ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

ߞߐߜߍ ߝߙߍߕߍ:close

external-link copy
41 : 9

اِنْفِرُوْا خِفَافًا وَّثِقَالًا وَّجَاهِدُوْا بِاَمْوَالِكُمْ وَاَنْفُسِكُمْ فِیْ سَبِیْلِ اللّٰهِ ؕ— ذٰلِكُمْ خَیْرٌ لَّكُمْ اِنْ كُنْتُمْ تَعْلَمُوْنَ ۟

ನೀವು (ಸತ್ಯವಿಶ್ವಾಸಿಗಳೇ) ಅನುಕೂಲ ಸ್ಥಿತಿಯಲ್ಲಿದ್ದರೂ, ಅನಾನುಕೂಲ ಸ್ಥಿತಿಯಲ್ಲಿದ್ದರೂ ಹೊರಡಿರಿ ಮತ್ತು ಅಲ್ಲಾಹನ ಮಾರ್ಗದಲ್ಲಿ ನಿಮ್ಮ ತನು ಮನ ಧನಗಳಿಂದ ಸತ್ಯಕ್ಕಾಗಿ ಹೋರಾಡಿರಿ. ಇದುವೇ ನಿಮಗೆ ಉತ್ತಮವಾಗಿರುತ್ತದೆ. ನೀವು ಅರಿಯುವವರಾಗಿದ್ದರೆ. info
التفاسير:

external-link copy
42 : 9

لَوْ كَانَ عَرَضًا قَرِیْبًا وَّسَفَرًا قَاصِدًا لَّاتَّبَعُوْكَ وَلٰكِنْ بَعُدَتْ عَلَیْهِمُ الشُّقَّةُ ؕ— وَسَیَحْلِفُوْنَ بِاللّٰهِ لَوِ اسْتَطَعْنَا لَخَرَجْنَا مَعَكُمْ ۚ— یُهْلِكُوْنَ اَنْفُسَهُمْ ۚ— وَاللّٰهُ یَعْلَمُ اِنَّهُمْ لَكٰذِبُوْنَ ۟۠

ಇನ್ನು ಶೀಘ್ರವೇ ಲಾಭ ಸಿಗುತ್ತಿದ್ದರೆ ಮತ್ತು ಪ್ರಯಾಣವು ಸುಗಮವಾಗಿರುತ್ತಿದ್ದರೆ. ಖಂಡಿತವಾಗಿಯೂ ಕಪಟಿಗಳು ನಿಮ್ಮನ್ನು ಅನುಸರಿಸುತ್ತಿದ್ದರು. ಆದರೆ ಅವರ ಮೇಲೆ ಸುದೀರ್ಘತೆಯು ಪ್ರಯಾಸಕರವಾಗಿ ಬಿಟ್ಟಿತು. ಅವರು 'ನಮ್ಮಲ್ಲಿ ಸಾಮರ್ಥ್ಯವಿರುತ್ತಿದ್ದರೆ ನಾವು ಖಂಡಿತವಾಗಿಯು ನಿಮ್ಮ ಜೊತೆ ಹೊರಟು ಬರುತ್ತಿದ್ದೆವು ಎಂದು ಅಲ್ಲಾಹನ ಮೇಲೆ ಆಣೆ ಹಾಕಿ ನೆಪ ಹೂಡುತ್ತಾ (ದುರ್ಬಲರೊಂದಿಗೆ)ಹೇಳುತ್ತಾರೆ. ಅವರು ಸ್ವತಃ ತಮ್ಮನ್ನು ನಾಶಕ್ಕೀಡು ಮಾಡುತ್ತಿದ್ದಾರೆ. ಖಂಡಿತವಾಗಿಯು ಅವರು ಸುಳ್ಳರೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ. info
التفاسير:

external-link copy
43 : 9

عَفَا اللّٰهُ عَنْكَ ۚ— لِمَ اَذِنْتَ لَهُمْ حَتّٰی یَتَبَیَّنَ لَكَ الَّذِیْنَ صَدَقُوْا وَتَعْلَمَ الْكٰذِبِیْنَ ۟

ಓ ಪೈಗಂಬರರೇ ಅಲ್ಲಾಹನು ನಿಮ್ಮನ್ನು ಮನ್ನಿಸಲಿ. ನಿಮ್ಮ ಮುಂದೆ ಸತ್ಯಸಂಧರು ಯಾರೆಂದು ಪ್ರಕಟವಾಗುವುದಕ್ಕೆ ಮೊದಲೇ ಮತ್ತು ನೀವು ಸುಳ್ಳರನ್ನು ಗುರುತಿಸಿಕೊಳ್ಳುವ ಮೊದಲೇ ಅವರಿಗೇಕೆ (ಕಪಟಿಗಳಿಗೆ)ಅನುಮತಿ ನೀಡಿದಿರಿ? info
التفاسير:

external-link copy
44 : 9

لَا یَسْتَاْذِنُكَ الَّذِیْنَ یُؤْمِنُوْنَ بِاللّٰهِ وَالْیَوْمِ الْاٰخِرِ اَنْ یُّجَاهِدُوْا بِاَمْوَالِهِمْ وَاَنْفُسِهِمْ ؕ— وَاللّٰهُ عَلِیْمٌۢ بِالْمُتَّقِیْنَ ۟

ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡುವವರು ತಮ್ಮ ತನು, ಮನ, ಧನಗಳಿಂದ ಹೋರಾಟ ಮಾಡದಿರಲು ನಿಮ್ಮೊಂದಿಗೆ ಅನುಮತಿಯನ್ನು ಕೇಳಲಾರರು ಮತ್ತು ಅಲ್ಲಾಹನು ಭಯಭಕ್ತಿ ಪಾಲಿಸುವವರನ್ನು ಚೆನ್ನಾಗಿ ಅರಿತಿದ್ದಾನೆ. info
التفاسير:

external-link copy
45 : 9

اِنَّمَا یَسْتَاْذِنُكَ الَّذِیْنَ لَا یُؤْمِنُوْنَ بِاللّٰهِ وَالْیَوْمِ الْاٰخِرِ وَارْتَابَتْ قُلُوْبُهُمْ فَهُمْ فِیْ رَیْبِهِمْ یَتَرَدَّدُوْنَ ۟

ನಿಮ್ಮೊಂದಿಗೆ ಅನುಮತಿಯನ್ನು ಕೇಳುವವರು ಅಲ್ಲಾಹನಲ್ಲಾಗಲೀ, ಅಂತ್ಯದಿನದಲ್ಲಾಗಲೀ ವಿಶ್ವಾಸವಿಡದವರು ಮಾತ್ರರಾಗಿರುವರು. ಅವರ ಹೃದಯಗಳು ಸಂಶಯಗ್ರಸ್ತವಾಗಿವೆ ಮತ್ತು ಅವರು ತಮ್ಮ ಸಂದೇಹದಲ್ಲೇ ಅಲೆದಾಡುತ್ತಿದ್ದಾರೆ. info
التفاسير:

external-link copy
46 : 9

وَلَوْ اَرَادُوا الْخُرُوْجَ لَاَعَدُّوْا لَهٗ عُدَّةً وَّلٰكِنْ كَرِهَ اللّٰهُ انْۢبِعَاثَهُمْ فَثَبَّطَهُمْ وَقِیْلَ اقْعُدُوْا مَعَ الْقٰعِدِیْنَ ۟

ಇನ್ನು ಅವರ ಉದ್ದೇಶವು ಸಮರಕ್ಕಾಗಿ ಹೊರಡುವುದಾಗಿದ್ದರೆ ಅವರು ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಅಲ್ಲಾಹನಿಗೆ ಅವರು ಹೊರಡುವುದು ಇಷ್ಟವಿರಲಿಲ್ಲ. ಆದ್ದರಿಂದ ಅವನು ಅವರನ್ನು (ಅವರ ಕಾಪಟ್ಯದ ನಿಮಿತ್ತ) ಸೋಮಾರಿಗಳನ್ನಾಗಿಸಿ ತಡೆದುಬಿಟ್ಟನು ಮತ್ತು ಹೇಳಲಾಯಿತು: ನೀವು ಕುಳಿತುಬಿಟ್ಟವರೊಂದಿಗೆ (ದುರ್ಬಲರೊಂದಿಗೆ) ಕುಳಿತು ಬಿಡಿರಿ. info
التفاسير:

external-link copy
47 : 9

لَوْ خَرَجُوْا فِیْكُمْ مَّا زَادُوْكُمْ اِلَّا خَبَالًا وَّلَاۡاَوْضَعُوْا خِلٰلَكُمْ یَبْغُوْنَكُمُ الْفِتْنَةَ ۚ— وَفِیْكُمْ سَمّٰعُوْنَ لَهُمْ ؕ— وَاللّٰهُ عَلِیْمٌۢ بِالظّٰلِمِیْنَ ۟

ಇನ್ನು ಅವರು ನಿಮ್ಮೊಂದಿಗೆ ಹೊರಡುತ್ತಿದ್ದರೂ ನಿಮಗೆ ಕೇಡನ್ನಲ್ಲದೇ ಇನ್ನೇನನ್ನೂ ಹೆಚ್ಚಿಸುತ್ತಿರಲಿಲ್ಲ. ನಿಮ್ಮ ನಡುವೆ ಕ್ಷೆÆÃಭೆ ಹರಡಲು ಅವರು ಓಡಾಡುತ್ತಿರುತ್ತಾರೆ. ಅವರಿಗೆ ಕಿವಿಗೊಡುವವರು ನಿಮ್ಮಲ್ಲಿದ್ದಾರೆ. ಮತ್ತು ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು. info
التفاسير: