Kur'an-ı Kerim meal tercümesi - Kanadaca Tercüme - Hamza Batur

Sayfa numarası:close

external-link copy
10 : 3

اِنَّ الَّذِیْنَ كَفَرُوْا لَنْ تُغْنِیَ عَنْهُمْ اَمْوَالُهُمْ وَلَاۤ اَوْلَادُهُمْ مِّنَ اللّٰهِ شَیْـًٔا ؕ— وَاُولٰٓىِٕكَ هُمْ وَقُوْدُ النَّارِ ۟ۙ

ಸತ್ಯನಿಷೇಧಿಗಳು ಯಾರೋ—ಅವರಿಗೆ ಅವರ ಆಸ್ತಿಗಳು ಅಥವಾ ಮಕ್ಕಳು ಅಲ್ಲಾಹನ ಬಳಿ ಯಾವುದೇ ಉಪಕಾರ ಮಾಡುವುದಿಲ್ಲ. ಅವರೇ ನರಕಾಗ್ನಿಯ ಇಂಧನವಾಗುವವರು. info
التفاسير:

external-link copy
11 : 3

كَدَاْبِ اٰلِ فِرْعَوْنَ ۙ— وَالَّذِیْنَ مِنْ قَبْلِهِمْ ؕ— كَذَّبُوْا بِاٰیٰتِنَا ۚ— فَاَخَذَهُمُ اللّٰهُ بِذُنُوْبِهِمْ ؕ— وَاللّٰهُ شَدِیْدُ الْعِقَابِ ۟

ಫರೋಹನ ಜನರ ಮತ್ತು ಅವರಿಗಿಂತ ಹಿಂದಿನವರ ಸ್ಥಿತಿಯಂತೆ. ಅವರು ನಮ್ಮ ವಚನಗಳನ್ನು ನಿಷೇಧಿಸಿದರು. ಆಗ ಅಲ್ಲಾಹು ಅವರ ಪಾಪಗಳ ನಿಮಿತ್ತ ಅವರನ್ನು ಶಿಕ್ಷಿಸಿದನು. ಅಲ್ಲಾಹು ಅತಿಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ. info
التفاسير:

external-link copy
12 : 3

قُلْ لِّلَّذِیْنَ كَفَرُوْا سَتُغْلَبُوْنَ وَتُحْشَرُوْنَ اِلٰی جَهَنَّمَ ؕ— وَبِئْسَ الْمِهَادُ ۟

ಸತ್ಯನಿಷೇಧಿಗಳೊಡನೆ ಹೇಳಿರಿ: “ಸದ್ಯದಲ್ಲೇ ನಿಮ್ಮನ್ನು ಸೋಲಿಸಲಾಗುವುದು ಮತ್ತು ನರಕದ ಕಡೆಗೆ ಒಟ್ಟುಗೂಡಿಸಲಾಗುವುದು. ಆ ವಾಸಸ್ಥಳವು ಬಹಳ ನಿಕೃಷ್ಟವಾಗಿದೆ.”[1] info

[1] ಇಲ್ಲಿ ಸತ್ಯನಿಷೇಧಿಗಳು ಎಂದರೆ ಯಹೂದಿಗಳು. ಈ ಭವಿಷ್ಯ ನುಡಿಯು ಸ್ವಲ್ಪ ಸಮಯದಲ್ಲೇ ಸತ್ಯವಾಗಿದೆ. ಯಹೂದಿಗಳ ಬನೂ ಕೈನುಕಾ ಮತ್ತು ಬನೂ ನದೀರ್ ಗೋತ್ರಗಳನ್ನು ಗಡೀಪಾರು ಮಾಡಲಾಯಿತು ಹಾಗೂ ಬನೂ ಕುರೈಝ ಗೋತ್ರವನ್ನು ಸಂಹಾರ ಮಾಡಲಾಯಿತು. ನಂತರ ಖೈಬರ್ ಕೋಟೆಯನ್ನು ವಶಪಡಿಸಲಾಯಿತು.

التفاسير:

external-link copy
13 : 3

قَدْ كَانَ لَكُمْ اٰیَةٌ فِیْ فِئَتَیْنِ الْتَقَتَا ؕ— فِئَةٌ تُقَاتِلُ فِیْ سَبِیْلِ اللّٰهِ وَاُخْرٰی كَافِرَةٌ یَّرَوْنَهُمْ مِّثْلَیْهِمْ رَاْیَ الْعَیْنِ ؕ— وَاللّٰهُ یُؤَیِّدُ بِنَصْرِهٖ مَنْ یَّشَآءُ ؕ— اِنَّ فِیْ ذٰلِكَ لَعِبْرَةً لِّاُولِی الْاَبْصَارِ ۟

(ಬದ್ರ್‌ನಲ್ಲಿ) ಮುಖಾಮುಖಿಯಾದ ಆ ಎರಡು ಬಣಗಳಲ್ಲಿ ನಿಶ್ಚಯವಾಗಿಯೂ ನಿಮಗೆ ದೃಷ್ಟಾಂತವಿದೆ. ಒಂದು ಬಣವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಿತ್ತು. ಇನ್ನೊಂದು ಬಣವು ಸತ್ಯನಿಷೇಧಿಗಳದ್ದಾಗಿತ್ತು. ಅವರು ತಮ್ಮ ದೃಷ್ಟಿಯಲ್ಲಿ ಸತ್ಯವಿಶ್ವಾಸಿಗಳನ್ನು ತಮಗಿಂತ ಇಮ್ಮಡಿ ಸಂಖ್ಯೆಯಲ್ಲಿ ಕಾಣುತ್ತಿದ್ದರು. ಅಲ್ಲಾಹು ತನ್ನ ಸಹಾಯದಿಂದ ತಾನು ಇಚ್ಛಿಸುವವರನ್ನು ಬೆಂಬಲಿಸುತ್ತಾನೆ. ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಿಯುಳ್ಳವರಿಗೆ ನೀತಿಪಾಠವಿದೆ. info
التفاسير:

external-link copy
14 : 3

زُیِّنَ لِلنَّاسِ حُبُّ الشَّهَوٰتِ مِنَ النِّسَآءِ وَالْبَنِیْنَ وَالْقَنَاطِیْرِ الْمُقَنْطَرَةِ مِنَ الذَّهَبِ وَالْفِضَّةِ وَالْخَیْلِ الْمُسَوَّمَةِ وَالْاَنْعَامِ وَالْحَرْثِ ؕ— ذٰلِكَ مَتَاعُ الْحَیٰوةِ الدُّنْیَا ۚ— وَاللّٰهُ عِنْدَهٗ حُسْنُ الْمَاٰبِ ۟

ಮಹಿಳೆಯರು, ಗಂಡುಮಕ್ಕಳು, ಬಂಗಾರ ಮತ್ತು ಬೆಳ್ಳಿಯನ್ನು ಸಂಗ್ರಹಿಸಿಡಲಾದ ಖಜಾನೆಗಳು, ಉತ್ಕೃಷ್ಟ ತಳಿಯ ಕುದುರೆಗಳು, ಜಾನುವಾರುಗಳು, ಕೃಷಿಗಳು ಮುಂತಾದ ಜನರು ಮೋಹಿಸುವ ವಸ್ತುಗಳಲ್ಲಿರುವ ಪ್ರೀತಿಯನ್ನು ಅವರಿಗೆ ಅಲಂಕರಿಸಿಕೊಡಲಾಗಿದೆ. ಅವು ಇಹಲೋಕ ಜೀವನದ ಆನಂದಗಳಾಗಿವೆ. ಮರಳಿ ತಲುಪಬೇಕಾದ ಅತ್ಯುತ್ತಮ ಸ್ಥಳವು ಅಲ್ಲಾಹನ ಬಳಿಯಿದೆ. info
التفاسير:

external-link copy
15 : 3

قُلْ اَؤُنَبِّئُكُمْ بِخَیْرٍ مِّنْ ذٰلِكُمْ ؕ— لِلَّذِیْنَ اتَّقَوْا عِنْدَ رَبِّهِمْ جَنّٰتٌ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَا وَاَزْوَاجٌ مُّطَهَّرَةٌ وَّرِضْوَانٌ مِّنَ اللّٰهِ ؕ— وَاللّٰهُ بَصِیْرٌ بِالْعِبَادِ ۟ۚ

ಹೇಳಿರಿ: “ಅದಕ್ಕಿಂತಲೂ ಉತ್ತಮವಾದ ವಸ್ತುವನ್ನು ನಾನು ನಿಮಗೆ ತಿಳಿಸಿಕೊಡಲೇ? ದೇವಭಯವುಳ್ಳವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅವರಿಗೆ ಪರಿಶುದ್ಧ ಸಂಗಾತಿಗಳಿದ್ದಾರೆ ಮತ್ತು ಅಲ್ಲಾಹನ ಕಡೆಯ ಸಂಪ್ರೀತಿಯೂ ಇದೆ. ಅಲ್ಲಾಹು ತನ್ನ ದಾಸರನ್ನು ನೋಡುತ್ತಿದ್ದಾನೆ.” info
التفاسير: