Tradução dos significados do Nobre Qur’an. - Tradução canarim - Hamza Bator

external-link copy
14 : 64

یٰۤاَیُّهَا الَّذِیْنَ اٰمَنُوْۤا اِنَّ مِنْ اَزْوَاجِكُمْ وَاَوْلَادِكُمْ عَدُوًّا لَّكُمْ فَاحْذَرُوْهُمْ ۚ— وَاِنْ تَعْفُوْا وَتَصْفَحُوْا وَتَغْفِرُوْا فَاِنَّ اللّٰهَ غَفُوْرٌ رَّحِیْمٌ ۟

ಓ ಸತ್ಯವಿಶ್ವಾಸಿಗಳೇ! ನಿಶ್ಚಯವಾಗಿಯೂ ನಿಮ್ಮ ಪತ್ನಿಯರಲ್ಲಿ ಮತ್ತು ನಿಮ್ಮ ಮಕ್ಕಳಲ್ಲಿ ನಿಮಗೆ ವೈರಿಗಳಿದ್ದಾರೆ. ಆದ್ದರಿಂದ ಅವರ ಬಗ್ಗೆ ಜಾಗರೂಕರಾಗಿರಿ. ನೀವು ಮನ್ನಿಸುವುದಾದರೆ, (ಅವರ ತಪ್ಪುಗಳನ್ನು) ನಿರ್ಲಕ್ಷಿಸುವುದಾದರೆ ಮತ್ತು ಅವರಿಗೆ ಕ್ಷಮಿಸುವುದಾದರೆ ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.[1] info

[1] ಮಕ್ಕಾದಲ್ಲಿ ಇಸ್ಲಾಂ ಸ್ವೀಕರಿಸಿದವರು ಮದೀನಕ್ಕೆ ಹಿಜ್ರ (ವಲಸೆ) ಮಾಡಬೇಕೆಂಬ ಆಜ್ಞೆಯು ಪ್ರಬಲವಾಗಿದ್ದ ಕಾಲದಲ್ಲಿ ಮಕ್ಕಾದಲ್ಲಿ ಕೆಲವರು ಇಸ್ಲಾಂ ಸ್ವೀಕರಿಸಿದರು. ಆದರೆ ಅವರ ಪತ್ನಿಯರು ಮತ್ತು ಮಕ್ಕಳು ಅವರನ್ನು ಮದೀನಕ್ಕೆ ವಲಸೆ ಹೋಗದಂತೆ ತಡೆದರು. ನಂತರ ಕೆಲವು ವರ್ಷಗಳ ಬಳಿಕ ಅವರು ಮದೀನಕ್ಕೆ ಬಂದಾಗ ಅಲ್ಲಿ ಇತರ ಮುಸಲ್ಮಾನರು ಬಹಳಷ್ಟು ಧಾರ್ಮಿಕ ವಿಚಾರಗಳನ್ನು ಕಲಿತುಕೊಂಡು ಅಪಾರ ಪುಣ್ಯ ಸಂಪಾದಿಸಿದ್ದನ್ನು ಕಂಡು ಇವರಿಗೆ ಮರುಕವಾಯಿತು. ತಮ್ಮನ್ನು ಮದೀನಕ್ಕೆ ಹಿಜ್ರ ಮಾಡದಂತೆ ತಡೆದ ಪತ್ನಿಯರು ಮತ್ತು ಮಕ್ಕಳನ್ನು ಶಿಕ್ಷಿಸಲು ಅವರು ಮುಂದಾದರು. ಆಗ ಅಲ್ಲಾಹು ಈ ವಚನವನ್ನು ಅವತೀರ್ಣಗೊಳಿಸಿದನು. ಅವರು ಮಾಡಿದ ತಪ್ಪನ್ನು ಕ್ಷಮಿಸಲು ಮತ್ತು ನಿರ್ಲಕ್ಷಿಸಲು ಅಲ್ಲಾಹು ಆಜ್ಞಾಪಿಸಿದನು.

التفاسير: