ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߌߣߊߘߌߞߊ߲ ߘߟߊߡߌߘߊ - ߤ߭ߊߡߑߗ߭ߊ߫ ߓߎߕߎߙ ߓߟߏ߫

ߞߐߜߍ ߝߙߍߕߍ:close

external-link copy
36 : 21

وَاِذَا رَاٰكَ الَّذِیْنَ كَفَرُوْۤا اِنْ یَّتَّخِذُوْنَكَ اِلَّا هُزُوًا ؕ— اَهٰذَا الَّذِیْ یَذْكُرُ اٰلِهَتَكُمْ ۚ— وَهُمْ بِذِكْرِ الرَّحْمٰنِ هُمْ كٰفِرُوْنَ ۟

ಸತ್ಯನಿಷೇಧಿಗಳು ನಿಮ್ಮನ್ನು ನೋಡಿದಾಗಲೆಲ್ಲಾ ನಿಮ್ಮನ್ನು ತಮಾಷೆ ಮಾಡುತ್ತಾ, “ನಿಮ್ಮ ದೇವರುಗಳ ಬಗ್ಗೆ ಅವಹೇಳನದ ಮಾತುಗಳನ್ನು ಹೇಳುವವನು ಇವನೇ ಏನು?” ಎಂದು (ಪರಸ್ಪರ) ಕೇಳುತ್ತಾರೆ. ಅವರಂತೂ ಪರಮ ದಯಾಮಯನ (ಅಲ್ಲಾಹನ) ಸ್ಮರಣೆಯನ್ನು ನಿಷೇಧಿಸಿದ್ದಾರೆ. info
التفاسير:

external-link copy
37 : 21

خُلِقَ الْاِنْسَانُ مِنْ عَجَلٍ ؕ— سَاُورِیْكُمْ اٰیٰتِیْ فَلَا تَسْتَعْجِلُوْنِ ۟

ಮಾನವನನ್ನು ಆತುರ ಜೀವಿಯಾಗಿ ಸೃಷ್ಟಿಸಲಾಗಿದೆ. ನಾನು ಸದ್ಯವೇ ನನ್ನ ದೃಷ್ಟಾಂತಗಳನ್ನು ನಿಮಗೆ ತೋರಿಸಿಕೊಡಲಿದ್ದೇನೆ. ಆದ್ದರಿಂದ ನೀವು ನನ್ನೊಂದಿಗೆ ತ್ವರೆ ಮಾಡಬೇಡಿ. info
التفاسير:

external-link copy
38 : 21

وَیَقُوْلُوْنَ مَتٰی هٰذَا الْوَعْدُ اِنْ كُنْتُمْ صٰدِقِیْنَ ۟

ಅವರು ಕೇಳುತ್ತಾರೆ: “ನೀವು ಸತ್ಯವನ್ನೇ ಹೇಳುವವರಾಗಿದ್ದರೆ ಈ ವಾಗ್ದಾನವು ನಿಜವಾಗುವುದು ಯಾವಾಗ ಎಂದು ಹೇಳಿರಿ?” info
التفاسير:

external-link copy
39 : 21

لَوْ یَعْلَمُ الَّذِیْنَ كَفَرُوْا حِیْنَ لَا یَكُفُّوْنَ عَنْ وُّجُوْهِهِمُ النَّارَ وَلَا عَنْ ظُهُوْرِهِمْ وَلَا هُمْ یُنْصَرُوْنَ ۟

ತಮ್ಮ ಮುಖಗಳಿಂದ ಮತ್ತು ಬೆನ್ನುಗಳಿಂದ ಬೆಂಕಿಯನ್ನು ತಡೆಯಲು ಸಾಧ್ಯವಾಗದ ಮತ್ತು ಯಾವುದೇ ಸಹಾಯವು ದೊರಕದ ಆ ಒಂದು ಸಮಯದ ಬಗ್ಗೆ ಸತ್ಯನಿಷೇಧಿಗಳು ತಿಳಿದಿದ್ದರೆ! info
التفاسير:

external-link copy
40 : 21

بَلْ تَاْتِیْهِمْ بَغْتَةً فَتَبْهَتُهُمْ فَلَا یَسْتَطِیْعُوْنَ رَدَّهَا وَلَا هُمْ یُنْظَرُوْنَ ۟

ಅಲ್ಲ; ಅಂತ್ಯ ಸಮಯವು ಅವರ ಬಳಿಗೆ ಹಠಾತ್ತನೆ ಬರಲಿದೆ. ಅದು ಅವರನ್ನು ತಬ್ಬಿಬ್ಬುಗೊಳಿಸಲಿದೆ. ಅದನ್ನು ತಡೆಗಟ್ಟಲು ಅವರಿಗೆ ಸಾಧ್ಯವಾಗುವುದಿಲ್ಲ. ಅವರಿಗೆ ಕಾಲಾವಕಾಶವನ್ನೂ ನೀಡಲಾಗುವುದಿಲ್ಲ. info
التفاسير:

external-link copy
41 : 21

وَلَقَدِ اسْتُهْزِئَ بِرُسُلٍ مِّنْ قَبْلِكَ فَحَاقَ بِالَّذِیْنَ سَخِرُوْا مِنْهُمْ مَّا كَانُوْا بِهٖ یَسْتَهْزِءُوْنَ ۟۠

ನಿಮಗಿಂತ ಮೊದಲು ಅನೇಕ ಸಂದೇಶವಾಹಕರು ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಅವರನ್ನು ಅಪಹಾಸ್ಯ ಮಾಡಿದವರನ್ನು ನಂತರ ಅವರು ಅಪಹಾಸ್ಯ ಮಾಡುತ್ತಿದ್ದ ವಿಷಯವೇ ಆವರಿಸಿಬಿಟ್ಟಿತು. info
التفاسير:

external-link copy
42 : 21

قُلْ مَنْ یَّكْلَؤُكُمْ بِالَّیْلِ وَالنَّهَارِ مِنَ الرَّحْمٰنِ ؕ— بَلْ هُمْ عَنْ ذِكْرِ رَبِّهِمْ مُّعْرِضُوْنَ ۟

ಕೇಳಿರಿ: “ನಿಮ್ಮನ್ನು ಪರಮ ದಯಾಮಯನಿಂದ (ಅಲ್ಲಾಹನಿಂದ) ಹಗಲು-ರಾತ್ರಿ ರಕ್ಷಣೆ ಮಾಡಲು ಯಾರಿದ್ದಾರೆ?” ಅಲ್ಲ; ವಾಸ್ತವವಾಗಿ ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಸ್ಮರಣೆಯಿಂದ ವಿಮುಖರಾಗಿದ್ದಾರೆ. info
التفاسير:

external-link copy
43 : 21

اَمْ لَهُمْ اٰلِهَةٌ تَمْنَعُهُمْ مِّنْ دُوْنِنَا ؕ— لَا یَسْتَطِیْعُوْنَ نَصْرَ اَنْفُسِهِمْ وَلَا هُمْ مِّنَّا یُصْحَبُوْنَ ۟

ಅವರ ರಕ್ಷಣೆ ಮಾಡಲು ಅವರಿಗೆ ನಮ್ಮ ಹೊರತು ಬೇರೆ ದೇವರುಗಳು ಇದ್ದಾರೆಯೇ? ಆ ದೇವರುಗಳಿಗೆ ಸ್ವಯಂ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ. ಅವರಿಗೆ ನಮ್ಮ ಕಡೆಯಿಂದಲೂ ರಕ್ಷಣೆ ಸಿಗುವುದಿಲ್ಲ. info
التفاسير:

external-link copy
44 : 21

بَلْ مَتَّعْنَا هٰۤؤُلَآءِ وَاٰبَآءَهُمْ حَتّٰی طَالَ عَلَیْهِمُ الْعُمُرُ ؕ— اَفَلَا یَرَوْنَ اَنَّا نَاْتِی الْاَرْضَ نَنْقُصُهَا مِنْ اَطْرَافِهَا ؕ— اَفَهُمُ الْغٰلِبُوْنَ ۟

ಅಲ್ಲ; ನಾವು ಇವರಿಗೆ ಮತ್ತು ಇವರ ಪೂರ್ವಜರಿಗೆ ಸವಲತ್ತುಗಳನ್ನು ನೀಡಿದೆವು. ಹೀಗೆ ಅವರು ದೀರ್ಘಕಾಲ ಬಾಳಿ ಬದುಕಿದರು. ನಾವು ಭೂಮಿಯನ್ನು ಅದರ ಅಂಚುಗಳಿಂದ ಕುಗ್ಗಿಸುತ್ತಿರುವುದನ್ನು ಅವರು ನೋಡುವುದಿಲ್ಲವೇ?[1] ಹೀಗಿದ್ದೂ ಅವರೇ ವಿಜಯಿಗಳಾಗುವರೇ? info

[1] ಅಂದರೆ ಸತ್ಯನಿಷೇಧಿಗಳ ವಶದಲ್ಲಿರುವ ಪ್ರದೇಶಗಳು ಕುಗ್ಗುತ್ತಿರುವುದನ್ನು ಅವರು ನೋಡುವುದಿಲ್ಲವೇ? ಇಸ್ಲಾಂ ಧರ್ಮವು ಬೆಳೆದಂತೆ ಸತ್ಯನಿಷೇಧಿಗಳ ವಶದಲ್ಲಿದ್ದ ಪ್ರದೇಶಗಳೆಲ್ಲವೂ ಒಂದೊಂದಾಗಿ ಮುಸಲ್ಮಾನರ ವಶಕ್ಕೆ ಬಂದವು.

التفاسير: