Tradução dos significados do Nobre Qur’an. - Tradução canarim - Hamza Bator

Número de página:close

external-link copy
41 : 39

اِنَّاۤ اَنْزَلْنَا عَلَیْكَ الْكِتٰبَ لِلنَّاسِ بِالْحَقِّ ۚ— فَمَنِ اهْتَدٰی فَلِنَفْسِهٖ ۚ— وَمَنْ ضَلَّ فَاِنَّمَا یَضِلُّ عَلَیْهَا ۚ— وَمَاۤ اَنْتَ عَلَیْهِمْ بِوَكِیْلٍ ۟۠

ನಿಶ್ಚಯವಾಗಿಯೂ ನಾವು ಮನುಷ್ಯರಿಗೋಸ್ಕರ ಈ ಗ್ರಂಥವನ್ನು ನಿಮಗೆ ಸತ್ಯದೊಂದಿಗೆ ಅವತೀರ್ಣಗೊಳಿಸಿದ್ದೇವೆ. ಆದ್ದರಿಂದ ಯಾರಾದರೂ ಸನ್ಮಾರ್ಗವನ್ನು ಸ್ವೀಕರಿಸಿದರೆ ಅವನು ಅವನ ಒಳಿತಿಗಾಗಿಯೇ ಅದನ್ನು ಸ್ವೀಕರಿಸುತ್ತಾನೆ. ಯಾರಾದರೂ ದುರ್ಮಾರ್ಗವನ್ನು ಆರಿಸಿದರೆ ಅವನು ಅವನ ಕೆಡುಕಿಗಾಗಿಯೇ ಅದನ್ನು ಆರಿಸುತ್ತಾನೆ. ನಿಮಗೆ ಅವರ ಮೇಲೆ ಯಾವುದೇ ಅಧಿಕಾರವಿಲ್ಲ. info
التفاسير:

external-link copy
42 : 39

اَللّٰهُ یَتَوَفَّی الْاَنْفُسَ حِیْنَ مَوْتِهَا وَالَّتِیْ لَمْ تَمُتْ فِیْ مَنَامِهَا ۚ— فَیُمْسِكُ الَّتِیْ قَضٰی عَلَیْهَا الْمَوْتَ وَیُرْسِلُ الْاُخْرٰۤی اِلٰۤی اَجَلٍ مُّسَمًّی ؕ— اِنَّ فِیْ ذٰلِكَ لَاٰیٰتٍ لِّقَوْمٍ یَّتَفَكَّرُوْنَ ۟

ಅಲ್ಲಾಹು ಆತ್ಮಗಳನ್ನು ಅವು ಮರಣಹೊಂದುವ ಸಮಯದಲ್ಲಿ ಮತ್ತು ಮರಣವು ವಿಧಿಸಲ್ಪಡದ ಆತ್ಮಗಳನ್ನು ಅವುಗಳ ನಿದ್ದೆಯ ಸಮಯದಲ್ಲಿ ವಶಪಡಿಸುತ್ತಾನೆ. ನಂತರ ಮರಣವು ವಿಧಿಸಲಾದ ಆತ್ಮಗಳನ್ನು ಅವನು ಹಿಡಿದಿಟ್ಟುಕೊಳ್ಳುತ್ತಾನೆ ಮತ್ತು ಉಳಿದವುಗಳನ್ನು ಒಂದು ನಿಗದಿತ ಅವಧಿಯವರೆಗೆ ಬಿಟ್ಟುಬಿಡುತ್ತಾನೆ. ನಿಶ್ಚಯವಾಗಿಯೂ ಇದರಲ್ಲಿ ಆಲೋಚಿಸುವ ಜನರಿಗೆ ದೃಷ್ಟಾಂತಗಳಿವೆ. info
التفاسير:

external-link copy
43 : 39

اَمِ اتَّخَذُوْا مِنْ دُوْنِ اللّٰهِ شُفَعَآءَ ؕ— قُلْ اَوَلَوْ كَانُوْا لَا یَمْلِكُوْنَ شَیْـًٔا وَّلَا یَعْقِلُوْنَ ۟

ಅವರು ಅಲ್ಲಾಹನನ್ನು ಬಿಟ್ಟು ಇತರರನ್ನು ಶಿಫಾರಸುಗಾರರನ್ನಾಗಿ ಸ್ವೀಕರಿಸಿದ್ದಾರೆಯೇ? ಹೇಳಿರಿ: “ಅವರ (ಶಿಫಾರಸುಗಾರರ) ಅಧೀನದಲ್ಲಿ ಏನೂ ಇಲ್ಲದಿದ್ದರೂ ಮತ್ತು ಅವರು ಆಲೋಚಿಸದವರಾಗಿದ್ದರೂ ಸಹ (ನೀವು ಅವರನ್ನು ಶಿಫಾರಸುಗಾರರನ್ನಾಗಿ ಸ್ವೀಕರಿಸುವಿರಾ)?” info
التفاسير:

external-link copy
44 : 39

قُلْ لِّلّٰهِ الشَّفَاعَةُ جَمِیْعًا ؕ— لَهٗ مُلْكُ السَّمٰوٰتِ وَالْاَرْضِ ؕ— ثُمَّ اِلَیْهِ تُرْجَعُوْنَ ۟

ಹೇಳಿರಿ: “ಶಿಫಾರಸು ಸಂಪೂರ್ಣವಾಗಿ ಅಲ್ಲಾಹನ ಅಧೀನದಲ್ಲಿದೆ. ಭೂಮ್ಯಾಕಾಶಗಳ ಸಾರ್ವಭೌಮತ್ವವು ಅವನಿಗೆ ಸೇರಿದ್ದು. ನಂತರ ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.” info
التفاسير:

external-link copy
45 : 39

وَاِذَا ذُكِرَ اللّٰهُ وَحْدَهُ اشْمَاَزَّتْ قُلُوْبُ الَّذِیْنَ لَا یُؤْمِنُوْنَ بِالْاٰخِرَةِ ۚ— وَاِذَا ذُكِرَ الَّذِیْنَ مِنْ دُوْنِهٖۤ اِذَا هُمْ یَسْتَبْشِرُوْنَ ۟

ಅಲ್ಲಾಹನನ್ನು ಮಾತ್ರ ಪ್ರಸ್ತಾಪಿಸಲಾದಾಗ ಪರಲೋಕದಲ್ಲಿ ವಿಶ್ವಾಸವಿಡದವರ ಹೃದಯಗಳಲ್ಲಿ ದ್ವೇಷವುಂಟಾಗುತ್ತದೆ. ಅವನನ್ನು ಬಿಟ್ಟು ಇತರರನ್ನು ಪ್ರಸ್ತಾಪಿಸಲಾದರೆ ಅಗೋ! ಅವರು ಸಂತೋಷಪಡುತ್ತಾರೆ. info
التفاسير:

external-link copy
46 : 39

قُلِ اللّٰهُمَّ فَاطِرَ السَّمٰوٰتِ وَالْاَرْضِ عٰلِمَ الْغَیْبِ وَالشَّهَادَةِ اَنْتَ تَحْكُمُ بَیْنَ عِبَادِكَ فِیْ مَا كَانُوْا فِیْهِ یَخْتَلِفُوْنَ ۟

ಹೇಳಿರಿ: “ಓ ಭೂಮ್ಯಾಕಾಶಗಳ ಸೃಷ್ಟಿಕರ್ತನಾದ ಅಲ್ಲಾಹನೇ! ದೃಶ್ಯ-ಅದೃಶ್ಯಗಳನ್ನು ತಿಳಿದವನೇ! ನಿನ್ನ ದಾಸರು ಭಿನ್ನಮತದಲ್ಲಿರುವ ವಿಷಯಗಳ ಬಗ್ಗೆ ನೀನು ಅವರ ನಡುವೆ ತೀರ್ಪು ನೀಡುವೆ.” info
التفاسير:

external-link copy
47 : 39

وَلَوْ اَنَّ لِلَّذِیْنَ ظَلَمُوْا مَا فِی الْاَرْضِ جَمِیْعًا وَّمِثْلَهٗ مَعَهٗ لَافْتَدَوْا بِهٖ مِنْ سُوْٓءِ الْعَذَابِ یَوْمَ الْقِیٰمَةِ ؕ— وَبَدَا لَهُمْ مِّنَ اللّٰهِ مَا لَمْ یَكُوْنُوْا یَحْتَسِبُوْنَ ۟

ನಿಶ್ಚಯವಾಗಿಯೂ ಸತ್ಯನಿಷೇಧಿಗಳ ಬಳಿ ಭೂಮಿಯಲ್ಲಿರುವುದೆಲ್ಲವೂ ಮತ್ತು ಅದರಷ್ಟೇ ಬೇರೆಯೂ ಇದ್ದಿದ್ದರೆ, ಪುನರುತ್ಥಾನ ದಿನದ ಕೆಟ್ಟ ಶಿಕ್ಷೆಯಿಂದ ಪಾರಾಗಲು ಅವರು ಅವೆಲ್ಲವನ್ನೂ ಪರಿಹಾರವಾಗಿ ನೀಡುತ್ತಿದ್ದರು. ಅವರು ಭಾವಿಸಿರದಂತಹ ಅನೇಕ ವಿಷಯಗಳು ಅಲ್ಲಾಹನ ಕಡೆಯಿಂದ ಅವರಿಗೆ ಬಹಿರಂಗವಾಗುವುವು. info
التفاسير: