Tradução dos significados do Nobre Qur’an. - Tradução canarim - Hamza Bator

Número de página:close

external-link copy
77 : 56

اِنَّهٗ لَقُرْاٰنٌ كَرِیْمٌ ۟ۙ

ನಿಶ್ಚಯವಾಗಿಯೂ ಈ ಕುರ್‌ಆನ್ ಅತ್ಯಂತ ಆದರಣೀಯವಾಗಿದೆ. info
التفاسير:

external-link copy
78 : 56

فِیْ كِتٰبٍ مَّكْنُوْنٍ ۟ۙ

ಅದು ಭದ್ರವಾದ ಒಂದು ಗ್ರಂಥದಲ್ಲಿದೆ. info
التفاسير:

external-link copy
79 : 56

لَّا یَمَسُّهٗۤ اِلَّا الْمُطَهَّرُوْنَ ۟ؕ

ಅದನ್ನು ಪರಿಶುದ್ಧ ಜನರು (ದೇವದೂತರುಗಳು) ಮಾತ್ರ ಸ್ಪರ್ಶಿಸುತ್ತಾರೆ.[1] info

[1] ಅಂದರೆ ಲೌಹುಲ್ ಮಹ್ಫೂಝ್ (ಸುರಕ್ಷಿತ ಫಲಕ) ನಲ್ಲಿರುವ ಪವಿತ್ರ ಕುರ್‌ಆನನ್ನು ದೇವದೂತರುಗಳು ಮಾತ್ರ ಸ್ಪರ್ಶಿಸುತ್ತಾರೆ. ಕುರ್‌ಆನನ್ನು ಆಕಾಶಲೋಕದಿಂದ ಶೈತಾನರು ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಿಗೆ ತಂದು ಕೊಡುತ್ತಿದ್ದಾರೆಂದು ಸತ್ಯನಿಷೇಧಿಗಳು ಅಪಪ್ರಚಾರ ಮಾಡುತ್ತಿದ್ದರು. ಇದಕ್ಕೆ ಉತ್ತರವಾಗಿ ಈ ವಚನವು ಅವತೀರ್ಣವಾಯಿತು. ಶೈತಾನರಿಗೆ ಕುರ್‌ಆನನ್ನು ತರಲು ಸಾಧ್ಯವಿಲ್ಲ. ಏಕೆಂದರೆ ಅದು ಅತ್ಯಂತ ಭದ್ರತೆಯಲ್ಲಿದೆ. ದೇವದೂತರುಗಳ ಹೊರತು ಬೇರೆ ಯಾರಿಗೂ ಅದನ್ನು ಸ್ಪರ್ಶಿಸುವ ಅಧಿಕಾರವಿಲ್ಲ.

التفاسير:

external-link copy
80 : 56

تَنْزِیْلٌ مِّنْ رَّبِّ الْعٰلَمِیْنَ ۟

ಅದು ಸರ್ವಲೋಕಗಳ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾಗಿದೆ. info
التفاسير:

external-link copy
81 : 56

اَفَبِهٰذَا الْحَدِیْثِ اَنْتُمْ مُّدْهِنُوْنَ ۟ۙ

ಹಾಗಾದರೆ ಈ ಮಾತುಗಳನ್ನು (ಕುರ್‌ಆನನ್ನು) ನೀವು ಅನಪೇಕ್ಷಿತವಾಗಿ ಸ್ವೀಕರಿಸುತ್ತೀರಾ? info
التفاسير:

external-link copy
82 : 56

وَتَجْعَلُوْنَ رِزْقَكُمْ اَنَّكُمْ تُكَذِّبُوْنَ ۟

ಸತ್ಯವನ್ನು ನಿಷೇಧಿಸುವುದನ್ನೇ ನಿಮ್ಮ (ಪರಿಪಾಲಕನು ಒದಗಿಸಿದ) ಉಪಜೀವನಕ್ಕೆ (ಕೃತಜ್ಞತೆಯಾಗಿ) ಮಾಡಿಕೊಳ್ಳುತ್ತೀರಾ? info
التفاسير:

external-link copy
83 : 56

فَلَوْلَاۤ اِذَا بَلَغَتِ الْحُلْقُوْمَ ۟ۙ

ಆದರೆ ಪ್ರಾಣವು ಗಂಟಲಿಗೆ ತಲುಪುವಾಗ, info
التفاسير:

external-link copy
84 : 56

وَاَنْتُمْ حِیْنَىِٕذٍ تَنْظُرُوْنَ ۟ۙ

ಆ ವೇಳೆಯಲ್ಲಿ ನೀವು ನೋಡುತ್ತಲೇ ಇರುವಿರಿ. info
التفاسير:

external-link copy
85 : 56

وَنَحْنُ اَقْرَبُ اِلَیْهِ مِنْكُمْ وَلٰكِنْ لَّا تُبْصِرُوْنَ ۟

ನಾವು ಆ ವ್ಯಕ್ತಿಗೆ ನಿಮಗಿಂತಲೂ ಹೆಚ್ಚು ಹತ್ತಿರದಲ್ಲಿದ್ದೇವೆ. ಆದರೆ ನಿಮಗೆ ನೋಡಲು ಸಾಧ್ಯವಾಗುವುದಿಲ್ಲ. info
التفاسير:

external-link copy
86 : 56

فَلَوْلَاۤ اِنْ كُنْتُمْ غَیْرَ مَدِیْنِیْنَ ۟ۙ

ನೀವು ಇನ್ನೊಬ್ಬರ (ಅಲ್ಲಾಹನ) ಆಜ್ಞೆಗೆ ವಿಧೇಯರಲ್ಲದಿದ್ದರೆ, info
التفاسير:

external-link copy
87 : 56

تَرْجِعُوْنَهَاۤ اِنْ كُنْتُمْ صٰدِقِیْنَ ۟

ಆ ಪ್ರಾಣವನ್ನು ಮರಳಿ ಪಡೆಯಬಾರದೇಕೆ? ನೀವು ಸತ್ಯವನ್ನೇ ಹೇಳುತ್ತಿದ್ದರೆ. info
التفاسير:

external-link copy
88 : 56

فَاَمَّاۤ اِنْ كَانَ مِنَ الْمُقَرَّبِیْنَ ۟ۙ

ಅವನು (ಮೃತನು) ಅಲ್ಲಾಹನ ಸಾಮೀಪ್ಯ ಪಡೆದವರಲ್ಲಿ ಸೇರಿದ್ದರೆ, info
التفاسير:

external-link copy
89 : 56

فَرَوْحٌ وَّرَیْحَانٌ ۙ۬— وَّجَنَّتُ نَعِیْمٍ ۟

ಅವನಿಗೆ ನೆಮ್ಮದಿ, ವಿಶಿಷ್ಟ ಆಹಾರ ಮತ್ತು ಅನುಗ್ರಹಪೂರ್ಣ ಸ್ವರ್ಗವಿದೆ. info
التفاسير:

external-link copy
90 : 56

وَاَمَّاۤ اِنْ كَانَ مِنْ اَصْحٰبِ الْیَمِیْنِ ۟ۙ

ಅವನು ಬಲಭಾಗದ ಜನರಲ್ಲಿ ಸೇರಿದವನಾಗಿದ್ದರೆ, info
التفاسير:

external-link copy
91 : 56

فَسَلٰمٌ لَّكَ مِنْ اَصْحٰبِ الْیَمِیْنِ ۟

(ಅವನೊಡನೆ ಹೇಳಲಾಗುವುದು): “ನೀನು ಬಲಭಾಗದ ಜನರಲ್ಲಿ ಸೇರಿದ್ದರಿಂದ ನಿನಗೆ ಸುರಕ್ಷೆಯಿದೆ.” info
التفاسير:

external-link copy
92 : 56

وَاَمَّاۤ اِنْ كَانَ مِنَ الْمُكَذِّبِیْنَ الضَّآلِّیْنَ ۟ۙ

ಆದರೆ ಅವನು ಸತ್ಯನಿಷೇಧಿಗಳಲ್ಲಿ ಮತ್ತು ದುರ್ಮಾರ್ಗಿಗಳಲ್ಲಿ ಸೇರಿದವನಾಗಿದ್ದರೆ, info
التفاسير:

external-link copy
93 : 56

فَنُزُلٌ مِّنْ حَمِیْمٍ ۟ۙ

ಅವನಿಗೆ ಕುದಿಯುವ ನೀರಿನ ಸತ್ಕಾರವಿದೆ. info
التفاسير:

external-link copy
94 : 56

وَّتَصْلِیَةُ جَحِیْمٍ ۟

ನರಕಾಗ್ನಿಗೆ ಪ್ರವೇಶವಿದೆ. info
التفاسير:

external-link copy
95 : 56

اِنَّ هٰذَا لَهُوَ حَقُّ الْیَقِیْنِ ۟ۚ

ನಿಶ್ಚಯವಾಗಿಯೂ ಇದು ಖಚಿತವಾದ ಸತ್ಯವಾಗಿದೆ. info
التفاسير:

external-link copy
96 : 56

فَسَبِّحْ بِاسْمِ رَبِّكَ الْعَظِیْمِ ۟۠

ಆದ್ದರಿಂದ ಮಹತ್ವಪೂರ್ಣನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರನ್ನು (ಅವನ ಪರಿಶುದ್ಧತೆಯನ್ನು) ಕೊಂಡಾಡಿರಿ. info
التفاسير: