ශුද්ධවූ අල් කුර්ආන් අර්ථ කථනය - කැනඩියානු පරිවර්තනය - හම්සා බිතූන්

පිටු අංක:close

external-link copy
27 : 16

ثُمَّ یَوْمَ الْقِیٰمَةِ یُخْزِیْهِمْ وَیَقُوْلُ اَیْنَ شُرَكَآءِیَ الَّذِیْنَ كُنْتُمْ تُشَآقُّوْنَ فِیْهِمْ ؕ— قَالَ الَّذِیْنَ اُوْتُوا الْعِلْمَ اِنَّ الْخِزْیَ الْیَوْمَ وَالسُّوْٓءَ عَلَی الْكٰفِرِیْنَ ۟ۙ

ನಂತರ ಪುನರುತ್ಥಾನ ದಿನದಂದು ಅವನು ಅವರನ್ನು ಅವಮಾನಿಸುತ್ತಾ ಕೇಳುವನು: “ನೀವು ನನಗೆ ಸಹಭಾಗಿಗಳಾಗಿ ಮಾಡಿದ ಆ ದೇವರುಗಳು ಎಲ್ಲಿದ್ದಾರೆ? ಅವರ ವಿಷಯದಲ್ಲಿ ನೀವು (ಸತ್ಯವಿಶ್ವಾಸಿಗಳನ್ನು) ವಿರೋಧಿಸುತ್ತಿದ್ದಿರಲ್ಲವೇ?” ಜ್ಞಾನಿಗಳು ಹೇಳುವರು: “ನಿಶ್ಚಯವಾಗಿಯೂ ಸತ್ಯನಿಷೇಧಿಗಳಿಗೆ ಇಂದು ಅವಮಾನ ಮತ್ತು ಕೆಡುಕು ಕಾದಿದೆ.” info
التفاسير:

external-link copy
28 : 16

الَّذِیْنَ تَتَوَفّٰىهُمُ الْمَلٰٓىِٕكَةُ ظَالِمِیْۤ اَنْفُسِهِمْ ۪— فَاَلْقَوُا السَّلَمَ مَا كُنَّا نَعْمَلُ مِنْ سُوْٓءٍ ؕ— بَلٰۤی اِنَّ اللّٰهَ عَلِیْمٌۢ بِمَا كُنْتُمْ تَعْمَلُوْنَ ۟

ಅವರು ಯಾರೆಂದರೆ, ಸ್ವಯಂ ಅಕ್ರಮವೆಸಗಿದ ಸ್ಥಿತಿಯಲ್ಲಿ ದೇವದೂತರುಗಳು ಯಾರ ಆತ್ಮವನ್ನು ವಶಪಡಿಸುವರೋ ಅವರು. ಆಗ ಅವರು “ನಾವು ಯಾವುದೇ ತಪ್ಪು ಮಾಡಿಲ್ಲ” ಎನ್ನುತ್ತಾ ಶರಣಾಗುವರು. ಹೌದು! ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ಅಲ್ಲಾಹು ಬಹಳ ಚೆನ್ನಾಗಿ ತಿಳಿದಿದ್ದಾನೆ. info
التفاسير:

external-link copy
29 : 16

فَادْخُلُوْۤا اَبْوَابَ جَهَنَّمَ خٰلِدِیْنَ فِیْهَا ؕ— فَلَبِئْسَ مَثْوَی الْمُتَكَبِّرِیْنَ ۟

ಆದ್ದರಿಂದ ನೀವು ನರಕದ ಬಾಗಿಲುಗಳನ್ನು ಪ್ರವೇಶ ಮಾಡಿರಿ. ನೀವು ಅದರಲ್ಲಿ ಶಾಶ್ವತವಾಗಿ ವಾಸಿಸುವಿರಿ. ಅಹಂಕಾರಿಗಳ ವಾಸಸ್ಥಳವು ಬಹಳ ನಿಕೃಷ್ಟವಾಗಿದೆ. info
التفاسير:

external-link copy
30 : 16

وَقِیْلَ لِلَّذِیْنَ اتَّقَوْا مَاذَاۤ اَنْزَلَ رَبُّكُمْ ؕ— قَالُوْا خَیْرًا ؕ— لِلَّذِیْنَ اَحْسَنُوْا فِیْ هٰذِهِ الدُّنْیَا حَسَنَةٌ ؕ— وَلَدَارُ الْاٰخِرَةِ خَیْرٌ ؕ— وَلَنِعْمَ دَارُ الْمُتَّقِیْنَ ۟ۙ

“ನಿಮ್ಮ ಪರಿಪಾಲಕನು (ಅಲ್ಲಾಹು) ಏನನ್ನು ಅವತೀರ್ಣಗೊಳಿಸಿದನು?” ಎಂದು ದೇವಭಯವುಳ್ಳವರೊಡನೆ ಕೇಳಲಾದರೆ, ಅವರು ಹೇಳುವರು: “ಅತ್ಯುತ್ತಮವಾದುದನ್ನು.” ಒಳಿತು ಮಾಡುವವರಿಗೆ ಇಹಲೋಕದಲ್ಲೇ ಒಳಿತಿದೆ. ಪರಲೋಕ ಭವನವಂತೂ ಅತಿಶ್ರೇಷ್ಠವಾಗಿದೆ. ದೇವಭಯವುಳ್ಳವರ ಭವನವು ಬಹಳ ಉತ್ತಮವಾಗಿದೆ. info
التفاسير:

external-link copy
31 : 16

جَنّٰتُ عَدْنٍ یَّدْخُلُوْنَهَا تَجْرِیْ مِنْ تَحْتِهَا الْاَنْهٰرُ لَهُمْ فِیْهَا مَا یَشَآءُوْنَ ؕ— كَذٰلِكَ یَجْزِی اللّٰهُ الْمُتَّقِیْنَ ۟ۙ

ತಳಭಾಗದಿಂದ ನದಿಗಳು ಹರಿಯುವ ಶಾಶ್ವತವಾಸಕ್ಕಿರುವ ಸ್ವರ್ಗೋದ್ಯಾನಗಳನ್ನು ಅವರು ಪ್ರವೇಶಿಸುವರು. ಅವರು ಇಚ್ಛಿಸುವುದೆಲ್ಲವೂ ಅಲ್ಲಿ ಅವರಿಗೆ ದೊರೆಯುವುದು. ಈ ರೀತಿ ಅಲ್ಲಾಹು ದೇವಭಯವುಳ್ಳವರಿಗೆ ಪ್ರತಿಫಲವನ್ನು ನೀಡುತ್ತಾನೆ. info
التفاسير:

external-link copy
32 : 16

الَّذِیْنَ تَتَوَفّٰىهُمُ الْمَلٰٓىِٕكَةُ طَیِّبِیْنَ ۙ— یَقُوْلُوْنَ سَلٰمٌ عَلَیْكُمُ ۙ— ادْخُلُوا الْجَنَّةَ بِمَا كُنْتُمْ تَعْمَلُوْنَ ۟

ಪರಿಶುದ್ಧ ಜನರ ಆತ್ಮಗಳನ್ನು ವಶಪಡಿಸುವಾಗ ದೇವದೂತರುಗಳು ಹೇಳುವರು: “ನಿಮಗೆ ಶಾಂತಿಯಿರಲಿ. ನೀವು ಮಾಡಿದ ಕರ್ಮಗಳ ಫಲವಾಗಿ ಸ್ವರ್ಗಲೋಕವನ್ನು ಪ್ರವೇಶ ಮಾಡಿರಿ.” info
التفاسير:

external-link copy
33 : 16

هَلْ یَنْظُرُوْنَ اِلَّاۤ اَنْ تَاْتِیَهُمُ الْمَلٰٓىِٕكَةُ اَوْ یَاْتِیَ اَمْرُ رَبِّكَ ؕ— كَذٰلِكَ فَعَلَ الَّذِیْنَ مِنْ قَبْلِهِمْ ؕ— وَمَا ظَلَمَهُمُ اللّٰهُ وَلٰكِنْ كَانُوْۤا اَنْفُسَهُمْ یَظْلِمُوْنَ ۟

ತಮ್ಮ ಬಳಿಗೆ ದೇವದೂತರುಗಳು ಬರುವುದನ್ನು ಅಥವಾ ತಮ್ಮ ಪರಿಪಾಲಕನ (ಅಲ್ಲಾಹನ) ಆಜ್ಞೆ ಬರುವುದನ್ನು ಮಾತ್ರ ಅವರು ಕಾಯುತ್ತಿದ್ದಾರೆಯೇ? ಅವರಿಗಿಂತ ಮೊದಲಿನವರು ಕೂಡ ಹೀಗೆಯೇ ಮಾಡಿದ್ದರು. ಅಲ್ಲಾಹು ಅವರಿಗೆ ಅನ್ಯಾಯ ಮಾಡಿಲ್ಲ. ಆದರೆ ಅವರು ಅವರೊಂದಿಗೇ ಅನ್ಯಾಯ ಮಾಡಿದರು. info
التفاسير:

external-link copy
34 : 16

فَاَصَابَهُمْ سَیِّاٰتُ مَا عَمِلُوْا وَحَاقَ بِهِمْ مَّا كَانُوْا بِهٖ یَسْتَهْزِءُوْنَ ۟۠

ಆದ್ದರಿಂದ ಅವರು ಮಾಡಿದ ದುಷ್ಕರ್ಮಗಳ ಫಲವನ್ನು ಅವರು ಉಂಡರು. ಅವರು ಯಾವುದನ್ನು ತಮಾಷೆ ಮಾಡುತ್ತಿದ್ದರೋ ಅದು ಅವರನ್ನು ಆವರಿಸಿಯೇ ಬಿಟ್ಟಿತು. info
التفاسير: