Tradução dos significados do Nobre Qur’an. - Tradução canarim - Hamza Bator

Número de página:close

external-link copy
59 : 40

اِنَّ السَّاعَةَ لَاٰتِیَةٌ لَّا رَیْبَ فِیْهَا ؗ— وَلٰكِنَّ اَكْثَرَ النَّاسِ لَا یُؤْمِنُوْنَ ۟

ನಿಶ್ಚಯವಾಗಿಯೂ ಅಂತ್ಯಸಮಯವು ಬಂದೇ ಬರುತ್ತದೆ. ಅದರಲ್ಲಿ ಸಂಶಯವೇ ಇಲ್ಲ. ಆದರೆ ಜನರಲ್ಲಿ ಹೆಚ್ಚಿನವರು ವಿಶ್ವಾಸವಿಡುವುದಿಲ್ಲ. info
التفاسير:

external-link copy
60 : 40

وَقَالَ رَبُّكُمُ ادْعُوْنِیْۤ اَسْتَجِبْ لَكُمْ ؕ— اِنَّ الَّذِیْنَ یَسْتَكْبِرُوْنَ عَنْ عِبَادَتِیْ سَیَدْخُلُوْنَ جَهَنَّمَ دٰخِرِیْنَ ۟۠

ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳಿದ್ದಾನೆ: “ನೀವು ನನ್ನನ್ನು ಕರೆದು ಪ್ರಾರ್ಥಿಸಿರಿ. ನಾನು ನಿಮಗೆ ಉತ್ತರ ನೀಡುತ್ತೇನೆ. ನಿಶ್ಚಯವಾಗಿಯೂ ನನ್ನನ್ನು ಆರಾಧಿಸುವ ವಿಷಯದಲ್ಲಿ ಅಹಂಕಾರ ತೋರುವವರು ಯಾರೋ ಅವರು ಸದ್ಯವೇ ಅವಮಾನಿತರಾಗಿ ನರಕವನ್ನು ಪ್ರವೇಶಿಸುವರು.”[1] info

[1] ಪ್ರಾರ್ಥನೆ ಆರಾಧನೆಯಾಗಿದೆ ಮತ್ತು ಅದು ಅಲ್ಲಾಹನಿಗೆ ಮಾತ್ರ ಸಲ್ಲತಕ್ಕದ್ದೆಂದು ಈ ವಚನವು ತಿಳಿಸುತ್ತದೆ.

التفاسير:

external-link copy
61 : 40

اَللّٰهُ الَّذِیْ جَعَلَ لَكُمُ الَّیْلَ لِتَسْكُنُوْا فِیْهِ وَالنَّهَارَ مُبْصِرًا ؕ— اِنَّ اللّٰهَ لَذُوْ فَضْلٍ عَلَی النَّاسِ وَلٰكِنَّ اَكْثَرَ النَّاسِ لَا یَشْكُرُوْنَ ۟

ಅಲ್ಲಾಹು ನಿಮಗೆ ರಾತ್ರಿಯನ್ನು ವಿಶ್ರಾಂತಿ ಪಡೆಯಲು ಮತ್ತು ಹಗಲನ್ನು ಪ್ರಕಾಶಮಾನವಾಗಿ ಮಾಡಿಕೊಟ್ಟನು. ನಿಶ್ಚಯವಾಗಿಯೂ ಅಲ್ಲಾಹನಿಗೆ ಜನರೊಡನೆ ಅತ್ಯಂತ ಔದಾರ್ಯವಿದೆ. ಆದರೆ ಜನರಲ್ಲಿ ಹೆಚ್ಚಿನವರು ಕೃತಜ್ಞರಾಗುವುದಿಲ್ಲ. info
التفاسير:

external-link copy
62 : 40

ذٰلِكُمُ اللّٰهُ رَبُّكُمْ خَالِقُ كُلِّ شَیْءٍ ۘ— لَاۤ اِلٰهَ اِلَّا هُوَ ؗ— فَاَنّٰی تُؤْفَكُوْنَ ۟

ಅವನೇ ನಿಮ್ಮ ಪರಿಪಾಲಕನಾದ ಅಲ್ಲಾಹು. ಅವನು ಎಲ್ಲಾ ವಸ್ತುಗಳ ಸೃಷ್ಟಿಕರ್ತನು. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಆದರೂ ನೀವು (ಸನ್ಮಾರ್ಗದಿಂದ) ತಪ್ಪಿಸಲ್ಪಡುವುದು ಹೇಗೆ? info
التفاسير:

external-link copy
63 : 40

كَذٰلِكَ یُؤْفَكُ الَّذِیْنَ كَانُوْا بِاٰیٰتِ اللّٰهِ یَجْحَدُوْنَ ۟

ಈ ರೀತಿ ಅಲ್ಲಾಹನ ವಚನಗಳನ್ನು ನಿಷೇಧಿಸಿದವರು (ಸನ್ಮಾರ್ಗದಿಂದ) ತಪ್ಪಿ ಹೋಗುತ್ತಿದ್ದಾರೆ. info
التفاسير:

external-link copy
64 : 40

اَللّٰهُ الَّذِیْ جَعَلَ لَكُمُ الْاَرْضَ قَرَارًا وَّالسَّمَآءَ بِنَآءً وَّصَوَّرَكُمْ فَاَحْسَنَ صُوَرَكُمْ وَرَزَقَكُمْ مِّنَ الطَّیِّبٰتِ ؕ— ذٰلِكُمُ اللّٰهُ رَبُّكُمْ ۖۚ— فَتَبٰرَكَ اللّٰهُ رَبُّ الْعٰلَمِیْنَ ۟

ಅಲ್ಲಾಹು ನಿಮಗೋಸ್ಕರ ಭೂಮಿಯನ್ನು ವಾಸಸ್ಥಳವನ್ನಾಗಿ ಮತ್ತು ಆಕಾಶವನ್ನು ಮೇಲ್ಛಾವಣಿಯನ್ನಾಗಿ ಮಾಡಿಕೊಟ್ಟನು. ಅವನು ನಿಮಗೆ ರೂಪವನ್ನು ನೀಡಿದನು. ನಂತರ ನಿಮ್ಮ ರೂಪಗಳನ್ನು ಉತ್ತಮಗೊಳಿಸಿದನು. ಅವನು ನಿಮಗೆ ಉಪಜೀವನವಾಗಿ ಅತ್ಯುತ್ತಮ ವಸ್ತುಗಳನ್ನು ಒದಗಿಸಿದನು. ಅವನೇ ನಿಮ್ಮ ಪರಿಪಾಲಕವಾದ ಅಲ್ಲಾಹು. ಆದ್ದರಿಂದ ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಸಮೃದ್ಧಪೂರ್ಣನಾಗಿದ್ದಾನೆ. info
التفاسير:

external-link copy
65 : 40

هُوَ الْحَیُّ لَاۤ اِلٰهَ اِلَّا هُوَ فَادْعُوْهُ مُخْلِصِیْنَ لَهُ الدِّیْنَ ؕ— اَلْحَمْدُ لِلّٰهِ رَبِّ الْعٰلَمِیْنَ ۟

ಅವನು ಜೀವಂತವಿರುವವನು. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಆದ್ದರಿಂದ ನಿಷ್ಕಂಳಕವಾಗಿ ಅವನನ್ನು ಆರಾಧಿಸುತ್ತಾ ಅವನನ್ನು ಕರೆದು ಪ್ರಾರ್ಥಿಸಿರಿ. ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ. info
التفاسير:

external-link copy
66 : 40

قُلْ اِنِّیْ نُهِیْتُ اَنْ اَعْبُدَ الَّذِیْنَ تَدْعُوْنَ مِنْ دُوْنِ اللّٰهِ لَمَّا جَآءَنِیَ الْبَیِّنٰتُ مِنْ رَّبِّیْ ؗ— وَاُمِرْتُ اَنْ اُسْلِمَ لِرَبِّ الْعٰلَمِیْنَ ۟

ಹೇಳಿರಿ: “ನನ್ನ ಪರಿಪಾಲಕನ (ಅಲ್ಲಾಹನ) ಕಡೆಯಿಂದ ನನಗೆ ಸಾಕ್ಷ್ಯಾಧಾರಗಳು ತಲುಪಿರುವುದರಿಂದ, ಅಲ್ಲಾಹನನ್ನು ಬಿಟ್ಟು ನೀವು ಕರೆದು ಪ್ರಾರ್ಥಿಸುತ್ತಿರುವ ದೇವರುಗಳನ್ನು ಆರಾಧಿಸಬಾರದೆಂದು ನನಗೆ ವಿರೋಧಿಸಲಾಗಿದೆ. ಸರ್ವಲೋಕಗಳ ಪರಿಪಾಲಕನಿಗೆ (ಅಲ್ಲಾಹನಿಗೆ) ಶರಣಾಗಬೇಕೆಂದು ನನಗೆ ಆಜ್ಞಾಪಿಸಲಾಗಿದೆ.” info
التفاسير: