಪ್ರವೇಶಿಸುವರು ಅಲ್ಲಿ ಅವರಿಗೆ ಲೆಕ್ಕಾತೀತವಾಗಿ ಜೀವನಾಧಾರವನ್ನು ನೀಡಲಾಗುವುದು. info
التفاسير: