Tradução dos significados do Nobre Qur’an. - Tradução Canarim - Bashir Mysore

Número de página:close

external-link copy
42 : 55

فَبِاَیِّ اٰلَآءِ رَبِّكُمَا تُكَذِّبٰنِ ۟

ಆಗ ನೀವು ನಿಮ್ಮ ಪ್ರಭುವಿನ ಯಾವ ಯಾವ ಶಕ್ತಿ ಸಾಮರ್ಥ್ಯಗಳನ್ನು ಸುಳ್ಳಾಗಿಸುವಿರಿ? info
التفاسير:

external-link copy
43 : 55

هٰذِهٖ جَهَنَّمُ الَّتِیْ یُكَذِّبُ بِهَا الْمُجْرِمُوْنَ ۟ۘ

ಅಪರಾಧಿಗಳು ಸುಳ್ಳಾಗಿಸುತ್ತಿದ್ದ ನರಕವು ಇದುವೇ ಆಗಿದೆ. info
التفاسير:

external-link copy
44 : 55

یَطُوْفُوْنَ بَیْنَهَا وَبَیْنَ حَمِیْمٍ اٰنٍ ۟ۚ

ಅವರು ಆ ನರಕ ಹಾಗೂ ಕುದಿಯುತ್ತಿರುವ ನೀರಿನ ನಡುವೆ ಸುತ್ತುತ್ತಿರುವರು. info
التفاسير:

external-link copy
45 : 55

فَبِاَیِّ اٰلَآءِ رَبِّكُمَا تُكَذِّبٰنِ ۟۠

ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಸಾಮರ್ಥ್ಯಗಳನ್ನು ಸುಳ್ಳಾಗಿಸುವಿರಿ? info
التفاسير:

external-link copy
46 : 55

وَلِمَنْ خَافَ مَقَامَ رَبِّهٖ جَنَّتٰنِ ۟ۚ

ತನ್ನ ಪ್ರಭುವಿನ ಮುಂದೆ ನಿಲ್ಲುವುದನ್ನು ಭಯಪಟ್ಟವನಿಗೆ ಎರಡು ಸ್ವರ್ಗೋದ್ಯಾನಗಳಿವೆ. info
التفاسير:

external-link copy
47 : 55

فَبِاَیِّ اٰلَآءِ رَبِّكُمَا تُكَذِّبٰنِ ۟ۙ

ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಪುರಸ್ಕಾರಗಳನ್ನು ಸುಳ್ಳಾಗಿಸುವಿರಿ? info
التفاسير:

external-link copy
48 : 55

ذَوَاتَاۤ اَفْنَانٍ ۟ۚ

ಆ ಎರಡೂ ಸ್ವರ್ಗೋದ್ಯಾನಗಳು ಅನೇಕ ರೆಂಬೆ ಕೊಂಬೆಗಳುಳ್ಳದ್ದಾಗಿರುವುವು. info
التفاسير:

external-link copy
49 : 55

فَبِاَیِّ اٰلَآءِ رَبِّكُمَا تُكَذِّبٰنِ ۟

ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ? info
التفاسير:

external-link copy
50 : 55

فِیْهِمَا عَیْنٰنِ تَجْرِیٰنِ ۟ۚ

ಅವೆರಡರಲ್ಲಿ ಎರಡು ಚಿಲುಮೆಗಳು ಹರಿಯುತ್ತಿರುವುವು. info
التفاسير:

external-link copy
51 : 55

فَبِاَیِّ اٰلَآءِ رَبِّكُمَا تُكَذِّبٰنِ ۟

ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ? info
التفاسير:

external-link copy
52 : 55

فِیْهِمَا مِنْ كُلِّ فَاكِهَةٍ زَوْجٰنِ ۟ۚ

ಅವೆರಡರಲ್ಲಿ ಪ್ರತಿಯೊಂದು ವಿಧದ ಹಣ್ಣುಹಂಪಲುಗಳ ಎರಡೆರಡು ವರ್ಗಗಳಿರುವವು. info
التفاسير:

external-link copy
53 : 55

فَبِاَیِّ اٰلَآءِ رَبِّكُمَا تُكَذِّبٰنِ ۟

ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ? info
التفاسير:

external-link copy
54 : 55

مُتَّكِـِٕیْنَ عَلٰی فُرُشٍ بَطَآىِٕنُهَا مِنْ اِسْتَبْرَقٍ ؕ— وَجَنَا الْجَنَّتَیْنِ دَانٍ ۟ۚ

ಸ್ವರ್ಗವಾಸಿಗಳು ದಿಂಬಿಗೊರಗಿ ಕುಳಿತಿರುವ ಹಾಸಿಗೆಗಳ ಒಳಪದರಗಳು ದಪ್ಪ ರೇಶ್ಮೆಗಳಿಂದಾಗಿರುವವು, ಮತ್ತು ಆ ಎರಡೂ ಸ್ವರ್ಗೋದ್ಯಾನಗಳ ಹಣ್ಣುಹಂಪಲುಗಳು ಬಾಗಿರುವುವು. info
التفاسير:

external-link copy
55 : 55

فَبِاَیِّ اٰلَآءِ رَبِّكُمَا تُكَذِّبٰنِ ۟

ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ? info
التفاسير:

external-link copy
56 : 55

فِیْهِنَّ قٰصِرٰتُ الطَّرْفِ ۙ— لَمْ یَطْمِثْهُنَّ اِنْسٌ قَبْلَهُمْ وَلَا جَآنٌّ ۟ۚ

ಅದರಲ್ಲಿ ದೃಷ್ಟಿ ತಗ್ಗಿಸುವವರಾದ ಅಪ್ಸರೆಗಳಿರುವರು, ಇದಕ್ಕೆ ಮೊದಲು ಅವರನ್ನು ಯಾವ ಮಾನವನಾಗಲಿ ಜಿನ್ನ್ ಆಗಲಿ ಸ್ಪರ್ಶಿಸಿರುವುದಿಲ್ಲ. info
التفاسير:

external-link copy
57 : 55

فَبِاَیِّ اٰلَآءِ رَبِّكُمَا تُكَذِّبٰنِ ۟

ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ? info
التفاسير:

external-link copy
58 : 55

كَاَنَّهُنَّ الْیَاقُوْتُ وَالْمَرْجَانُ ۟ۚ

ಆ ಅಪ್ಸರೆಗಳು ಮಾಣಿಕ್ಯ ಮತ್ತು ಹವಳಗಳಂತಿರುವರು. info
التفاسير:

external-link copy
59 : 55

فَبِاَیِّ اٰلَآءِ رَبِّكُمَا تُكَذِّبٰنِ ۟

ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ? info
التفاسير:

external-link copy
60 : 55

هَلْ جَزَآءُ الْاِحْسَانِ اِلَّا الْاِحْسَانُ ۟ۚ

ಒಳಿತಿನ ಪ್ರತಿಫಲವು ಒಳಿತಿನ ಹೊರತು ಇನ್ನೇನಿದೆ? info
التفاسير:

external-link copy
61 : 55

فَبِاَیِّ اٰلَآءِ رَبِّكُمَا تُكَذِّبٰنِ ۟

ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತಗಳನ್ನು ಸುಳ್ಳಾಗಿಸುವಿರಿ? info
التفاسير:

external-link copy
62 : 55

وَمِنْ دُوْنِهِمَا جَنَّتٰنِ ۟ۚ

ಅವೆರಡರ ಹೊರತು ಇನ್ನೆರಡು ಸ್ವರ್ಗೋದ್ಯಾನಗಳಿವೆ. info
التفاسير:

external-link copy
63 : 55

فَبِاَیِّ اٰلَآءِ رَبِّكُمَا تُكَذِّبٰنِ ۟ۙ

ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ? info
التفاسير:

external-link copy
64 : 55

مُدْهَآمَّتٰنِ ۟ۚ

ಅವೆರಡೂ ಹಚ್ಚ ಹಸಿರು ವರ್ಣದ್ದಾಗಿವೆ. info
التفاسير:

external-link copy
65 : 55

فَبِاَیِّ اٰلَآءِ رَبِّكُمَا تُكَذِّبٰنِ ۟ۚ

ಹಾಗಾದರೆ ನೀವು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ? info
التفاسير:

external-link copy
66 : 55

فِیْهِمَا عَیْنٰنِ نَضَّاخَتٰنِ ۟ۚ

ಅವುಗಳಲ್ಲಿ ಚಿಮ್ಮುವ ಎರಡು ಚಿಲುಮೆಗಳಿವೆ. info
التفاسير:

external-link copy
67 : 55

فَبِاَیِّ اٰلَآءِ رَبِّكُمَا تُكَذِّبٰنِ ۟ۚ

ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ ? info
التفاسير:

external-link copy
68 : 55

فِیْهِمَا فَاكِهَةٌ وَّنَخْلٌ وَّرُمَّانٌ ۟ۚ

ಅವೆರಡರಲ್ಲಿ ಹಣ್ಣು ಹಂಪಲುಗಳು ಮತ್ತು ಖರ್ಜೂರ ವೃಕ್ಷಗಳು ಹಾಗು ದಾಳಿಂಬೆಗಳು ಇರುವವು. info
التفاسير:

external-link copy
69 : 55

فَبِاَیِّ اٰلَآءِ رَبِّكُمَا تُكَذِّبٰنِ ۟ۚ

ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ? info
التفاسير: