ශුද්ධවූ අල් කුර්ආන් අර්ථ කථනය - කැනඩියානු පරිවර්තනය - හම්සා බිතූන්

පිටු අංක: 340:332 close

external-link copy
73 : 22

یٰۤاَیُّهَا النَّاسُ ضُرِبَ مَثَلٌ فَاسْتَمِعُوْا لَهٗ ؕ— اِنَّ الَّذِیْنَ تَدْعُوْنَ مِنْ دُوْنِ اللّٰهِ لَنْ یَّخْلُقُوْا ذُبَابًا وَّلَوِ اجْتَمَعُوْا لَهٗ ؕ— وَاِنْ یَّسْلُبْهُمُ الذُّبَابُ شَیْـًٔا لَّا یَسْتَنْقِذُوْهُ مِنْهُ ؕ— ضَعُفَ الطَّالِبُ وَالْمَطْلُوْبُ ۟

ಓ ಮನುಷ್ಯರೇ! ನಿಮಗೆ ಒಂದು ಉದಾಹರಣೆಯನ್ನು ನೀಡಲಾಗುತ್ತಿದೆ. ಅದನ್ನು ಕಿವಿಗೊಟ್ಟು ಕೇಳಿರಿ. ನೀವು ಅಲ್ಲಾಹನನ್ನು ಬಿಟ್ಟು ಯಾರನ್ನು ಕರೆದು ಪ್ರಾರ್ಥಿಸುತ್ತಿದ್ದೀರೋ ಅವರಿಗೆ ಒಂದು ನೊಣವನ್ನು ಕೂಡ ಸೃಷ್ಟಿಸುವ ಶಕ್ತಿಯಿಲ್ಲ. ಅದಕ್ಕಾಗಿ ಅವರೆಲ್ಲರೂ ಒಟ್ಟುಗೂಡಿದರೂ ಸಹ! ನೊಣವು ಅವರಿಂದ ಏನಾದರೂ ಕಸಿದುಕೊಂಡರೆ, ಅದನ್ನು ಆ ನೊಣದಿಂದ ವಾಪಸು ಪಡೆಯಲು ಅವರಿಗೆ ಸಾಧ್ಯವಾಗುವುದಿಲ್ಲ. ಪ್ರಾರ್ಥಿಸುವವನು ಎಷ್ಟು ಬಲಹೀನನು! ಪ್ರಾರ್ಥಿಸಲಾಗುವವನು ಕೂಡ ಎಷ್ಟು ಬಲಹೀನನು! info
التفاسير:

external-link copy
74 : 22

مَا قَدَرُوا اللّٰهَ حَقَّ قَدْرِهٖ ؕ— اِنَّ اللّٰهَ لَقَوِیٌّ عَزِیْزٌ ۟

ಅವರು ಅಲ್ಲಾಹನನ್ನು ಗಣನೆ ಮಾಡಬೇಕಾದ ರೀತಿಯಲ್ಲಿ ಗಣನೆ ಮಾಡಲಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಮಹಾ ಶಕ್ತಿಶಾಲಿ ಮತ್ತು ಪ್ರಬಲನಾಗಿದ್ದಾನೆ. info
التفاسير:

external-link copy
75 : 22

اَللّٰهُ یَصْطَفِیْ مِنَ الْمَلٰٓىِٕكَةِ رُسُلًا وَّمِنَ النَّاسِ ؕ— اِنَّ اللّٰهَ سَمِیْعٌ بَصِیْرٌ ۟ۚ

ಅಲ್ಲಾಹು ದೇವದೂತರುಗಳಿಂದ ಮತ್ತು ಮನುಷ್ಯರಿಂದ ಸಂದೇಶವಾಹಕರನ್ನು ಆರಿಸುತ್ತಾನೆ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ. info
التفاسير:

external-link copy
76 : 22

یَعْلَمُ مَا بَیْنَ اَیْدِیْهِمْ وَمَا خَلْفَهُمْ ؕ— وَاِلَی اللّٰهِ تُرْجَعُ الْاُمُوْرُ ۟

ಅವರ ಮುಂದಿರುವುದನ್ನು ಮತ್ತು ಹಿಂದಿರುವುದನ್ನು ಅವನು ತಿಳಿಯುತ್ತಾನೆ. ಎಲ್ಲ ವಿಷಯಗಳೂ ಅಲ್ಲಾಹನ ಬಳಿಗೇ ಮರಳುತ್ತವೆ. info
التفاسير:

external-link copy
77 : 22

یٰۤاَیُّهَا الَّذِیْنَ اٰمَنُوا ارْكَعُوْا وَاسْجُدُوْا وَاعْبُدُوْا رَبَّكُمْ وَافْعَلُوا الْخَیْرَ لَعَلَّكُمْ تُفْلِحُوْنَ ۟

ಸತ್ಯವಿಶ್ವಾಸಿಗಳೇ! ನೀವು ತಲೆಬಾಗಿರಿ, ಸಾಷ್ಟಾಂಗ ಮಾಡಿರಿ, ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಆರಾಧಿಸಿರಿ ಹಾಗೂ ಸತ್ಕರ್ಮಗಳನ್ನು ನಿರ್ವಹಿಸಿರಿ. ನೀವು ಯಶಸ್ವಿಯಾಗುವುದಕ್ಕಾಗಿ. info
التفاسير:

external-link copy
78 : 22

وَجَاهِدُوْا فِی اللّٰهِ حَقَّ جِهَادِهٖ ؕ— هُوَ اجْتَبٰىكُمْ وَمَا جَعَلَ عَلَیْكُمْ فِی الدِّیْنِ مِنْ حَرَجٍ ؕ— مِلَّةَ اَبِیْكُمْ اِبْرٰهِیْمَ ؕ— هُوَ سَمّٰىكُمُ الْمُسْلِمِیْنَ ۙ۬— مِنْ قَبْلُ وَفِیْ هٰذَا لِیَكُوْنَ الرَّسُوْلُ شَهِیْدًا عَلَیْكُمْ وَتَكُوْنُوْا شُهَدَآءَ عَلَی النَّاسِ ۖۚ— فَاَقِیْمُوا الصَّلٰوةَ وَاٰتُوا الزَّكٰوةَ وَاعْتَصِمُوْا بِاللّٰهِ ؕ— هُوَ مَوْلٰىكُمْ ۚ— فَنِعْمَ الْمَوْلٰی وَنِعْمَ النَّصِیْرُ ۟۠

ಅಲ್ಲಾಹನ ಮಾರ್ಗದಲ್ಲಿ ಪರಿಶ್ರಮಿಸಬೇಕಾದ ರೀತಿಯಲ್ಲೇ ಪರಿಶ್ರಮಿಸಿರಿ. ಅವನು ನಿಮ್ಮನ್ನು ಆರಿಸಿದ್ದಾನೆ. ಅವನು ನಿಮಗೆ ಧರ್ಮದಲ್ಲಿ ಯಾವುದೇ ಕಷ್ಟವನ್ನು ಮಾಡಿಲ್ಲ. ನಿಮ್ಮ ಪಿತಾಮಹರಾದ ಇಬ್ರಾಹೀಮರ ಧರ್ಮ. ಅವನು ಹಿಂದಿನ ಗ್ರಂಥಗಳಲ್ಲಿ ಮತ್ತು ಇದರಲ್ಲಿ (ಕುರ್‌ಆನಿನಲ್ಲಿ) ನಿಮಗೆ ಮುಸಲ್ಮಾನರೆಂದು ಹೆಸರಿಟ್ಟಿದ್ದಾನೆ. ಸಂದೇಶವಾಹಕರು ನಿಮ್ಮ ಮೇಲೆ ಸಾಕ್ಷಿಯಾಗಲು ಮತ್ತು ನೀವು ಜನರ ಮೇಲೆ ಸಾಕ್ಷಿಗಳಾಗಲು. ಆದ್ದರಿಂದ ನೀವು ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ. ಅಲ್ಲಾಹನನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ. ಅವನೇ ನಿಮ್ಮ ಸಂರಕ್ಷಕ. ಅವನು ಎಷ್ಟು ಉತ್ತಮ ರಕ್ಷಕ! ಎಷ್ಟು ಉತ್ತಮ ಸಹಾಯಕ! info
التفاسير: