Kur'an-ı Kerim meal tercümesi - Kanadaca Tercüme - Hamza Batur

Sayfa numarası:close

external-link copy
27 : 53

اِنَّ الَّذِیْنَ لَا یُؤْمِنُوْنَ بِالْاٰخِرَةِ لَیُسَمُّوْنَ الْمَلٰٓىِٕكَةَ تَسْمِیَةَ الْاُ ۟

ನಿಶ್ಚಯವಾಗಿಯೂ ಪರಲೋಕದಲ್ಲಿ ವಿಶ್ವಾಸವಿಡದವರು ಯಾರೋ—ಅವರು ದೇವದೂತರು‍ಗಳಿಗೆ ಸ್ತ್ರೀಯರ ಹೆಸರನ್ನಿಡುತ್ತಾರೆ.[1] info

[1] ಅರಬ್ ಬಹುದೇವವಿಶ್ವಾಸಿಗಳು ದೇವದೂತರುಗಳನ್ನು ಅಲ್ಲಾಹನ ಹೆಣ್ಣುಮಕ್ಕಳೆಂದು ಕರೆಯುತ್ತಿದ್ದರು.

التفاسير:

external-link copy
28 : 53

وَمَا لَهُمْ بِهٖ مِنْ عِلْمٍ ؕ— اِنْ یَّتَّبِعُوْنَ اِلَّا الظَّنَّ ۚ— وَاِنَّ الظَّنَّ لَا یُغْنِیْ مِنَ الْحَقِّ شَیْـًٔا ۟ۚ

ಅವರಿಗೆ ಅದರ ಬಗ್ಗೆ ಯಾವುದೇ ಜ್ಞಾನವಿಲ್ಲ. ಅವರು ಕೇವಲ ಊಹೆಯನ್ನು ಮಾತ್ರ ಹಿಂಬಾಲಿಸುತ್ತಾರೆ. ನಿಶ್ಚಯವಾಗಿಯೂ ಸತ್ಯದೆದುರು ಊಹೆಯು ಯಾವುದೇ ಉಪಕಾರ ಮಾಡುವುದಿಲ್ಲ. info
التفاسير:

external-link copy
29 : 53

فَاَعْرِضْ عَنْ مَّنْ تَوَلّٰی ۙ۬— عَنْ ذِكْرِنَا وَلَمْ یُرِدْ اِلَّا الْحَیٰوةَ الدُّنْیَا ۟ؕ

ನಮ್ಮ ಸ್ಮರಣೆಯಿಂದ ವಿಮುಖರಾದವರು ಮತ್ತು ಇಹಲೋಕವನ್ನು ಮಾತ್ರ ಬಯಸುವವರು ಯಾರೋ—ಅವರಿಂದ ನೀವು ವಿಮುಖರಾಗಿರಿ. info
التفاسير:

external-link copy
30 : 53

ذٰلِكَ مَبْلَغُهُمْ مِّنَ الْعِلْمِ ؕ— اِنَّ رَبَّكَ هُوَ اَعْلَمُ بِمَنْ ضَلَّ عَنْ سَبِیْلِهٖ وَهُوَ اَعْلَمُ بِمَنِ اهْتَدٰی ۟

ಅದೇ ಅವರ ಜ್ಞಾನದ ಪರಾಕಾಷ್ಠೆ. ತನ್ನ ಮಾರ್ಗದಿಂದ ತಪ್ಪಿಹೋದವರ ಬಗ್ಗೆ ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಬಹಳ ಚೆನ್ನಾಗಿ ತಿಳಿದಿದ್ದಾನೆ. ಸನ್ಮಾರ್ಗ ಪಡೆದವರ ಬಗ್ಗೆಯೂ ಅವನು ಬಹಳ ಚೆನ್ನಾಗಿ ತಿಳಿದಿದ್ದಾನೆ. info
التفاسير:

external-link copy
31 : 53

وَلِلّٰهِ مَا فِی السَّمٰوٰتِ وَمَا فِی الْاَرْضِ ۙ— لِیَجْزِیَ الَّذِیْنَ اَسَآءُوْا بِمَا عَمِلُوْا وَیَجْزِیَ الَّذِیْنَ اَحْسَنُوْا بِالْحُسْنٰی ۟ۚ

ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನಿಗೆ ಸೇರಿದ್ದು. ದುಷ್ಕರ್ಮಿಗಳಿಗೆ ಅವರು ಮಾಡಿದ ದುಷ್ಕರ್ಮದ ಪ್ರತಿಫಲವನ್ನು ನೀಡಲು ಮತ್ತು ಸತ್ಕರ್ಮಿಗಳಿಗೆ ಅತ್ಯುತ್ತಮವಾದ ಪ್ರತಿಫಲವನ್ನು ನೀಡಲು. info
التفاسير:

external-link copy
32 : 53

اَلَّذِیْنَ یَجْتَنِبُوْنَ كَبٰٓىِٕرَ الْاِثْمِ وَالْفَوَاحِشَ اِلَّا اللَّمَمَ ؕ— اِنَّ رَبَّكَ وَاسِعُ الْمَغْفِرَةِ ؕ— هُوَ اَعْلَمُ بِكُمْ اِذْ اَنْشَاَكُمْ مِّنَ الْاَرْضِ وَاِذْ اَنْتُمْ اَجِنَّةٌ فِیْ بُطُوْنِ اُمَّهٰتِكُمْ ۚ— فَلَا تُزَكُّوْۤا اَنْفُسَكُمْ ؕ— هُوَ اَعْلَمُ بِمَنِ اتَّقٰی ۟۠

ಅವರು (ಸತ್ಕರ್ಮಿಗಳು) ಯಾರೆಂದರೆ, ಮಹಾಪಾಪಗಳಿಂದ ಮತ್ತು ಅಶ್ಲೀಲಕೃತ್ಯಗಳಿಂದ ದೂರವಿರುವವರು. ಕೆಲವು ಚಿಕ್ಕಪುಟ್ಟ ಪಾಪಗಳ ಹೊರತು. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ವಿಶಾಲವಾಗಿ ಕ್ಷಮಿಸುವವನಾಗಿದ್ದಾನೆ. ಅವನು ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದಾಗ ಮತ್ತು ನೀವು ನಿಮ್ಮ ತಾಯಂದಿರ ಉದರಗಳಲ್ಲಿ ಭ್ರೂಣಗಳಾಗಿದ್ದಾಗ ಅವನಿಗೆ ನಿಮ್ಮ ಬಗ್ಗೆ ಬಹಳ ಚೆನ್ನಾಗಿ ತಿಳಿದಿದೆ. ಆದ್ದರಿಂದ ನೀವು ನಿಮ್ಮನ್ನು ಪರಿಶುದ್ಧರೆಂದು ಘೋಷಿಸಬೇಡಿ. ದೇವಭಯವುಳ್ಳವರ ಬಗ್ಗೆ ಅವನಿಗೆ ಬಹಳ ಚೆನ್ನಾಗಿ ತಿಳಿದಿದೆ. info
التفاسير:

external-link copy
33 : 53

اَفَرَءَیْتَ الَّذِیْ تَوَلّٰی ۟ۙ

ಮುಖ ತಿರುಗಿಸಿ ಹೋದವನನ್ನು ನೀವು ನೋಡಿದ್ದೀರಾ? info
التفاسير:

external-link copy
34 : 53

وَاَعْطٰی قَلِیْلًا وَّاَكْدٰی ۟

ಅವನು ಬಹಳ ಕಡಿಮೆ ಕೊಟ್ಟನು ಮತ್ತು ನಿಲ್ಲಿಸಿದನು. info
التفاسير:

external-link copy
35 : 53

اَعِنْدَهٗ عِلْمُ الْغَیْبِ فَهُوَ یَرٰی ۟

ಅವನ ಬಳಿ ಅದೃಶ್ಯ ಜ್ಞಾನವಿದ್ದು ಅವನು ಅದರ ಮೂಲಕ (ಎಲ್ಲವನ್ನು) ನೋಡುತ್ತಿದ್ದಾನೆಯೇ? info
التفاسير:

external-link copy
36 : 53

اَمْ لَمْ یُنَبَّاْ بِمَا فِیْ صُحُفِ مُوْسٰی ۟ۙ

ಮೂಸಾರ ಗ್ರಂಥಗಳಲ್ಲಿರುವುದರ ಬಗ್ಗೆ ಅವನಿಗೆ ತಿಳಿಸಲಾಗಿಲ್ಲವೇ? info
التفاسير:

external-link copy
37 : 53

وَاِبْرٰهِیْمَ الَّذِیْ وَ ۟ۙ

(ಕರ್ತವ್ಯಗಳನ್ನು) ನೆರವೇರಿಸಿದ ಇಬ್ರಾಹೀಮ‌ರ ಗ್ರಂಥಗಳಲ್ಲಿರುವುದನ್ನು. info
التفاسير:

external-link copy
38 : 53

اَلَّا تَزِرُ وَازِرَةٌ وِّزْرَ اُخْرٰی ۟ۙ

ಪಾಪಭಾರವನ್ನು ಹೊರುವ ಯಾರೂ ಇನ್ನೊಬ್ಬರ ಪಾಪಭಾರವನ್ನು ಹೊರುವುದಿಲ್ಲವೆಂದು, info
التفاسير:

external-link copy
39 : 53

وَاَنْ لَّیْسَ لِلْاِنْسَانِ اِلَّا مَا سَعٰی ۟ۙ

ಮನುಷ್ಯನಿಗೆ ಅವನು ಮಾಡುವ ಪರಿಶ್ರಮಗಳಲ್ಲದೆ ಬೇರೇನೂ ಇಲ್ಲವೆಂದು, info
التفاسير:

external-link copy
40 : 53

وَاَنَّ سَعْیَهٗ سَوْفَ یُرٰی ۟

ಅವನ ಪರಿಶ್ರಮವನ್ನು ಸದ್ಯವೇ ಅವನಿಗೆ ತೋರಿಸಲಾಗುವುದೆಂದು, info
التفاسير:

external-link copy
41 : 53

ثُمَّ یُجْزٰىهُ الْجَزَآءَ الْاَوْفٰی ۟ۙ

ನಂತರ ಅವನಿಗೆ ಪೂರ್ಣರೂಪದಲ್ಲಿ ಪ್ರತಿಫಲ ನೀಡಲಾಗುವುದೆಂದು, info
التفاسير:

external-link copy
42 : 53

وَاَنَّ اِلٰی رَبِّكَ الْمُنْتَهٰی ۟ۙ

ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೇ ತಲುಪಬೇಕೆಂದು, info
التفاسير:

external-link copy
43 : 53

وَاَنَّهٗ هُوَ اَضْحَكَ وَاَبْكٰی ۟ۙ

ಅವನೇ ನಗುವಂತೆ ಮತ್ತು ಅಳುವಂತೆ ಮಾಡುವವನೆಂದು, info
التفاسير:

external-link copy
44 : 53

وَاَنَّهٗ هُوَ اَمَاتَ وَاَحْیَا ۟ۙ

ಅವನೇ ಮರಣ ಮತ್ತು ಜೀವನವನ್ನು ನೀಡುವವನೆಂದು, info
التفاسير: