[1] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಪತ್ನಿ ಝೈನಬ್ ಬಿಂತ್ ಜಹ್ಶ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ರವರ ಮನೆಯಲ್ಲಿ ಸ್ವಲ್ಪ ಹೊತ್ತು ತಂಗಿ ಅಲ್ಲಿ ಜೇನು ಸವಿಯುತ್ತಿದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಝೈನಬರ ಮನೆಯಲ್ಲಿ ಹೆಚ್ಚು ತಂಗುವುದನ್ನು ನಿಲ್ಲಿಸಲು ಆಯಿಶ ಮತ್ತು ಹಫ್ಸ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಒಂದು ಉಪಾಯ ಹೂಡಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇವರಿಬ್ಬರಲ್ಲಿ ಯಾರ ಬಳಿಗೆ ಮೊದಲು ಬಂದರೂ ಅವರ ಬಾಯಿಂದ ಒಂದು ರೀತಿಯ ಕೆಟ್ಟ ಪರಿಮಳ ಬರುತ್ತದೆ ಎಂದು ಹೇಳಬೇಕು ಎಂದು ಇವರಿಬ್ಬರು ನಿರ್ಧರಿಸಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಂದಾಗ ಅವರು ಇದೇ ರೀತಿ ಹೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನಾನು ಝೈನಬರ ಮನೆಯಲ್ಲಿ ಸ್ವಲ್ಪ ಜೇನು ಸವಿದಿದ್ದೆ. ಇನ್ನು ಮುಂದೆ ನಾನು ಅದನ್ನು ಕುಡಿಯುವುದಿಲ್ಲವೆಂದು ಆಣೆ ಮಾಡುತ್ತೇನೆ. ಆದರೆ ಈ ವಿಷಯವನ್ನು ನೀನು ಯಾರಿಗೂ ತಿಳಿಸಬಾರದು.”
[1] ಅಂದರೆ ಆಣೆಯನ್ನು ಉಲ್ಲಂಘಿಸಿದರೆ ಅದಕ್ಕೆ ನೀಡಬೇಕಾದ ಪರಿಹಾರವನ್ನು ಅಲ್ಲಾಹು ಈಗಾಗಲೇ ನಿಶ್ಚಯಿಸಿದ್ದಾನೆ.
[1] ನಾನು ಇನ್ನು ಮುಂದೆ ಜೇನು ಸೇವಿಸುವುದಿಲ್ಲವೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪತ್ನಿ ಹಫ್ಸರಿಗೆ ತಿಳಿಸಿದ್ದರು. ಅವರು ಅದನ್ನು ಆಯಿಶರಿಗೆ ತಿಳಿಸಿದರು.