அல்குர்ஆன் மொழிபெயர்ப்பு - கன்னட மொழிபெயர்ப்பு - ஹம்ஸா பத்தூர்

ಫುಸ್ಸಿಲತ್

external-link copy
1 : 41

حٰمٓ ۟ۚ

ಹಾ-ಮೀಮ್. info
التفاسير:

external-link copy
2 : 41

تَنْزِیْلٌ مِّنَ الرَّحْمٰنِ الرَّحِیْمِ ۟ۚ

ಇದು ಪರಮ ದಯಾಳು ಮತ್ತು ಕರುಣಾನಿಧಿಯಾದ (ಅಲ್ಲಾಹನ) ಕಡೆಯಿಂದ ಅವತೀರ್ಣವಾಗಿದೆ. info
التفاسير:

external-link copy
3 : 41

كِتٰبٌ فُصِّلَتْ اٰیٰتُهٗ قُرْاٰنًا عَرَبِیًّا لِّقَوْمٍ یَّعْلَمُوْنَ ۟ۙ

ಇದು ವಚನಗಳನ್ನು ವಿವರಿಸಿಕೊಡಲಾದ ಗ್ರಂಥವಾಗಿದೆ. ತಿಳುವಳಿಕೆಯಿರುವ ಜನರಿಗೆ ಅರಬ್ಬಿ ಭಾಷೆಯಲ್ಲಿರುವ ಕುರ್‌ಆನ್ ಆಗಿದೆ. info
التفاسير:

external-link copy
4 : 41

بَشِیْرًا وَّنَذِیْرًا ۚ— فَاَعْرَضَ اَكْثَرُهُمْ فَهُمْ لَا یَسْمَعُوْنَ ۟

ಇದು ಸುವಾರ್ತೆಯನ್ನು ತಿಳಿಸುವ ಮತ್ತು ಮುನ್ನೆಚ್ಚರಿಕೆ ನೀಡುವ (ಗ್ರಂಥವಾಗಿದೆ). ಆದರೆ ಅವರಲ್ಲಿ ಹೆಚ್ಚಿನವರು ವಿಮುಖರಾಗಿದ್ದಾರೆ. ಅವರು (ಇದಕ್ಕೆ) ಕಿವಿಗೊಡುವುದಿಲ್ಲ. info
التفاسير:

external-link copy
5 : 41

وَقَالُوْا قُلُوْبُنَا فِیْۤ اَكِنَّةٍ مِّمَّا تَدْعُوْنَاۤ اِلَیْهِ وَفِیْۤ اٰذَانِنَا وَقْرٌ وَّمِنْ بَیْنِنَا وَبَیْنِكَ حِجَابٌ فَاعْمَلْ اِنَّنَا عٰمِلُوْنَ ۟

ಅವರು ಹೇಳಿದರು: “ನೀವು ನಮ್ಮನ್ನು ಯಾವುದರ ಕಡೆಗೆ ಕರೆಯುತ್ತಿದ್ದೀರೋ (ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ) ರೀತಿಯಲ್ಲಿ ನಮ್ಮ ಹೃದಯಗಳನ್ನು ಮುಚ್ಚಲಾಗಿವೆ. ನಮ್ಮ ಕಿವಿಗಳು ಕಿವುಡಾಗಿವೆ. ನಮ್ಮ ಮತ್ತು ನಿಮ್ಮ ನಡುವೆ ಒಂದು ಪರದೆಯಿದೆ. ಆದ್ದರಿಂದ ನೀವು ಕರ್ಮವೆಸಗಿರಿ. ನಾವು ಕೂಡ ಕರ್ಮವೆಸಗುತ್ತೇವೆ.” info
التفاسير:

external-link copy
6 : 41

قُلْ اِنَّمَاۤ اَنَا بَشَرٌ مِّثْلُكُمْ یُوْحٰۤی اِلَیَّ اَنَّمَاۤ اِلٰهُكُمْ اِلٰهٌ وَّاحِدٌ فَاسْتَقِیْمُوْۤا اِلَیْهِ وَاسْتَغْفِرُوْهُ ؕ— وَوَیْلٌ لِّلْمُشْرِكِیْنَ ۟ۙ

ಹೇಳಿರಿ: “ನಾನು ನಿಮ್ಮಂತೆಯೇ ಇರುವ ಒಬ್ಬ ಮನುಷ್ಯ. ನಿಮ್ಮ ದೇವನು ಏಕೈಕ ದೇವನೆಂದು ನನಗೆ ದೇವವಾಣಿ ನೀಡಲಾಗುತ್ತಿದೆ. ಆದ್ದರಿಂದ ನೀವು ಅವನ ಕಡೆಗೆ ತಿರುಗಿರಿ ಮತ್ತು ಅವನಲ್ಲಿ ಕ್ಷಮೆಯಾಚಿಸಿರಿ.” ಬಹುದೇವಾರಾಧಕರಿಗೆ ವಿನಾಶ ಕಾದಿದೆ. info
التفاسير:

external-link copy
7 : 41

الَّذِیْنَ لَا یُؤْتُوْنَ الزَّكٰوةَ وَهُمْ بِالْاٰخِرَةِ هُمْ كٰفِرُوْنَ ۟

ಅಂದರೆ ಝಕಾತ್ ನೀಡದವರಿಗೆ. ಅವರು ಪರಲೋಕವನ್ನು ನಿಷೇಧಿಸುತ್ತಾರೆ. info
التفاسير:

external-link copy
8 : 41

اِنَّ الَّذِیْنَ اٰمَنُوْا وَعَمِلُوا الصّٰلِحٰتِ لَهُمْ اَجْرٌ غَیْرُ مَمْنُوْنٍ ۟۠

ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ಅಂತ್ಯವಿಲ್ಲದ ಪ್ರತಿಫಲವಿದೆ. info
التفاسير:

external-link copy
9 : 41

قُلْ اَىِٕنَّكُمْ لَتَكْفُرُوْنَ بِالَّذِیْ خَلَقَ الْاَرْضَ فِیْ یَوْمَیْنِ وَتَجْعَلُوْنَ لَهٗۤ اَنْدَادًا ؕ— ذٰلِكَ رَبُّ الْعٰلَمِیْنَ ۟ۚ

ಹೇಳಿರಿ: “ಎರಡು ದಿನಗಳಲ್ಲಿ ಭೂಮಿಯನ್ನು ಸೃಷ್ಟಿಸಿದ (ಅಲ್ಲಾಹನನ್ನು) ನೀವು ನಿಷೇಧಿಸುತ್ತೀರಾ ಮತ್ತು ಅವನೊಂದಿಗೆ ಸರಿಸಾಟಿಗಳನ್ನು ಮಾಡುತ್ತೀರಾ? ಅವನೇ ಸರ್ವಲೋಕಗಳ ಪರಿಪಾಲಕ.” info
التفاسير:

external-link copy
10 : 41

وَجَعَلَ فِیْهَا رَوَاسِیَ مِنْ فَوْقِهَا وَبٰرَكَ فِیْهَا وَقَدَّرَ فِیْهَاۤ اَقْوَاتَهَا فِیْۤ اَرْبَعَةِ اَیَّامٍ ؕ— سَوَآءً لِّلسَّآىِٕلِیْنَ ۟

ಅವನು ಭೂಮಿಯಲ್ಲಿ—ಅದರ ಮೇಲ್ಭಾಗದಲ್ಲಿ—ಪರ್ವತಗಳನ್ನು ಸ್ಥಾಪಿಸಿದನು ಮತ್ತು ಅದರಲ್ಲಿ ಸಮೃದ್ಧಿಯನ್ನಿಟ್ಟನು. ಅದರಲ್ಲಿರುವ (ನಿವಾಸಿಗಳ) ಆಹಾರಗಳನ್ನು ಅದರಲ್ಲಿ ನಿರ್ಣಯಿಸಿದನು. (ಅವನು ಇದನ್ನು ಮಾಡಿದ್ದು ಕೇವಲ) ನಾಲ್ಕು ದಿನಗಳಲ್ಲಿ. ಅಗತ್ಯವುಳ್ಳವರಿಗೆ ಸರಿಯಾದ ಪ್ರಮಾಣದಲ್ಲಿ. info
التفاسير:

external-link copy
11 : 41

ثُمَّ اسْتَوٰۤی اِلَی السَّمَآءِ وَهِیَ دُخَانٌ فَقَالَ لَهَا وَلِلْاَرْضِ ائْتِیَا طَوْعًا اَوْ كَرْهًا ؕ— قَالَتَاۤ اَتَیْنَا طَآىِٕعِیْنَ ۟

ನಂತರ ಅವನು ಆಕಾಶದ ಕಡೆಗೆ ತಿರುಗಿದನು. ಅದು ಹೊಗೆಯಂತೆ ಇತ್ತು. ಅವನು ಅದರೊಂದಿಗೆ ಮತ್ತು ಭೂಮಿಯೊಂದಿಗೆ ಹೇಳಿದನು: “ನೀವು ಸ್ವಯಂಪ್ರೇರಣೆಯಿಂದ ಅಥವಾ ಬಲವಂತದಿಂದ ಬನ್ನಿರಿ.” ಅವೆರಡೂ ಹೇಳಿದವು: “ನಾವು ಸ್ವಯಂಪ್ರೇರಣೆಯಿಂದ ಬಂದಿದ್ದೇವೆ.” info
التفاسير: