ශුද්ධවූ අල් කුර්ආන් අර්ථ කථනය - කැනඩියානු පරිවර්තනය - හම්සා බිතූන්

පිටු අංක:close

external-link copy
94 : 2

قُلْ اِنْ كَانَتْ لَكُمُ الدَّارُ الْاٰخِرَةُ عِنْدَ اللّٰهِ خَالِصَةً مِّنْ دُوْنِ النَّاسِ فَتَمَنَّوُا الْمَوْتَ اِنْ كُنْتُمْ صٰدِقِیْنَ ۟

ಹೇಳಿರಿ: “ಅಲ್ಲಾಹನ ಬಳಿ ಪರಲೋಕ ಭವನವು ಇತರ ಜನರಿಗೆ ದೊರೆಯದೆ ಕೇವಲ ನಿಮಗೆ ಮಾತ್ರ ಇರುವುದಾದರೆ ನೀವು ಸಾವನ್ನು ಬಯಸಿರಿ. ನೀವು ಸತ್ಯವಂತರಾಗಿದ್ದರೆ!” info
التفاسير:

external-link copy
95 : 2

وَلَنْ یَّتَمَنَّوْهُ اَبَدًا بِمَا قَدَّمَتْ اَیْدِیْهِمْ ؕ— وَاللّٰهُ عَلِیْمٌۢ بِالظّٰلِمِیْنَ ۟

ಆದರೆ ಅವರ ಕೈಗಳು ಮಾಡಿಟ್ಟಿರುವ (ದುಷ್ಕರ್ಮಗಳ) ನಿಮಿತ್ತ ಅವರೆಂದೂ ಸಾವನ್ನು ಬಯಸುವುದಿಲ್ಲ. ಅಲ್ಲಾಹು ಅಕ್ರಮಿಗಳ ಬಗ್ಗೆ ಬಹಳ ಚೆನ್ನಾಗಿ ತಿಳಿದಿದ್ದಾನೆ. info
التفاسير:

external-link copy
96 : 2

وَلَتَجِدَنَّهُمْ اَحْرَصَ النَّاسِ عَلٰی حَیٰوةٍ ۛۚ— وَمِنَ الَّذِیْنَ اَشْرَكُوْا ۛۚ— یَوَدُّ اَحَدُهُمْ لَوْ یُعَمَّرُ اَلْفَ سَنَةٍ ۚ— وَمَا هُوَ بِمُزَحْزِحِهٖ مِنَ الْعَذَابِ اَنْ یُّعَمَّرَ ؕ— وَاللّٰهُ بَصِیْرٌ بِمَا یَعْمَلُوْنَ ۟۠

ಅವರಿಗೆ ಬದುಕಲು ಆತ್ಯಧಿಕ ಆಸಕ್ತಿಯಿರುವುದನ್ನು—ಬಹುದೇವವಿಶ್ವಾಸಿಗಳಿಗಿಂತಲೂ ಹೆಚ್ಚು ಆಸಕ್ತಿಯಿರುವುದನ್ನು—ನೀವು ಕಾಣುವಿರಿ. ಅವರಲ್ಲಿ ಪ್ರತಿಯೊಬ್ಬನೂ ಸಾವಿರ ವರ್ಷ ಆಯುಷ್ಯ ದೊರೆಯಬೇಕೆಂದು ಬಯಸುತ್ತಾನೆ. ಆದರೆ ದೀರ್ಘಾಯುಷ್ಯ ಸಿಗುವುದರಿಂದ ಅವನಿಗೆ ಶಿಕ್ಷೆಯಿಂದ ಮುಕ್ತಿ ಸಿಗುವುದಿಲ್ಲ. ಅವರು ಮಾಡುತ್ತಿರುವ ಕರ್ಮಗಳನ್ನು ಅಲ್ಲಾಹು ನೋಡುತ್ತಿದ್ದಾನೆ. info
التفاسير:

external-link copy
97 : 2

قُلْ مَنْ كَانَ عَدُوًّا لِّجِبْرِیْلَ فَاِنَّهٗ نَزَّلَهٗ عَلٰی قَلْبِكَ بِاِذْنِ اللّٰهِ مُصَدِّقًا لِّمَا بَیْنَ یَدَیْهِ وَهُدًی وَّبُشْرٰی لِلْمُؤْمِنِیْنَ ۟

ಹೇಳಿರಿ: “ಯಾರು ಜಿಬ್ರೀಲರಿಗೆ ವೈರಿಯೋ (ಅವನು ಅಲ್ಲಾಹನಿಗೂ ವೈರಿಯಾಗಿದ್ದಾನೆ).”[1] (ಏಕೆಂದರೆ) ನಿಶ್ಚಯವಾಗಿಯೂ ಜಿಬ್ರೀಲ್ ಅದನ್ನು (ಕುರ್‌ಆನನ್ನು) ನಿಮ್ಮ ಹೃದಯದಲ್ಲಿ ಅವತೀರ್ಣಗೊಳಿಸಿದ್ದು ಅಲ್ಲಾಹನ ಆದೇಶದಂತೆ ಮಾತ್ರ. ಅದು ಪೂರ್ವಗ್ರಂಥಗಳನ್ನು ದೃಢೀಕರಿಸುತ್ತದೆ ಮತ್ತು ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗ ಹಾಗೂ ಸುವಾರ್ತೆಯಾಗಿದೆ. info

[1] ಒಮ್ಮೆ ಕೆಲವು ಯಹೂದಿಗಳು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: “ನಾವು ನಿಮ್ಮಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುತ್ತೇವೆ. ನೀವು ಸರಿಯಾಗಿ ಉತ್ತರ ಕೊಟ್ಟರೆ ನಾವು ನಿಮ್ಮಲ್ಲಿ ವಿಶ್ವಾಸವಿಡುತ್ತೇವೆ. ಏಕೆಂದರೆ ಒಬ್ಬ ಪ್ರವಾದಿಯ ಹೊರತು ಬೇರೆ ಯಾರಿಗೂ ಸರಿಯಾದ ಉತ್ತರ ಕೊಡಲು ಸಾಧ್ಯವಿಲ್ಲ.” ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಟ್ಟರು. ಆಗ ಯಹೂದಿಗಳು ಕೇಳಿದರು: “ನಿಮಗೆ ಇವುಗಳ ಉತ್ತರವನ್ನು ತಂದು ಕೊಡುವ ದೇವದೂತರು ಯಾರು?” ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜಿಬ್ರೀಲ್ ಎಂದು ಉತ್ತರಿಸಿದರು. ಆಗ ಅವರು ಹೇಳಿದರು: “ಜಿಬ್ರೀಲರು ನಮ್ಮ ವೈರಿ. ಅವರು ಹೇಳಿದ ಮಾತಿನಲ್ಲಿ ನಾವು ವಿಶ್ವಾಸವಿಡುವುದಿಲ್ಲ.” ಹೀಗೆ ಅವರು ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿಶ್ವಾಸವಿಡದೆ ನುಣುಚಿಕೊಂಡರು.

التفاسير:

external-link copy
98 : 2

مَنْ كَانَ عَدُوًّا لِّلّٰهِ وَمَلٰٓىِٕكَتِهٖ وَرُسُلِهٖ وَجِبْرِیْلَ وَمِیْكٰىلَ فَاِنَّ اللّٰهَ عَدُوٌّ لِّلْكٰفِرِیْنَ ۟

ಯಾರು ಅಲ್ಲಾಹನಿಗೆ, ಅವನ ದೇವದೂತರುಗಳಿಗೆ, ಅವನ ಸಂದೇಶವಾಹಕರುಗಳಿಗೆ, ಜಿಬ್ರೀಲರಿಗೆ ಮತ್ತು ಮೀಕಾಯೀಲರಿಗೆ ವೈರಿಯೋ—ನಿಶ್ಚಯವಾಗಿಯೂ ಅಲ್ಲಾಹು ಆ ಸತ್ಯನಿಷೇಧಿಗಳಿಗೂ ವೈರಿಯಾಗಿದ್ದಾನೆ. info
التفاسير:

external-link copy
99 : 2

وَلَقَدْ اَنْزَلْنَاۤ اِلَیْكَ اٰیٰتٍۢ بَیِّنٰتٍ ۚ— وَمَا یَكْفُرُ بِهَاۤ اِلَّا الْفٰسِقُوْنَ ۟

ನಿಶ್ಚಯವಾಗಿಯೂ ನಾವು ನಿಮಗೆ ಸ್ಪಷ್ಟ ವಚನಗಳನ್ನು ಅವತೀರ್ಣಗೊಳಿಸಿದ್ದೇವೆ. ದುಷ್ಕರ್ಮಿಗಳ ಹೊರತು ಇನ್ನಾರೂ ಅದನ್ನು ನಿಷೇಧಿಸುವುದಿಲ್ಲ. info
التفاسير:

external-link copy
100 : 2

اَوَكُلَّمَا عٰهَدُوْا عَهْدًا نَّبَذَهٗ فَرِیْقٌ مِّنْهُمْ ؕ— بَلْ اَكْثَرُهُمْ لَا یُؤْمِنُوْنَ ۟

ಅವರು ಯಾವುದೇ ಕರಾರು ಮಾಡಿದಾಗಲೂ ಅವರಲ್ಲೊಂದು ಗುಂಪು ಅದನ್ನು ಎಸೆದು ಬಿಡುತ್ತಿತ್ತು. ಅಷ್ಟೇ ಅಲ್ಲ, ಅವರಲ್ಲಿ ಹೆಚ್ಚಿನವರಿಗೆ ವಿಶ್ವಾಸವೇ ಇರಲಿಲ್ಲ. info
التفاسير:

external-link copy
101 : 2

وَلَمَّا جَآءَهُمْ رَسُوْلٌ مِّنْ عِنْدِ اللّٰهِ مُصَدِّقٌ لِّمَا مَعَهُمْ نَبَذَ فَرِیْقٌ مِّنَ الَّذِیْنَ اُوْتُوا الْكِتٰبَ ۙۗ— كِتٰبَ اللّٰهِ وَرَآءَ ظُهُوْرِهِمْ كَاَنَّهُمْ لَا یَعْلَمُوْنَ ۟ؗ

ಅವರಲ್ಲಿರುವ ಗ್ರಂಥವನ್ನು ದೃಢೀಕರಿಸುತ್ತಾ ಅಲ್ಲಾಹನ ಕಡೆಯಿಂದ ಒಬ್ಬ ಸಂದೇಶವಾಹಕರು ಅವರ ಬಳಿಗೆ ಬಂದಾಗ, ಗ್ರಂಥ ನೀಡಲಾದವರಲ್ಲಿ ಸೇರಿದ ಒಂದು ಗುಂಪು ಅಲ್ಲಾಹನ ಗ್ರಂಥವನ್ನು, ಅದರ ಬಗ್ಗೆ ಏನೂ ತಿಳಿಯದವರಂತೆ ತಮ್ಮ ಬೆನ್ನ ಹಿಂಭಾಗಕ್ಕೆ ಎಸೆದು ಬಿಟ್ಟರು. info
التفاسير: