Tradução dos significados do Nobre Qur’an. - Tradução canarim - Hamza Bator

external-link copy
56 : 16

وَیَجْعَلُوْنَ لِمَا لَا یَعْلَمُوْنَ نَصِیْبًا مِّمَّا رَزَقْنٰهُمْ ؕ— تَاللّٰهِ لَتُسْـَٔلُنَّ عَمَّا كُنْتُمْ تَفْتَرُوْنَ ۟

ನಾವು ಅವರಿಗೆ ಒದಗಿಸಿರುವುದರಲ್ಲಿ ಒಂದಂಶವನ್ನು ಅವರು ಅವರಿಗೆ ಯಾವುದೇ ಪರಿಚಯವಿಲ್ಲದ ದೇವರುಗಳಿಗೆ ಮೀಸಲಿಡುತ್ತಾರೆ.[1] ಅಲ್ಲಾಹನಾಣೆ! ನಿಮ್ಮ ಈ ಸುಳ್ಳಾರೋಪಗಳ ಬಗ್ಗೆ ನಿಮ್ಮೊಡನೆ ಖಂಡಿತ ಪ್ರಶ್ನಿಸಲಾಗುವುದು. info

[1] ಅವರು ದೇವರುಗಳೆಂದು ಆರಾಧಿಸುತ್ತಿರುವುದು ಒಂದೋ ವಿಗ್ರಹಗಳು, ಅಥವಾ ಜಿನ್ನ್‌ಗಳು ಅಥವಾ ಪಿಶಾಚಿಗಳನ್ನಾಗಿದೆ. ಅವರ ನಿಜಸ್ಥಿತಿಯೇನೆಂದು ಆರಾಧಿಸುವವರಿಗೆ ತಿಳಿದಿಲ್ಲ. ಅದೇ ರೀತಿ ಸಮಾಧಿಯಲ್ಲಿರುವ ಮಹಾಪುರುಷರನ್ನು ಆರಾಧಿಸುವವರು ಕೂಡ. ಅವರು ನಿಜವಾಗಿಯೂ ದೇವರುಗಳೇ? ಅವರು ಪ್ರಾರ್ಥಿಸಲು ಅರ್ಹರೇ? ಪ್ರಾರ್ಥಿಸಿದರೆ ಅವರು ಉತ್ತರ ನೀಡುತ್ತಾರೆಯೇ? ಮುಂತಾದ ಯಾವುದೂ ಆರಾಧಿಸುವವರಿಗೆ ಸ್ಪಷ್ಟವಾಗಿ ತಿಳಿದಿಲ್ಲ. ಯಾವುದೇ ಸ್ಪಷ್ಟ ಆಧಾರವಿಲ್ಲದಿದ್ದರೂ ಅವರು ಅಲ್ಲಾಹನನ್ನು ಬಿಟ್ಟು ಆ ದೇವರುಗಳನ್ನು ಆರಾಧಿಸುತ್ತಾರೆ. ಅಲ್ಲಾಹು ಒದಗಿಸಿದ ಧನವನ್ನು ಆ ದೇವರುಗಳಿಗೆ ಕಾಣಿಕೆ ಹಾಕುತ್ತಾರೆ ಮತ್ತು ಅವರ ಮೇಲೆ ಹರಕೆ ಹೊರುತ್ತಾರೆ.

التفاسير: