ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

ߞߐߜߍ ߝߙߍߕߍ:close

external-link copy
14 : 9

قَاتِلُوْهُمْ یُعَذِّبْهُمُ اللّٰهُ بِاَیْدِیْكُمْ وَیُخْزِهِمْ وَیَنْصُرْكُمْ عَلَیْهِمْ وَیَشْفِ صُدُوْرَ قَوْمٍ مُّؤْمِنِیْنَ ۟ۙ

ನೀವು ಅವರೊಂದಿಗೆ ಯುದ್ಧ ಮಾಡಿರಿ. ಅಲ್ಲಾಹನು ನಿಮ್ಮ ಕೈಯಿಂದ ಅವರನ್ನು ಶಿಕ್ಷಿಸುವನು, ಅವರನ್ನು ನಿಂದ್ಯರನ್ನಾಗಿಸುವನು, ಅವರ ವಿರುದ್ಧ ನಿಮಗೆ ಸಹಾಯ ಮಾಡುವನು ಮತ್ತು ಅವನು ವಿಶ್ವಾಸಿಗಳ ಹೃದಯಗಳನ್ನು ತಣಿಸಿಬಿಡುವನು. info
التفاسير:

external-link copy
15 : 9

وَیُذْهِبْ غَیْظَ قُلُوْبِهِمْ ؕ— وَیَتُوْبُ اللّٰهُ عَلٰی مَنْ یَّشَآءُ ؕ— وَاللّٰهُ عَلِیْمٌ حَكِیْمٌ ۟

ಅವನು ಅವರ ಹೃದಯಗಳಲ್ಲಿರುವ ಕ್ರೋಧವನ್ನು ನಿವಾರಿಸುವನು. ಮತ್ತು ಅವನು ತಾನಿಚ್ಛಿಸುವವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಅಲ್ಲಾಹನು ಸರ್ವಜ್ಞಾನಿಯು, ಯುಕ್ತಿವಂತನು ಆಗಿದ್ದಾನೆ. info
التفاسير:

external-link copy
16 : 9

اَمْ حَسِبْتُمْ اَنْ تُتْرَكُوْا وَلَمَّا یَعْلَمِ اللّٰهُ الَّذِیْنَ جٰهَدُوْا مِنْكُمْ وَلَمْ یَتَّخِذُوْا مِنْ دُوْنِ اللّٰهِ وَلَا رَسُوْلِهٖ وَلَا الْمُؤْمِنِیْنَ وَلِیْجَةً ؕ— وَاللّٰهُ خَبِیْرٌ بِمَا تَعْمَلُوْنَ ۟۠

ನಿಮ್ಮ ಪೈಕಿ ಯುದ್ಧ ಮಾಡಿದವರನ್ನೂ, ಅಲ್ಲಾಹ್ ಮತ್ತು ಅವನ ಸಂದೇಶವಾಹಕರು ಹಾಗೂ ಸತ್ಯವಿಶ್ವಾಸಿಗಳ ಹೊರತು ಇನ್ನಾರನ್ನೂ ಆಪ್ತಮಿತ್ರರನ್ನಾಗಿ ಮಾಡದವರನ್ನೂ ಅಲ್ಲಾಹನು ಅರಿಯದೆ ನಿಮ್ಮನ್ನು ಬಿಟ್ಟು ಬಿಡಲಾಗುವುದೆಂದು ನೀವು ತಿಳಿದುಕೊಂಡಿರುವಿರಾ? ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹನು ಸೂಕ್ಷö್ಮವಾಗಿ ಅರಿಯುವವನಾಗಿದ್ದಾನೆ. info
التفاسير:

external-link copy
17 : 9

مَا كَانَ لِلْمُشْرِكِیْنَ اَنْ یَّعْمُرُوْا مَسٰجِدَ اللّٰهِ شٰهِدِیْنَ عَلٰۤی اَنْفُسِهِمْ بِالْكُفْرِ ؕ— اُولٰٓىِٕكَ حَبِطَتْ اَعْمَالُهُمْ ۖۚ— وَفِی النَّارِ هُمْ خٰلِدُوْنَ ۟

ಸತ್ಯನಿಷೇಧಕ್ಕೆ ಸ್ವಯಂ ತಾವೇ ಸಾಕ್ಷಿಗಳಾಗಿರುವ ಬಹುದೇವಾರಾಧಕರಿಗೆ ಅಲ್ಲಾಹನ ಮಸೀದಿಗಳ ಪರಿಪಾಲನೆಯು ಭೂಷಣವಲ್ಲ. ಅವರ ಕರ್ಮಗಳು ನಿಷ್ಫಲವಾಗಿವೆ. ಅವರು ನರಕದಲ್ಲಿ ಶಾಶ್ವತವಾಗಿರುವರು. info
التفاسير:

external-link copy
18 : 9

اِنَّمَا یَعْمُرُ مَسٰجِدَ اللّٰهِ مَنْ اٰمَنَ بِاللّٰهِ وَالْیَوْمِ الْاٰخِرِ وَاَقَامَ الصَّلٰوةَ وَاٰتَی الزَّكٰوةَ وَلَمْ یَخْشَ اِلَّا اللّٰهَ ۫— فَعَسٰۤی اُولٰٓىِٕكَ اَنْ یَّكُوْنُوْا مِنَ الْمُهْتَدِیْنَ ۟

ಯಾರು ಅಲ್ಲಾಹನಲ್ಲೂ ಅಂತ್ಯದಿನದಲ್ಲೂ ವಿಶ್ವಾಸವಿಡುತ್ತಾರೋ, ನಮಾಝನ್ನು ಸಂಸ್ಥಾಪಿಸುತ್ತಾರೋ, ಝಕಾತ್ ನೀಡುತ್ತಾರೋ ಮತ್ತು ಅಲ್ಲಾಹನ ಹೊರತು ಇನ್ನಾರನ್ನೂ ಭಯಪಡುವುದಿಲ್ಲವೋ ಅಂತಹವರೇ ಅಲ್ಲಾಹನ ಮಸೀದಿಗಳ ಪರಿಪಾಲನೆಯ ಹಕ್ಕುದಾರರಾಗಿರುವರು. ಖಂಡಿತವಾಗಿಯೂ ಅವರೇ ಸನ್ಮಾರ್ಗ ಪ್ರಾಪ್ತರು. info
التفاسير:

external-link copy
19 : 9

اَجَعَلْتُمْ سِقَایَةَ الْحَآجِّ وَعِمَارَةَ الْمَسْجِدِ الْحَرَامِ كَمَنْ اٰمَنَ بِاللّٰهِ وَالْیَوْمِ الْاٰخِرِ وَجٰهَدَ فِیْ سَبِیْلِ اللّٰهِ ؕ— لَا یَسْتَوٗنَ عِنْدَ اللّٰهِ ؕ— وَاللّٰهُ لَا یَهْدِی الْقَوْمَ الظّٰلِمِیْنَ ۟ۘ

ಹಜ್ಜ್ ಯಾತ್ರಿಕರಿಗೆ ನೀರು ಕುಡಿಸುವುದನ್ನೂ, ಮಸ್ಜಿದುಲ್ ಹರಾಮ್‌ನ ಸೇವೆ ಮಾಡುವುದನ್ನು ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಟ್ಟ ಹಾಗೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರುವ ಒಬ್ಬನಿಗೆ ನೀವು ಸಮಾನಗೊಳಿಸುವಿರಾ? ಅವರು ಅಲ್ಲಾಹನ ಬಳಿ ಸಮಾನರಾಗುವುದಿಲ್ಲ. ಮತ್ತು ಅಲ್ಲಾಹನು ಅಕ್ರಮಿಗಳಿಗೆ ಸನ್ಮಾರ್ಗ ಕರುಣಿಸುವುದಿಲ್ಲ. info
التفاسير:

external-link copy
20 : 9

اَلَّذِیْنَ اٰمَنُوْا وَهَاجَرُوْا وَجٰهَدُوْا فِیْ سَبِیْلِ اللّٰهِ بِاَمْوَالِهِمْ وَاَنْفُسِهِمْ ۙ— اَعْظَمُ دَرَجَةً عِنْدَ اللّٰهِ ؕ— وَاُولٰٓىِٕكَ هُمُ الْفَآىِٕزُوْنَ ۟

ಸತ್ಯವಿಶ್ವಾಸವಿಟ್ಟು ವಲಸೆ ಹೋದವರು ಮತ್ತು ಅಲ್ಲ್ಲಾಹನ ಮಾರ್ಗದಲ್ಲಿ ತಮ್ಮ ಸಂಪತ್ತಿನಿAದಲೂ ಶರೀರಗಳಿಂದಲೂ ಯುದ್ಧ ಮಾಡಿರುವವರು ಅಲ್ಲಾಹನ ಬಳಿ ಅತ್ಯುನ್ನತ ಪದವಿಯುಳ್ಳವರಾಗಿದ್ದಾರೆ. ಮತ್ತು ಅವರೇ ಯಶಸ್ಸು ಪಡೆಯುವವರಾಗಿದ್ದಾರೆ. info
التفاسير: