Kur'an-ı Kerim meal tercümesi - Kanadaca Tercüme - Beşir Meysuri

Sayfa numarası:close

external-link copy
84 : 18

اِنَّا مَكَّنَّا لَهٗ فِی الْاَرْضِ وَاٰتَیْنٰهُ مِنْ كُلِّ شَیْءٍ سَبَبًا ۟ۙ

ನಿಶ್ಚಯವಾಗಿಯು, ನಾವು ಅವನಿಗೆ ಭೂಮಿಯಲ್ಲಿ ಅಧಿಪತ್ಯವನ್ನು ನೀಡಿದ್ದೆವು ಮತ್ತು ಅವನಿಗೆ ಎಲ್ಲಾ ರೀತಿಯ ಸಾಧನಾನುಕೂಲಗಳನ್ನು ಕೊಟ್ಟಿದ್ದೆವು. info
التفاسير:

external-link copy
85 : 18

فَاَتْبَعَ سَبَبًا ۟

ಅವರು ತಮ್ಮ ಎಲ್ಲಾ ಸಾಧನಾನುಕೂಲತೆಗಳೊಂದಿಗೆ ಮಾರ್ಗವೊಂದರಲ್ಲಿ ಹೊರಟರು. info
التفاسير:

external-link copy
86 : 18

حَتّٰۤی اِذَا بَلَغَ مَغْرِبَ الشَّمْسِ وَجَدَهَا تَغْرُبُ فِیْ عَیْنٍ حَمِئَةٍ وَّوَجَدَ عِنْدَهَا قَوْمًا ؕ۬— قُلْنَا یٰذَا الْقَرْنَیْنِ اِمَّاۤ اَنْ تُعَذِّبَ وَاِمَّاۤ اَنْ تَتَّخِذَ فِیْهِمْ حُسْنًا ۟

ಕೊನೆಗೆ ಅವರು ಸೂರ್ಯಾಸ್ತಮಯ ಪ್ರದೇಶಕ್ಕೆ ತಲುಪಿದರು ಮತ್ತು ಅದನ್ನವರು ಕಪ್ಪು ಹುದುಲಿನ ಚಿಲುಮೆಯಲ್ಲಿ ಮುಳುಗುತ್ತಿರುವುದಾಗಿ ಕಂಡರು. (ಅವರಿಗೆ ಭಾಸವಾಯಿತು) ಅಲ್ಲಿ ಅವರು ಒಂದು ಜನಾಂಗವನ್ನು ಕಂಡರು. ಆಗ ನಾವು ಹೇಳಿದೆವು: ಓ ಜುಲ್ಖರ್‌ನೈನ್, ಒಂದೋ ನೀವು ಅವರನ್ನು ಶಿಕ್ಷಿಸಬಹುದು ಇಲ್ಲವೇ ಅವರ ವಿಚಾರದಲ್ಲಿ ಉತ್ತಮ ನಿಲುವನ್ನು ತಾಳಬಹುದು. info
التفاسير:

external-link copy
87 : 18

قَالَ اَمَّا مَنْ ظَلَمَ فَسَوْفَ نُعَذِّبُهٗ ثُمَّ یُرَدُّ اِلٰی رَبِّهٖ فَیُعَذِّبُهٗ عَذَابًا نُّكْرًا ۟

ಅವರು ಹೇಳಿದರು: ಅಕ್ರಮವೆಸಗಿದವನಿಗೆ ಸದ್ಯವೇ ನಾವು ಶಿಕ್ಷಿಸುವೆವು. ತರುವಾಯ ಅವನು ತನ್ನ ಪ್ರಭುವಿನೆಡೆಗೆ ಮರಳಿಸಲಾಗುವನು.ಅವನ ಪ್ರಭು ಅವನಿಗೆ ಕಠಿಣ ಯಾತನೆಯನ್ನು ಕೊಡುವನು. info
التفاسير:

external-link copy
88 : 18

وَاَمَّا مَنْ اٰمَنَ وَعَمِلَ صَالِحًا فَلَهٗ جَزَآءَ ١لْحُسْنٰی ۚ— وَسَنَقُوْلُ لَهٗ مِنْ اَمْرِنَا یُسْرًا ۟ؕ

ಆದರೆ ಯಾರು ವಿಶ್ವಾಸವನ್ನಿರಿಸಿ ಸತ್ಕರ್ಮವನ್ನು ಮಾಡಿದನೋ ಅವನಿಗೆ ಉತ್ತಮ ಪ್ರತಿಫಲವಿದೆ.ಮತ್ತು ನಾವು ಅವನಿಗೆ ನಮ್ಮ ಕಾರ್ಯದಲ್ಲಿ ಸರಳವಾಗಿರುವುದನ್ನೇ ಆದೇಶಿಸುವೆವು. info
التفاسير:

external-link copy
89 : 18

ثُمَّ اَتْبَعَ سَبَبًا ۟

ತರುವಾಯ ಅವರು ಇನ್ನೊಂದು ಮಾರ್ಗದಲ್ಲಿ ಸಾಗಿದರು. info
التفاسير:

external-link copy
90 : 18

حَتّٰۤی اِذَا بَلَغَ مَطْلِعَ الشَّمْسِ وَجَدَهَا تَطْلُعُ عَلٰی قَوْمٍ لَّمْ نَجْعَلْ لَّهُمْ مِّنْ دُوْنِهَا سِتْرًا ۟ۙ

ಕೊನೆಗೆ ಅವರು ಸೂರ್ಯೋದಯದ ಪ್ರದೇಶಕ್ಕೆ ತಲುಪಿದಾಗ ಅದನ್ನು ಅವರು ಒಂದು ಸಮುದಾಯದ ಮೇಲೆ ಉದಯಿಸುತ್ತಿರುವುದಾಗಿ ಕಂಡರು. ನಾವು ಅವರಿಗೆ ಅದರ ಬಿಸಿಲಿನಿಂದ ರಕ್ಷಣೆ ಹೊಂದುವ ಯಾವುದೇ ಮರೆಯನ್ನೂ ಮಾಡಿರಲಿಲ್ಲ. info
التفاسير:

external-link copy
91 : 18

كَذٰلِكَ ؕ— وَقَدْ اَحَطْنَا بِمَا لَدَیْهِ خُبْرًا ۟

ಘಟನೆಯು ಹೀಗೆ ಇದೆ ಮತ್ತು ನಿಶ್ಚಯವಾಗಿಯು ಅವರ ಬಳಿಯಿರುವ ಸಕಲ ವಿಷಯಗಳ ಬಗ್ಗೆ ನಮಗೆ ಅರಿವಿದೆ. info
التفاسير:

external-link copy
92 : 18

ثُمَّ اَتْبَعَ سَبَبًا ۟

ನಂತರ ಅವರು ಮತ್ತೊಂದು ಮಾರ್ಗವನ್ನು ಹಿಡಿದು ಹೊರಟರು. info
التفاسير:

external-link copy
93 : 18

حَتّٰۤی اِذَا بَلَغَ بَیْنَ السَّدَّیْنِ وَجَدَ مِنْ دُوْنِهِمَا قَوْمًا ۙ— لَّا یَكَادُوْنَ یَفْقَهُوْنَ قَوْلًا ۟

ಕೊನೆಗೆ ಅವರು ಎರಡು ಪರ್ವತಗಳ ಮಧ್ಯೆ ತಲುಪಿದಾಗ ಅಲ್ಲಿ ಅವುಗಳೆರಡರ ಹೊರತು ಮತ್ತೊಂದು ಜನಾಂಗವನ್ನು ಕಂಡರು. ಅವರು ಮಾತನ್ನು ಗ್ರಹಿಸಿಕೊಳ್ಳುತ್ತಿರಲಿಲ್ಲ. info
التفاسير:

external-link copy
94 : 18

قَالُوْا یٰذَا الْقَرْنَیْنِ اِنَّ یَاْجُوْجَ وَمَاْجُوْجَ مُفْسِدُوْنَ فِی الْاَرْضِ فَهَلْ نَجْعَلُ لَكَ خَرْجًا عَلٰۤی اَنْ تَجْعَلَ بَیْنَنَا وَبَیْنَهُمْ سَدًّا ۟

ಅವರು ಹೇಳಿದರು: ಓ ಜುಲ್ಖರ್‌ನೈನ್! ಯಾಜೂಜ್ ಮಾಜೂಜ್ ಈ ಪ್ರದೇಶದಲ್ಲಿ ಕ್ಷೆÆÃಭೆ ಹರಡು ವವರಾಗಿದ್ದಾರೆ.ನೀವು ನಮ್ಮ ಮತ್ತು ಅವರ ನಡುವೆ ತಡೆಗೋಡಯೊಂದನ್ನು ನಿರ್ಮಾಣ ಮಾಡುವ (ಶರತ್ತಿನ) ಮೇಲೆ ನಾವು ನಿಮಗಾಗಿ ತೆರಿಗೆ ಮೊತ್ತವನ್ನು ನಿಶ್ಚಯಿಸಿ ಕೊಡಬೇಕೆ? info
التفاسير:

external-link copy
95 : 18

قَالَ مَا مَكَّنِّیْ فِیْهِ رَبِّیْ خَیْرٌ فَاَعِیْنُوْنِیْ بِقُوَّةٍ اَجْعَلْ بَیْنَكُمْ وَبَیْنَهُمْ رَدْمًا ۟ۙ

ಅವರು ಹೇಳಿದರು: ಓ ಜುಲ್ಖರ್‌ನೈನ್! ಯಾಜೂಜ್ ಮಾಜೂಜ್ ಈ ಪ್ರದೇಶದಲ್ಲಿ ಕ್ಷೆÆÃಭೆ ಹರಡು ವವರಾಗಿದ್ದಾರೆ.ನೀವು ನಮ್ಮ ಮತ್ತು ಅವರ ನಡುವೆ ತಡೆಗೋಡಯೊಂದನ್ನು ನಿರ್ಮಾಣ ಮಾಡುವ (ಶರತ್ತಿನ) ಮೇಲೆ ನಾವು ನಿಮಗಾಗಿ ತೆರಿಗೆ ಮೊತ್ತವನ್ನು ನಿಶ್ಚಯಿಸಿ ಕೊಡಬೇಕೆ? info
التفاسير:

external-link copy
96 : 18

اٰتُوْنِیْ زُبَرَ الْحَدِیْدِ ؕ— حَتّٰۤی اِذَا سَاوٰی بَیْنَ الصَّدَفَیْنِ قَالَ انْفُخُوْا ؕ— حَتّٰۤی اِذَا جَعَلَهٗ نَارًا ۙ— قَالَ اٰتُوْنِیْۤ اُفْرِغْ عَلَیْهِ قِطْرًا ۟ؕ

ನೀವು ನನಗೆ ಕಬ್ಬಿಣದ ಗಟ್ಟಿಗಳನ್ನು ತಂದು ಕೊಡಿರಿ. ಕೊನೆಗೆ ಅವರು ಆ ಎರಡು ಬೆಟ್ಟಗಳ ನಡುವೆ ಗೋಡೆಯನ್ನು ಸಮತಟ್ಟಾಗಿಸಿ: ನೀವು ಬೆಂಕಿಯನ್ನು ಉರಿಸಿರಿ ಎಂದರು. ಕೊನೆಗೆ ಕಬ್ಬಿಣದ ಗಟ್ಟಿಗಳನ್ನು ಕೆಂಡವನ್ನಾಗಿ ಮಾಡಿದಾಗ ನೀವು ಕರಗಿಸಿದ ತಾಮ್ರವನ್ನು ತನ್ನಿರಿ ನಾನು ಅದನ್ನು ಅದರ ಮೇಲೆ ಎರೆಯುವೆನು ಎಂದರು. info
التفاسير:

external-link copy
97 : 18

فَمَا اسْطَاعُوْۤا اَنْ یَّظْهَرُوْهُ وَمَا اسْتَطَاعُوْا لَهٗ نَقْبًا ۟

ಕೊನೆಗೆ ಯಾಜೂಜ್, ಮಾಜೂಜರಿಗೆ ಅದರ ಮೇಲೇರಿ ಬರಲು ಸಾಧ್ಯವಾಗಲಿಲ್ಲ ಮತ್ತು ಅವರು ಅದಕ್ಕೆ ಕನ್ನ ಕೊರೆಯಲೂ ಅಸಮರ್ಥರಾದರು. info
التفاسير: