Kur'an-ı Kerim meal tercümesi - Kanadaca Tercüme - Hamza Batur

Sayfa numarası:close

external-link copy
22 : 28

وَلَمَّا تَوَجَّهَ تِلْقَآءَ مَدْیَنَ قَالَ عَسٰی رَبِّیْۤ اَنْ یَّهْدِیَنِیْ سَوَآءَ السَّبِیْلِ ۟

ನಂತರ ಅವರು ಮದ್ಯನ್‍ ದೇಶದ ದಿಕ್ಕಿಗೆ ತಿರುಗಿದಾಗ, ಅವರು ಹೇಳಿದರು: “ನನ್ನ ಪರಿಪಾಲಕನು (ಅಲ್ಲಾಹು) ನನ್ನನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುವನೆಂದು ನನಗೆ ಭರವಸೆಯಿದೆ.” info
التفاسير:

external-link copy
23 : 28

وَلَمَّا وَرَدَ مَآءَ مَدْیَنَ وَجَدَ عَلَیْهِ اُمَّةً مِّنَ النَّاسِ یَسْقُوْنَ ؗ۬— وَوَجَدَ مِنْ دُوْنِهِمُ امْرَاَتَیْنِ تَذُوْدٰنِ ۚ— قَالَ مَا خَطْبُكُمَا ؕ— قَالَتَا لَا نَسْقِیْ حَتّٰی یُصْدِرَ الرِّعَآءُ ٚ— وَاَبُوْنَا شَیْخٌ كَبِیْرٌ ۟

ಅವರು ಮದ್ಯನ್ ದೇಶದ ಜಲಾಶಯದ ಬಳಿಗೆ ತಲುಪಿದಾಗ, ಅಲ್ಲಿ ತಮ್ಮ ಕುರಿಮಂದೆಗೆ ನೀರುಣಿಸುತ್ತಿರುವ ಜನರ ಗುಂಪನ್ನು ಕಂಡರು. ಅಲ್ಲಿ ಇಬ್ಬರು ಯುವತಿಯರು (ತಮ್ಮ ಕುರಿಮಂದೆಯನ್ನು) ತಡೆದು ನಿಂತಿರುವುದನ್ನೂ ಕಂಡರು. ಅವರು ಕೇಳಿದರು: “ನೀವೇನು ಮಾಡುತ್ತಿದ್ದೀರಿ?” ಆ ಯುವತಿಯರು ಉತ್ತರಿಸಿದರು: “ಈ ಕುರಿಗಾಹಿಗಳು ಇಲ್ಲಿಂದ ಹೊರಟು ಹೋಗುವ ತನಕ ನಮಗೆ ನೀರುಣಿಸಲು ಆಗುವುದಿಲ್ಲ. ನಮ್ಮ ತಂದೆ ವಯೋವೃದ್ಧರಾಗಿದ್ದಾರೆ.”[1] info

[1] ಆ ಯುವತಿಯವರು ಪ್ರವಾದಿ ಶುಐಬ್ (ಅವರ ಮೇಲೆ ಶಾಂತಿಯಿರಲಿ) ರವರ ಇಬ್ಬರು ಹೆಣ್ಣುಮಕ್ಕಳಾಗಿದ್ದರು. ಗಂಡಸರೊಂದಿಗೆ ಬೆರೆಯದಿರಲು ಅವರು ಗಂಡಸರು ನೀರುಣಿಸಿ ಹೊರಟುಹೋಗುವ ತನಕ ಅಲ್ಲಿ ಕಾಯುತ್ತಿದ್ದರು.

التفاسير:

external-link copy
24 : 28

فَسَقٰی لَهُمَا ثُمَّ تَوَلّٰۤی اِلَی الظِّلِّ فَقَالَ رَبِّ اِنِّیْ لِمَاۤ اَنْزَلْتَ اِلَیَّ مِنْ خَیْرٍ فَقِیْرٌ ۟

ಮೂಸಾ ಅವರ ಕುರಿಗಳಿಗೆ ನೀರುಣಿಸಿದರು. ನಂತರ ನೆರಳಿಗೆ ಹಿಂದಿರುಗಿ ಬಂದು ಪ್ರಾರ್ಥಿಸಿದರು: “ಓ ನನ್ನ ಪರಿಪಾಲಕನೇ! ನೀನು ಯಾವುದೇ ಒಳಿತನ್ನು ನನಗೆ ದಯಪಾಲಿಸಿದರೂ ನನಗೆ ಅದರ ಆವಶ್ಯಕತೆ ಇದ್ದೇ ಇದೆ.” info
التفاسير:

external-link copy
25 : 28

فَجَآءَتْهُ اِحْدٰىهُمَا تَمْشِیْ عَلَی اسْتِحْیَآءٍ ؗ— قَالَتْ اِنَّ اَبِیْ یَدْعُوْكَ لِیَجْزِیَكَ اَجْرَ مَا سَقَیْتَ لَنَا ؕ— فَلَمَّا جَآءَهٗ وَقَصَّ عَلَیْهِ الْقَصَصَ ۙ— قَالَ لَا تَخَفْ ۫— نَجَوْتَ مِنَ الْقَوْمِ الظّٰلِمِیْنَ ۟

ಆಗ ಆ ಇಬ್ಬರು ಯುವತಿಯರಲ್ಲಿ ಒಬ್ಬಳು ಸಂಕೋಚದಿಂದ ನಡೆಯುತ್ತಾ ಬಂದು ಹೇಳಿದಳು: “ನೀವು ನಮ್ಮ ಕುರಿಗಳಿಗೆ ನೀರುಣಿಸಿದ್ದಕ್ಕೆ ಪ್ರತಿಫಲ ನೀಡಲು ನನ್ನ ತಂದೆ ನಿಮ್ಮನ್ನು ಕರೆಯುತ್ತಿದ್ದಾರೆ.” ಮೂಸಾ ಅವಳ ತಂದೆಯ ಬಳಿಗೆ ಹೋಗಿ ನಡೆದ ಘಟನೆಯನ್ನು ವಿವರಿಸಿದಾಗ, ತಂದೆ ಹೇಳಿದರು: “ಭಯಪಡಬೇಡಿ! ನೀವು ಆ ದುಷ್ಟ ಜನರಿಂದ ಪಾರಾಗಿದ್ದೀರಿ.” info
التفاسير:

external-link copy
26 : 28

قَالَتْ اِحْدٰىهُمَا یٰۤاَبَتِ اسْتَاْجِرْهُ ؗ— اِنَّ خَیْرَ مَنِ اسْتَاْجَرْتَ الْقَوِیُّ الْاَمِیْنُ ۟

ಆ ಇಬ್ಬರು ಯುವತಿಯರಲ್ಲಿ ಒಬ್ಬಳು ಹೇಳಿದಳು: “ಅಪ್ಪಾಜಿ! ಇವರನ್ನು ನೌಕರಿಗೆ ನೇಮಿಸಿಕೊಳ್ಳಿ. ಏಕೆಂದರೆ, ಬಲಿಷ್ಠರು ಮತ್ತು ಪ್ರಾಮಾಣಿಕರೇ ನೀವು ನೌಕರಿಗೆ ನೇಮಿಸಿಕೊಳ್ಳುವವರಲ್ಲಿ ಅತಿಶ್ರೇಷ್ಠರು.” info
التفاسير:

external-link copy
27 : 28

قَالَ اِنِّیْۤ اُرِیْدُ اَنْ اُنْكِحَكَ اِحْدَی ابْنَتَیَّ هٰتَیْنِ عَلٰۤی اَنْ تَاْجُرَنِیْ ثَمٰنِیَ حِجَجٍ ۚ— فَاِنْ اَتْمَمْتَ عَشْرًا فَمِنْ عِنْدِكَ ۚ— وَمَاۤ اُرِیْدُ اَنْ اَشُقَّ عَلَیْكَ ؕ— سَتَجِدُنِیْۤ اِنْ شَآءَ اللّٰهُ مِنَ الصّٰلِحِیْنَ ۟

ತಂದೆ ಹೇಳಿದರು: “ನೀವು ಎಂಟು ವರ್ಷ ನನ್ನ ನೌಕರಿ ಮಾಡಬೇಕು ಎಂಬ (ವಧುದಕ್ಷಿಣೆಯ) ಆಧಾರದಲ್ಲಿ ನಾನು ನನ್ನ ಈ ಇಬ್ಬರು ಪುತ್ರಿಯರಲ್ಲಿ ಒಬ್ಬಳನ್ನು ನಿಮಗೆ ವಿವಾಹ ಮಾಡಿಕೊಡುತ್ತೇನೆ. ನೀವು ಹತ್ತು ವರ್ಷ ಪೂರ್ತಿಗೊಳಿಸಿದರೆ ಅದು ನಿಮ್ಮ ಕಡೆಯ ಉಪಕಾರವಾಗಿದೆ. ನಿಮಗೆ ಕಷ್ಟಕೊಡಲು ನಾನು ಬಯಸುವುದಿಲ್ಲ. ಅಲ್ಲಾಹು ಇಚ್ಛಿಸಿದರೆ ನೀವು ನನ್ನನ್ನು ನೀತಿವಂತರಲ್ಲಿ ಒಬ್ಬನಂತೆ ಕಾಣುವಿರಿ.” info
التفاسير:

external-link copy
28 : 28

قَالَ ذٰلِكَ بَیْنِیْ وَبَیْنَكَ ؕ— اَیَّمَا الْاَجَلَیْنِ قَضَیْتُ فَلَا عُدْوَانَ عَلَیَّ ؕ— وَاللّٰهُ عَلٰی مَا نَقُوْلُ وَكِیْلٌ ۟۠

ಮೂಸಾ ಹೇಳಿದರು: “ಸರಿ. ಇದು ನನ್ನ ಮತ್ತು ನಿಮ್ಮ ನಡುವಿನ ನಿರ್ಧಾರವಾಗಿದೆ. ನಾನು ಈ ಎರಡು ಅವಧಿಗಳಲ್ಲಿ ಯಾವುದನ್ನು ಪೂರ್ತಿ ಮಾಡಿದರೂ ನನ್ನ ಮೇಲೆ ಅನ್ಯಾಯವಾಗಬಾರದು. ನಾವು ಹೇಳುತ್ತಿರುವ ಮಾತುಗಳಿಗೆ ಅಲ್ಲಾಹು ಸಾಕ್ಷಿಯಾಗಿದ್ದಾನೆ.” info
التفاسير: