[1] ಅಂದರೆ ಕುರ್‌ಆನ್ ದೇವವಾಣಿಯೆಂದು ಒಪ್ಪಿಕೊಂಡ ಬಳಿಕವೂ ಅದರಿಂದ ವಿಮುಖರಾಗುವವರು ಮತ್ತು ಅದನ್ನು ನಿಷೇಧಿಸುವವರು. ತಮ್ಮ ವಿಚಾರಗಳನ್ನು ಮತ್ತು ತತ್ವ-ಸಿದ್ಧಾಂತಗಳನ್ನು ಸಮರ್ಥಿಸುವುದಕ್ಕಾಗಿ ಕುರ್‌ಆನ್ ವಚನಗಳನ್ನು ತಪ್ಪಾಗಿ ವ್ಯಾಖ್ಯಾನಿಸುವವರು ಕೂಡ ಇದರಲ್ಲಿ ಒಳಪಡುತ್ತಾರೆ.
[1] ಅಂದರೆ ದೂರದಲ್ಲಿರುವ ಜನರಿಗೆ ಕರೆಯುವವನನ್ನು ನೋಡಲು ಮತ್ತು ಅವನ ಕರೆಯನ್ನು ಕೇಳಲು ಸಾಧ್ಯವಾಗುವುದಿಲ್ಲ. ಹಾಗೆಯೇ ಇವರಿಗೂ ಕುರ್‌ಆನನ್ನು ಕೇಳಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.