पवित्र कुरअानको अर्थको अनुवाद - कन्नड अनुवाद : बशीर माइसुरी ।

رقم الصفحة:close

external-link copy
40 : 26

لَعَلَّنَا نَتَّبِعُ السَّحَرَةَ اِنْ كَانُوْا هُمُ الْغٰلِبِیْنَ ۟

ಇಂದು ಜಾದುಗಾರರು ಮೇಲುಗೈ ಸಾಧಿಸಿದರೆ, ನಾವು ಅವರನ್ನೇ ಅನುಸರಿಸಲೆಂದಾಗಿದೆ. info
التفاسير:

external-link copy
41 : 26

فَلَمَّا جَآءَ السَّحَرَةُ قَالُوْا لِفِرْعَوْنَ اَىِٕنَّ لَنَا لَاَجْرًا اِنْ كُنَّا نَحْنُ الْغٰلِبِیْنَ ۟

ಜಾದುಗಾರರು ಬಂದು ಫಿರ್‌ಔನನಿಗೆ ಹೇಳಿದರು: ನಾವೇನಾದರೂ ಮೇಲುಗೈ ಸಾಧಿಸಿದರೆ ನಮಗೆ ಪ್ರತಿಫಲವೇನಾದರೂ ಇದೆಯೇ? info
التفاسير:

external-link copy
42 : 26

قَالَ نَعَمْ وَاِنَّكُمْ اِذًا لَّمِنَ الْمُقَرَّبِیْنَ ۟

ಫಿರ್‌ಔನನು ಉತ್ತರಿಸಿದನು: ಹೌದು ಆಗ ನೀವು ನನ್ನ ಆಪ್ತರಲ್ಲಿ ಸೇರಿಬಿಡುವಿರಿ. info
التفاسير:

external-link copy
43 : 26

قَالَ لَهُمْ مُّوْسٰۤی اَلْقُوْا مَاۤ اَنْتُمْ مُّلْقُوْنَ ۟

ಮೂಸಾ(ಅ) ಅವರೊಡನೆ ಹೇಳಿದರು: ನೀವೇನನ್ನು ಹಾಕುವವರಿದ್ದೀರೋ ಅದನ್ನು ಹಾಕಿಬಿಡಿರಿ. info
التفاسير:

external-link copy
44 : 26

فَاَلْقَوْا حِبَالَهُمْ وَعِصِیَّهُمْ وَقَالُوْا بِعِزَّةِ فِرْعَوْنَ اِنَّا لَنَحْنُ الْغٰلِبُوْنَ ۟

ಕೊನೆಗೆ ಅವರು ತಮ್ಮ ಹಗ್ಗಗಳನ್ನೂ, ಲಾಠಿಗಳನ್ನೂ ಹಾಕಿದರು ಮತ್ತು ಹೇಳಿದರು: ಫಿರ್‌ಔನನ ಪ್ರತಾಪದಾಣೆ! ಖಂಡಿತ ನಾವು ಮೇಲುಗೈ ಸಾಧಿಸಲಿದ್ದೇವೆ. info
التفاسير:

external-link copy
45 : 26

فَاَلْقٰی مُوْسٰی عَصَاهُ فَاِذَا هِیَ تَلْقَفُ مَا یَاْفِكُوْنَ ۟ۚۖ

ಆಗ ಮೂಸಾ ಸಹ ತನ್ನ ಲಾಠಿಯನ್ನು ಹಾಕಿದರು. ಆಗಲೇ ಅದು (ಹೆಬ್ಬಾವಾಗಿ) ಅವರು ಸೃಷ್ಟಿಸಿದ ಮಿಥ್ಯಗಳನ್ನೆಲ್ಲಾ ನುಂಗಿಹಾಕಿತು. info
التفاسير:

external-link copy
46 : 26

فَاُلْقِیَ السَّحَرَةُ سٰجِدِیْنَ ۟ۙ

ಕೂಡಲೇ ಜಾದುಗಾರರೆಲ್ಲರೂ ಸಾಷ್ಟಾಂಗವೆರಗಿದರು. info
التفاسير:

external-link copy
47 : 26

قَالُوْۤا اٰمَنَّا بِرَبِّ الْعٰلَمِیْنَ ۟ۙ

ಅವರು ಹೇಳಿದರು: ನಾವು ಸರ್ವಲೋಕಗಳ ಪ್ರಭುವಿನಲ್ಲಿ ವಿಶ್ವಾಸವಿರಿಸಿದೆವು. info
التفاسير:

external-link copy
48 : 26

رَبِّ مُوْسٰی وَهٰرُوْنَ ۟

ಮೂಸಾ ಮತ್ತು ಹಾರೂನರ ಪ್ರಭುವಿನಲ್ಲಿ. info
التفاسير:

external-link copy
49 : 26

قَالَ اٰمَنْتُمْ لَهٗ قَبْلَ اَنْ اٰذَنَ لَكُمْ ۚ— اِنَّهٗ لَكَبِیْرُكُمُ الَّذِیْ عَلَّمَكُمُ السِّحْرَ ۚ— فَلَسَوْفَ تَعْلَمُوْنَ ؕ۬— لَاُقَطِّعَنَّ اَیْدِیَكُمْ وَاَرْجُلَكُمْ مِّنْ خِلَافٍ وَّلَاُوصَلِّبَنَّكُمْ اَجْمَعِیْنَ ۟ۚ

ಫಿರ್‌ಔನ್ ಹೇಳಿದನು: ನಾನು ನಿಮಗೆ ಅನುಮತಿ ನೀಡುವ ಮೊದಲೇ ನೀವು ಅವನನ್ನು ನಂಬಿ ಬಿಟ್ಟಿರಾ? ನಿಜವಾಗಿಯು ಅವನೇ ನಿಮ್ಮೆಲ್ಲರಿಗೂ ಜಾದುವನ್ನು ಕಲಿಸಿಕೊಟ್ಟಂತಹ ನಿಮ್ಮ ಗುರು ಆಗಿದ್ದಾನೆ. ಇನ್ನು ಸದ್ಯದಲ್ಲೇ ಅರಿತುಕೊಳ್ಳಲಿದ್ದೀರಿ. ನಾನು ಖಂಡಿತ ನಿಮ್ಮ ಕೈ, ಕಾಲುಗಳನ್ನು ಒಂದಕ್ಕೊAದು ವಿರುದ್ಧ ದಿಕ್ಕಿನಲ್ಲಿ ಕತ್ತರಿಸಿ ಹಾಕುವೆನು ಮತ್ತು ಖಂಡಿತ ನಿಮ್ಮೆಲ್ಲರನ್ನೂ ಶಿಲುಬೆಗೇರಿಸುವೆನು. info
التفاسير:

external-link copy
50 : 26

قَالُوْا لَا ضَیْرَ ؗ— اِنَّاۤ اِلٰی رَبِّنَا مُنْقَلِبُوْنَ ۟ۚ

ಅವರು ಹೇಳಿದರು: ತೊಂದರೆಯಿಲ್ಲ. ನಾವು ನಮ್ಮ ಪ್ರಭುವಿನೆಡೆಗೆ ಮರಳಿಹೋಗುವವರೇ ಆಗಿದ್ದೇವೆ. info
التفاسير:

external-link copy
51 : 26

اِنَّا نَطْمَعُ اَنْ یَّغْفِرَ لَنَا رَبُّنَا خَطٰیٰنَاۤ اَنْ كُنَّاۤ اَوَّلَ الْمُؤْمِنِیْنَ ۟ؕ۠

ನಾವು ಸತ್ಯವಿಶ್ವಾಸಿಗಳಲ್ಲಿ ಮೊದಲಿಗರಾಗಿದ್ದೆವೆಂಬ ಕಾರಣಕ್ಕೆ ನಮ್ಮ ಪ್ರಭುವು ನಮ್ಮ ಪಾಪಗಳನ್ನು ಕ್ಷಮಿಸಿ ಬಿಡುವನೆಂದು ನಾವು ತೀವ್ರ ಆಕಾಂಕ್ಷೆಯನ್ನಿರಿಸಿದ್ದೇವೆ. info
التفاسير:

external-link copy
52 : 26

وَاَوْحَیْنَاۤ اِلٰی مُوْسٰۤی اَنْ اَسْرِ بِعِبَادِیْۤ اِنَّكُمْ مُّتَّبَعُوْنَ ۟

ನಾವು ಮೂಸಾರವರೆಡೆಗೆ ದಿವ್ಯ ಸಂದೇಶ ನೀಡಿದೆವು: ನೀವು ನನ್ನ ದಾಸರನ್ನು ಕರೆದುಕೊಂಡು ರಾತ್ರೋ ರಾತ್ರಿ ಹೊರಡಿರಿ. ಖಂಡಿತ ನೀವು ಬೆನ್ನಟ್ಟಲ್ಪಡುವಿರಿ. info
التفاسير:

external-link copy
53 : 26

فَاَرْسَلَ فِرْعَوْنُ فِی الْمَدَآىِٕنِ حٰشِرِیْنَ ۟ۚ

ಫಿರ್‌ಔನನು ನಗರಗಳಲ್ಲಿ ಕರೆ ನೀಡುವವರನ್ನು ಕಳುಹಿಸಿದನು. info
التفاسير:

external-link copy
54 : 26

اِنَّ هٰۤؤُلَآءِ لَشِرْذِمَةٌ قَلِیْلُوْنَ ۟ۙ

ನಿಶ್ಚಯವಾಗಿಯು ಈ ಗುಂಪು ಅತ್ಯಲ್ಪ ಸಂಖ್ಯೆಯದ್ದಾಗಿದೆ. info
التفاسير:

external-link copy
55 : 26

وَاِنَّهُمْ لَنَا لَغَآىِٕظُوْنَ ۟ۙ

ಮತ್ತು ಅವರು ನಮ್ಮನ್ನು ತೀವ್ರವಾಗಿ ಕೆರಳಿಸಿದ್ದಾರೆ. info
التفاسير:

external-link copy
56 : 26

وَاِنَّا لَجَمِیْعٌ حٰذِرُوْنَ ۟ؕ

ಮತ್ತು ಅವರು ನಮ್ಮನ್ನು ತೀವ್ರವಾಗಿ ಕೆರಳಿಸಿದ್ದಾರೆ. info
التفاسير:

external-link copy
57 : 26

فَاَخْرَجْنٰهُمْ مِّنْ جَنّٰتٍ وَّعُیُوْنٍ ۟ۙ

ಕೊನೆಗೆ ನಾವು ಅವರನ್ನು ತೋಟಗಳಿಂದಲೂ, ಚಿಲುಮೆಗಳಿಂದಲೂ ಹೊರಕ್ಕಟ್ಟಿದೆವು. info
التفاسير:

external-link copy
58 : 26

وَّكُنُوْزٍ وَّمَقَامٍ كَرِیْمٍ ۟ۙ

ಮತ್ತು ಭಂಡಾರಗಳಿAದಲೂ, ಉತ್ತಮ ನಿವಾಸಗಳಿಂದಲೂ ಹೊರದೂಡಿದೆವು. info
التفاسير:

external-link copy
59 : 26

كَذٰلِكَ ؕ— وَاَوْرَثْنٰهَا بَنِیْۤ اِسْرَآءِیْلَ ۟ؕ

ಹೀಗೇ ಆಯಿತು ಮತ್ತು ನಾವು ಅವುಗಳಿಗೆ ಇಸ್ರಾಯೀಲ್ ಸಂತತಿಗಳನ್ನು ವಾರೀಸುದಾರರನ್ನಾಗಿ ಮಾಡಿದೆವು. info
التفاسير:

external-link copy
60 : 26

فَاَتْبَعُوْهُمْ مُّشْرِقِیْنَ ۟

ಕೊನೆಗೆ ಫಿರ್‌ಔನಿಯರು ಸೂರ್ಯೋದಯದ ಹೊತ್ತಿನಲ್ಲೇ ಅವರನ್ನು ಬೆಂಬತ್ತಿ ಹೋದರು. info
التفاسير: