Kur'an-ı Kerim meal tercümesi - Kanadaca Tercüme - Hamza Batur

Sayfa numarası:close

external-link copy
12 : 57

یَوْمَ تَرَی الْمُؤْمِنِیْنَ وَالْمُؤْمِنٰتِ یَسْعٰی نُوْرُهُمْ بَیْنَ اَیْدِیْهِمْ وَبِاَیْمَانِهِمْ بُشْرٰىكُمُ الْیَوْمَ جَنّٰتٌ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَا ؕ— ذٰلِكَ هُوَ الْفَوْزُ الْعَظِیْمُ ۟ۚ

ನೀವು ಸತ್ಯವಿಶ್ವಾಸಿ ಪುರುಷರು ಮತ್ತು ಮಹಿಳೆಯರ ಬೆಳಕು ಅವರ ಮುಂಭಾಗದಿಂದ ಮತ್ತು ಬಲಭಾಗದಿಂದ ಹೊರಹೊಮ್ಮುವುದನ್ನು ನೋಡುವ ದಿನ. (ಅವರೊಡನೆ ಹೇಳಲಾಗುವುದು): “ಇಂದು ನಿಮಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳ ಸುವಾರ್ತೆಯಿದೆ. ನೀವು ಅವುಗಳಲ್ಲಿ ಶಾಶ್ವತವಾಗಿ ವಾಸಿಸುವಿರಿ.” ಅದೇ ಅತಿದೊಡ್ಡ ವಿಜಯ. info
التفاسير:

external-link copy
13 : 57

یَوْمَ یَقُوْلُ الْمُنٰفِقُوْنَ وَالْمُنٰفِقٰتُ لِلَّذِیْنَ اٰمَنُوا انْظُرُوْنَا نَقْتَبِسْ مِنْ نُّوْرِكُمْ ۚ— قِیْلَ ارْجِعُوْا وَرَآءَكُمْ فَالْتَمِسُوْا نُوْرًا ؕ— فَضُرِبَ بَیْنَهُمْ بِسُوْرٍ لَّهٗ بَابٌ ؕ— بَاطِنُهٗ فِیْهِ الرَّحْمَةُ وَظَاهِرُهٗ مِنْ قِبَلِهِ الْعَذَابُ ۟ؕ

ಆ ದಿನ ಕಪಟವಿಶ್ವಾಸಿ ಪುರುಷರು ಮತ್ತು ಮಹಿಳೆಯರು ಸತ್ಯವಿಶ್ವಾಸಿಗಳೊಡನೆ ಹೇಳುವರು: “ಸ್ವಲ್ಪ ತಡೆದುಕೊಳ್ಳಿರಿ. ನಾವು ಕೂಡ ನಿಮ್ಮ ಬೆಳಕಿನಿಂದ ಸ್ವಲ್ಪ ಬೆಳಕನ್ನು ಪಡೆಯುತ್ತೇವೆ.” ಅವರೊಡನೆ ಹೇಳಲಾಗುವುದು: “ನೀವು ಹಿಂದಕ್ಕೆ ಹೋಗಿ ನಿಮ್ಮ ಬೆಳಕನ್ನು ಹುಡುಕಿರಿ.” ಅವರ ನಡುವೆ ಒಂದು ಗೋಡೆಯನ್ನು ಅಡ್ಡವಾಗಿ ನಿಲ್ಲಿಸಲಾಗುವುದು. ಅದಕ್ಕೊಂದು ಬಾಗಿಲಿರುವುದು ಮತ್ತು ಅದರ ಒಳಭಾಗದಲ್ಲಿ ದಯೆ ಹಾಗೂ ಹೊರಭಾಗದಲ್ಲಿ ಶಿಕ್ಷೆಯಿರುವುದು. info
التفاسير:

external-link copy
14 : 57

یُنَادُوْنَهُمْ اَلَمْ نَكُنْ مَّعَكُمْ ؕ— قَالُوْا بَلٰی وَلٰكِنَّكُمْ فَتَنْتُمْ اَنْفُسَكُمْ وَتَرَبَّصْتُمْ وَارْتَبْتُمْ وَغَرَّتْكُمُ الْاَمَانِیُّ حَتّٰی جَآءَ اَمْرُ اللّٰهِ وَغَرَّكُمْ بِاللّٰهِ الْغَرُوْرُ ۟

ಕಪಟವಿಶ್ವಾಸಿಗಳು ಸತ್ಯವಿಶ್ವಾಸಿಗಳನ್ನು ಕೂಗಿ ಕರೆಯುತ್ತಾ ಕೇಳುವರು: “ನಾವು ನಿಮ್ಮ ಜೊತೆಯಲ್ಲಿರಲಿಲ್ಲವೇ?” ಅವರು ಉತ್ತರಿಸುವರು: “ಹೌದು! ಆದರೆ ನೀವು ನಿಮ್ಮನ್ನೇ ಕ್ಷೋಭೆಗೆ ತಳ್ಳಿದ್ದಿರಿ ಮತ್ತು (ನಮಗೆ ಅನಾಹುತ ಸಂಭವಿಸುವುದನ್ನು) ಕಾಯುತ್ತಿದ್ದಿರಿ. ನೀವು ಸಂಶಯಪಡುತ್ತಿದ್ದಿರಿ. ನಿಮ್ಮ ಹುಸಿ ವ್ಯಾಮೋಹಗಳು ನಿಮ್ಮನ್ನು ಮರುಳುಗೊಳಿಸಿದವು. ಎಲ್ಲಿಯವರೆಗೆಂದರೆ ಅಲ್ಲಾಹನ ಆಜ್ಞೆ ಬರುವವರೆಗೆ. ಆ ನಯವಂಚಕನು (ಶೈತಾನನು) ನಿಮ್ಮನ್ನು ಅಲ್ಲಾಹನ ವಿಷಯದಲ್ಲಿ ವಂಚಿಸಿಬಿಟ್ಟನು. info
التفاسير:

external-link copy
15 : 57

فَالْیَوْمَ لَا یُؤْخَذُ مِنْكُمْ فِدْیَةٌ وَّلَا مِنَ الَّذِیْنَ كَفَرُوْا ؕ— مَاْوٰىكُمُ النَّارُ ؕ— هِیَ مَوْلٰىكُمْ ؕ— وَبِئْسَ الْمَصِیْرُ ۟

ಆದ್ದರಿಂದ ಇಂದು ನಿಮ್ಮಿಂದ ಅಥವಾ ಸತ್ಯನಿಷೇಧಿಗಳಿಂದ ಯಾವುದೇ ಪರಿಹಾರ ಸ್ವೀಕರಿಸಲಾಗುವುದಿಲ್ಲ. ನಿಮ್ಮ ವಾಸಸ್ಥಳವು ನರಕಾಗ್ನಿಯಾಗಿದೆ. ಅದೇ ನಿಮ್ಮ ಗೆಳೆಯ. ಆ ಗಮ್ಯಸ್ಥಾನವು ಬಹಳ ನಿಕೃಷ್ಟವಾಗಿದೆ. info
التفاسير:

external-link copy
16 : 57

اَلَمْ یَاْنِ لِلَّذِیْنَ اٰمَنُوْۤا اَنْ تَخْشَعَ قُلُوْبُهُمْ لِذِكْرِ اللّٰهِ وَمَا نَزَلَ مِنَ الْحَقِّ ۙ— وَلَا یَكُوْنُوْا كَالَّذِیْنَ اُوْتُوا الْكِتٰبَ مِنْ قَبْلُ فَطَالَ عَلَیْهِمُ الْاَمَدُ فَقَسَتْ قُلُوْبُهُمْ ؕ— وَكَثِیْرٌ مِّنْهُمْ فٰسِقُوْنَ ۟

ಅಲ್ಲಾಹನ ಸ್ಮರಣೆಯಿಂದ ಹಾಗೂ ಅವತೀರ್ಣವಾದ ಸತ್ಯಸಂದೇಶದಿಂದ ಹೃದಯಗಳು ಮೃದುವಾಗಲು ಮತ್ತು ಇದಕ್ಕೆ ಮೊದಲು ಗ್ರಂಥ ನೀಡಲಾದವರಂತೆ (ಯಹೂದಿ-ಕ್ರೈಸ್ತರಂತೆ) ಆಗದಿರಲು ಸತ್ಯವಿಶ್ವಾಸಿಗಳಿಗೆ ಈಗಲೂ ಕೂಡ ಸಮಯವಾಗಲಿಲ್ಲವೇ? ಅವರ ಮುಖಾಂತರ ಒಂದು ದೀರ್ಘ ಅವಧಿಯು ಹಾದುಹೋದಾಗ ಅವರ ಹೃದಯಗಳು ಕಠೋರವಾದವು. ಅವರಲ್ಲಿ ಹೆಚ್ಚಿನವರು ದುಷ್ಕರ್ಮಿಗಳಾಗಿದ್ದರು. info
التفاسير:

external-link copy
17 : 57

اِعْلَمُوْۤا اَنَّ اللّٰهَ یُحْیِ الْاَرْضَ بَعْدَ مَوْتِهَا ؕ— قَدْ بَیَّنَّا لَكُمُ الْاٰیٰتِ لَعَلَّكُمْ تَعْقِلُوْنَ ۟

ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ಭೂಮಿಯನ್ನು—ಅದು ನಿರ್ಜೀವವಾದ ನಂತರ—ಜೀವಂತಗೊಳಿಸುತ್ತಾನೆ. ನೀವು ಆಲೋಚಿಸುವುದಕ್ಕಾಗಿ ನಾವು ನಿಮಗೆ ಈಗಾಗಲೇ ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ. info
التفاسير:

external-link copy
18 : 57

اِنَّ الْمُصَّدِّقِیْنَ وَالْمُصَّدِّقٰتِ وَاَقْرَضُوا اللّٰهَ قَرْضًا حَسَنًا یُّضٰعَفُ لَهُمْ وَلَهُمْ اَجْرٌ كَرِیْمٌ ۟

ನಿಶ್ಚಯವಾಗಿಯೂ ದಾನಧರ್ಮ ಮಾಡುವ ಪುರುಷರು ಮತ್ತು ಮಹಿಳೆಯರು ಹಾಗೂ ಅಲ್ಲಾಹನಿಗೆ ಉತ್ತಮ ಸಾಲವನ್ನು ಕೊಡುವವರು ಯಾರೋ—ಅವರಿಗೆ ಅದನ್ನು ಹಲವು ಪಟ್ಟು ದ್ವಿಗುಣಗೊಳಿಸಲಾಗುವುದು. ಅವರಿಗೆ ಮನದಣಿಯುವ ಪ್ರತಿಫಲವಿರುವುದು. info
التفاسير: