ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߌߣߊߘߌߞߊ߲ ߘߟߊߡߌߘߊ - ߤ߭ߊߡߑߗ߭ߊ߫ ߓߎߕߎߙ ߓߟߏ߫

ߞߐߜߍ ߝߙߍߕߍ:close

external-link copy
11 : 21

وَكَمْ قَصَمْنَا مِنْ قَرْیَةٍ كَانَتْ ظَالِمَةً وَّاَنْشَاْنَا بَعْدَهَا قَوْمًا اٰخَرِیْنَ ۟

ಅಕ್ರಮವೆಸಗುತ್ತಿದ್ದ ಎಷ್ಟೋ ಊರುಗಳನ್ನು ನಾವು ನಾಶ ಮಾಡಿದ್ದೇವೆ. ಅದರ ನಂತರ ನಾವು ಬೇರೊಂದು ಜನತೆಯನ್ನು ಸೃಷ್ಟಿಸಿದೆವು. info
التفاسير:

external-link copy
12 : 21

فَلَمَّاۤ اَحَسُّوْا بَاْسَنَاۤ اِذَا هُمْ مِّنْهَا یَرْكُضُوْنَ ۟ؕ

ಅವರಿಗೆ ನಮ್ಮ ಶಿಕ್ಷೆಯ ಅನುಭವವಾದಾಗ ಅಗೋ! ಅವರು ಅದರಿಂದ ಓಡಿ ಪಾರಾಗಲು ಯತ್ನಿಸುತ್ತಾರೆ. info
التفاسير:

external-link copy
13 : 21

لَا تَرْكُضُوْا وَارْجِعُوْۤا اِلٰی مَاۤ اُتْرِفْتُمْ فِیْهِ وَمَسٰكِنِكُمْ لَعَلَّكُمْ تُسْـَٔلُوْنَ ۟

ಓಡಬೇಡಿ! ನಾವು ನಿಮಗೆ ಒದಗಿಸಿದ ಆಡಂಬರಗಳ ಕಡೆಗೆ ಮತ್ತು ನಿಮ್ಮ ವಸತಿಗಳ ಕಡೆಗೆ ಬನ್ನಿರಿ. ನಿಮ್ಮೊಂದಿಗೆ ಪ್ರಶ್ನಿಸುವುದಕ್ಕಾಗಿ.[1] info

[1] ಅಂದರೆ ಅವರೊಡನೆ, ನಿಮಗೇನಾಯಿತು? ನಿಮಗೆ ಈ ಪರಿಸ್ಥಿತಿ ಏಕೆ ಬಂತು? ಎಂದು ಕೇಳುವುದಕ್ಕಾಗಿ. ಇದು ಅಪಹಾಸ್ಯದ ರೂಪದಲ್ಲಿರುವ ಪ್ರಶ್ನೆಯಾಗಿದೆ.

التفاسير:

external-link copy
14 : 21

قَالُوْا یٰوَیْلَنَاۤ اِنَّا كُنَّا ظٰلِمِیْنَ ۟

ಅವರು ಹೇಳಿದರು: “ಅಯ್ಯೋ! ನಮ್ಮ ದುರ್ಗತಿಯೇ! ನಿಜಕ್ಕೂ ನಾವು ಅಕ್ರಮಿಗಳೇ ಆಗಿದ್ದೆವು.” info
التفاسير:

external-link copy
15 : 21

فَمَا زَالَتْ تِّلْكَ دَعْوٰىهُمْ حَتّٰی جَعَلْنٰهُمْ حَصِیْدًا خٰمِدِیْنَ ۟

ಅವರು ಹೀಗೆ ರೋದಿಸುತ್ತಲೇ ಇದ್ದರು. ಎಲ್ಲಿಯವರೆಗೆಂದರೆ, ನಾವು ಅವರನ್ನು ಬುಡದಿಂದ ಕತ್ತರಿಸಲಾದ ತೆನೆಗಳಂತೆ ಮತ್ತು ಆರಿಹೋದ ಬೆಂಕಿಯಂತೆ ಮಾಡುವ ತನಕ. info
التفاسير:

external-link copy
16 : 21

وَمَا خَلَقْنَا السَّمَآءَ وَالْاَرْضَ وَمَا بَیْنَهُمَا لٰعِبِیْنَ ۟

ನಾವು ಭೂಮ್ಯಾಕಾಶಗಳನ್ನು ಅಥವಾ ಅವುಗಳ ನಡುವೆಯಿರುವ ವಸ್ತುಗಳನ್ನು ಆಟಕ್ಕಾಗಿ ಸೃಷ್ಟಿಸಿಲ್ಲ. info
التفاسير:

external-link copy
17 : 21

لَوْ اَرَدْنَاۤ اَنْ نَّتَّخِذَ لَهْوًا لَّاتَّخَذْنٰهُ مِنْ لَّدُنَّاۤ ۖۗ— اِنْ كُنَّا فٰعِلِیْنَ ۟

ಮನರಂಜನೆಯು ನಮ್ಮ ಉದ್ದೇಶವಾಗಿದ್ದರೆ, ನಾವು ಅದನ್ನು ನಮ್ಮ ಬಳಿಯಲ್ಲೇ ಮಾಡುತ್ತಿದ್ದೆವು. ನಾವು ಹಾಗೆ ಮಾಡುವವರಾಗಿದ್ದರೆ. info
التفاسير:

external-link copy
18 : 21

بَلْ نَقْذِفُ بِالْحَقِّ عَلَی الْبَاطِلِ فَیَدْمَغُهٗ فَاِذَا هُوَ زَاهِقٌ ؕ— وَلَكُمُ الْوَیْلُ مِمَّا تَصِفُوْنَ ۟

ಬದಲಿಗೆ, ನಾವು ಸತ್ಯವನ್ನು ಅಸತ್ಯದ ಮೇಲೆ ಎಸೆಯುತ್ತೇವೆ. ಆಗ ಅದು ಅಸತ್ಯವನ್ನು ಒಡೆದು ಹಾಕುತ್ತದೆ. ಆಗ ಅದು (ಅಸತ್ಯ) ತಕ್ಷಣ ನಾಶವಾಗುತ್ತದೆ. ನೀವು (ಅಲ್ಲಾಹನ ಬಗ್ಗೆ) ಆರೋಪಿಸುವ ಮಾತುಗಳಿಂದಾಗಿ ನಿಮಗೆ ವಿನಾಶವು ಕಾದಿದೆ. info
التفاسير:

external-link copy
19 : 21

وَلَهٗ مَنْ فِی السَّمٰوٰتِ وَالْاَرْضِ ؕ— وَمَنْ عِنْدَهٗ لَا یَسْتَكْبِرُوْنَ عَنْ عِبَادَتِهٖ وَلَا یَسْتَحْسِرُوْنَ ۟ۚ

ಭೂಮ್ಯಾಕಾಶಗಳಲ್ಲಿರುವ ಎಲ್ಲರೂ ಅವನಿಗೆ ಸೇರಿದವರು. ಅವನ ಬಳಿಯಿರುವವರು (ದೇವದೂತರು) ಅವನನ್ನು ಆರಾಧಿಸಲು ಅಹಂಕಾರಪಡುವುದಿಲ್ಲ. ಅವರು ದಣಿಯುವುದೂ ಇಲ್ಲ. info
التفاسير:

external-link copy
20 : 21

یُسَبِّحُوْنَ الَّیْلَ وَالنَّهَارَ لَا یَفْتُرُوْنَ ۟

ಅವರು ರಾತ್ರಿ-ಹಗಲು ಅಲ್ಲಾಹನ ಪರಿಶುದ್ಧತೆಯನ್ನು ಕೊಂಡಾಡುತ್ತಾರೆ. ಅವರಿಗೆ ಸುಸ್ತಾಗುವುದಿಲ್ಲ. info
التفاسير:

external-link copy
21 : 21

اَمِ اتَّخَذُوْۤا اٰلِهَةً مِّنَ الْاَرْضِ هُمْ یُنْشِرُوْنَ ۟

ಅವರು ಭೂಮಿಯಲ್ಲಿ ಯಾರನ್ನು ದೇವರಾಗಿ ಸ್ವೀಕರಿಸಿದ್ದಾರೋ ಅವರು (ಸತ್ತವರಿಗೆ) ಜೀವ ನೀಡುತ್ತಾರೆಯೇ? info
التفاسير:

external-link copy
22 : 21

لَوْ كَانَ فِیْهِمَاۤ اٰلِهَةٌ اِلَّا اللّٰهُ لَفَسَدَتَا ۚ— فَسُبْحٰنَ اللّٰهِ رَبِّ الْعَرْشِ عَمَّا یَصِفُوْنَ ۟

ಭೂಮ್ಯಾಕಾಶಗಳಲ್ಲಿ ಅಲ್ಲಾಹನ ಹೊರತು ಬೇರೆ ದೇವರುಗಳು ಇರುತ್ತಿದ್ದರೆ ಅವು ನಾಶವಾಗಿ ಹೋಗುತ್ತಿದ್ದವು.[1] ಅವರು ಸುಳ್ಳು ಸುಳ್ಳಾಗಿ ಆರೋಪಿಸುವ ಎಲ್ಲದ್ದರಿಂದಲೂ ಸಿಂಹಾಸನದ ಒಡೆಯನಾದ ಅಲ್ಲಾಹು ಎಷ್ಟೋ ಪರಿಶುದ್ಧನಾಗಿದ್ದಾನೆ. info

[1] ಒಂದು ಬಸ್ಸಿಗೆ ಎರಡು ಚಾಲಕರಿದ್ದರೆ ಏನಾಗಬಹುದು? ಒಂದು ದೇಶಕ್ಕೆ ಎರಡು ಪ್ರಧಾನಿಗಳಿದ್ದರೆ ಏನಾಗಬಹುದು? ಇಬ್ಬರೂ ಎಲ್ಲಾ ವಿಷಯಗಳಲ್ಲೂ ಒಂದೇ ರೀತಿಯ ಅಭಿಪ್ರಾಯವನ್ನು ಹೊಂದುವುದು ಅಸಂಭವ. ಹಾಗೆಯೇ ವಿಶ್ವಕ್ಕೆ ಎರಡು ಅಥವಾ ಅದಕ್ಕಿಂತ ಹೆಚ್ಚು ದೇವರುಗಳಿದ್ದರೆ ವಿಶ್ವವು ಎಂದೋ ನಾಶವಾಗಿ ಹೋಗುತ್ತಿತ್ತು.

التفاسير:

external-link copy
23 : 21

لَا یُسْـَٔلُ عَمَّا یَفْعَلُ وَهُمْ یُسْـَٔلُوْنَ ۟

ಅವನು (ಅಲ್ಲಾಹು) ಏನು ಮಾಡುತ್ತಾನೋ ಅದರ ಬಗ್ಗೆ ಅವನು ಯಾರಿಗೂ ಉತ್ತರ ಕೊಡಬೇಕಾಗಿಲ್ಲ. ಆದರೆ ಅವರು (ಮನುಷ್ಯರು) ಉತ್ತರದಾಯಿಗಳಾಗಿದ್ದಾರೆ. info
التفاسير:

external-link copy
24 : 21

اَمِ اتَّخَذُوْا مِنْ دُوْنِهٖۤ اٰلِهَةً ؕ— قُلْ هَاتُوْا بُرْهَانَكُمْ ۚ— هٰذَا ذِكْرُ مَنْ مَّعِیَ وَذِكْرُ مَنْ قَبْلِیْ ؕ— بَلْ اَكْثَرُهُمْ لَا یَعْلَمُوْنَ ۙ— الْحَقَّ فَهُمْ مُّعْرِضُوْنَ ۟

ಅವರು ಅಲ್ಲಾಹನನ್ನು ಬಿಟ್ಟು ಬೇರೆ ದೇವರುಗಳನ್ನು ಸ್ವೀಕರಿಸಿದ್ದಾರೆಯೇ? ಹೇಳಿರಿ: “ಅದಕ್ಕೆ ನಿಮ್ಮ ಬಳಿಯಿರುವ ಸಾಕ್ಷ್ಯಾಧಾರಗಳನ್ನು ತನ್ನಿರಿ.” ಇದು (ಕುರ್‌ಆನ್) ನನ್ನ ಜೊತೆಯಲ್ಲಿರುವವರಿಗೆ ಮತ್ತು ನನಗಿಂತ ಮೊದಲಿನವರಿಗೆ ಇರುವ ಉಪದೇಶವಾಗಿದೆ. ಆದರೆ ಅವರಲ್ಲಿ ಹೆಚ್ಚಿನವರಿಗೂ ಸತ್ಯವೇನೆಂದು ತಿಳಿದಿಲ್ಲ. ಆದ್ದರಿಂದ ಅವರು ವಿಮುಖರಾಗುತ್ತಿದ್ದಾರೆ. info
التفاسير: