அல்குர்ஆன் மொழிபெயர்ப்பு - கன்னட மொழிபெயர்ப்பு - ஹம்ஸா பத்தூர்

ಅಲ್ -ಇಸ್ರಾಅ್

external-link copy
1 : 17

سُبْحٰنَ الَّذِیْۤ اَسْرٰی بِعَبْدِهٖ لَیْلًا مِّنَ الْمَسْجِدِ الْحَرَامِ اِلَی الْمَسْجِدِ الْاَقْصَا الَّذِیْ بٰرَكْنَا حَوْلَهٗ لِنُرِیَهٗ مِنْ اٰیٰتِنَا ؕ— اِنَّهٗ هُوَ السَّمِیْعُ الْبَصِیْرُ ۟

ತನ್ನ ದಾಸನನ್ನು (ಪ್ರವಾದಿಯನ್ನು) ಒಂದೇ ರಾತ್ರಿಯಲ್ಲಿ ಮಸ್ಜಿದ್ ಹರಾಮ್‌ನಿಂದ (ಮಕ್ಕಾ) ಮಸ್ಜಿದ್ ಅಕ್ಸಾಗೆ (ಜೆರೂಸಲೇಂ) ನಿಶಾಯಾನ ಮಾಡಿಸಿದವನು ಪರಮ ಪರಿಶುದ್ಧನು. ಅದರ (ಮಸ್ಜಿದ್ ಅಕ್ಸಾದ) ಪರಿಸರವನ್ನು ನಾವು ಸಮೃದ್ಧಗೊಳಿಸಿದ್ದೇವೆ. ಇದು ಅವರಿಗೆ ನಮ್ಮ ಕೆಲವು ದೃಷ್ಟಾಂತಗಳನ್ನು ತೋರಿಸಿಕೊಡುವುದಕ್ಕಾಗಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ.[1] info

[1] ಅಲ್ಲಾಹು ಪ್ರವಾದಿ ಮುಹಮ್ಮದರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದೇ ರಾತ್ರಿಯಲ್ಲಿ ಮಕ್ಕಾದಿಂದ ಪ್ಯಾಲಸ್ತೀನ್‍ನಲ್ಲಿರುವ ಮಸ್ಜಿದುಲ್ ಅಕ್ಸಾ (ಬೈತುಲ್ ಮುಕದ್ದಿಸ್)ಗೆ, ನಂತರ ಅಲ್ಲಿಂದ ಆಕಾಶಗಳಿಗೆ ಒಯ್ದು, ಬಳಿಕ ಮಕ್ಕಾಗೆ ಮರಳಿಸಿದನು. ಇದೊಂದು ಅಸಾಮಾನ್ಯ ಘಟನೆಯಾಗಿತ್ತು. ಮಸ್ಜಿದುಲ್ ಅಕ್ಸಾದ ವರೆಗಿನ ನಿಶಾಯಾತ್ರೆಯನ್ನು ‘ಇಸ್ರಾ’ ಮತ್ತು ನಂತರ ಜರುಗಿದ ಆಕಾಶಾರೋಹಣವನ್ನು ‘ಮಿಅ‌ರಾಜ್’ ಎಂದು ಕರೆಯಲಾಗುತ್ತದೆ.

التفاسير:

external-link copy
2 : 17

وَاٰتَیْنَا مُوْسَی الْكِتٰبَ وَجَعَلْنٰهُ هُدًی لِّبَنِیْۤ اِسْرَآءِیْلَ اَلَّا تَتَّخِذُوْا مِنْ دُوْنِیْ وَكِیْلًا ۟ؕ

ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು. ಅದನ್ನು ನಾವು ಇಸ್ರಾಯೇಲ್ ಮಕ್ಕಳಿಗೆ ಸನ್ಮಾರ್ಗದರ್ಶಿಯಾಗಿ ಮಾಡಿದೆವು. “ನನ್ನನ್ನು ಬಿಟ್ಟು ಬೇರೆ ಯಾರನ್ನೂ ನೀವು ಕಾರ್ಯನಿರ್ವಾಹಕರನ್ನಾಗಿ ಸ್ವೀಕರಿಸಬೇಡಿ” ಎಂದು (ಅದರಲ್ಲಿ ಆದೇಶಿಸಲಾಗಿತ್ತು). info
التفاسير:

external-link copy
3 : 17

ذُرِّیَّةَ مَنْ حَمَلْنَا مَعَ نُوْحٍ ؕ— اِنَّهٗ كَانَ عَبْدًا شَكُوْرًا ۟

ನಾವು ನೂಹರೊಡನೆ ನಾವೆಯಲ್ಲಿ ಒಯ್ದವರ ಸಂತತಿಗಳೇ! ನಿಶ್ಚಯವಾಗಿಯೂ ಅವರು (ನೂಹ್) ಅತ್ಯಂತ ಕೃತಜ್ಞ ದಾಸರಾಗಿದ್ದರು. info
التفاسير:

external-link copy
4 : 17

وَقَضَیْنَاۤ اِلٰی بَنِیْۤ اِسْرَآءِیْلَ فِی الْكِتٰبِ لَتُفْسِدُنَّ فِی الْاَرْضِ مَرَّتَیْنِ وَلَتَعْلُنَّ عُلُوًّا كَبِیْرًا ۟

ನಾವು ಗ್ರಂಥದಲ್ಲಿ ಇಸ್ರಾಯೇಲ್ ಮಕ್ಕಳಿಗೆ, “ನೀವು ಖಂಡಿತ ಭೂಮಿಯಲ್ಲಿ ಎರಡು ಬಾರಿ ಕಿಡಿಗೇಡಿತನ ಮಾಡುತ್ತೀರಿ ಮತ್ತು ಅತ್ಯಧಿಕ ದರ್ಪದಿಂದ ಮೆರೆಯುತ್ತೀರಿ” ಎಂದು ತೀರ್ಪು ನೀಡಿದೆವು. info
التفاسير:

external-link copy
5 : 17

فَاِذَا جَآءَ وَعْدُ اُوْلٰىهُمَا بَعَثْنَا عَلَیْكُمْ عِبَادًا لَّنَاۤ اُولِیْ بَاْسٍ شَدِیْدٍ فَجَاسُوْا خِلٰلَ الدِّیَارِ وَكَانَ وَعْدًا مَّفْعُوْلًا ۟

ಆ ಎರಡು ವಾಗ್ದಾನಗಳಲ್ಲಿ ಮೊದಲನೆಯ ವಾಗ್ದಾನದ ಸಮಯವು ಬಂದಾಗ, ನಾವು ನಿಮ್ಮ ವಿರುದ್ಧ ಮಹಾಶೂರರಾದ ನಮ್ಮ ದಾಸರನ್ನು ಕಳುಹಿಸಿದೆವು. ಅವರು ನಿಮ್ಮನ್ನು ಮನೆ ಮನೆಗಳಲ್ಲಿ ಹುಡುಕಿದರು. ಅಲ್ಲಾಹನ ಈ ವಾಗ್ದಾನವು ನೆರವೇರುವಂತದ್ದೇ ಆಗಿದೆ.[1] info

[1] ಕ್ರಿ.ಪೂ. 600 ರಲ್ಲಿ ಬಾಬಿಲೋನಿಯಾದ ಚಕ್ರವರ್ತಿ ಬುಖ್ತ್ ನಸರ್ (ನೆಬೂಕಡ್‌ನಝರ್) ಜೆರೂಸಲೇಂ ಮೇಲೆ ದಾಳಿ ಮಾಡಿ ಅಸಂಖ್ಯ ಯಹೂದಿಗಳನ್ನು ಕೊಂದು ಅಸಂಖ್ಯ ಜನರನ್ನು ಗುಲಾಮರನ್ನಾಗಿ ಮಾಡಿಕೊಂಡ ಕಡೆಗೆ ಇಲ್ಲಿ ಸೂಚನೆ ನೀಡಲಾಗಿದೆ. ಇದು ಯಹೂದಿಗಳು ಅಲ್ಲಾಹನ ಪ್ರವಾದಿಗಳನ್ನು ಕೊಂದು ತೌರಾತನ್ನು ಬಹಿರಂಗವಾಗಿ ಉಲ್ಲಂಘಿಸಿ ವಿಕೃತಿ ಮೆರೆದ ಸಂದರ್ಭದಲ್ಲಾಗಿತ್ತು. ಬುಖ್ತ್ ನಸರ್ ಮಾತ್ರವಲ್ಲದೆ, ಜಾಲೂತ್ (ಗೋಲಿಯತ್) ನ ಕೈಯಲ್ಲೂ ಕೂಡ ಯಹೂದಿಗಳು ಬಗೆ ಬಗೆಯ ಹಿಂಸೆಗಳನ್ನು ಅನುಭವಿಸಿದ್ದರು. ನಂತರ ತಾಲೂತ್ (ಸೌಲ್) ರ ಕಾಲದಲ್ಲಿ ಪ್ರವಾದಿ ದಾವೂದ್ (ಅವರ ಮೇಲೆ ಶಾಂತಿಯಿರಲಿ) ಜಾಲೂತನನ್ನು ಜೆರೂಸಲೇಂ ಅನ್ನು ವಶಪಡಿಸಿದರು.

التفاسير:

external-link copy
6 : 17

ثُمَّ رَدَدْنَا لَكُمُ الْكَرَّةَ عَلَیْهِمْ وَاَمْدَدْنٰكُمْ بِاَمْوَالٍ وَّبَنِیْنَ وَجَعَلْنٰكُمْ اَكْثَرَ نَفِیْرًا ۟

ನಂತರ ನಾವು ನಿಮಗೆ ಅವರ ವಿರುದ್ಧ ವಿಜಯವನ್ನು ಮರಳಿಸಿದೆವು. ಸಂಪತ್ತು ಮತ್ತು ಸಂತಾನಗಳ ಮೂಲಕ ನಿಮಗೆ ಬಲವನ್ನು ನೀಡಿದೆವು. ನಿಮ್ಮನ್ನು ಅತ್ಯಧಿಕ ಜನಬಲವುಳ್ಳವರನ್ನಾಗಿ ಮಾಡಿದೆವು. info
التفاسير:

external-link copy
7 : 17

اِنْ اَحْسَنْتُمْ اَحْسَنْتُمْ لِاَنْفُسِكُمْ ۫— وَاِنْ اَسَاْتُمْ فَلَهَا ؕ— فَاِذَا جَآءَ وَعْدُ الْاٰخِرَةِ لِیَسُوْٓءٗا وُجُوْهَكُمْ وَلِیَدْخُلُوا الْمَسْجِدَ كَمَا دَخَلُوْهُ اَوَّلَ مَرَّةٍ وَّلِیُتَبِّرُوْا مَا عَلَوْا تَتْبِیْرًا ۟

ನೀವು ಒಳಿತು ಮಾಡಿದರೆ ಅದು ನಿಮ್ಮ ಒಳಿತಿಗೇ ಆಗಿದೆ. ನೀವು ಕೆಡುಕು ಮಾಡಿದರೆ ಅದರ ಪರಿಣಾಮವನ್ನು ನೀವೇ ಅನುಭವಿಸುತ್ತೀರಿ. ಎರಡನೇ ವಾಗ್ದಾನದ ಸಮಯವು ಬಂದಾಗ, ನಿಮ್ಮ ಮುಖಗಳನ್ನು ವಿರೂಪಗೊಳಿಸಲು ಮತ್ತು ಅವರು ಪ್ರಥಮ ಬಾರಿ ಮಸೀದಿಯನ್ನು ಪ್ರವೇಶಿಸಿದಂತೆ ಎರಡನೇ ಬಾರಿಯೂ ಪ್ರವೇಶಿಸಲು ಹಾಗೂ ನಿಮ್ಮ ಅಧಿಕಾರದಲ್ಲಿರುವ ಎಲ್ಲವನ್ನೂ ಸರ್ವನಾಶ ಮಾಡಲು (ನಾವು ನಮ್ಮ ಬೇರೆ ದಾಸರನ್ನು ಕಳುಹಿಸಿದೆವು).[1] info

[1] ಯಹೂದಿಗಳು ಪ್ರವಾದಿ ಝಕರಿಯ್ಯಾರನ್ನು (ಅವರ ಮೇಲೆ ಶಾಂತಿಯಿರಲಿ) ಕೊಂದು ನಂತರ ಈಸಾರನ್ನು (ಯೇಸು — ಅವರ ಮೇಲೆ ಶಾಂತಿಯಿರಲಿ) ಕೂಡ ಕೊಲ್ಲಲು ಸಂಚು ನಡೆಸಿದರು. ಆದರೆ ಅಲ್ಲಾಹು ಅವರ ಕೈಯಿಂದ ಈಸಾರನ್ನು (ಅವರ ಮೇಲೆ ಶಾಂತಿಯಿರಲಿ) ರಕ್ಷಿಸಿದನು. ನಂತರ ಕ್ರಿ. ಶ. 70ರಲ್ಲಿ ಅಲ್ಲಾಹು ರೋಮನ್ ದೊರೆ ಟೈಟಸ್‌ನನ್ನು ಅವರ ವಿರುದ್ಧ ಕಳುಹಿಸಿದನು. ಅವನು ಜೆರೂಸಲೇಂಗೆ ದಾಳಿ ಮಾಡಿ ಯಹೂದಿಗಳ ಒಂದು ದೊಡ್ಡ ಸಂಖ್ಯೆಯನ್ನು ಕೊಂದು ಒಂದು ದೊಡ್ಡ ಸಂಖ್ಯೆಯನ್ನು ಖೈದಿಗಳಾಗಿ ಮಾಡಿದನು. ಅವರ ಆಸ್ತಿಗಳೆಲ್ಲವನ್ನೂ ಕೊಳ್ಳೆ ಹೊಡೆದನು. ಅವರ ಧಾರ್ಮಿಕ ಗ್ರಂಥಗಳನ್ನೆಲ್ಲಾ ಚಿಂದಿ ಮಾಡಿ ಬೈತುಲ್ ಮುಕದ್ದಸ್ ಮತ್ತು ಹೈಕಲ್ ಸುಲೈಮಾನ್ ಗಳನ್ನು ಬಲವಂತವಾಗಿ ವಶಪಡಿಸಿದನು. ಯಹೂದಿಗಳನ್ನು ಶಾಶ್ವತವಾಗಿ ಪ್ಯಾಲಸ್ತೀನ್‌ನಿಂದ ಗಡೀಪಾರು ಮಾಡಿದನು.

التفاسير: