വിശുദ്ധ ഖുർആൻ പരിഭാഷ - കന്നഡ പരിഭാഷ - ഹംസ പുത്തൂർ

പേജ് നമ്പർ:close

external-link copy
109 : 3

وَلِلّٰهِ مَا فِی السَّمٰوٰتِ وَمَا فِی الْاَرْضِ ؕ— وَاِلَی اللّٰهِ تُرْجَعُ الْاُمُوْرُ ۟۠

ಭೂಮ್ಯಾಕಾಶಗಳಲ್ಲಿರುವ ವಸ್ತುಗಳೆಲ್ಲವೂ ಅಲ್ಲಾಹನಿಗೆ ಸೇರಿದ್ದು. ಎಲ್ಲಾ ವಿಷಯಗಳೂ ಅಲ್ಲಾಹನ ಬಳಿಗೇ ಮರಳುತ್ತವೆ. info
التفاسير:

external-link copy
110 : 3

كُنْتُمْ خَیْرَ اُمَّةٍ اُخْرِجَتْ لِلنَّاسِ تَاْمُرُوْنَ بِالْمَعْرُوْفِ وَتَنْهَوْنَ عَنِ الْمُنْكَرِ وَتُؤْمِنُوْنَ بِاللّٰهِ ؕ— وَلَوْ اٰمَنَ اَهْلُ الْكِتٰبِ لَكَانَ خَیْرًا لَّهُمْ ؕ— مِنْهُمُ الْمُؤْمِنُوْنَ وَاَكْثَرُهُمُ الْفٰسِقُوْنَ ۟

ನೀವು ಮನುಷ್ಯರಿಗಾಗಿ ಹೊರತರಲಾದ ಉತ್ತಮ ಸಮುದಾಯವಾಗಿದ್ದೀರಿ. ನೀವು ಒಳಿತನ್ನು ಆದೇಶಿಸುತ್ತೀರಿ, ಕೆಡುಕನ್ನು ವಿರೋಧಿಸುತ್ತೀರಿ ಮತ್ತು ಅಲ್ಲಾಹನಲ್ಲಿ ವಿಶ್ವಾಸವಿಡುತ್ತೀರಿ. ಗ್ರಂಥದವರು ಸತ್ಯವಿಶ್ವಾಸಿಗಳಾಗುತ್ತಿದ್ದರೆ ಅದು ಅವರಿಗೆ ಒಳಿತಾಗಿರುತ್ತಿತ್ತು. ಅವರಲ್ಲಿ ಸತ್ಯವಿಶ್ವಾಸಿಗಳಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರು ದುಷ್ಕರ್ಮಿಗಳಾಗಿದ್ದಾರೆ. info
التفاسير:

external-link copy
111 : 3

لَنْ یَّضُرُّوْكُمْ اِلَّاۤ اَذًی ؕ— وَاِنْ یُّقَاتِلُوْكُمْ یُوَلُّوْكُمُ الْاَدْبَارَ ۫— ثُمَّ لَا یُنْصَرُوْنَ ۟

ಕೆಲವು ಕೀಟಲೆಗಳನ್ನು ಬಿಟ್ಟರೆ ಅವರು ನಿಮಗೆ ಯಾವುದೇ ತೊಂದರೆ ಮಾಡಲಾರರು. ಅವರು ನಿಮ್ಮೊಂದಿಗೆ ಯುದ್ಧ ಮಾಡಿದರೆ ಬೆನ್ನು ತಿರುಗಿಸಿ ಓಡುವರು. ನಂತರ ಅವರಿಗೆ ಯಾವುದೇ ಸಹಾಯವು ದೊರೆಯುವುದಿಲ್ಲ. info
التفاسير:

external-link copy
112 : 3

ضُرِبَتْ عَلَیْهِمُ الذِّلَّةُ اَیْنَ مَا ثُقِفُوْۤا اِلَّا بِحَبْلٍ مِّنَ اللّٰهِ وَحَبْلٍ مِّنَ النَّاسِ وَبَآءُوْ بِغَضَبٍ مِّنَ اللّٰهِ وَضُرِبَتْ عَلَیْهِمُ الْمَسْكَنَةُ ؕ— ذٰلِكَ بِاَنَّهُمْ كَانُوْا یَكْفُرُوْنَ بِاٰیٰتِ اللّٰهِ وَیَقْتُلُوْنَ الْاَنْۢبِیَآءَ بِغَیْرِ حَقٍّ ؕ— ذٰلِكَ بِمَا عَصَوْا وَّكَانُوْا یَعْتَدُوْنَ ۟ۗ

ಅವರು ಎಲ್ಲೇ ಇದ್ದರೂ ಅವರ ಮೇಲೆ ಅವಮಾನವನ್ನು ಹೇರಲಾಗಿದೆ. ಅಲ್ಲಾಹನ ಹಗ್ಗದ (ಕರಾರಿನ) ಅಥವಾ ಜನರ ಹಗ್ಗದ (ಕರಾರಿನ) ಆಶ್ರಯದಲ್ಲಿರುವವರ ಹೊರತು. ಅವರು ಅಲ್ಲಾಹನ ಕೋಪಕ್ಕೆ ಪಾತ್ರರಾಗಿದ್ದಾರೆ. ಅವರ ಮೇಲೆ ದರಿದ್ರತೆಯನ್ನು ಹೇರಲಾಗಿದೆ. ಅದೇಕೆಂದರೆ ಅವರು ಅಲ್ಲಾಹನ ವಚನಗಳನ್ನು ನಿಷೇಧಿಸುತ್ತಿದ್ದರು ಮತ್ತು ಪ್ರವಾದಿಗಳನ್ನು ಅನ್ಯಾಯವಾಗಿ ಕೊಲ್ಲುತ್ತಿದ್ದರು. ಅದೇಕೆಂದರೆ ಅವರು ಅವಿಧೇಯತೆ ತೋರುತ್ತಿದ್ದರು ಮತ್ತು ಅತಿರೇಕವೆಸಗುತ್ತಿದ್ದರು. info
التفاسير:

external-link copy
113 : 3

لَیْسُوْا سَوَآءً ؕ— مِنْ اَهْلِ الْكِتٰبِ اُمَّةٌ قَآىِٕمَةٌ یَّتْلُوْنَ اٰیٰتِ اللّٰهِ اٰنَآءَ الَّیْلِ وَهُمْ یَسْجُدُوْنَ ۟

ಅವರೆಲ್ಲರೂ ಒಂದೇ ರೀತಿಯಲ್ಲ. ರಾತ್ರಿ ವೇಳೆಯಲ್ಲಿ ಅಲ್ಲಾಹನ ವಚನಗಳನ್ನು ಪಠಿಸುತ್ತಾ ಮತ್ತು ಸಾಷ್ಟಾಂಗ ಮಾಡುತ್ತಾ (ಸತ್ಯದಲ್ಲಿ) ದೃಢವಾಗಿ ನಿಂತ ಒಂದು ಗುಂಪು ಗ್ರಂಥದವರಲ್ಲಿದೆ. info
التفاسير:

external-link copy
114 : 3

یُؤْمِنُوْنَ بِاللّٰهِ وَالْیَوْمِ الْاٰخِرِ وَیَاْمُرُوْنَ بِالْمَعْرُوْفِ وَیَنْهَوْنَ عَنِ الْمُنْكَرِ وَیُسَارِعُوْنَ فِی الْخَیْرٰتِ ؕ— وَاُولٰٓىِٕكَ مِنَ الصّٰلِحِیْنَ ۟

ಅವರು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುತ್ತಾರೆ, ಒಳಿತನ್ನು ಆದೇಶಿಸುತ್ತಾರೆ ಮತ್ತು ಕೆಡುಕನ್ನು ವಿರೋಧಿಸುತ್ತಾರೆ ಹಾಗೂ ಸತ್ಕಾರ್ಯಗಳಲ್ಲಿ ತ್ವರೆ ಮಾಡುತ್ತಾ ಮುನ್ನುಗ್ಗುತ್ತಾರೆ. ಅವರೇ ನೀತಿವಂತರಲ್ಲಿ ಸೇರಿದವರು. info
التفاسير:

external-link copy
115 : 3

وَمَا یَفْعَلُوْا مِنْ خَیْرٍ فَلَنْ یُّكْفَرُوْهُ ؕ— وَاللّٰهُ عَلِیْمٌۢ بِالْمُتَّقِیْنَ ۟

ಅವರು ಯಾವುದೇ ಒಳಿತು ಮಾಡಿದರೂ ಅದು ತಿರಸ್ಕರಿಸಲ್ಪಡುವುದಿಲ್ಲ. ಅಲ್ಲಾಹು ದೇವಭಯವುಳ್ಳವರನ್ನು ಬಹಳ ಚೆನ್ನಾಗಿ ತಿಳಿದಿದ್ದಾನೆ. info
التفاسير: