पवित्र कुरअानको अर्थको अनुवाद - कन्नड अनुवाद : बशीर माइसुरी ।

رقم الصفحة:close

external-link copy
160 : 26

كَذَّبَتْ قَوْمُ لُوْطِ ١لْمُرْسَلِیْنَ ۟ۚۖ

ಲೂತರ ಜನಾಂಗವು ಸಂದೇಶವಾಹಕರನ್ನು ಸುಳ್ಳಾಗಿಸಿತು. info
التفاسير:

external-link copy
161 : 26

اِذْ قَالَ لَهُمْ اَخُوْهُمْ لُوْطٌ اَلَا تَتَّقُوْنَ ۟ۚ

ಅವರೊಂದಿಗೆ ಅವರ ಸಹೋದರ ಲೂತ್: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?” ಎಂದು ಕೇಳಿದ ಸಂದರ್ಭವನ್ನು ಸ್ಮರಿಸಿರಿ. info
التفاسير:

external-link copy
162 : 26

اِنِّیْ لَكُمْ رَسُوْلٌ اَمِیْنٌ ۟ۙ

ನಿಜವಾಗಿಯು ನಾನು ನಿಮ್ಮೆಡೆಗೆ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ. info
التفاسير:

external-link copy
163 : 26

فَاتَّقُوا اللّٰهَ وَاَطِیْعُوْنِ ۟ۚ

ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ. info
التفاسير:

external-link copy
164 : 26

وَمَاۤ اَسْـَٔلُكُمْ عَلَیْهِ مِنْ اَجْرٍ ۚ— اِنْ اَجْرِیَ اِلَّا عَلٰی رَبِّ الْعٰلَمِیْنَ ۟ؕ

ನಾನು ಈ ಕಾರ್ಯಕ್ಕಾಗಿ ನಿಮ್ಮಲ್ಲಿ ಯಾವ ಪ್ರತಿಫಲವನ್ನೂ ಕೇಳುವುದಿಲ್ಲ. ನನ್ನ ಪ್ರತಿಫಲವಂತು ಕೇವಲ ಸರ್ವಲೋಕಗಳ ಪ್ರಭುವಿನ ಬಳಿಯಿದೆ. info
التفاسير:

external-link copy
165 : 26

اَتَاْتُوْنَ الذُّكْرَانَ مِنَ الْعٰلَمِیْنَ ۟ۙ

ನೀವು ಜಗತ್ತಿನವರ ಪೈಕಿ ಪುರುಷರೊಂದಿಗೆ ಕಾಮೇಚ್ಛೆಯನ್ನು ಈಡೇರಿಸಿಕೊಳ್ಳುತ್ತಿರುವಿರಾ? info
التفاسير:

external-link copy
166 : 26

وَتَذَرُوْنَ مَا خَلَقَ لَكُمْ رَبُّكُمْ مِّنْ اَزْوَاجِكُمْ ؕ— بَلْ اَنْتُمْ قَوْمٌ عٰدُوْنَ ۟

ಮತ್ತು ನಿಮ್ಮ ಪ್ರಭುವು ನಿಮಗಾಗಿ ಸೃಷ್ಟಿಸಿರುವ ನಿಮ್ಮ ಪತ್ನಿಯರನ್ನು ತೊರೆದು ಬಿಡುತ್ತಿರಾ? ನಿಜಕ್ಕೂ ನೀವು ಮಿತಿಮೀರಿದ ಜನಾಂಗವಾಗಿದ್ದೀರಿ. info
التفاسير:

external-link copy
167 : 26

قَالُوْا لَىِٕنْ لَّمْ تَنْتَهِ یٰلُوْطُ لَتَكُوْنَنَّ مِنَ الْمُخْرَجِیْنَ ۟

ಅವರು ಹೇಳಿದರು: ಓ ಲೂತ್, ನೀನು ಇದನ್ನು ತೊರೆಯದಿದ್ದರೆ, ಖಂಡಿತ ನೀನು ಗಡಿಪಾರು ಮಾಡಲ್ಪಡುವೆ. info
التفاسير:

external-link copy
168 : 26

قَالَ اِنِّیْ لِعَمَلِكُمْ مِّنَ الْقَالِیْنَ ۟ؕ

ಲೂತ್ ಹೇಳಿದರು: ಖಂಡಿತವಾಗಿಯು ನಾನು ನಿಮ್ಮ ಕೃತ್ಯದಿಂದ ತೀವ್ರ ಬೇಸರಗೊಂಡಿರುವೆನು. info
التفاسير:

external-link copy
169 : 26

رَبِّ نَجِّنِیْ وَاَهْلِیْ مِمَّا یَعْمَلُوْنَ ۟

ನನ್ನ ಪ್ರಭುವೇ, ನನ್ನನ್ನೂ, ನನ್ನ ಕುಟುಂಬವನ್ನೂ ಅವರು ಎಸಗುತ್ತಿರುವ ಹೀನಕೃತ್ಯದಿಂದ ರಕ್ಷಿಸು info
التفاسير:

external-link copy
170 : 26

فَنَجَّیْنٰهُ وَاَهْلَهٗۤ اَجْمَعِیْنَ ۟ۙ

ಆಗ ನಾವು ಅವನನ್ನು ಮತ್ತು ಅವನ ಕುಟುಂಬದವರೆಲ್ಲರನ್ನು ರಕ್ಷಿಸಿದೆವು. info
التفاسير:

external-link copy
171 : 26

اِلَّا عَجُوْزًا فِی الْغٰبِرِیْنَ ۟ۚ

ಆದರೆ ಒರ್ವ ಮುದುಕಿಯ ಹೊರತು. ಅವಳು ಹಿಂದುಳಿದವರಲ್ಲಾಗಿ ಬಿಟ್ಟಳು. info
التفاسير:

external-link copy
172 : 26

ثُمَّ دَمَّرْنَا الْاٰخَرِیْنَ ۟ۚ

ಅನಂತರ ನಾವು ಉಳಿದವರನ್ನು ನಾಶ ಮಾಡಿಬಿಟ್ಟೆವು. info
التفاسير:

external-link copy
173 : 26

وَاَمْطَرْنَا عَلَیْهِمْ مَّطَرًا ۚ— فَسَآءَ مَطَرُ الْمُنْذَرِیْنَ ۟

ಮತ್ತು ನಾವು ಅವರ ಮೇಲೆ ವಿಶೇಷ ವಿಚಿತ್ರ ರೂಪದ ಮಳೆಯನ್ನು ವರ್ಷಿಸಿದೆವು. ಎಚ್ಚರಿಕೆ ನೀಡಲಾದವರ ಮೇಲೆ ಎರಗಿದ ಆ ಮಳೆಯು ಅದೆಷ್ಟು ನಿಕೃಷ್ಟವಾದುದು. info
التفاسير:

external-link copy
174 : 26

اِنَّ فِیْ ذٰلِكَ لَاٰیَةً ؕ— وَمَا كَانَ اَكْثَرُهُمْ مُّؤْمِنِیْنَ ۟

ನಿಶ್ಚಯವಾಗಿಯೂ ಇದರಲ್ಲಿ ನಿದರ್ಶನವಿದೆ ಮತ್ತು ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿರಲಿಲ್ಲ. info
التفاسير:

external-link copy
175 : 26

وَاِنَّ رَبَّكَ لَهُوَ الْعَزِیْزُ الرَّحِیْمُ ۟۠

ವಾಸ್ತವದಲ್ಲಿ ನಿಮ್ಮ ಪ್ರಭು ಪ್ರಚಂಡನು, ಕರಣಾನಿಧಿಯು ಆಗಿದ್ದಾನೆ. info
التفاسير:

external-link copy
176 : 26

كَذَّبَ اَصْحٰبُ لْـَٔیْكَةِ الْمُرْسَلِیْنَ ۟ۚۖ

ಐಕಾ ನಾಡಿನವರು ಸಂದೇಶವಾಹಕರನ್ನು ಸುಳ್ಳಾಗಿಸಿದರು. info
التفاسير:

external-link copy
177 : 26

اِذْ قَالَ لَهُمْ شُعَیْبٌ اَلَا تَتَّقُوْنَ ۟ۚ

ಅವರೊಂದಿಗೆ ಶುಐಬರು: “ನೀವು ಭಯಪಡುವುದಿಲ್ಲವೆ?” ಎಂದು ಕೇಳಿದ ಸಂದರ್ಭವನ್ನು ಸ್ಮರಿಸಿರಿ. info
التفاسير:

external-link copy
178 : 26

اِنِّیْ لَكُمْ رَسُوْلٌ اَمِیْنٌ ۟ۙ

ನಿಶ್ಚಯವಾಗಿಯು ನಾನು ನಿಮ್ಮ ಕಡೆಗೆ ಒಬ್ಬ ಪ್ರಮಾಣಿಕ ಸಂದೇಶವಾಹಕನಾಗಿದ್ದೇನೆ. info
التفاسير:

external-link copy
179 : 26

فَاتَّقُوا اللّٰهَ وَاَطِیْعُوْنِ ۟ۚ

ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಹಾಗೂ ನನ್ನನ್ನು ಅನುಸರಿಸಿರಿ. info
التفاسير:

external-link copy
180 : 26

وَمَاۤ اَسْـَٔلُكُمْ عَلَیْهِ مِنْ اَجْرٍ ۚ— اِنْ اَجْرِیَ اِلَّا عَلٰی رَبِّ الْعٰلَمِیْنَ ۟ؕ

ನಾನು ಈ ಕಾರ್ಯಕ್ಕಾಗಿ ನಿಮ್ಮಲ್ಲಿ ಯಾವ ಪ್ರತಿಫಲವನ್ನು ಕೇಳುವುದಿಲ್ಲ. ನನ್ನ ಪ್ರತಿಫಲವಂತು ಸರ್ವಲೋಕಗಳ ಪ್ರಭುವಿನ ಬಳಿಯಿದೆ. info
التفاسير:

external-link copy
181 : 26

اَوْفُوا الْكَیْلَ وَلَا تَكُوْنُوْا مِنَ الْمُخْسِرِیْنَ ۟ۚ

ನೀವು ಅಳತೆಯನ್ನು ಪೂರ್ತಿಯಾಗಿ ಕೊಡಿರಿ ಮತ್ತು ಕಡಿತಗೊಳಿಸುವವರಲ್ಲಿ ನೀವಾಗಬೇಡಿರಿ. info
التفاسير:

external-link copy
182 : 26

وَزِنُوْا بِالْقِسْطَاسِ الْمُسْتَقِیْمِ ۟ۚ

ಸಮತೋಲನವುಳ್ಳ ಸರಿಯಾದ ತಕ್ಕಡಿಯಿಂದಲೇ ನೀವು ತೂಕ ಮಾಡಿರಿ. info
التفاسير:

external-link copy
183 : 26

وَلَا تَبْخَسُوا النَّاسَ اَشْیَآءَهُمْ وَلَا تَعْثَوْا فِی الْاَرْضِ مُفْسِدِیْنَ ۟ۚ

ಮತ್ತು ಜನರಿಗೆ ಅವರ ವಸ್ತುಗಳನ್ನು ಕಡಿತಗೊಳಿಸಿ ನೀಡದಿರಿ. ಮತ್ತು ಭೂಮಿಯಲ್ಲಿ ಕ್ಷೆÆÃಭೆ ಹರಡುತ್ತಾ ನಡೆಯದಿರಿ. info
التفاسير: