ශුද්ධවූ අල් කුර්ආන් අර්ථ කථනය - කැනඩියානු පරිවර්තනය - බෂීර් මයිසූරි

පිටු අංක:close

external-link copy
5 : 18

مَا لَهُمْ بِهٖ مِنْ عِلْمٍ وَّلَا لِاٰبَآىِٕهِمْ ؕ— كَبُرَتْ كَلِمَةً تَخْرُجُ مِنْ اَفْوَاهِهِمْ ؕ— اِنْ یَّقُوْلُوْنَ اِلَّا كَذِبًا ۟

ಮತ್ತು ಇದು ಅಲ್ಲಾಹನು ಸಂತಾನವನ್ನು ಹೊಂದಿದ್ದಾನೆAದು ಹೇಳುವವರಿಗೂ ಎಚ್ಚರಿಕೆ ನೀಡಲಿಕ್ಕಾಗಿದೆ. info
التفاسير:

external-link copy
6 : 18

فَلَعَلَّكَ بَاخِعٌ نَّفْسَكَ عَلٰۤی اٰثَارِهِمْ اِنْ لَّمْ یُؤْمِنُوْا بِهٰذَا الْحَدِیْثِ اَسَفًا ۟

(ಓ ಪೈಗಂಬರರೇ) ಅವರು ಈ ಕುರ್‌ಆನಿನಲ್ಲಿ ವಿಶ್ವಾಸವಿರಿಸಲಿಲ್ಲವೆಂದು ಅವರ ಹಿಂದೆ ಬಿದ್ದು ಇದೇ ಕೊರಗಿನಲ್ಲಿ ನೀವು ಸ್ವತಃ ನಿಮ್ಮನೇ ನಾಶ ಮಾಡಿಬಿಡಬಹುದು. info
التفاسير:

external-link copy
7 : 18

اِنَّا جَعَلْنَا مَا عَلَی الْاَرْضِ زِیْنَةً لَّهَا لِنَبْلُوَهُمْ اَیُّهُمْ اَحْسَنُ عَمَلًا ۟

ನಿಶ್ಚಯವಾಗಿ ಅವರ ಪೈಕಿ ಉತ್ತಮ ಕಾರ್ಯವನ್ನೆಸಗುವವರು ಯಾರೆಂದು ಪರೀಕ್ಷಿಸಲಿಕ್ಕಾಗಿ ನಾವು ಭೂಮಿಯ ಮೇಲಿರುವುದೆಲ್ಲವನ್ನು ಅದಕ್ಕೆ ಅಲಂಕಾರವನ್ನಾಗಿ ಮಾಡಿರುತ್ತೇವೆ. info
التفاسير:

external-link copy
8 : 18

وَاِنَّا لَجٰعِلُوْنَ مَا عَلَیْهَا صَعِیْدًا جُرُزًا ۟ؕ

ಕೊನೆಗೆ ಖಂಡಿತವಾಗಿಯು ನಾವು ಭೂಮಿಯ ಮೇಲಿರುವುದೆಲ್ಲವನ್ನು ಒಂದು ಸಮತಟ್ಟಾದ ಬರಡು ಬಯಲನ್ನಾಗಿ ಮಾಡುವವರಿದ್ದೇವೆ. info
التفاسير:

external-link copy
9 : 18

اَمْ حَسِبْتَ اَنَّ اَصْحٰبَ الْكَهْفِ وَالرَّقِیْمِ كَانُوْا مِنْ اٰیٰتِنَا عَجَبًا ۟

(ಓ ಪೈಗಂಬರರೇ) ಗುಹಾ ವಾಸಿಗಳು ಮತ್ತು ಶಿಲಾಲೇಖನದವರು ನಮ್ಮ ದೃಷ್ಟಾಂತಗಳ ಪೈಕಿ ಒಂದು ಅದ್ಭುತವೆಂದು ನೀವು ಭಾವಿಸಿರುವಿರಾ? info
التفاسير:

external-link copy
10 : 18

اِذْ اَوَی الْفِتْیَةُ اِلَی الْكَهْفِ فَقَالُوْا رَبَّنَاۤ اٰتِنَا مِنْ لَّدُنْكَ رَحْمَةً وَّهَیِّئْ لَنَا مِنْ اَمْرِنَا رَشَدًا ۟

ಆ ಕೆಲವು ಯುವಕರು ಗುಹೆಯೊಳಗೆ ಆಶ್ರಯ ಪಡೆದಾಗ ಪ್ರಾರ್ಥಿಸಿದರು: ಓ ನಮ್ಮ ಪ್ರಭು, ನೀನು ನಿನ್ನ ವತಿಯಿಂದ ನಮಗೆ ಕರುಣೆಯನ್ನು ದಯಪಾಲಿಸು ಮತ್ತು ನಮ್ಮ ವಿಚಾರದಲ್ಲಿ ನೀನು ನಮಗೆ ಮಾರ್ಗದರ್ಶನವನ್ನು ಮಾಡು. info
التفاسير:

external-link copy
11 : 18

فَضَرَبْنَا عَلٰۤی اٰذَانِهِمْ فِی الْكَهْفِ سِنِیْنَ عَدَدًا ۟ۙ

ಆಗ ನಾವು ಅವರ ಕಿವಿ ತಟ್ಟಿ ಆ ಗುಹೆಯಲ್ಲಿ ಅನೇಕ ವರ್ಷಗಳವರೆಗೆ ಮಲಗಿಸಿಬಟ್ಟೆವು. info
التفاسير:

external-link copy
12 : 18

ثُمَّ بَعَثْنٰهُمْ لِنَعْلَمَ اَیُّ الْحِزْبَیْنِ اَحْصٰی لِمَا لَبِثُوْۤا اَمَدًا ۟۠

ಅನಂತರ ಎರಡು ಗುಂಪುಗಳಲ್ಲಿ ಯಾವುದು ತನ್ನ ಗುಹವಾಸಾದ ಕಾಲವನ್ನು ಉತ್ತಮವಾಗಿ ಗಣಿಸುತ್ತದೆಯೆಂದು ತಿಳಿಯಲಿಕ್ಕಾಗಿ ನಾವು ಅವರನ್ನು ಪುನಃ ಎಬ್ಬಿಸಿದೆವು. info
التفاسير:

external-link copy
13 : 18

نَحْنُ نَقُصُّ عَلَیْكَ نَبَاَهُمْ بِالْحَقِّ ؕ— اِنَّهُمْ فِتْیَةٌ اٰمَنُوْا بِرَبِّهِمْ وَزِدْنٰهُمْ هُدًی ۟ۗۖ

ನಾವು ನಿಮಗೆ ಅವರ ನೈಜವೃತ್ತಾಂತವನ್ನು ವಿವರಿಸಿ ಕೊಡುತ್ತಿರುವೆವು. ಅವರು ತಮ್ಮ ಪ್ರಭುವಿನಲ್ಲಿ ವಿಶ್ವಾಸವಿರಿಸಿದ್ದ ಕೆಲವು ಯುವಕರಾಗಿದ್ದರು. ಮತ್ತು ನಾವು ಅವರಿಗೆ ಸನ್ಮಾರ್ಗವನ್ನು ಹೆಚ್ಚಿಸಿಕೊಟ್ಟೆವು. info
التفاسير:

external-link copy
14 : 18

وَّرَبَطْنَا عَلٰی قُلُوْبِهِمْ اِذْ قَامُوْا فَقَالُوْا رَبُّنَا رَبُّ السَّمٰوٰتِ وَالْاَرْضِ لَنْ نَّدْعُوَاۡ مِنْ دُوْنِهٖۤ اِلٰهًا لَّقَدْ قُلْنَاۤ اِذًا شَطَطًا ۟

ಅವರು ಎದ್ದು ನಿಂತಾಗ ನಾವು ಅವರ ಹೃದಯಗಳನ್ನು ದೃಢಪಡಿಸಿದೆವು. ಆಗ ಅವರೆಂದರು: ನಮ್ಮ ಪ್ರಭುವು ಆಕಾಶಗಳ ಮತ್ತು ಭೂಮಿಯ ಒಡೆಯನಾಗಿದ್ದಾನೆ. ಅವನ ಹೊರತು ಇನ್ನಾವ ಆರಾಧ್ಯನನ್ನು ಖಂಡಿತ ನಾವು ಪ್ರಾರ್ಥಿಸಲಾರೆವು. ಹಾಗೇನಾದರೂ ಮಾಡಿದರೆ ನಾವು ಅತ್ಯಂತ ತಪ್ಪು ಮಾತನ್ನು ಹೇಳಿದಂತಾಗುವುದು. info
التفاسير:

external-link copy
15 : 18

هٰۤؤُلَآءِ قَوْمُنَا اتَّخَذُوْا مِنْ دُوْنِهٖۤ اٰلِهَةً ؕ— لَوْلَا یَاْتُوْنَ عَلَیْهِمْ بِسُلْطٰنٍ بَیِّنٍ ؕ— فَمَنْ اَظْلَمُ مِمَّنِ افْتَرٰی عَلَی اللّٰهِ كَذِبًا ۟ؕ

ಈ ನಮ್ಮ ಜನಾಂಗದವರು ಅಲ್ಲಾಹನ ಹೊರತು ಹಲವು ಆರಾಧ್ಯರನ್ನು ನಿಶ್ಚಯಿಸಿಕೊಂಡಿದ್ದಾರೆ. ಅವರು ಆರಾಧ್ಯರೆಂಬುದರ ಬಗ್ಗೆ ಯಾವುದಾದರೂ ಸ್ಪಷ್ಟವಾದ ಆಧಾರವನ್ನೇಕೆ ತರುತ್ತಿಲ್ಲ? ಇನ್ನು ಅಲ್ಲಾಹನ ಮೇಲೆ ಸುಳ್ಳು ಹೊರಿಸಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? info
التفاسير: