ශුද්ධවූ අල් කුර්ආන් අර්ථ කථනය - කැනඩියානු පරිවර්තනය - බෂීර් මයිසූරි

ಅಲ್ -ಕಮರ್

external-link copy
1 : 54

اِقْتَرَبَتِ السَّاعَةُ وَانْشَقَّ الْقَمَرُ ۟

ಅಂತ್ಯ ಗಳಿಗೆಯು (ಪ್ರಳಯ) ಸಮೀಪಿಸಿತು ಹಾಗು ಚಂದ್ರನು ಹೋಳಾದನು. info
التفاسير:

external-link copy
2 : 54

وَاِنْ یَّرَوْا اٰیَةً یُّعْرِضُوْا وَیَقُوْلُوْا سِحْرٌ مُّسْتَمِرٌّ ۟

ಅವರು (ಬಹುದೇವಾರಾಧಕರು) ಯಾವುದೇ ದೃಷ್ಟಾಂತವನ್ನು ಕಂಡರೂ ವಿಮುಖರಾಗಿ ಇದು ಹಿಂದಿನಿAದಲೇ ನಡೆದು ಬರುತ್ತಿರುವಂತಹ ಒಂದು ಮಾಟವಾಗಿದೆಯೆಂದು ಹೇಳುತ್ತಾರೆ. info
التفاسير:

external-link copy
3 : 54

وَكَذَّبُوْا وَاتَّبَعُوْۤا اَهْوَآءَهُمْ وَكُلُّ اَمْرٍ مُّسْتَقِرٌّ ۟

ಅವರು (ಸತ್ಯವನ್ನು) ಸುಳ್ಳಾಗಿಸಿದರು ಹಾಗು ತಮ್ಮ ಸ್ವೇಚ್ಛೆಗಳನ್ನು ಅನುಸರಿಸಿದರು ಮತ್ತು ಪ್ರತಿಯೊಂದು ಕಾರ್ಯಕ್ಕೂ ಒಂದು ಸಮಯ ನಿಶ್ಚಿತವಿದೆ. info
التفاسير:

external-link copy
4 : 54

وَلَقَدْ جَآءَهُمْ مِّنَ الْاَنْۢبَآءِ مَا فِیْهِ مُزْدَجَرٌ ۟ۙ

ನಿಜವಾಗಿಯೂ (ಪಾಠದಾಯಕ) ಬೆದÀರಿಕೆಯುಳ್ಳ ವಾರ್ತೆಗಳು ಅವರ ಬಳಿಗೆ ಬಂದಿವೆ. info
التفاسير:

external-link copy
5 : 54

حِكْمَةٌ بَالِغَةٌ فَمَا تُغْنِ النُّذُرُ ۟ۙ

ಪೂರ್ಣ ವಿವೇಕದ ಮಾತಾಗಿದೆ. ಆದರೆ ಆ ಎಚ್ಚರಿಕೆ ಮಾತುಗಳೂ ಅವರಿಗೆ ಒಂದಿಷ್ಟು ಪ್ರಯೋಜನವನ್ನು ನೀಡಲಿಲ್ಲ. info
التفاسير:

external-link copy
6 : 54

فَتَوَلَّ عَنْهُمْ ۘ— یَوْمَ یَدْعُ الدَّاعِ اِلٰی شَیْءٍ نُّكُرٍ ۟ۙ

ಆದ್ದರಿಂದ ಓ ಪೈಗಂಬರರೇ ನೀವು ಅವರನ್ನು ಕಡೆಗಣಿಸಿರಿ. ಅಂದು ಕರೆ ನೀಡುವಾತನು (ದೂತ) ಅಸಹನೀಯವಾದ ವಸ್ತುವಿನೆಡೆಗೆ ಕರೆಯುವನು. info
التفاسير:

external-link copy
7 : 54

خُشَّعًا اَبْصَارُهُمْ یَخْرُجُوْنَ مِنَ الْاَجْدَاثِ كَاَنَّهُمْ جَرَادٌ مُّنْتَشِرٌ ۟ۙ

ದೃಷ್ಟಿಗಳನ್ನು ತಗ್ಗಿಸಿರುವ ಸ್ಥಿತಿಯಲ್ಲಿ ಚದುರಿದ ಮಿಡತೆಗಳಂತೆ ಗೋರಿಗಳಿಂದ ಅವರು ಹೊರಬರುವರು, info
التفاسير:

external-link copy
8 : 54

مُّهْطِعِیْنَ اِلَی الدَّاعِ ؕ— یَقُوْلُ الْكٰفِرُوْنَ هٰذَا یَوْمٌ عَسِرٌ ۟

ಅವರು ಕರೆಯುವಾತನೆಡೆಗೆ ಧಾವಿಸುವರು, ಇದು ಅತ್ಯಂತ ಕಠಿಣವಾದ ದಿನವೆಂದು ಸತ್ಯನಿಷೇಧಿಗಳು ಹೇಳುವರು. info
التفاسير:

external-link copy
9 : 54

كَذَّبَتْ قَبْلَهُمْ قَوْمُ نُوْحٍ فَكَذَّبُوْا عَبْدَنَا وَقَالُوْا مَجْنُوْنٌ وَّازْدُجِرَ ۟

ಇವರಿಗಿಂತ ಮೊದಲು ನೂಹರ ಜನಾಂಗವು ಸತ್ಯವನ್ನು ಸುಳ್ಳಾಗಿಸಿದೆ. ಅವರು ನಮ್ಮ ದಾಸನನ್ನು ಸುಳ್ಳಾಗಿಸಿದರು ಮತ್ತು ಇವನು ಹುಚ್ಚನೆಂದು ಹೇಳಿದ್ದರು. ಅವರು ತೀವ್ರವಾಗಿ ಗದರಿಸಲ್ಪಟ್ಟಿದ್ದರು. info
التفاسير:

external-link copy
10 : 54

فَدَعَا رَبَّهٗۤ اَنِّیْ مَغْلُوْبٌ فَانْتَصِرْ ۟

ಆಗ ಅವರು ತನ್ನ ಪ್ರಭುವನ್ನು ಕರೆದು ಬೇಡಿದರು, ಓ ಪ್ರಭು ನಾನು ಪರಾಭವಗೊಂಡಿರುವೆನು, ಆದ್ದರಿಂದ ನೀನು ಇವರಿಂದ ಪ್ರತಿಕಾರ ಪಡೆ. info
التفاسير:

external-link copy
11 : 54

فَفَتَحْنَاۤ اَبْوَابَ السَّمَآءِ بِمَآءٍ مُّنْهَمِرٍ ۟ؗۖ

ಆಗ ಧಾರಾಕಾರವಾಗಿ ಸುರಿಯುವ ಮಳೆಯೊಂದಿಗೆ ನಾವು ಆಕಾಶದ ದ್ವಾರಗಳನ್ನು ತೆರೆದು ಬಿಟ್ಟೆವು. info
التفاسير:

external-link copy
12 : 54

وَّفَجَّرْنَا الْاَرْضَ عُیُوْنًا فَالْتَقَی الْمَآءُ عَلٰۤی اَمْرٍ قَدْ قُدِرَ ۟ۚ

ನಾವು ಭೂಮಿಯಲ್ಲಿ ಚಿಲುಮೆಗಳನ್ನು ಹರಿಸಿದೆವು, ನಿಶ್ಚಯಿಸಲಾದ ಒಂದು ಕಾರ್ಯಕ್ಕಾಗಿ ನೀರು ಸಂಗ್ರಹವಾಯಿತು. info
التفاسير:

external-link copy
13 : 54

وَحَمَلْنٰهُ عَلٰی ذَاتِ اَلْوَاحٍ وَّدُسُرٍ ۟ۙ

ನಾವು ಅವರನ್ನು (ನೂಹರನ್ನು) ಹಲಗೆಗಳು ಮತ್ತು ಮೂಳೆಗಳಿಂದ ಮಾಡಲ್ಪಟ್ಟ ಒಂದು ಹಡಗಿನಲ್ಲಿ ಸಾಗಿಸಿದೆವು. info
التفاسير:

external-link copy
14 : 54

تَجْرِیْ بِاَعْیُنِنَا جَزَآءً لِّمَنْ كَانَ كُفِرَ ۟

ಅದು ನಮ್ಮ ಮೇಲ್ನೋಟದಲ್ಲಿ ಚಲಿಸುತ್ತಿತ್ತು. ನಿಷೇಧಿಸಲ್ಪಟ್ಟ ವ್ಯಕ್ತಿಯ(ನೂಹರ) ಪರವಾಗಿ ಪ್ರತಿಕಾರವಾಗಿತ್ತು. info
التفاسير:

external-link copy
15 : 54

وَلَقَدْ تَّرَكْنٰهَاۤ اٰیَةً فَهَلْ مِنْ مُّدَّكِرٍ ۟

ನಿಸ್ಸಂದೇಹವಾಗಿಯೂ ಆ ಹಡಗನ್ನು ನಾವು ಒಂದು ನಿದರ್ಶನವನ್ನಾಗಿ ಉಳಿಸಿಬಿಟ್ಟೆವು. ಇನ್ನು ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ? info
التفاسير:

external-link copy
16 : 54

فَكَیْفَ كَانَ عَذَابِیْ وَنُذُرِ ۟

ಹೇಗಿತ್ತು ನನ್ನ ಶಿಕ್ಷೆ ಹಾಗು ಎಚ್ಚರಿಕೆಗಳು ? info
التفاسير:

external-link copy
17 : 54

وَلَقَدْ یَسَّرْنَا الْقُرْاٰنَ لِلذِّكْرِ فَهَلْ مِنْ مُّدَّكِرٍ ۟

ನಿಸ್ಸಂಶಯವಾಗಿಯೂ ನಾವು ಕುರ್‌ಆನನ್ನು ಉಪದೇಶಕ್ಕಾಗಿ ಸರಳವಾಗಿಸಿದ್ದೇವೆ. ಇನ್ನು ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ ? info
التفاسير:

external-link copy
18 : 54

كَذَّبَتْ عَادٌ فَكَیْفَ كَانَ عَذَابِیْ وَنُذُرِ ۟

ಆದ್ ಜನಾಂಗವು ಸಹ (ಸತ್ಯವನ್ನು) ಸುಳ್ಳಾಗಿಸಿತು. ಆಗ ನನ್ನ ಶಿಕ್ಷೆ ಹಾಗು ಎಚ್ಚರಿಕೆಗಳು ಹೇಗಿದ್ದವು ? info
التفاسير:

external-link copy
19 : 54

اِنَّاۤ اَرْسَلْنَا عَلَیْهِمْ رِیْحًا صَرْصَرًا فِیْ یَوْمِ نَحْسٍ مُّسْتَمِرٍّ ۟ۙ

ನಾವು ಅವರ ಮೇಲೆ ಅಶುಭ ದಿನವೊಂದರಲ್ಲಿ ನಿರಂತರವಾದ ಉಗ್ರಚಂಡ ಮಾರುತವನ್ನು ಕಳುಹಿಸಿದೆವು. info
التفاسير:

external-link copy
20 : 54

تَنْزِعُ النَّاسَ ۙ— كَاَنَّهُمْ اَعْجَازُ نَخْلٍ مُّنْقَعِرٍ ۟

ಬುಡಕಿತ್ತ ಖರ್ಜೂರ ಮರದ ದಿಂಡುಗಳAತೆ ಅದು ಜನರನ್ನು ಎತ್ತಿ ಎಸೆಯುತ್ತಿತ್ತು. info
التفاسير:

external-link copy
21 : 54

فَكَیْفَ كَانَ عَذَابِیْ وَنُذُرِ ۟

ಆಗ ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳು ಹೇಗಿದ್ದವು? info
التفاسير:

external-link copy
22 : 54

وَلَقَدْ یَسَّرْنَا الْقُرْاٰنَ لِلذِّكْرِ فَهَلْ مِنْ مُّدَّكِرٍ ۟۠

ಖಂಡಿತವಾಗಿಯು ನಾವು ಕುರ್‌ಆನನ್ನು ಉಪದೇಶ ಪಡೆಯಲು ಸರಳಗೊಳಿಸಿರುವೆವು. ಇನ್ನುಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ ? info
التفاسير:

external-link copy
23 : 54

كَذَّبَتْ ثَمُوْدُ بِالنُّذُرِ ۟

ಸಮೂದ್ ಜನಾಂಗವು ಎಚ್ಚರಿಕೆ ನೀಡುವವರನ್ನು ಸುಳ್ಳಾಗಿಸಿತು. info
التفاسير:

external-link copy
24 : 54

فَقَالُوْۤا اَبَشَرًا مِّنَّا وَاحِدًا نَّتَّبِعُهٗۤ ۙ— اِنَّاۤ اِذًا لَّفِیْ ضَلٰلٍ وَّسُعُرٍ ۟

ಅವರು ಹೇಳಿದರು; ನಮ್ಮಲ್ಲಿನ ಒಬ್ಬಂಟಿಗನಾದ ಒಬ್ಬ ವ್ಯಕ್ತಿಯನ್ನು ನಾವು ಅನುಸರಿಸುವುದೇ ? ಹಾಗಿದ್ದರೆ ಖಂಡಿತವಾಗಿಯೂ ನಾವು ದಾರಿಗೆಟ್ಟವರು ಮತ್ತು ತಿಳಿಗೇಡಿಗಳಾಗಿದ್ದೇವೆ. info
التفاسير:

external-link copy
25 : 54

ءَاُلْقِیَ الذِّكْرُ عَلَیْهِ مِنْ بَیْنِنَا بَلْ هُوَ كَذَّابٌ اَشِرٌ ۟

ನಮ್ಮ ನಡುವೆ ಕೇವಲ ಅವನ ಮೇಲೆ ಮಾತ್ರ ಸಂದೇಶ ಇಳಿಸಲಾಯಿತೇ ?ಅಲ್ಲ, ಅವನು ಸುಳ್ಳನಾದ ದುರಾಭಿಮಾನಿಯಾಗಿದ್ದಾನೆ. info
التفاسير:

external-link copy
26 : 54

سَیَعْلَمُوْنَ غَدًا مَّنِ الْكَذَّابُ الْاَشِرُ ۟

ಆದರೆ ಸುಳ್ಳುಗಾರನು, ಮತ್ತು ದುರಾಭಿಮಾನಿ ಯಾರೆಂದು ನಾಳೆ ಅವರಿಗೆ ತಿಳಿಯುವುದು. info
التفاسير:

external-link copy
27 : 54

اِنَّا مُرْسِلُوا النَّاقَةِ فِتْنَةً لَّهُمْ فَارْتَقِبْهُمْ وَاصْطَبِرْ ۟ؗ

ನಿಸ್ಸಂದೇಹವಾಗಿಯು ನಾವು ಒಂದು ಒಂಟೆಯನ್ನು ಅವರ ಪರೀಕ್ಷೆಗಾಗಿ ಕಳುಹಿಸುವವರಿದ್ದೇವೆ, ಆದ್ದರಿಂದ (ಓ ಸ್ವಾಲಿಹ್) ನೀನು ಅವರನ್ನು ನಿರೀಕ್ಷಿಸುತ್ತಿರು ಹಾಗು ತಾಳ್ಮೆಯಿಂದಿರು. info
التفاسير:

external-link copy
28 : 54

وَنَبِّئْهُمْ اَنَّ الْمَآءَ قِسْمَةٌ بَیْنَهُمْ ۚ— كُلُّ شِرْبٍ مُّحْتَضَرٌ ۟

ನೀರನ್ನು ಅವರ (ಮತ್ತು ಒಂಟೆಯ) ನಡುವೆ ಹಂಚಲಾಗಿದೆ ಎಂದು ನೀವು ಅವರಿಗೆ ತಿಳಿಸಿರಿ. ಪ್ರತಿಯೊಬ್ಬನೂ ತನ್ನ ಸರದಿಗೆ ಹಾಜರಾಗಲಿ. info
التفاسير:

external-link copy
29 : 54

فَنَادَوْا صَاحِبَهُمْ فَتَعَاطٰی فَعَقَرَ ۟

ಅನಂತರ ಅವರು ತಮ್ಮ ಓರ್ವ ಸಂಗಡಿಗನನ್ನು ಕರೆದರು. ಅವನು ಆಕ್ರಮಣ ಮಾಡಿ ಒಂಟೆಯ ಸ್ನಾಯುಗಳನ್ನು ಕತ್ತರಿಸಿ ಬಿಟ್ಟನು. info
التفاسير:

external-link copy
30 : 54

فَكَیْفَ كَانَ عَذَابِیْ وَنُذُرِ ۟

ಆಗ ನನ್ನ ಶಿಕ್ಷೆ ಹಾಗು ಎಚ್ಚರಿಕೆಗಳು ಹೇಗಿದ್ದವು ? info
التفاسير:

external-link copy
31 : 54

اِنَّاۤ اَرْسَلْنَا عَلَیْهِمْ صَیْحَةً وَّاحِدَةً فَكَانُوْا كَهَشِیْمِ الْمُحْتَظِرِ ۟

ನಾವು ಅವರ ಮೇಲೆ ಒಂದು ಘೋರ ಆರ್ಭಟವನ್ನು ಕಳುಹಿಸಿದೆವು, ಆಗ ಅವರು ಕೊಟ್ಟಿಗೆಯವರು ತುಳಿದ ಕಸದಂತೆ ಹೊಟ್ಟಾಗಿಬಿಟ್ಟರು. info
التفاسير:

external-link copy
32 : 54

وَلَقَدْ یَسَّرْنَا الْقُرْاٰنَ لِلذِّكْرِ فَهَلْ مِنْ مُّدَّكِرٍ ۟

ನಿಸ್ಸಂಶಯವಾಗಿಯು ನಾವು ಕುರ್‌ಆನನ್ನು ಉಪದೇಶ ಪಡೆಯಲು ಸರಳಗೊಳಿಸಿದ್ದೇವೆ. ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ ? info
التفاسير:

external-link copy
33 : 54

كَذَّبَتْ قَوْمُ لُوْطٍۭ بِالنُّذُرِ ۟

ಲೂತರ ಜನಾಂಗವು ಎಚ್ಚರಿಕೆ ನೀಡುವವರನ್ನು ಸುಳ್ಳಾಗಿಸಿತು. info
التفاسير:

external-link copy
34 : 54

اِنَّاۤ اَرْسَلْنَا عَلَیْهِمْ حَاصِبًا اِلَّاۤ اٰلَ لُوْطٍ ؕ— نَجَّیْنٰهُمْ بِسَحَرٍ ۟ۙ

ನಿಸ್ಸಂಶಯವಾಗಿಯು ನಾವು ಅವರ ಮೇಲೆ ಕಲ್ಲುಗಳನ್ನು ವರ್ಷಿಸುವ ಚಂಡಮಾರುತವನ್ನು ಕಳುಹಿಸಿದೆವು, ಆದರೆ ಲೂತರ ಕುಟುಂಬದ ಹೊರತು, ನಾವು ಅವರನ್ನು ನುಸುಕಿನ ವೇಳೆಯಲ್ಲಿ ರಕ್ಷಿಸಿದೆವು. info
التفاسير:

external-link copy
35 : 54

نِّعْمَةً مِّنْ عِنْدِنَا ؕ— كَذٰلِكَ نَجْزِیْ مَنْ شَكَرَ ۟

ನಮ್ಮ ವತಿಯ ಒಂದು ಅನುಗ್ರಹವಾಗಿ ಪ್ರತಿಯೊಬ್ಬ ಕೃತಜ್ಞತೆ ತೋರುವವನಿಗೆ ನಾವು ಇದೇರೀತಿ ಪ್ರತಿಫಲ ನೀಡುತ್ತೇವೆ. info
التفاسير:

external-link copy
36 : 54

وَلَقَدْ اَنْذَرَهُمْ بَطْشَتَنَا فَتَمَارَوْا بِالنُّذُرِ ۟

ನಿಜವಾಗಿಯೂ ಲೂತರು ತಮ್ಮ ಜನಾಂಗವನ್ನು ನಮ್ಮ ಶಿಕ್ಷೆಯ ಕುರಿತು ಎಚ್ಚರಿಸಿದ್ದರು. ಆದರೆ ಅವರು ಎಲ್ಲಾ ಎಚ್ಚರಿಕೆಗಳ ಕುರಿತು ಸಂದೇಹಪಟ್ಟರು. info
التفاسير:

external-link copy
37 : 54

وَلَقَدْ رَاوَدُوْهُ عَنْ ضَیْفِهٖ فَطَمَسْنَاۤ اَعْیُنَهُمْ فَذُوْقُوْا عَذَابِیْ وَنُذُرِ ۟

ನಿಶ್ಚಯವಾಗಿಯೂ ಅವರು ಅವನ (ಲೂತರ) ಅತಿಥಿಗಳ ಕುರಿತು ಅವನನ್ನು ಪುಸಲಾಯಿಸಿದರು. ಆಗ ನಾವು ಅವರ ಕಣ್ಣುಗಳನ್ನು ಅಳಿಸಿಬಿಟ್ಟೆವು. (ಹೇಳಿದೆವು) ನೀವು ನನ್ನ ಯಾತನೆಯನ್ನು ಮತ್ತು ಎಚ್ಚರಿಕೆಗಳನ್ನು ಸವಿಯಿರಿ. info
التفاسير:

external-link copy
38 : 54

وَلَقَدْ صَبَّحَهُمْ بُكْرَةً عَذَابٌ مُّسْتَقِرٌّ ۟ۚ

ಶಾಶ್ವತವಾದ ಶಿಕ್ಷೆಯು ಮುಂಜಾನೆ ವೇಳೆಯಲ್ಲಿ ಅವರನ್ನು ಆವರಿಸಿಬಿಟ್ಟಿತು. info
التفاسير:

external-link copy
39 : 54

فَذُوْقُوْا عَذَابِیْ وَنُذُرِ ۟

ಇನ್ನು ನೀವು ನನ್ನ ಯಾತನೆಯನ್ನು ಮತ್ತು ಎಚ್ಚರಿಕೆಗಳನ್ನು ಸವಿಯಿರಿ (ಎನ್ನಲಾಯಿತು) info
التفاسير:

external-link copy
40 : 54

وَلَقَدْ یَسَّرْنَا الْقُرْاٰنَ لِلذِّكْرِ فَهَلْ مِنْ مُّدَّكِرٍ ۟۠

ನಿಸ್ಸಂಶಯವಾಗಿಯೂ ನಾವು ಕುರ್‌ಆನನ್ನು ಉಪದೇಶ ಪಡೆಯಲು ಸರಳಗೊಳಿಸಿದ್ದೇವೆ. ಇನ್ನು ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ ? info
التفاسير:

external-link copy
41 : 54

وَلَقَدْ جَآءَ اٰلَ فِرْعَوْنَ النُّذُرُ ۟ۚ

ಫಿರ್‌ಔನ್ ಕುಟುಂಬದ ಬಳಿಗೂ ಎಚ್ಚರಿಕೆ ನೀಡುವವರು ಬಂದಿದ್ದರು. info
التفاسير:

external-link copy
42 : 54

كَذَّبُوْا بِاٰیٰتِنَا كُلِّهَا فَاَخَذْنٰهُمْ اَخْذَ عَزِیْزٍ مُّقْتَدِرٍ ۟

ಆದರೆ ಅವರು ನಮ್ಮ ಸಕಲ ದೃಷ್ಟಾಂತಗಳನ್ನು ಸುಳ್ಳಾಗಿಸಿದರು. ಆಗ ನಾವು ಅವರನ್ನು ಒಬ್ಬ ಬಲಿಷ್ಠನೂ, ಸರ್ವಸಮರ್ಥನೂ ಹಿಡಿಯುವಂತೆ ಹಿಡಿದುಬಿಟ್ಟೆವು. info
التفاسير:

external-link copy
43 : 54

اَكُفَّارُكُمْ خَیْرٌ مِّنْ اُولٰٓىِٕكُمْ اَمْ لَكُمْ بَرَآءَةٌ فِی الزُّبُرِ ۟ۚ

(ಓ ಕುರೈಶರೇ) ನಿಮ್ಮ ಸತ್ಯನಿಷೇಧಿಗಳು ಅವರಿಗಿಂತ ಉತ್ತಮರೇ ? ಅಥವಾ ದಿವ್ಯಗ್ರಂಥಗಳಲ್ಲಿ ನಿಮಗೇನಾದರೂ ಕ್ಷಮೆ ಲಿಖಿತಗೊಂಡಿದೆಯೇ? info
التفاسير:

external-link copy
44 : 54

اَمْ یَقُوْلُوْنَ نَحْنُ جَمِیْعٌ مُّنْتَصِرٌ ۟

ಅಥವಾ ನಾವು ಜಯ ಸಾಧಿಸುವ ಪಂಗಡವಾಗಿದ್ದೇವೆAದು ಅವರು ಹೇಳುತ್ತಿದ್ದಾರೆಯೇ ? info
التفاسير:

external-link copy
45 : 54

سَیُهْزَمُ الْجَمْعُ وَیُوَلُّوْنَ الدُّبُرَ ۟

ಸದ್ಯದಲ್ಲೇ ಈ (ಸತ್ಯನಿಷೇಧಿ) ಪಂಗಡವು ಸೋತು ಹೋಗುವುದು. ಹಾಗು ಅವರು ಬೆನ್ನು ತಿರುಗಿಸಿ ಓಡುವರು. info
التفاسير:

external-link copy
46 : 54

بَلِ السَّاعَةُ مَوْعِدُهُمْ وَالسَّاعَةُ اَدْهٰی وَاَمَرُّ ۟

ಮಾತ್ರವಲ್ಲ ಅಂತ್ಯಗಳಿಗೆಯು ಅವರ ವಾಗ್ದತ್ತ ಸಮಯವಾಗಿದೆ ಹಾಗೂ ಆ ಅಂತ್ಯಗಳಿಗೆಯೂ ಅತ್ಯಂತ ಭೀಕರವೂ, ಅತಿ ಕಹಿಯೂ ಆಗಿದೆ, info
التفاسير:

external-link copy
47 : 54

اِنَّ الْمُجْرِمِیْنَ فِیْ ضَلٰلٍ وَّسُعُرٍ ۟ۘ

ನಿಸ್ಸಂದೇಹವಾಗಿಯೂ ಅಪರಾಧಿಗಳು ಮಾರ್ಗಭ್ರಷ್ಟತೆಯಲ್ಲಿ ಮತ್ತು ಹುಚ್ಚುತನದಲ್ಲಿ ಇದ್ದಾರೆ info
التفاسير:

external-link copy
48 : 54

یَوْمَ یُسْحَبُوْنَ فِی النَّارِ عَلٰی وُجُوْهِهِمْ ؕ— ذُوْقُوْا مَسَّ سَقَرَ ۟

ಅವರು ಅಧೋಮುಖಿಗಳಾಗಿ ನರಕಾಗ್ನಿಯಲ್ಲಿ ಎಳೆದೊಯ್ಯಲಾಗುವ ದಿನ ನರಕದ ಜ್ವಾಲೆಯ ಸ್ಪರ್ಶವನ್ನು ಸವಿಯಿರಿ ಎಂದು ಅವರೊಂದಿಗೆ ಹೇಳಲಾಗುವುದು. info
التفاسير:

external-link copy
49 : 54

اِنَّا كُلَّ شَیْءٍ خَلَقْنٰهُ بِقَدَرٍ ۟

ನಿಸ್ಸಂಶಯವಾಗಿಯೂ ನಾವು ಪ್ರತಿಯೊಂದು ವಸ್ತುವನ್ನು ಒಂದು ಪ್ರಮಾಣದಲ್ಲಿ ಸೃಷ್ಟಿಸಿದ್ದೇವೆ. info
التفاسير:

external-link copy
50 : 54

وَمَاۤ اَمْرُنَاۤ اِلَّا وَاحِدَةٌ كَلَمْحٍ بِالْبَصَرِ ۟

ನಮ್ಮ ಆಜ್ಞೆಯು ಕಣ್ಣು ರೆಪ್ಪೆ ಬಡಿದ ಹಾಗೆ, ಕೇವಲ ಒಂದೇ ಬಾರಿಯಾಗಿರುತ್ತದೆ. info
التفاسير:

external-link copy
51 : 54

وَلَقَدْ اَهْلَكْنَاۤ اَشْیَاعَكُمْ فَهَلْ مِنْ مُّدَّكِرٍ ۟

ನಾವು ನಿಮ್ಮಂತಹ ಅನೇಕ ಸಮುದಾಯಗಳನ್ನು ನಾಶಪಡಿಸಿರುತ್ತೇವೆ, ಇನ್ನು ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ? info
التفاسير:

external-link copy
52 : 54

وَكُلُّ شَیْءٍ فَعَلُوْهُ فِی الزُّبُرِ ۟

ಅವರು ಮಾಡಿದ್ದೆಲ್ಲವೂ ಕರ್ಮಗ್ರಂಥದಲ್ಲಿ ಲಿಖಿತವಾಗಿದೆ. info
التفاسير:

external-link copy
53 : 54

وَكُلُّ صَغِیْرٍ وَّكَبِیْرٍ مُّسْتَطَرٌ ۟

ಚಿಕ್ಕದಿರಲಿ ದೊಡ್ಡದಿರಲಿ ಪ್ರತಿಯೊಂದು ವಿಷಯವನ್ನು ಬರೆದಿಡಲಾಗಿದೆ. info
التفاسير:

external-link copy
54 : 54

اِنَّ الْمُتَّقِیْنَ فِیْ جَنّٰتٍ وَّنَهَرٍ ۟ۙ

ಖಂಡಿತವಾಗಿಯೂ ಭಯಭಕ್ತಿಯುಳ್ಳವರು ಸ್ವರ್ಗೋದ್ಯಾನ ಗಳಲ್ಲೂ, ಕಾಲುವೆಗಳಲ್ಲೂ ಇರುವರು. info
التفاسير:

external-link copy
55 : 54

فِیْ مَقْعَدِ صِدْقٍ عِنْدَ مَلِیْكٍ مُّقْتَدِرٍ ۟۠

ಸರ್ವಸಮರ್ಥನಾದ ರಾಜಾಧಿಪತಿಯ ಸನ್ನಿಧಿಯಲ್ಲಿ ಸತ್ಯದ ಆಸನದಲ್ಲಿರುವರು. info
التفاسير: