Kur'an-ı Kerim meal tercümesi - Kanadaca Tercüme - Hamza Batur

external-link copy
46 : 7

وَبَیْنَهُمَا حِجَابٌ ۚ— وَعَلَی الْاَعْرَافِ رِجَالٌ یَّعْرِفُوْنَ كُلًّا بِسِیْمٰىهُمْ ۚ— وَنَادَوْا اَصْحٰبَ الْجَنَّةِ اَنْ سَلٰمٌ عَلَیْكُمْ ۫— لَمْ یَدْخُلُوْهَا وَهُمْ یَطْمَعُوْنَ ۟

ಅವರ ನಡುವೆ ಒಂದು ತಡೆಗೋಡೆಯಿದೆ[1] ಮತ್ತು ಅದರ ಎತ್ತರದ ಸ್ಥಳಗಳಲ್ಲಿ ಕೆಲವು ಜನರಿದ್ದಾರೆ.[2] ಅವರು ಎಲ್ಲರನ್ನೂ (ಸ್ವರ್ಗವಾಸಿ ಮತ್ತು ನರಕವಾಸಿಗಳೆಲ್ಲರನ್ನೂ) ಅವರ ಚಿಹ್ನೆಗಳಿಂದ ಗುರುತಿಸುವರು. ಅವರು ಸ್ವರ್ಗವಾಸಿಗಳನ್ನು ಕರೆದು ಹೇಳುವರು: “ನಿಮ್ಮ ಮೇಲೆ ಶಾಂತಿಯಿರಲಿ.” ಅವರಿಗೆ ಸ್ವರ್ಗ ಪ್ರವೇಶ ಮಾಡುವ ಆಸೆಯಿದ್ದರೂ ಸಹ ಅವರು ಇನ್ನೂ ಅದನ್ನು ಪ್ರವೇಶಿಸಿಲ್ಲ. info

[1] ಸ್ವರ್ಗ ಮತ್ತು ನರಕಗಳ ನಡುವೆ ಅಥವಾ ಸತ್ಯವಿಶ್ವಾಸಿಗಳು ಮತ್ತು ಸತ್ಯನಿಷೇಧಿಗಳ ನಡುವೆ ಒಂದು ಅಡ್ಢಗೋಡೆಯನ್ನು ಸ್ಥಾಪಿಸಲಾಗುವುದು.
[2] ಹೆಚ್ಚಿನ ವ್ಯಾಖ್ಯಾನಕಾರರ ಪ್ರಕಾರ ಇವರು ಸ್ವರ್ಗ ಅಥವಾ ನರಕಕ್ಕೆ ಹೋಗದೆ ಅತಂತ್ರ ಸ್ಥಿತಿಯಲ್ಲಿರುವವರು. ಇವರ ದುಷ್ಕರ್ಮಗಳು ಇವರನ್ನು ಸ್ವರ್ಗ ಪ್ರವೇಶದಿಂದ ಮತ್ತು ಇವರ ಸತ್ಕರ್ಮಗಳು ಇವರನ್ನು ನರಕ ಪ್ರವೇಶದಿಂದ ತಡೆಯುತ್ತಿವೆ. ಇವರ ಬಗ್ಗೆ ಅಲ್ಲಾಹು ಅಂತಿಮ ತೀರ್ಪು ನೀಡುವ ತನಕ ಇವರು ಇವೆರಡರ ನಡುವಿನಲ್ಲಿರುವರು.

التفاسير: