Ibisobanuro bya qoran ntagatifu - Ibisobanuro bya Quran Ntagatifu mu rurimi rw'igikanada - Bashir Misuri

numero y'urupapuro:close

external-link copy
21 : 41

وَقَالُوْا لِجُلُوْدِهِمْ لِمَ شَهِدْتُّمْ عَلَیْنَا ؕ— قَالُوْۤا اَنْطَقَنَا اللّٰهُ الَّذِیْۤ اَنْطَقَ كُلَّ شَیْءٍ وَّهُوَ خَلَقَكُمْ اَوَّلَ مَرَّةٍ وَّاِلَیْهِ تُرْجَعُوْنَ ۟

ಅವರು ತಮ್ಮ ಚರ್ಮಗಳೊಡನೆ ಹೀಗೆ ಕೇಳುವರು ನೀವೇಕೆ ನಮ್ಮ ವಿರುದ್ಧ ಸಾಕ್ಷಿ ನೀಡಿದಿರಿ? ಆಗ ಅವು ಪ್ರತಿಯೊಂದು ವಸ್ತುವಿಗೂ ಮಾತನಾಡುವ ಶಕ್ತಿಯನ್ನು ನೀಡಿದ ಅಲ್ಲಾಹನೇ ನಮಗೂ ಮಾತನಾಡುವ ಶಕ್ತಿಯನ್ನು ನೀಡಿದ್ದಾನೆ ಎಂದು ಹೇಳುವರು. ಅವನೇ ನಿಮ್ಮನ್ನು ಮೊದಲ ಬಾರಿಗೆ ಸೃಷ್ಟಿಸಿದ್ದಾನೆ ಮತ್ತು ಅವನೆಡೆಗೇ ನೀವು ಮರಳಿಸಲಾಗುವಿರಿ. info
التفاسير:

external-link copy
22 : 41

وَمَا كُنْتُمْ تَسْتَتِرُوْنَ اَنْ یَّشْهَدَ عَلَیْكُمْ سَمْعُكُمْ وَلَاۤ اَبْصَارُكُمْ وَلَا جُلُوْدُكُمْ وَلٰكِنْ ظَنَنْتُمْ اَنَّ اللّٰهَ لَا یَعْلَمُ كَثِیْرًا مِّمَّا تَعْمَلُوْنَ ۟

ನೀವು ಅಪರಾಧಗಳನ್ನೆಸಗುತ್ತಿದ್ದಾಗ ನಿಮ್ಮ ಕಿವಿಗಳು, ಕಣ್ಣುಗಳು, ಚರ್ಮಗಳು ನಿಮ್ಮ ವಿರುದ್ಧ ಸಾಕ್ಷಿ ಹೇಳಬಲ್ಲವು ಎಂಬ ಯೋಚನೆಯಿಂದ ನೀವು ಅಡಗಿಕೊಳ್ಳುತ್ತಿರಲಿಲ್ಲ. ನೀವಂತು ನಿಮ್ಮ ಹಲವು ಕರ್ಮಗಳ ಕುರಿತು ಅಲ್ಲಾಹನಿಗೇ ತಿಳಿದಿಲ್ಲವೆಂದು ಭಾವಿಸಿಕೊಂಡಿದ್ದಿರಿ. info
التفاسير:

external-link copy
23 : 41

وَذٰلِكُمْ ظَنُّكُمُ الَّذِیْ ظَنَنْتُمْ بِرَبِّكُمْ اَرْدٰىكُمْ فَاَصْبَحْتُمْ مِّنَ الْخٰسِرِیْنَ ۟

ನೀವು ನಿಮ್ಮ ಪ್ರಭುವಿನ ಬಗ್ಗೆ ಇರಿಸಿಕೊಂಡಿದ್ದ ಭಾವನೆಯೇ ನಿಮ್ಮನ್ನು ನಾಶಕ್ಕೊಳಪಡಿಸಿದೆ. ಮತ್ತು ನೀವು ನಷ್ಟಹೊಂದಿದವರಲ್ಲಾಗಿಬಿಟ್ಟಿರಿ. info
التفاسير:

external-link copy
24 : 41

فَاِنْ یَّصْبِرُوْا فَالنَّارُ مَثْوًی لَّهُمْ ؕ— وَاِنْ یَّسْتَعْتِبُوْا فَمَا هُمْ مِّنَ الْمُعْتَبِیْنَ ۟

ಇನ್ನು ಅವರು ಸಹನೆವಹಿಸಿದರೂ ನರಕವೇ ಅವರ ವಾಸಸ್ಥಳವಾಗಿದೆ. ಮತ್ತು ಅವರು ಪಶ್ಚಾತ್ತಾಪ ಪಟ್ಟರೂ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಲಾಗದು. info
التفاسير:

external-link copy
25 : 41

وَقَیَّضْنَا لَهُمْ قُرَنَآءَ فَزَیَّنُوْا لَهُمْ مَّا بَیْنَ اَیْدِیْهِمْ وَمَا خَلْفَهُمْ وَحَقَّ عَلَیْهِمُ الْقَوْلُ فِیْۤ اُمَمٍ قَدْ خَلَتْ مِنْ قَبْلِهِمْ مِّنَ الْجِنِّ وَالْاِنْسِ ۚ— اِنَّهُمْ كَانُوْا خٰسِرِیْنَ ۟۠

ನಾವು ಅವರಿಗೆ ಕೆಲವು ಸಂಗಡಿಗರನ್ನು ನಿಯೋಜಿಸಿದ್ದೆವು. ಅವರು ಅವರ ಮುಂದೆ ಮತ್ತು ಹಿಂದೆ ಇರುವ ಕರ್ಮಗಳನ್ನು ಅವರ ದೃಷ್ಟಿಯಲ್ಲಿ ಮನಮೋಹಕವಾಗಿ ತೋರಿಸಿದರು. ಮತ್ತು ಅವರಿಗಿಂತ ಮೊದಲು ಗತಿಸಿದ ಯಕ್ಷ ಹಾಗೂ ಮನುಷ್ಯರಲ್ಲಿನ ಸಮುದಾಯಗಳ ಮೇಲೆ ಸಾಬೀತಾದ ಶಿಕ್ಷೆಯ ತೀರ್ಮಾನವೇ ಅವರ ಮೇಲೂ ಸಾಬೀತುಗೊಂಡಿತು ನಿಶ್ಚಯವಾಗಿಯು ಅವರು ನಷ್ಟಹೊಂದಿದವರಾಗಿದ್ದರು. info
التفاسير:

external-link copy
26 : 41

وَقَالَ الَّذِیْنَ كَفَرُوْا لَا تَسْمَعُوْا لِهٰذَا الْقُرْاٰنِ وَالْغَوْا فِیْهِ لَعَلَّكُمْ تَغْلِبُوْنَ ۟

ಸತ್ಯನಿಷೇಧಿಗಳು ಹೇಳಿದರು: ನೀವು ಈ ಕುರ್‌ಆನನ್ನು ಕೇಳಬೇಡಿರಿ. ಅದರಲ್ಲಿ (ಪಠಣದ ವೇಳೆಯಲ್ಲಿ) ಗುಲ್ಲೆಬ್ಬಿಸಿರಿ. ನೀವು ಮೇಲುಗೈ ಸಾಧಿಸಬಹುದು. info
التفاسير:

external-link copy
27 : 41

فَلَنُذِیْقَنَّ الَّذِیْنَ كَفَرُوْا عَذَابًا شَدِیْدًا وَّلَنَجْزِیَنَّهُمْ اَسْوَاَ الَّذِیْ كَانُوْا یَعْمَلُوْنَ ۟

ನಿಶ್ಚಯವಾಗಿಯು ಆ ಸತ್ಯನಿಷೇಧಿಗಳಿಗೆ ನಾವು ಯಾತನೆಯ ಸವಿಯನ್ನು ಉಣಿಸುವೆವು. ಮತ್ತು ಅವರು ಮಾಡುತ್ತಿದ್ದಂತಹ ದುಪ್ಕರ್ಮಗಳ ಪ್ರತಿಫಲವನ್ನು ಅವರಿಗೆ ಖಂಡಿತ ನೀಡುವೆವು. info
التفاسير:

external-link copy
28 : 41

ذٰلِكَ جَزَآءُ اَعْدَآءِ اللّٰهِ النَّارُ ۚ— لَهُمْ فِیْهَا دَارُ الْخُلْدِ ؕ— جَزَآءً بِمَا كَانُوْا بِاٰیٰتِنَا یَجْحَدُوْنَ ۟

ಅದು ಅಲ್ಲಾಹನ ಶತ್ರುಗಳಿಗೆ ಪ್ರತಿಫಲವಾಗಿ ಸಿಗಲಿರುವ ಶಿಕ್ಷೆಯೇ ಈ ನರಕಾಗ್ನಿಯಾಗಿದೆ. ಅದರಲ್ಲೇ ಅವರಿಗೆ ಶಾಶ್ವತ ನೆಲೆ ಇದೆ. (ಇದು) ನಮ್ಮ ದೃಷ್ಟಾಂತಗಳನ್ನು ನಿಷೇಧಿಸುತ್ತಿದ್ದುದರ ಪ್ರತಿಫಲವಾಗಿದೆ. info
التفاسير:

external-link copy
29 : 41

وَقَالَ الَّذِیْنَ كَفَرُوْا رَبَّنَاۤ اَرِنَا الَّذَیْنِ اَضَلّٰنَا مِنَ الْجِنِّ وَالْاِنْسِ نَجْعَلْهُمَا تَحْتَ اَقْدَامِنَا لِیَكُوْنَا مِنَ الْاَسْفَلِیْنَ ۟

ಸತ್ಯಷೇಧಿಗಳು ಹೇಳುವರು: ನಮ್ಮ ಪ್ರಭು, ಯಕ್ಷ ಮತ್ತು ಮನುಷ್ಯರ ಪೈಕಿ ನಮ್ಮನ್ನು ದಾರಿಗೆಡಿಸಿದ ಆ ಎರಡೂ ತಂಡಗಳನ್ನು ನಮಗೊಮ್ಮೆ ತೋರಿಸಿ ಕೊಡು. ಅವರು ತೀವ್ರ ಅಪಮಾನಿತರಾಗಲು ನಾವು ಅವರನ್ನು ನಮ್ಮ ಪಾದದಡಿಯಲ್ಲಿ ಹಾಕಿ ತುಳಿಯುವೆವು. info
التفاسير: