قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى

external-link copy
5 : 22

یٰۤاَیُّهَا النَّاسُ اِنْ كُنْتُمْ فِیْ رَیْبٍ مِّنَ الْبَعْثِ فَاِنَّا خَلَقْنٰكُمْ مِّنْ تُرَابٍ ثُمَّ مِنْ نُّطْفَةٍ ثُمَّ مِنْ عَلَقَةٍ ثُمَّ مِنْ مُّضْغَةٍ مُّخَلَّقَةٍ وَّغَیْرِ مُخَلَّقَةٍ لِّنُبَیِّنَ لَكُمْ ؕ— وَنُقِرُّ فِی الْاَرْحَامِ مَا نَشَآءُ اِلٰۤی اَجَلٍ مُّسَمًّی ثُمَّ نُخْرِجُكُمْ طِفْلًا ثُمَّ لِتَبْلُغُوْۤا اَشُدَّكُمْ ۚ— وَمِنْكُمْ مَّنْ یُّتَوَفّٰی وَمِنْكُمْ مَّنْ یُّرَدُّ اِلٰۤی اَرْذَلِ الْعُمُرِ لِكَیْلَا یَعْلَمَ مِنْ بَعْدِ عِلْمٍ شَیْـًٔا ؕ— وَتَرَی الْاَرْضَ هَامِدَةً فَاِذَاۤ اَنْزَلْنَا عَلَیْهَا الْمَآءَ اهْتَزَّتْ وَرَبَتْ وَاَنْۢبَتَتْ مِنْ كُلِّ زَوْجٍ بَهِیْجٍ ۟

ಓ ಜನರೇ, ನಿಮಗೆ ಪುನರುತ್ಥಾನದ ಬಗ್ಗೆ ಸಂದೇಹವಿದ್ದರೆ ಚಿಂತಿಸಿ ನೋಡಿರಿ: ನಾವು ನಿಮ್ಮನ್ನು ಮಣ್ಣಿನಿಂದ, ಆ ಬಳಿಕ ವೀರ್ಯದಿಂದ, ನಂತರ ರಕ್ತ ಪಿಂಡದಿAದ, ತರುವಾಯ ರೂಪವಿರುವ, ಸ್ವರೂಪವಿಲ್ಲದ ಮಾಂಸ ಪಿಂಡದಿAದ ಸೃಷ್ಟಿಸಿರುತ್ತೇವೆ. (ಇದೆಕೆಂದರೆ) ವಸ್ತುಸ್ಥಿತಿಯನ್ನು ವಿವರಿಸಲಿಕ್ಕಾಗಿ ನಾವಿದನ್ನು ನಿಮಗೆ (ನಮ್ಮ ಸಾಮರ್ಥ್ಯವನ್ನು) ತಿಳಿಸುತ್ತಿದ್ದೇವೆ ಮತ್ತು ನಾವು ಇಚ್ಛಿಸಿದವರನ್ನು ಗರ್ಭಾಶಯಗಳಲ್ಲಿ ಒಂದು ನಿರ್ಧಿಷ್ಟಾವಧಿಯವರೆಗೆ ನೆಲೆಗೊಳಿಸುತ್ತೇವೆ. ತರುವಾಯ ನಿಮ್ಮನ್ನು ಶಿಶುವಿನ ರೂಪದಲ್ಲಿ ಹೊರ ತರುತ್ತೇವೆ. ಇದು ಆ ಬಳಿಕ ನೀವು ನಿಮ್ಮ ಪರಿಪೂರ್ಣ ಯವ್ವನಕ್ಕೆ ತಲುಪಲೆಂದಾಗಿರುತ್ತದೆ. ನಿಮ್ಮ ಪೈಕಿ ಕೆಲವರು ಮೊದಲೇ ಮರಣ ಹೊಂದುವವರಿದ್ದಾರೆ ಮತ್ತು ಕೆಲವರು ಒಂದು ವಸ್ತುವಿನ ಜ್ಞಾನ ಪಡೆದ ನಂತರ ಅರಿವಿಲ್ಲದಾಗುವಷ್ಟು ಮುಪ್ಪಿನ ಪ್ರಾಯಕ್ಕೆ ಮರಳಿಸಲ್ಪಡುವವರೂ ಇದ್ದಾರೆ ಮತ್ತು ನೀವು ಭೂಮಿಯನ್ನು ಒಣಗಿ ಬಂಜರು ಆಗಿರುವುದಾಗಿ ಕಾಣುತ್ತೀರಿ. ಇನ್ನು ನಾವು ಅದರ ಮೇಲೆ ಮಳೆಯನ್ನು ಸುರಿಸಿದಾಗ ಅದು ಗರಿಗೆದರಿ ಮೊಳೆಯುತ್ತದೆ ಮತ್ತು ಸಕಲ ವಿಧದ ಮನ ಮೋಹಕ ಬೆಳೆಯನ್ನು ಬೆಳೆಯುತ್ತದೆ. info
التفاسير: