ශුද්ධවූ අල් කුර්ආන් අර්ථ කථනය - කැනඩියානු පරිවර්තනය - හම්සා බිතූන්

පිටු අංක:close

external-link copy
16 : 50

وَلَقَدْ خَلَقْنَا الْاِنْسَانَ وَنَعْلَمُ مَا تُوَسْوِسُ بِهٖ نَفْسُهٗ ۖۚ— وَنَحْنُ اَقْرَبُ اِلَیْهِ مِنْ حَبْلِ الْوَرِیْدِ ۟

ನಿಶ್ಚಯವಾಗಿಯೂ ನಾವು ಮನುಷ್ಯನನ್ನು ಸೃಷ್ಟಿಸಿದೆವು. ಅವನ ಮನಸ್ಸು ಅವನೊಡನೆ ಪಿಸುಗುಡುವ ಸಂಗತಿಗಳನ್ನು ನಾವು ತಿಳಿಯುತ್ತೇವೆ. ನಾವು ಅವನಿಗೆ ಅವನ ಕಂಠನಾಡಿಗಿಂತಲೂ ಹತ್ತಿರದಲ್ಲಿದ್ದೇವೆ. info
التفاسير:

external-link copy
17 : 50

اِذْ یَتَلَقَّی الْمُتَلَقِّیٰنِ عَنِ الْیَمِیْنِ وَعَنِ الشِّمَالِ قَعِیْدٌ ۟

ಇಬ್ಬರು ಪಡೆಯುವವರು (ಕರ್ಮಗಳನ್ನು ದಾಖಲಿಸುವ ದೇವದೂತರು) ಪಡೆಯುವ ಸಂದರ್ಭ. ಒಬ್ಬರು ಬಲಭಾಗದಲ್ಲಿ ಮತ್ತು ಇನ್ನೊಬ್ಬರು ಎಡಭಾಗದಲ್ಲಿ ಕುಳಿತಿರುವರು. info
التفاسير:

external-link copy
18 : 50

مَا یَلْفِظُ مِنْ قَوْلٍ اِلَّا لَدَیْهِ رَقِیْبٌ عَتِیْدٌ ۟

ಮನುಷ್ಯನು ಯಾವುದೇ ಮಾತನ್ನೂ ಹೇಳಲಾರನು—ಅವನ ಬಳಿ ಒಬ್ಬ ವೀಕ್ಷಕನು (ಅದನ್ನು ದಾಖಲಿಸಲು) ಸಿದ್ಧವಾಗಿರದ ಹೊರತು. info
التفاسير:

external-link copy
19 : 50

وَجَآءَتْ سَكْرَةُ الْمَوْتِ بِالْحَقِّ ؕ— ذٰلِكَ مَا كُنْتَ مِنْهُ تَحِیْدُ ۟

ಮರಣದ ಕಡು ಯಾತನೆಯು ಸತ್ಯದೊಂದಿಗೆ ಬರುವುದು. ಯಾವುದರಿಂದ ನೀನು ದೂರವಾಗಲು ಪ್ರಯತ್ನಿಸುತ್ತಿದ್ದೆಯೋ ಅದೇ ಇದು. info
التفاسير:

external-link copy
20 : 50

وَنُفِخَ فِی الصُّوْرِ ؕ— ذٰلِكَ یَوْمُ الْوَعِیْدِ ۟

ಕಹಳೆಯಲ್ಲಿ ಊದಲಾಗುವುದು. ಅದು ಎಚ್ಚರಿಕೆಯ ದಿನವಾಗಿದೆ. info
التفاسير:

external-link copy
21 : 50

وَجَآءَتْ كُلُّ نَفْسٍ مَّعَهَا سَآىِٕقٌ وَّشَهِیْدٌ ۟

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೊತೆಗೆ ಒಬ್ಬ ಸಾಗಾಟಗಾರ ಮತ್ತು ಸಾಕ್ಷಿಯನ್ನು ಹೊಂದಿರುವ ಸ್ಥಿತಿಯಲ್ಲಿ ಬರುವರು.[1] info

[1] ಪ್ರತಿಯೊಬ್ಬ ಮನುಷ್ಯನ ಜೊತೆಗೆ ಅವನನ್ನು ವಿಚಾರಣಾ ಸ್ಥಳಕ್ಕೆ ಸಾಗಿಸುವ ಒಬ್ಬ ದೇವದೂತ ಮತ್ತು ಅವನ ಕರ್ಮಗಳಿಗೆ ಸಾಕ್ಷಿ ನುಡಿಯುವ ಒಬ್ಬ ದೇವದೂತ ಇರಲಿದ್ದಾರೆ.

التفاسير:

external-link copy
22 : 50

لَقَدْ كُنْتَ فِیْ غَفْلَةٍ مِّنْ هٰذَا فَكَشَفْنَا عَنْكَ غِطَآءَكَ فَبَصَرُكَ الْیَوْمَ حَدِیْدٌ ۟

“ನಿಶ್ಚಯವಾಗಿಯೂ ನೀನು ಇದನ್ನು ನಿರ್ಲಕ್ಷಿಸಿದ್ದೆ. ಆದರೆ ನಾವು ನಿನ್ನ ಮುಂಭಾಗದಿಂದ ಪರದೆಯನ್ನು ನಿವಾರಿಸಿದ್ದೇವೆ. ಆದ್ದರಿಂದ ಇಂದು ನಿನ್ನ ದೃಷ್ಟಿಯು ಬಹಳ ಹರಿತವಾಗಿದೆ.” info
التفاسير:

external-link copy
23 : 50

وَقَالَ قَرِیْنُهٗ هٰذَا مَا لَدَیَّ عَتِیْدٌ ۟ؕ

ಅವನ ಜೊತೆಗಾರನು (ದೇವದೂತ) ಹೇಳುವನು: “ನನ್ನ ಬಳಿಯಿರುವ ಇದು (ದಾಖಲೆ) ಸಿದ್ಧವಾಗಿದೆ.” info
التفاسير:

external-link copy
24 : 50

اَلْقِیَا فِیْ جَهَنَّمَ كُلَّ كَفَّارٍ عَنِیْدٍ ۟ۙ

(ಅಲ್ಲಾಹು ಆಜ್ಞಾಪಿಸುವನು): “ಅವನನ್ನು ನರಕಕ್ಕೆ ಎಸೆದು ಬಿಡಿ—ಪ್ರತಿಯೊಬ್ಬ ಸತ್ಯನಿಷೇಧಿ ದುಷ್ಕರ್ಮಿಯನ್ನು. info
التفاسير:

external-link copy
25 : 50

مَّنَّاعٍ لِّلْخَیْرِ مُعْتَدٍ مُّرِیْبِ ۟ۙ

ಒಳಿತನ್ನು ತಡೆಯುವ ಅತಿರೇಕಿ ಸಂಶಯಪಿಶಾಚಿಯನ್ನು. info
التفاسير:

external-link copy
26 : 50

١لَّذِیْ جَعَلَ مَعَ اللّٰهِ اِلٰهًا اٰخَرَ فَاَلْقِیٰهُ فِی الْعَذَابِ الشَّدِیْدِ ۟

ಅಲ್ಲಾಹನೊಂದಿಗೆ ಬೇರೆ ದೇವರುಗಳನ್ನು ನಿಶ್ಚಯಿಸಿದವನನ್ನು. ಅವನನ್ನು ಕಠೋರ ಶಿಕ್ಷೆಗೆ ಎಸೆದುಬಿಡಿ.” info
التفاسير:

external-link copy
27 : 50

قَالَ قَرِیْنُهٗ رَبَّنَا مَاۤ اَطْغَیْتُهٗ وَلٰكِنْ كَانَ فِیْ ضَلٰلٍۢ بَعِیْدٍ ۟

ಅವನ ಜೊತೆಗಾರನು[1] ಹೇಳುವನು: “ನಮ್ಮ ಪರಿಪಾಲಕನೇ! ನಾನು ಅವನನ್ನು ದಾರಿತಪ್ಪಿಸಿಲ್ಲ. ಬದಲಿಗೆ, ಅವನೇ ವಿದೂರ ದುರ್ಮಾರ್ಗದಲ್ಲಿದ್ದ.” info

[1] ಜೊತೆಗಾರನು (ಕರೀನ್) ಎಂದರೆ ಪ್ರತಿಯೊಬ್ಬ ಮನುಷ್ಯನ ಜೊತೆಯಲ್ಲಿರುವ ಶೈತಾನ್.

التفاسير:

external-link copy
28 : 50

قَالَ لَا تَخْتَصِمُوْا لَدَیَّ وَقَدْ قَدَّمْتُ اِلَیْكُمْ بِالْوَعِیْدِ ۟

ಅಲ್ಲಾಹು ಹೇಳುವನು: “ನನ್ನ ಮುಂದೆ ತರ್ಕ ಮಾಡಿಬೇಡಿ. ನಾನು ಈಗಾಗಲೇ ನಿಮ್ಮ ಬಳಿಗೆ ಎಚ್ಚರಿಕೆಯನ್ನು ಕಳುಹಿಸಿದ್ದೇನೆ. info
التفاسير:

external-link copy
29 : 50

مَا یُبَدَّلُ الْقَوْلُ لَدَیَّ وَمَاۤ اَنَا بِظَلَّامٍ لِّلْعَبِیْدِ ۟۠

ನನ್ನ ಬಳಿ ಮಾತು ಬದಲಾಗುವುದಿಲ್ಲ. ನಾನು ದಾಸರಿಗೆ ಸ್ವಲ್ಪವೂ ಅನ್ಯಾಯ ಮಾಡುವವನಲ್ಲ.” info
التفاسير:

external-link copy
30 : 50

یَوْمَ نَقُوْلُ لِجَهَنَّمَ هَلِ امْتَلَاْتِ وَتَقُوْلُ هَلْ مِنْ مَّزِیْدٍ ۟

ನಾವು ನರಕದೊಂದಿಗೆ, “ನೀನು ತುಂಬಿದೆಯಾ?” ಎಂದು ಕೇಳುವ ಸಂದರ್ಭ. ಆಗ ಅದು ಕೇಳುವುದು: “ಹೆಚ್ಚು ಏನಾದರೂ ಇದೆಯೇ?” info
التفاسير:

external-link copy
31 : 50

وَاُزْلِفَتِ الْجَنَّةُ لِلْمُتَّقِیْنَ غَیْرَ بَعِیْدٍ ۟

ಸ್ವರ್ಗವನ್ನು ದೇವಭಯವುಳ್ಳವರ ಹತ್ತಿರಕ್ಕೆ ತರಲಾಗುವುದು. ಅದು ಅವರಿಗೆ ಸ್ವಲ್ಪವೂ ದೂರವಿರಲಾರದು. info
التفاسير:

external-link copy
32 : 50

هٰذَا مَا تُوْعَدُوْنَ لِكُلِّ اَوَّابٍ حَفِیْظٍ ۟ۚ

“ಇದು ನಿಮಗೆ—ನಿಮ್ಮ ಪೈಕಿ (ಅಲ್ಲಾಹನ ಕಡೆಗೆ ಪಶ್ಚಾತ್ತಪಪಟ್ಟು) ಮರಳುವ ಮತ್ತು (ಅಲ್ಲಾಹು ಕಡ್ಡಾಯಗೊಳಿಸಿದ್ದನ್ನು) ಪಾಲಿಸುವ ಪ್ರತಿಯೊಬ್ಬ ವ್ಯಕ್ತಿಗೆ—ವಾಗ್ದಾನ ಮಾಡಲಾದ ಸಂಗತಿಯಾಗಿದೆ. info
التفاسير:

external-link copy
33 : 50

مَنْ خَشِیَ الرَّحْمٰنَ بِالْغَیْبِ وَجَآءَ بِقَلْبٍ مُّنِیْبِ ۟ۙ

ಅದೃಶ್ಯ ಸ್ಥಿತಿಯಲ್ಲಿ ಪರಮ ದಯಾಮಯನನ್ನು (ಅಲ್ಲಾಹನನ್ನು) ಭಯಪಟ್ಟು (ಅಲ್ಲಾಹನ ಕಡೆಗೆ) ತಿರುಗಿದ ಹೃದಯದೊಂದಿಗೆ ಬಂದವನಿಗೆ. info
التفاسير:

external-link copy
34 : 50

١دْخُلُوْهَا بِسَلٰمٍ ؕ— ذٰلِكَ یَوْمُ الْخُلُوْدِ ۟

ನೀವು ಸುರಕ್ಷಿತವಾಗಿ ಅದನ್ನು (ಸ್ವರ್ಗವನ್ನು) ಪ್ರವೇಶಿಸಿರಿ. ಇದು ಶಾಶ್ವತ ವಾಸದ ದಿನವಾಗಿದೆ.” info
التفاسير:

external-link copy
35 : 50

لَهُمْ مَّا یَشَآءُوْنَ فِیْهَا وَلَدَیْنَا مَزِیْدٌ ۟

ಅವರು ಇಚ್ಛಿಸುವುದೆಲ್ಲವೂ ಅಲ್ಲಿ ಅವರಿಗೆ ದೊರೆಯುವುದು. ನಮ್ಮ ಬಳಿ ಇನ್ನೂ ಹೆಚ್ಚಿಗೆಯಿದೆ. info
التفاسير: