ශුද්ධවූ අල් කුර්ආන් අර්ථ කථනය - කැනඩියානු පරිවර්තනය - බෂීර් මයිසූරි

පිටු අංක:close

external-link copy
45 : 4

وَاللّٰهُ اَعْلَمُ بِاَعْدَآىِٕكُمْ ؕ— وَكَفٰی بِاللّٰهِ وَلِیًّا ؗۗ— وَّكَفٰی بِاللّٰهِ نَصِیْرًا ۟

ಅಲ್ಲಾಹನು ನಿಮ್ಮ ಶತ್ರುಗಳನ್ನು ಚೆನ್ನಾಗಿ ಅರಿತಿದ್ದಾನೆ ಮತ್ತು ಮಿತ್ರನಾಗಿ ಅಲ್ಲಾಹನೇ ಸಾಕು ಮತ್ತು ಸಹಾಯಕನಾಗಿ ಅಲ್ಲಾಹನೇ ಸಾಕು. info
التفاسير:

external-link copy
46 : 4

مِنَ الَّذِیْنَ هَادُوْا یُحَرِّفُوْنَ الْكَلِمَ عَنْ مَّوَاضِعِهٖ وَیَقُوْلُوْنَ سَمِعْنَا وَعَصَیْنَا وَاسْمَعْ غَیْرَ مُسْمَعٍ وَّرَاعِنَا لَیًّا بِاَلْسِنَتِهِمْ وَطَعْنًا فِی الدِّیْنِ ؕ— وَلَوْ اَنَّهُمْ قَالُوْا سَمِعْنَا وَاَطَعْنَا وَاسْمَعْ وَانْظُرْنَا لَكَانَ خَیْرًا لَّهُمْ وَاَقْوَمَ ۙ— وَلٰكِنْ لَّعَنَهُمُ اللّٰهُ بِكُفْرِهِمْ فَلَا یُؤْمِنُوْنَ اِلَّا قَلِیْلًا ۟

ಕೆಲವು ಯಹೂದರು ದೈವ ವಚನಗಳನ್ನು ಅವುಗಳ ನೈಜ ಸ್ಥಾನದಿಂದ ಅಸ್ತವ್ಯಸ್ತಗೊಳಿಸುತ್ತಾರೆ ಮತ್ತು ನಾವು ಆಲಿಸಿದೆವು ಮತ್ತು ಧಿಕ್ಕಾರ ತೋರಿದೆವು. ನೀವು ಕೇಳಿರಿ ನಿಮ್ಮನ್ನು ಕೇಳದಂತಾಗಲೆAದು ಹೇಳುತ್ತಾರೆ. ಮತ್ತು “ರಾಯಿನಾ” (ನಮ್ಮತ್ತ ಲಕ್ಷö್ಯ ಕೊಡಿರಿ) ಎಂಬ ಮಾತನ್ನು ತಮ್ಮ ನಾಲಗೆಯ ಮೂಲಕ ತಿರುಚಿಕೊಳ್ಳುತ್ತಾರೆ ಮತ್ತು ಧರ್ಮನಿಂದನೆ ಮಾಡುತ್ತಾರೆ. ಆದರೆ ಅವರು ಇದರ ಹೊರತು ನಾವು ಆಲಿಸಿದೆವು ಮತ್ತು ವಿಧೇಯತೆ ತೋರಿದೆವು ಮತ್ತು ನೀವು ಕೇಳಿಸಿಕೊಳ್ಳಿರಿ ಮತ್ತು ನಮ್ಮನ್ನು ನೋಡಿರಿರೆಂದು ಅವರು ಹೇಳಿರುತ್ತಿದ್ದರೆ ಅದು ಅವರಿಗೆ ಅತ್ಯುತ್ತಮವೂ, ಅತ್ಯಂತ ಯೋಗ್ಯವೂ ಆಗಿರುತ್ತಿತ್ತು. ಆದರೆ ಅಲ್ಲಾಹನು ಅವರ ನಿಷೇಧದ ನಿಮಿತ್ತ ಅವರನ್ನು ಶಪಿಸಿರುತ್ತಾನೆ. ಆದ್ದರಿಂದ ಅವರು ಅತ್ಯಲ್ಪವೇ ವಿಶ್ವಾಸವಿಡುತ್ತಾರೆ. info
التفاسير:

external-link copy
47 : 4

یٰۤاَیُّهَا الَّذِیْنَ اُوْتُوا الْكِتٰبَ اٰمِنُوْا بِمَا نَزَّلْنَا مُصَدِّقًا لِّمَا مَعَكُمْ مِّنْ قَبْلِ اَنْ نَّطْمِسَ وُجُوْهًا فَنَرُدَّهَا عَلٰۤی اَدْبَارِهَاۤ اَوْ نَلْعَنَهُمْ كَمَا لَعَنَّاۤ اَصْحٰبَ السَّبْتِ ؕ— وَكَانَ اَمْرُ اللّٰهِ مَفْعُوْلًا ۟

ಓ ಗ್ರಂಥ ನೀಡಲ್ಪಟ್ಟವರೇ ನಿಮ್ಮ ಬಳಿ ಇರುವುದನ್ನು ದೃಢೀಕರಿಸುತ್ತಾ ನಾವು ಅವತೀರ್ಣಗೊಳಿಸಿರುವುದರಲ್ಲಿ (ಕುರ್‌ಆನ್) ವಿಶ್ವಾಸವಿಡಿರಿ. ನಾವು ಕೆಲವು ಮುಖಗಳನ್ನು ವಿಕೃತಗೊಳಿಸಿ ಅದನ್ನು ಬೆನ್ನ ಹಿಂದಕ್ಕೆ ತಿರುಗಿಸುವುದಕ್ಕೆ ಮುನ್ನ ಅಥವಾ ಸಬ್ತ್ನ (ಶನಿವಾರದ) ಜನರನ್ನು ನಾವು ಶಪಿಸಿದಂತೆ ಅವರನ್ನು ಶಪಿಸುವುದಕ್ಕೆ ಮುನ್ನ ಅಲ್ಲಾಹನ ಆಜ್ಞೆಯು ಜಾರಿಗೆ ಬಂದೇ ತೀರುವುದು. info
التفاسير:

external-link copy
48 : 4

اِنَّ اللّٰهَ لَا یَغْفِرُ اَنْ یُّشْرَكَ بِهٖ وَیَغْفِرُ مَا دُوْنَ ذٰلِكَ لِمَنْ یَّشَآءُ ۚ— وَمَنْ یُّشْرِكْ بِاللّٰهِ فَقَدِ افْتَرٰۤی اِثْمًا عَظِیْمًا ۟

ನಿಸ್ಸಂದೇಹವಾಗಿ ಅಲ್ಲಾಹನು ತನ್ನೊಂದಿಗೆ ಸಹಭಾಗಿಗಳನ್ನು ನಿಶ್ಚಯಿಸಲಾಗುವುದನ್ನು ಖಂಡಿತ ಕ್ಷಮಿಸುವುದಿಲ್ಲ. ಮತ್ತು ಅದರ ಹೊರತಾದುದನ್ನು ತಾನಿಚ್ಛಿಸಿದವರಿಗೆ ಅವನು ಕ್ಷಮಿಸುವನು. ಯಾರು ಅಲ್ಲಾಹನೊಂದಿಗೆ ಸಹಭಾಗಿಯನ್ನು ನಿಶ್ಚಯಿಸುವನೋ ಅವನು ಘೋರ ಪಾಪವನ್ನು, ಸುಳ್ಳಾರೋಪವನ್ನು ಮಾಡಿದನು. info
التفاسير:

external-link copy
49 : 4

اَلَمْ تَرَ اِلَی الَّذِیْنَ یُزَكُّوْنَ اَنْفُسَهُمْ ؕ— بَلِ اللّٰهُ یُزَكِّیْ مَنْ یَّشَآءُ وَلَا یُظْلَمُوْنَ فَتِیْلًا ۟

ಆತ್ಮ ಪ್ರಶಂಸೆ ಮಾಡುವವರನ್ನು ನೀವು ನೋಡಲಿಲ್ಲವೇ? ಆದರೆ ಅಲ್ಲಾಹನು ಯಾರನ್ನು ಇಚ್ಛಿಸುತ್ತಾನೋ ಅವರನ್ನು ಪರಿಶುದ್ಧಗೊಳಿಸುತ್ತಾನೆ. ಅವರೊಂದಿಗೆ ಒಂದು ನೂಲಿನಷ್ಟೂ ಅನ್ಯಾಯ ಮಾಡಲಾಗದು. info
التفاسير:

external-link copy
50 : 4

اُنْظُرْ كَیْفَ یَفْتَرُوْنَ عَلَی اللّٰهِ الْكَذِبَ ؕ— وَكَفٰی بِهٖۤ اِثْمًا مُّبِیْنًا ۟۠

ಅವರು ಅಲ್ಲಾಹನ ಮೇಲೆ ಹೇಗೆ ಸುಳ್ಳಾರೋಪ ಮಾಡುತ್ತಿದ್ದಾರೆಂದು ನೋಡಿರಿ. ಮತ್ತು ಪ್ರತ್ಯಕ್ಷ ಪಾಪಕ್ಕೆ ಅದೇ ಸಾಕು. info
التفاسير:

external-link copy
51 : 4

اَلَمْ تَرَ اِلَی الَّذِیْنَ اُوْتُوْا نَصِیْبًا مِّنَ الْكِتٰبِ یُؤْمِنُوْنَ بِالْجِبْتِ وَالطَّاغُوْتِ وَیَقُوْلُوْنَ لِلَّذِیْنَ كَفَرُوْا هٰۤؤُلَآءِ اَهْدٰی مِنَ الَّذِیْنَ اٰمَنُوْا سَبِیْلًا ۟

ಗ್ರಂಥದಿAದ ಒಂದು ಪಾಲು ನೀಡಲಾದವರನ್ನು ನೀವು ನೋಡಲಿಲ್ಲವೇ? ಅವರು ವಿಗ್ರಹಗಳಲ್ಲೂ ದುಷ್ಟ ಶಕ್ತಿಗಳಲ್ಲೂ ವಿಶ್ವಾಸವಿಡುತ್ತಾರೆ ಮತ್ತು ಅವರು ಸತ್ಯನಿಷೇಧಿಗಳ ಬಗ್ಗೆ ಸತ್ಯವಿಶ್ವಾಸಿಗಳಿಗಿಂತ ಹೆಚ್ಚು ಸನ್ಮಾರ್ಗದಲ್ಲಿದ್ದಾರೆಂದು ಹೇಳುತ್ತಾರೆ. info
التفاسير: