Tradução dos significados do Nobre Qur’an. - Tradução Canarim - Bashir Mysore

Número de página:close

external-link copy
7 : 4

لِلرِّجَالِ نَصِیْبٌ مِّمَّا تَرَكَ الْوَالِدٰنِ وَالْاَقْرَبُوْنَ ۪— وَلِلنِّسَآءِ نَصِیْبٌ مِّمَّا تَرَكَ الْوَالِدٰنِ وَالْاَقْرَبُوْنَ مِمَّا قَلَّ مِنْهُ اَوْ كَثُرَ ؕ— نَصِیْبًا مَّفْرُوْضًا ۟

ಮಾತಾಪಿತರು ಮತ್ತು ಆಪ್ತ ಬಂಧುಗಳು ಬಿಟ್ಟುಹೋದ ಸಂಪತ್ತಿನಲ್ಲಿ ಪುರುಷರಿಗೆ ಒಂದು ಪಾಲಿದೆ; ಮಾತಾಪಿತರು ಮತ್ತು ಆಪ್ತ ಬಂಧುಗಳು ಬಿಟ್ಟುಹೋದ ಸಂಪತ್ತಿನಲ್ಲಿ ಸ್ತಿçÃಯರಿಗೂ ಒಂದು ಪಾಲಿದೆ ಆ ಸಂಪತ್ತು ಕಡಿಮೆಯಿರಲಿ; ಹೆಚ್ಚಿರಲಿ. (ಅದು ಅಲ್ಲಾಹನಿಂದ) ನಿಶ್ಚಯಿಸಲಾದ ಪಾಲಾಗಿದೆ. info
التفاسير:

external-link copy
8 : 4

وَاِذَا حَضَرَ الْقِسْمَةَ اُولُوا الْقُرْبٰی وَالْیَتٰمٰی وَالْمَسٰكِیْنُ فَارْزُقُوْهُمْ مِّنْهُ وَقُوْلُوْا لَهُمْ قَوْلًا مَّعْرُوْفًا ۟

ಪಾಲು ಮಾಡುವ ಸಂದರ್ಭದಲ್ಲಿ (ಹಕ್ಕುದಾರರಲ್ಲದ) ನಿಕಟಬಂಧುಗಳಾಗಲಿ, ಅನಾಥರಾಗಲಿ, ಬಡವರಾಗಲಿ ಉಪಸ್ಥಿತರಿದ್ದರೆ, ಅದರಿಂದ ನೀವು ಅವರಿಗೂ ಅಲ್ಪವನ್ನು ಕೊಟ್ಟುಬಿಡಿರಿ ಮತ್ತು ಅವರೊಂದಿಗೆ ನಯವಾಗಿ ಮಾತನ್ನಾಡಿರಿ. info
التفاسير:

external-link copy
9 : 4

وَلْیَخْشَ الَّذِیْنَ لَوْ تَرَكُوْا مِنْ خَلْفِهِمْ ذُرِّیَّةً ضِعٰفًا خَافُوْا عَلَیْهِمْ ۪— فَلْیَتَّقُوا اللّٰهَ وَلْیَقُوْلُوْا قَوْلًا سَدِیْدًا ۟

ತಮ್ಮ ಹಿಂದೆ ಮಕ್ಕಳನ್ನು ಬಿಟ್ಟುಹೋಗುವ ಪಕ್ಷದಲ್ಲಿ ಅವರಿಗೇನಾಗುವುದೆಂದು ಭಯಗ್ರಸ್ತರಾಗುವವರು ಇತರ ಅನಾಥ ಮಕ್ಕಳ ಕುರಿತು ಭಯಪಡಲಿ. ಅಲ್ಲಾಹನನ್ನು ಭಯಪಟ್ಟು ಸರಿಯಾದ ಮಾತುಗಳನ್ನಾಡಲಿ. info
التفاسير:

external-link copy
10 : 4

اِنَّ الَّذِیْنَ یَاْكُلُوْنَ اَمْوَالَ الْیَتٰمٰی ظُلْمًا اِنَّمَا یَاْكُلُوْنَ فِیْ بُطُوْنِهِمْ نَارًا ؕ— وَسَیَصْلَوْنَ سَعِیْرًا ۟۠

ಅನಾಥರ ಸೊತ್ತುಗಳನ್ನು ಅನ್ಯಾಯವಾಗಿ ತಿನ್ನುವವರಾರೋ ಅವರು ತಮ್ಮ ಹೊಟ್ಟೆಗಳನ್ನು ಬೆಂಕಿಯಿAದ ತುಂಬಿಸುತ್ತಿದ್ದಾರೆ. ಶೀಘ್ರವೇ ಅವರು ನರಕಕ್ಕೆ ಪ್ರವೇಶಿಸಲಿರುವರು info
التفاسير:

external-link copy
11 : 4

یُوْصِیْكُمُ اللّٰهُ فِیْۤ اَوْلَادِكُمْ ۗ— لِلذَّكَرِ مِثْلُ حَظِّ الْاُنْثَیَیْنِ ۚ— فَاِنْ كُنَّ نِسَآءً فَوْقَ اثْنَتَیْنِ فَلَهُنَّ ثُلُثَا مَا تَرَكَ ۚ— وَاِنْ كَانَتْ وَاحِدَةً فَلَهَا النِّصْفُ ؕ— وَلِاَبَوَیْهِ لِكُلِّ وَاحِدٍ مِّنْهُمَا السُّدُسُ مِمَّا تَرَكَ اِنْ كَانَ لَهٗ وَلَدٌ ۚ— فَاِنْ لَّمْ یَكُنْ لَّهٗ وَلَدٌ وَّوَرِثَهٗۤ اَبَوٰهُ فَلِاُمِّهِ الثُّلُثُ ۚ— فَاِنْ كَانَ لَهٗۤ اِخْوَةٌ فَلِاُمِّهِ السُّدُسُ مِنْ بَعْدِ وَصِیَّةٍ یُّوْصِیْ بِهَاۤ اَوْ دَیْنٍ ؕ— اٰبَآؤُكُمْ وَاَبْنَآؤُكُمْ لَا تَدْرُوْنَ اَیُّهُمْ اَقْرَبُ لَكُمْ نَفْعًا ؕ— فَرِیْضَةً مِّنَ اللّٰهِ ؕ— اِنَّ اللّٰهَ كَانَ عَلِیْمًا حَكِیْمًا ۟

ಅಲ್ಲಾಹು ನಿಮ್ಮ ಮಕ್ಕಳ ವಿಷಯದಲ್ಲಿ ಆದೇಶ ನೀಡುತ್ತಾನೆ: ಗಂಡಿನ ಪಾಲು ಇಬ್ಬರು ಹೆಣ್ಣು ಮಕ್ಕಳ ಪಾಲಿಗೆ ಸಮಾನವಾಗಿದೆ. ಮತ್ತು ಕೇವಲ ಹೆಣ್ಣು ಮಕ್ಕಳು ಮಾತ್ರವಿದ್ದರೆ ಮತ್ತು ಅವರು ಎರಡಕ್ಕಿಂತಲೂ ಹೆಚ್ಚಿದ್ದರೆ ಬಿಟ್ಟುಹೋದ ಸೊತ್ತಿನ ಮೂರನೇ ಎರಡಂಶವು ಅವರಿಗೆ ಲಭಿಸುತ್ತವೆ. ಓರ್ವ ಮಗಳು ಮಾತ್ರವಿದ್ದರೆ ಅವಳಿಗೆ ಅರ್ಧಾಂಶವಿರುವುದು ಮತ್ತು ಮೃತ ವ್ಯಕ್ತಿಯ ಮಾತಾಪಿತರಲ್ಲಿ ಪ್ರತಿಯೊಬ್ಬರಿಗೂ ಅವನು ಬಿಟ್ಟು ಹೋದ ಸೊತ್ತಿನ ಆರನೇ ಒಂದರAತೆ ಪಾಲು ಲಭಿಸುತ್ತದೆ; ಅವನಿಗೆ (ಮೃತವ್ಯಕ್ತಿಗೆ) ಮಕ್ಕಳಿದ್ದರೆ. ಇನ್ನು ಮಕ್ಕಳಿರದಿದ್ದರೆ ಮತ್ತು ಮಾತಾಪಿತರು ಅವನ ವಾರೀಸುದಾರರಾಗುವುದಾದರೆ ಅವನ ತಾಯಿಗೆ ಮೂರನೇ ಒಂದAಶವು ಲಭಿಸುತ್ತದೆ. ಇನ್ನು ಅವನಿಗೆ ಸಹೋದರರಿದ್ದರೆ ಅವನ ತಾಯಿಗೆ ಆರನೇ ಒಂದAಶವು ಲಭಿಸುತ್ತದೆ. ಈ ಪಾಲುಗಳೆಲ್ಲವೂ ಮೃತ ವ್ಯಕ್ತಿ ಮಾಡಿ ಹೋದ ಉಯಿಲಿನ ನಂತರ ಅಥವಾ ಸಾಲ ಪಾವತಿಯ ನಂತರವಾಗಿದೆ. ನಿಮ್ಮ ತಂದೆ, ತಾಯಿಗಳಾಗಲಿ, ಅಥವಾ ನಿಮ್ಮ ಪುತ್ರರಾಗಲಿ ಅವರಲ್ಲಿ ನಿಮಗೆ ಪ್ರಯೋಜನ ನೀಡುವುದರಲ್ಲಿ ಹೆಚ್ಚು ನಿಕಟವಿರುವವರು ಯಾರೆಂದು ನಿಮಗೆ ತಿಳಿದಿಲ್ಲ. ಪಾಲುಗಳು ಅಲ್ಲಾಹನ ಕಡೆಯಿಂದ ನಿಶ್ಚಯವಾಗಿವೆ. ನಿಸ್ಸಂಶಯವಾಗಿಯು ಅಲ್ಲಾಹನು ಸಂಪೂರ್ಣ ಜ್ಞಾನವುಳ್ಳವನೂ ಮತ್ತು ಯುಕ್ತಿಪೂರ್ಣನೂ ಆಗಿದ್ದಾನೆ. info
التفاسير: