Ibisobanuro bya qoran ntagatifu - Ibisobanuro bya Quran Ntagatifu mu rurimi rw'igikanada - Bashir Misuri

numero y'urupapuro: 174:151 close

external-link copy
188 : 7

قُلْ لَّاۤ اَمْلِكُ لِنَفْسِیْ نَفْعًا وَّلَا ضَرًّا اِلَّا مَا شَآءَ اللّٰهُ ؕ— وَلَوْ كُنْتُ اَعْلَمُ الْغَیْبَ لَاسْتَكْثَرْتُ مِنَ الْخَیْرِ ۛۚ— وَمَا مَسَّنِیَ السُّوْٓءُ ۛۚ— اِنْ اَنَا اِلَّا نَذِیْرٌ وَّبَشِیْرٌ لِّقَوْمٍ یُّؤْمِنُوْنَ ۟۠

ಹೇಳಿರಿ: ಅಲ್ಲಾಹನು ಇಚ್ಛಿಸುವುದರ ಹೊರತು ನಾನು ಸ್ವತಃ ನನಗೂ ಯಾವುದೇ ಪ್ರಯೋಜನವನ್ನುಂಟು ಮಾಡುವ ಅಥವಾ ಹಾನಿಯನ್ನುಂಟು ಮಾಡುವ ಅಧಿಕಾರವನ್ನು ಹೊಂದಿಲ್ಲ; ಮತ್ತು ನಾನು ಅದೃಷ್ಯಜ್ಞಾನವನ್ನು ಹೊಂದಿರುತ್ತಿದ್ದರೆ ಸಾಕಷ್ಟು ಒಳಿತುಗಳನ್ನು ಗಳಿಸುತ್ತಿದ್ದೆನು ಮತ್ತು ಯಾವುದೇ ನಷ್ಟ ನನಗುಂಟಾಗುತ್ತಿರಲಿಲ್ಲ. ನಾನು ಕೇವಲ ಒಬ್ಬ ಮುನ್ನೆಚ್ಚರಿಕೆ ನೀಡುವವನು ಮತ್ತು ವಿಶ್ವಾಸವಿಡುವ ಜನರಿಗೆ ಶುಭವಾರ್ತೆ ನೀಡುವವನು ಆಗಿದ್ದೇನೆ. info
التفاسير:

external-link copy
189 : 7

هُوَ الَّذِیْ خَلَقَكُمْ مِّنْ نَّفْسٍ وَّاحِدَةٍ وَّجَعَلَ مِنْهَا زَوْجَهَا لِیَسْكُنَ اِلَیْهَا ۚ— فَلَمَّا تَغَشّٰىهَا حَمَلَتْ حَمْلًا خَفِیْفًا فَمَرَّتْ بِهٖ ۚ— فَلَمَّاۤ اَثْقَلَتْ دَّعَوَا اللّٰهَ رَبَّهُمَا لَىِٕنْ اٰتَیْتَنَا صَالِحًا لَّنَكُوْنَنَّ مِنَ الشّٰكِرِیْنَ ۟

ಅವನೇ ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದವನು ಮತ್ತು ಅದರಿಂದಲೇ ಅದರ ಜೋಡಿಯನ್ನುಂಟು ಮಾಡಿದನು. ಇದು ಆಕೆಯೊಂದಿಗೆ ಅವನು ಮನಃ ಶಾಂತಿಯನ್ನು ಪಡೆಯಲೆಂದಾಗಿದೆ. ನಂತರ ಪತಿಯು ಪತ್ನಿಯನ್ನು ಸಮೀಪಿಸಿದಾಗ ಅವಳಿಗೆ ಹಗುರವಾದ ಗರ್ಭವು ನಿಂತಿತು. ನಂತರ ಅವಳು ಅದನ್ನು ಹೊತ್ತುಕೊಂಡು ನಡೆದಾಡಿದಳು. ತದನಂತರ ಅವಳಿಗೆ ಭಾರವು ಹೆಚ್ಚಾದಾಗ ಪತಿ-ಪತ್ನಿಯರಿಬ್ಬರೂ ತಮ್ಮ ಒಡೆಯನಾದ ಅಲ್ಲಾಹನೊಂದಿಗೆ ನೀನು ನಮಗೆ ಉತ್ತಮ ಹಾಗೂ ಆರೋಗ್ಯವಂತ ಸಂತತಿಯನ್ನು ಕರುಣಿಸಿದರೆ ನಾವು ಕೃತಜ್ಞತೆ ತೋರುವೆವು ಎಂದು ಪ್ರಾರ್ಥಿಸಿದರು. info
التفاسير:

external-link copy
190 : 7

فَلَمَّاۤ اٰتٰىهُمَا صَالِحًا جَعَلَا لَهٗ شُرَكَآءَ فِیْمَاۤ اٰتٰىهُمَا ۚ— فَتَعٰلَی اللّٰهُ عَمَّا یُشْرِكُوْنَ ۟

ಆದರೆ ಅಲ್ಲಾಹನು ಅವರಿಗೆ ಉತ್ತಮ ಸಂತತಿಯನ್ನು ನೀಡಿದಾಗ, ಅವನು ದಯಪಾಲಿಸಿರುವುದರಲ್ಲಿ ಅವರು ಅಲ್ಲಾಹನಿಗೆ ಸಹಭಾಗಿಗಳನ್ನು ನಿಶ್ಚಯಿಸತೊಡಗಿದರು. ಮತ್ತು ಅಲ್ಲಾಹನು ಅವರು ನಿಶ್ಚಯಿಸುತ್ತಿರುವ ಸಹಭಾಗಿತ್ವದಿಂದ ಅತ್ತುö್ಯನ್ನತನಾಗಿದ್ದಾನೆ. info
التفاسير:

external-link copy
191 : 7

اَیُشْرِكُوْنَ مَا لَا یَخْلُقُ شَیْـًٔا وَّهُمْ یُخْلَقُوْنَ ۟ۚ

ಏನನ್ನೂ ಸೃಷ್ಟಿಸಲಾಗದ, ಸ್ವತಃ ಸೃಷ್ಟಿಸಲ್ಪಟ್ಟವರನ್ನು ಅವರು ಅಲ್ಲಾಹನಿಗೆ ಸಹಭಾಗಿಯಾಗಿ ನಿಶ್ಚಯಿಸುತ್ತಿದ್ದಾರೆಯೇ? info
التفاسير:

external-link copy
192 : 7

وَلَا یَسْتَطِیْعُوْنَ لَهُمْ نَصْرًا وَّلَاۤ اَنْفُسَهُمْ یَنْصُرُوْنَ ۟

ಅವರು ಅವರಿಗೆ ಯಾವುದೇ ಸಹಾಯ ಮಾಡಲು ಸಾಧ್ಯವಿಲ್ಲ. ಮತ್ತು ಸ್ವತಃ ತಮಗೂ ಅವರು ಸಹಾಯ ಮಾಡಿಕೊಳ್ಳಲಾರರು. info
التفاسير:

external-link copy
193 : 7

وَاِنْ تَدْعُوْهُمْ اِلَی الْهُدٰی لَا یَتَّبِعُوْكُمْ ؕ— سَوَآءٌ عَلَیْكُمْ اَدَعَوْتُمُوْهُمْ اَمْ اَنْتُمْ صَامِتُوْنَ ۟

ನೀವು ಅವರನ್ನು ಸನ್ಮಾರ್ಗದೆಡೆಗೆ ಕರೆದರೂ ಅವರು ನಿಮ್ಮನ್ನು ಅನುಸರಿಸಲಾರರು. ಅಥವಾ ಮೌನವಹಿಸಿದರೂ ನಿಮ್ಮ ಮಟ್ಟಿಗೆ ಅವರೆಡೂ ಸಮಾನವಾಗಿವೆ. info
التفاسير:

external-link copy
194 : 7

اِنَّ الَّذِیْنَ تَدْعُوْنَ مِنْ دُوْنِ اللّٰهِ عِبَادٌ اَمْثَالُكُمْ فَادْعُوْهُمْ فَلْیَسْتَجِیْبُوْا لَكُمْ اِنْ كُنْتُمْ صٰدِقِیْنَ ۟

ಖಂಡಿತವಾಗಿಯು ಅಲ್ಲಾಹನ ಹೊರತು ನೀವು ಯಾರನ್ನು ಕರೆದು ಪ್ರಾರ್ಥಿಸುತ್ತಿರುವಿರೋ ಅವರು ನಿಮ್ಮಂತೆಯೇ ಇರುವ ದಾಸರಾಗಿದ್ದಾರೆ. ಇನ್ನು ನೀವು ಅವರನ್ನು ಕರೆದು ಪ್ರಾರ್ಥಿಸಿರಿ. ನೀವು ಸತ್ಯಸಂಧರಾಗಿದ್ದರೆ ಅವರು ನಿಮ್ಮ ಕರೆಗೆ ಉತ್ತರ ಕೊಡಲಿ. info
التفاسير:

external-link copy
195 : 7

اَلَهُمْ اَرْجُلٌ یَّمْشُوْنَ بِهَاۤ ؗ— اَمْ لَهُمْ اَیْدٍ یَّبْطِشُوْنَ بِهَاۤ ؗ— اَمْ لَهُمْ اَعْیُنٌ یُّبْصِرُوْنَ بِهَاۤ ؗ— اَمْ لَهُمْ اٰذَانٌ یَّسْمَعُوْنَ بِهَا ؕ— قُلِ ادْعُوْا شُرَكَآءَكُمْ ثُمَّ كِیْدُوْنِ فَلَا تُنْظِرُوْنِ ۟

ಅವರಿಗೆ ನಡೆದಾಡಲು ಕಾಲುಗಳಿವೆಯೇ? ಅವರಿಗೆ ಹಿಡಿದುಕೊಳ್ಳಲು ಕೈಗಳಿವೆಯೇ? ಅವರಿಗೆ ನೋಡಲು ಕಣ್ಣುಗಳಿವೆಯೇ? ಅವರಿಗೆ ಆಲಿಸಲು ಕಿವಿಗಳಿವೆಯೇ? ಹೇಳಿರಿ: ನೀವು ನಿಮ್ಮ ಎಲ್ಲಾ ಉಪದೇವತೆಗಳನ್ನು ಕರೆದುಕೊಳ್ಳಿರಿ. ಅನಂತರ ನನ್ನ ವಿರುದ್ಧ ತಂತ್ರಗಳನ್ನು ಹೂಡಿರಿ. ಬಳಿಕ ನನಗೆ ಯಾವುದೇ ಕಾಲಾವಕಾಶವನ್ನು ನೀಡಬೇಡಿರಿ. info
التفاسير: