ශුද්ධවූ අල් කුර්ආන් අර්ථ කථනය - කැනඩියානු පරිවර්තනය - හම්සා බිතූන්

පිටු අංක: 152:151 close

external-link copy
23 : 7

قَالَا رَبَّنَا ظَلَمْنَاۤ اَنْفُسَنَا ٚ— وَاِنْ لَّمْ تَغْفِرْ لَنَا وَتَرْحَمْنَا لَنَكُوْنَنَّ مِنَ الْخٰسِرِیْنَ ۟

ಅವರಿಬ್ಬರು ಹೇಳಿದರು: “ಓ ನಮ್ಮ ಪರಿಪಾಲಕನೇ! ನಾವು ಸ್ವಯಂ ಅಕ್ರಮವೆಸಗಿದ್ದೇವೆ. ನೀನು ನಮ್ಮನ್ನು ಕ್ಷಮಿಸದಿದ್ದರೆ ಮತ್ತು ದಯೆ ತೋರದಿದ್ದರೆ ನಾವು ನಷ್ಟಹೊಂದಿದವರಲ್ಲಿ ಸೇರುವುದು ನಿಶ್ಚಿತ.” info
التفاسير:

external-link copy
24 : 7

قَالَ اهْبِطُوْا بَعْضُكُمْ لِبَعْضٍ عَدُوٌّ ۚ— وَلَكُمْ فِی الْاَرْضِ مُسْتَقَرٌّ وَّمَتَاعٌ اِلٰی حِیْنٍ ۟

ಅಲ್ಲಾಹು ಹೇಳಿದನು: “ಇಳಿಯಿರಿ! ನೀವು ಪರಸ್ಪರ ಶತ್ರುಗಳಾಗುವಿರಿ. ನಿಮಗೆ ಭೂಮಿಯಲ್ಲಿ ವಾಸ್ತವ್ಯವಿದೆ ಮತ್ತು ಒಂದು ನಿರ್ದಿಷ್ಟ ಕಾಲದ ತನಕ ಜೀವನ ಸವಲತ್ತುಗಳಿವೆ.” info
التفاسير:

external-link copy
25 : 7

قَالَ فِیْهَا تَحْیَوْنَ وَفِیْهَا تَمُوْتُوْنَ وَمِنْهَا تُخْرَجُوْنَ ۟۠

ಅಲ್ಲಾಹು ಹೇಳಿದನು: “ನೀವು ಅಲ್ಲಿಯೇ ಬದುಕುವಿರಿ ಮತ್ತು ಅಲ್ಲಿಯೇ ಸಾಯುವಿರಿ. ನಂತರ ನಿಮ್ಮನ್ನು ಅಲ್ಲಿಂದಲೇ ಹೊರತರಲಾಗುವುದು.” info
التفاسير:

external-link copy
26 : 7

یٰبَنِیْۤ اٰدَمَ قَدْ اَنْزَلْنَا عَلَیْكُمْ لِبَاسًا یُّوَارِیْ سَوْاٰتِكُمْ وَرِیْشًا ؕ— وَلِبَاسُ التَّقْوٰی ۙ— ذٰلِكَ خَیْرٌ ؕ— ذٰلِكَ مِنْ اٰیٰتِ اللّٰهِ لَعَلَّهُمْ یَذَّكَّرُوْنَ ۟

ಓ ಆದಮರ ಮಕ್ಕಳೇ! ನಿಮ್ಮ ಗುಹ್ಯಭಾಗಗಳನ್ನು ಮುಚ್ಚಲು ನಾವು ನಿಮಗೆ ಉಡುಪನ್ನು ಇಳಿಸಿಕೊಟ್ಟಿದ್ದೇವೆ. ಅದು ನಿಮಗೆ ಅಲಂಕಾರವೂ ಆಗಿದೆ. ಆದರೆ ದೇವಭಯದ ಉಡುಪು ಅತಿಶ್ರೇಷ್ಠವಾಗಿದೆ. ಅದು ಅಲ್ಲಾಹನ ದೃಷ್ಟಾಂತಗಳಲ್ಲಿ ಸೇರಿದ್ದಾಗಿದೆ. ಅವರು ನೆನಪಿಡುವುದಕ್ಕಾಗಿ. info
التفاسير:

external-link copy
27 : 7

یٰبَنِیْۤ اٰدَمَ لَا یَفْتِنَنَّكُمُ الشَّیْطٰنُ كَمَاۤ اَخْرَجَ اَبَوَیْكُمْ مِّنَ الْجَنَّةِ یَنْزِعُ عَنْهُمَا لِبَاسَهُمَا لِیُرِیَهُمَا سَوْاٰتِهِمَا ؕ— اِنَّهٗ یَرٰىكُمْ هُوَ وَقَبِیْلُهٗ مِنْ حَیْثُ لَا تَرَوْنَهُمْ ؕ— اِنَّا جَعَلْنَا الشَّیٰطِیْنَ اَوْلِیَآءَ لِلَّذِیْنَ لَا یُؤْمِنُوْنَ ۟

ಓ ಆದಮರ ಮಕ್ಕಳೇ! ನಿಮ್ಮ ತಂದೆ-ತಾಯಿಗಳನ್ನು—ಅವರ ಗುಹ್ಯಭಾಗಗಳನ್ನು ಅವರಿಗೆ ತೋರಿಸಲು ಅವರ ಬಟ್ಟೆಯನ್ನು ಕಳಚಿ ಹಾಕುತ್ತಾ—ಅವರನ್ನು ಸ್ವರ್ಗದಿಂದ ನಿರ್ಗಮಿಸುವಂತೆ ಮಾಡಿದ ಶೈತಾನನು ನಿಮ್ಮನ್ನು ಕೂಡ ಮರುಳುಗೊಳಿಸದಿರಲಿ. ನಿಶ್ಚಯವಾಗಿಯೂ ಅವನು ಮತ್ತು ಅವನ ವಂಶಸ್ಥರು ನಿಮ್ಮನ್ನು ನೋಡುತ್ತಿದ್ದಾರೆ. ಆದರೆ ನಿಮಗೆ ಅವರನ್ನು ನೋಡಲಾಗುವುದಿಲ್ಲ. ನಿಶ್ಚಯವಾಗಿಯೂ ವಿಶ್ವಾಸವಿಡದ ಜನರಿಗೆ ನಾವು ಶೈತಾನರನ್ನು ಮಿತ್ರರನ್ನಾಗಿ ಮಾಡಿದ್ದೇವೆ. info
التفاسير:

external-link copy
28 : 7

وَاِذَا فَعَلُوْا فَاحِشَةً قَالُوْا وَجَدْنَا عَلَیْهَاۤ اٰبَآءَنَا وَاللّٰهُ اَمَرَنَا بِهَا ؕ— قُلْ اِنَّ اللّٰهَ لَا یَاْمُرُ بِالْفَحْشَآءِ ؕ— اَتَقُوْلُوْنَ عَلَی اللّٰهِ مَا لَا تَعْلَمُوْنَ ۟

ಅವರು ಏನಾದರೂ ಅಶ್ಲೀಲಕೃತ್ಯ ಮಾಡಿದರೆ, “ನಮ್ಮ ಪೂರ್ವಜರು ಹೀಗೆ ಮಾಡುವುದನ್ನು ನಾವು ನೋಡಿದ್ದೇವೆ; ಅಲ್ಲಾಹು ಇದನ್ನು ನಮಗೆ ಆದೇಶಿಸಿದ್ದಾನೆ” ಎಂದು ಹೇಳುತ್ತಾರೆ. ಹೇಳಿರಿ: “ಅಲ್ಲಾಹು ಅಶ್ಲೀಲಕೃತ್ಯ ಮಾಡಲು ಖಂಡಿತ ಆದೇಶಿಸುವುದಿಲ್ಲ. ನಿಮಗೆ ತಿಳಿದಿಲ್ಲದ ವಿಷಯವನ್ನು ನೀವು ಅಲ್ಲಾಹನ ಮೇಲೆ ಆರೋಪಿಸುತ್ತೀರಾ?” info
التفاسير:

external-link copy
29 : 7

قُلْ اَمَرَ رَبِّیْ بِالْقِسْطِ ۫— وَاَقِیْمُوْا وُجُوْهَكُمْ عِنْدَ كُلِّ مَسْجِدٍ وَّادْعُوْهُ مُخْلِصِیْنَ لَهُ الدِّیْنَ ؕ۬— كَمَا بَدَاَكُمْ تَعُوْدُوْنَ ۟ؕ

ಹೇಳಿರಿ: “ನನ್ನ ಪರಿಪಾಲಕ ನನಗೆ ನ್ಯಾಯದಿಂದ ವರ್ತಿಸಲು ಆದೇಶಿಸಿದ್ದಾನೆ. ಎಲ್ಲಾ ಆರಾಧನಾ ಸ್ಥಳಗಳಲ್ಲೂ (ವೇಳೆಗಳಲ್ಲೂ) ನಿಮ್ಮ ಮುಖಗಳನ್ನು (ಅವನ ಕಡೆಗೆ) ನೇರವಾಗಿ ನಿಲ್ಲಿಸಿರಿ ಮತ್ತು ಧರ್ಮವನ್ನು ಅವನಿಗೆ ನಿಷ್ಕಳಂಕಗೊಳಿಸಿ ಅವನಲ್ಲಿ ಪ್ರಾರ್ಥಿಸಿರಿ (ಎಂದು ಅವನು ಆದೇಶಿಸಿದ್ದಾನೆ).” ಅವನು ನಿಮ್ಮನ್ನು ಮೊದಲು ಸೃಷ್ಟಿಸಿದಂತೆಯೇ (ನಿಮ್ಮ ಮರಣದ ಬಳಿಕ) ಪುನಃ ಸೃಷ್ಟಿಸುವನು. info
التفاسير:

external-link copy
30 : 7

فَرِیْقًا هَدٰی وَفَرِیْقًا حَقَّ عَلَیْهِمُ الضَّلٰلَةُ ؕ— اِنَّهُمُ اتَّخَذُوا الشَّیٰطِیْنَ اَوْلِیَآءَ مِنْ دُوْنِ اللّٰهِ وَیَحْسَبُوْنَ اَنَّهُمْ مُّهْتَدُوْنَ ۟

ಒಂದು ಗುಂಪಿಗೆ ಅವನು ಸನ್ಮಾರ್ಗವನ್ನು ತೋರಿಸಿದ್ದಾನೆ ಮತ್ತು ಇನ್ನೊಂದು ಗುಂಪು ದುರ್ಮಾರ್ಗದಲ್ಲಿರಲು ಅರ್ಹರಾಗಿದ್ದಾರೆ. ನಿಶ್ಚಯವಾಗಿಯೂ ಅವರು ಅಲ್ಲಾಹನನ್ನು ಬಿಟ್ಟು ಶೈತಾನರನ್ನು ರಕ್ಷಕರನ್ನಾಗಿ ಸ್ವೀಕರಿಸಿದರು. ಅವರು ಸನ್ಮಾರ್ಗದಲ್ಲಿದ್ದಾರೆಂದೇ ಅವರು ಭಾವಿಸುತ್ತಿದ್ದಾರೆ. info
التفاسير: