Tradução dos significados do Nobre Qur’an. - Tradução canarim - Hamza Bator

ಯಾಸೀನ್

external-link copy
1 : 36

یٰسٓ ۟ۚ

ಯಾಸೀನ್. info
التفاسير:

external-link copy
2 : 36

وَالْقُرْاٰنِ الْحَكِیْمِ ۟ۙ

ವಿವೇಕಪೂರ್ಣವಾದ ಕುರ್‌ಆನಿನ ಮೇಲಾಣೆ. info
التفاسير:

external-link copy
3 : 36

اِنَّكَ لَمِنَ الْمُرْسَلِیْنَ ۟ۙ

ನಿಶ್ಚಯವಾಗಿಯೂ ನೀವು ಸಂದೇಶವಾಹಕರುಗಳಲ್ಲಿ ಒಬ್ಬರಾಗಿದ್ದೀರಿ. info
التفاسير:

external-link copy
4 : 36

عَلٰی صِرَاطٍ مُّسْتَقِیْمٍ ۟ؕ

ನೀವು ನೇರ ಮಾರ್ಗದಲ್ಲಿದ್ದೀರಿ. info
التفاسير:

external-link copy
5 : 36

تَنْزِیْلَ الْعَزِیْزِ الرَّحِیْمِ ۟ۙ

ಈ ಕುರ್‌ಆನ್ ಪ್ರಬಲನು ಮತ್ತು ಕರುಣಾನಿಧಿಯಾದ ಅಲ್ಲಾಹನಿಂದ ಅವತೀರ್ಣವಾಗಿದೆ. info
التفاسير:

external-link copy
6 : 36

لِتُنْذِرَ قَوْمًا مَّاۤ اُنْذِرَ اٰبَآؤُهُمْ فَهُمْ غٰفِلُوْنَ ۟

ನೀವು ಈ ಜನರಿಗೆ ಎಚ್ಚರಿಕೆ ನೀಡಲೆಂದು. ಅವರ ಪೂರ್ವಜರಿಗೆ ಯಾರೂ ಎಚ್ಚರಿಕೆ ನೀಡಿಲ್ಲ. ಆದ್ದರಿಂದ ಅವರು ನಿರ್ಲಕ್ಷ್ಯದಲ್ಲಿದ್ದಾರೆ.[1] info

[1] ಪ್ರವಾದಿ ಇಸ್ಮಾಈಲರ (ಅವರ ಮೇಲೆ ಶಾಂತಿಯಿರಲಿ) ಬಳಿಕ ಅರೇಬಿಯನ್ ಪರ್ಯಾಯ ದ್ವೀಪಕ್ಕೆ ಬೇರೆ ಪ್ರವಾದಿಗಳು ಬಂದಿರಲಿಲ್ಲ. ಆದ್ದರಿಂದ ಅವರು ಸತ್ಯಧರ್ಮದ ಬಗ್ಗೆ ಸಂಪೂರ್ಣ ಅಜ್ಞಾನದಲ್ಲಿದ್ದರು.

التفاسير:

external-link copy
7 : 36

لَقَدْ حَقَّ الْقَوْلُ عَلٰۤی اَكْثَرِهِمْ فَهُمْ لَا یُؤْمِنُوْنَ ۟

ಅವರಲ್ಲಿ ಹೆಚ್ಚಿನವರ ಮೇಲೂ ಶಿಕ್ಷೆಯ ವಚನವು ಖಾತ್ರಿಯಾಗಿದೆ. ಆದ್ದರಿಂದ ಅವರು ವಿಶ್ವಾಸವಿಡುವುದಿಲ್ಲ. info
التفاسير:

external-link copy
8 : 36

اِنَّا جَعَلْنَا فِیْۤ اَعْنَاقِهِمْ اَغْلٰلًا فَهِیَ اِلَی الْاَذْقَانِ فَهُمْ مُّقْمَحُوْنَ ۟

ನಾವು ಅವರ ಕೊರಳುಗಳಲ್ಲಿ ಸಂಕೋಲೆಗಳನ್ನು ಹಾಕಿದ್ದೇವೆ. ಅದು ಅವರ ಗಲ್ಲಗಳ ತನಕ ಇದೆ. ಆದ್ದರಿಂದ ಅವರು ತಲೆಯೆತ್ತಿಕೊಂಡೇ ಇರುತ್ತಾರೆ. info
التفاسير:

external-link copy
9 : 36

وَجَعَلْنَا مِنْ بَیْنِ اَیْدِیْهِمْ سَدًّا وَّمِنْ خَلْفِهِمْ سَدًّا فَاَغْشَیْنٰهُمْ فَهُمْ لَا یُبْصِرُوْنَ ۟

ನಾವು ಅವರ ಮುಂಭಾಗದಲ್ಲಿ ಒಂದು ಪರದೆಯನ್ನು ಮತ್ತು ಅವರ ಹಿಂಭಾಗದಲ್ಲಿ ಒಂದು ಪರದೆಯನ್ನು ಹಾಕಿ ಅವರನ್ನು ಮುಚ್ಚಿ ಬಿಟ್ಟಿದ್ದೇವೆ. ಆದ್ದರಿಂದ ಅವರಿಗೆ ನೋಡಲು ಸಾಧ್ಯವಾಗುವುದಿಲ್ಲ. info
التفاسير:

external-link copy
10 : 36

وَسَوَآءٌ عَلَیْهِمْ ءَاَنْذَرْتَهُمْ اَمْ لَمْ تُنْذِرْهُمْ لَا یُؤْمِنُوْنَ ۟

ನೀವು ಅವರಿಗೆ ಎಚ್ಚರಿಕೆ ನೀಡಿದರೂ ಅಥವಾ ಎಚ್ಚರಿಕೆ ನೀಡದಿದ್ದರೂ ಅವರ ಮಟ್ಟಿಗೆ ಅದು ಸಮಾನವಾಗಿದೆ. ಅವರು ವಿಶ್ವಾಸವಿಡುವುದಿಲ್ಲ. info
التفاسير:

external-link copy
11 : 36

اِنَّمَا تُنْذِرُ مَنِ اتَّبَعَ الذِّكْرَ وَخَشِیَ الرَّحْمٰنَ بِالْغَیْبِ ۚ— فَبَشِّرْهُ بِمَغْفِرَةٍ وَّاَجْرٍ كَرِیْمٍ ۟

ಯಾರು ನಿಮ್ಮ ಉಪದೇಶವನ್ನು ಅನುಸರಿಸುತ್ತಾನೋ ಮತ್ತು ಪರಮ ದಯಾಳುವಾದ ಅಲ್ಲಾಹನನ್ನು ಅದೃಶ್ಯ ಸ್ಥಿತಿಯಲ್ಲಿ ಭಯಪಡುತ್ತಾನೋ ಅವನಿಗೆ ಮಾತ್ರ ನಿಮ್ಮ ಎಚ್ಚರಿಕೆ ಪ್ರಯೋಜನ ನೀಡುತ್ತದೆ. ಆದ್ದರಿಂದ ಅವನಿಗೆ ಕ್ಷಮೆ ಮತ್ತು ಉದಾರ ಪ್ರತಿಫಲದ ಸುವಾರ್ತೆಯನ್ನು ತಿಳಿಸಿ. info
التفاسير:

external-link copy
12 : 36

اِنَّا نَحْنُ نُحْیِ الْمَوْتٰی وَنَكْتُبُ مَا قَدَّمُوْا وَاٰثَارَهُمْ ؔؕ— وَكُلَّ شَیْءٍ اَحْصَیْنٰهُ فِیْۤ اِمَامٍ مُّبِیْنٍ ۟۠

ನಿಶ್ಚಯವಾಗಿಯೂ ನಾವು ಮೃತರಿಗೆ ಜೀವ ನೀಡುತ್ತೇವೆ. ಅವರು ಮುಂದಕ್ಕೆ ಕಳುಹಿಸಿದ ಕರ್ಮಗಳನ್ನು ಮತ್ತು ಅವರು ಹಿಂದೆಯೇ ಬಿಟ್ಟಿರುವ ಕರ್ಮಗಳನ್ನು ನಾವು ದಾಖಲಿಸಿಡುತ್ತೇವೆ. ನಾವು ಎಲ್ಲಾ ವಿಷಯಗಳನ್ನೂ ಒಂದು ಸ್ಪಷ್ಟ ಗ್ರಂಥದಲ್ಲಿ ದಾಖಲಿಸಿಟ್ಟಿದ್ದೇವೆ. info
التفاسير: