വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

പേജ് നമ്പർ:close

external-link copy
55 : 33

لَا جُنَاحَ عَلَیْهِنَّ فِیْۤ اٰبَآىِٕهِنَّ وَلَاۤ اَبْنَآىِٕهِنَّ وَلَاۤ اِخْوَانِهِنَّ وَلَاۤ اَبْنَآءِ اِخْوَانِهِنَّ وَلَاۤ اَبْنَآءِ اَخَوٰتِهِنَّ وَلَا نِسَآىِٕهِنَّ وَلَا مَا مَلَكَتْ اَیْمَانُهُنَّ ۚ— وَاتَّقِیْنَ اللّٰهَ ؕ— اِنَّ اللّٰهَ كَانَ عَلٰی كُلِّ شَیْءٍ شَهِیْدًا ۟

ತಮ್ಮ ತಂದೆಯವರ, ತಮ್ಮ ಪುತ್ರರ, ತಮ್ಮ ಸಹೋದರರ, ತಮ್ಮ ಸಹೋದರರ ಪುತ್ರರ, ತಮ್ಮ ಸಹೋದರಿಯರ ಪುತ್ರರ, ತಮ್ಮ (ಒಡನಾಟದ) ಸ್ತಿçÃಯರ ಮತ್ತು ಒಡೆತನದಲ್ಲಿರುವ ದಾಸಿಯರ ಮುಂದೆ ಮುಸುಕು ಹಾಕದಿರುವುದರಲ್ಲಿ ಪೈಗಂಬರ್ ರವರ ಪತ್ನಿಯರ ಮೇಲೆ ಯಾವುದೇ ದೋಷವಿರುವುದಿಲ್ಲ. ಮತ್ತು ನೀವು ಅಲ್ಲಾಹನನ್ನು ಭಯಪಡುತ್ತಿರಿ. ನಿಶ್ಚಯವಾಗಿಯೂ ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಕ್ಷಿಯಾಗಿರುತ್ತಾನೆ. info
التفاسير:

external-link copy
56 : 33

اِنَّ اللّٰهَ وَمَلٰٓىِٕكَتَهٗ یُصَلُّوْنَ عَلَی النَّبِیِّ ؕ— یٰۤاَیُّهَا الَّذِیْنَ اٰمَنُوْا صَلُّوْا عَلَیْهِ وَسَلِّمُوْا تَسْلِیْمًا ۟

ಅಲ್ಲಾಹನು ಮತ್ತು ಅವನ ದೂತರು ಪೈಗಂಬರರ ಮೇಲೆ ಸ್ವಲಾತ್ (ಸ್ವಾಸ್ತಿವಚನ) ಕಳುಹಿಸುತ್ತಾರೆ. ಓ ಸತ್ಯವಿಶ್ವಾಸಿಗಳೇ, ನೀವು ಸಹ ಅವರ ಮೇಲೆ ಸ್ವಲಾತ್ ಮತ್ತು ಸಲಾಂ (ಅಭಿನಂದನೆ)ಕಳುಹಿಸಿರಿ. info
التفاسير:

external-link copy
57 : 33

اِنَّ الَّذِیْنَ یُؤْذُوْنَ اللّٰهَ وَرَسُوْلَهٗ لَعَنَهُمُ اللّٰهُ فِی الدُّنْیَا وَالْاٰخِرَةِ وَاَعَدَّ لَهُمْ عَذَابًا مُّهِیْنًا ۟

ಅಲ್ಲಾಹ್ ಮತ್ತು ಅವನ ಸಂದೇಶವಾಹಕರಿಗೆ ತೊಂದರೆ ಕೊಡುವವರ ಮೇಲೆ ಇಹಲೋಕದಲ್ಲೂ, ಪರಲೋಕದಲ್ಲೂ ಅಲ್ಲಾಹನ ಶಾಪವಿದೆ ಮತ್ತು ಅವನು ಅವರಿಗೆ ಅಪಮಾನಕರ ಯಾತನೆಯನ್ನು ಸಿದ್ಧಗೊಳಿಸಿದ್ದಾನೆ. info
التفاسير:

external-link copy
58 : 33

وَالَّذِیْنَ یُؤْذُوْنَ الْمُؤْمِنِیْنَ وَالْمُؤْمِنٰتِ بِغَیْرِ مَا اكْتَسَبُوْا فَقَدِ احْتَمَلُوْا بُهْتَانًا وَّاِثْمًا مُّبِیْنًا ۟۠

ಮತ್ತು ಸತ್ಯವಿಶ್ವಾಸಿಗಳನ್ನು ಮತ್ತು ಸತ್ಯವಿಶ್ವಾಸಿನಿಯರನ್ನು ಅವರ ಯಾವುದೇ ಅಪರಾಧವಿಲ್ಲದೆಯೇ ತೊಂದರೆ ಕೊಡುವವರು ದಿಟವಾಗಿಯೂ ಘೋರ ಸುಳ್ಳಾರೋಪವನ್ನು ಮತ್ತು ಸ್ಪಷ್ಟ ಪಾಪದ ಭಾರವನ್ನು ಹೊತ್ತುಕೊಂಡರು. info
التفاسير:

external-link copy
59 : 33

یٰۤاَیُّهَا النَّبِیُّ قُلْ لِّاَزْوَاجِكَ وَبَنٰتِكَ وَنِسَآءِ الْمُؤْمِنِیْنَ یُدْنِیْنَ عَلَیْهِنَّ مِنْ جَلَابِیْبِهِنَّ ؕ— ذٰلِكَ اَدْنٰۤی اَنْ یُّعْرَفْنَ فَلَا یُؤْذَیْنَ ؕ— وَكَانَ اللّٰهُ غَفُوْرًا رَّحِیْمًا ۟

ಓ ಪೈಗಂಬರರೇ, ನೀವು ತಮ್ಮ ಪತ್ನಿಯರಿಗೆ, ತಮ್ಮ ಪುತ್ರಿಯರಿಗೆ ಮತ್ತು ಸತ್ಯವಿಶ್ವಾಸಿನಿ ಸ್ತಿçÃಯರಿಗೆ ಹೇಳಿರಿ ಅವರು ತಮ್ಮ ಮೇಲೆ ತಮ್ಮ ಹೊದಿಕೆ ಸೆರಗುಗಳನ್ನು ಇಳಿಸಿಕೊಳ್ಳಲಿ. ಇದು ಅವರು ಗುರುತಿಸಲ್ಪಡದಿರಲು. ಕಿರುಕುಳಕ್ಕೊಳಗಾಗದಿರಲು ಹೆಚ್ಚಿನ ಸಾಧ್ಯತೆಯಿದೆ. ಮತ್ತು ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿದ್ದಾನೆ. info
التفاسير:

external-link copy
60 : 33

لَىِٕنْ لَّمْ یَنْتَهِ الْمُنٰفِقُوْنَ وَالَّذِیْنَ فِیْ قُلُوْبِهِمْ مَّرَضٌ وَّالْمُرْجِفُوْنَ فِی الْمَدِیْنَةِ لَنُغْرِیَنَّكَ بِهِمْ ثُمَّ لَا یُجَاوِرُوْنَكَ فِیْهَاۤ اِلَّا قَلِیْلًا ۟ۚۛ

ಓ ಪೈಗಂಬರರೇ, ನೀವು ತಮ್ಮ ಪತ್ನಿಯರಿಗೆ, ತಮ್ಮ ಪುತ್ರಿಯರಿಗೆ ಮತ್ತು ಸತ್ಯವಿಶ್ವಾಸಿನಿ ಸ್ತಿçÃಯರಿಗೆ ಹೇಳಿರಿ ಅವರು ತಮ್ಮ ಮೇಲೆ ತಮ್ಮ ಹೊದಿಕೆ ಸೆರಗುಗಳನ್ನು ಇಳಿಸಿಕೊಳ್ಳಲಿ. ಇದು ಅವರು ಗುರುತಿಸಲ್ಪಡದಿರಲು. ಕಿರುಕುಳಕ್ಕೊಳಗಾಗದಿರಲು ಹೆಚ್ಚಿನ ಸಾಧ್ಯತೆಯಿದೆ. ಮತ್ತು ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿದ್ದಾನೆ. info
التفاسير:

external-link copy
61 : 33

مَّلْعُوْنِیْنَ ۛۚ— اَیْنَمَا ثُقِفُوْۤا اُخِذُوْا وَقُتِّلُوْا تَقْتِیْلًا ۟

ಅವರು ಶಪಿಸಲ್ಪಟ್ಟವರು. ಅವರೆಲ್ಲೇ ಕಂಡು ಬಂದರೂ ಹಿಡಿಯಲ್ಪಡುವರು ಮತ್ತು ನಿರ್ದಾಕ್ಷಿಣ್ಯವಾಗಿ ಕೊಲ್ಲಲ್ಪಡುವರು. info
التفاسير:

external-link copy
62 : 33

سُنَّةَ اللّٰهِ فِی الَّذِیْنَ خَلَوْا مِنْ قَبْلُ ۚ— وَلَنْ تَجِدَ لِسُنَّةِ اللّٰهِ تَبْدِیْلًا ۟

ಅವರಿಗಿಂತ ಮೊದಲು ಗತಿಸಿದವರ ವಿಚಾರದಲ್ಲಿಯೂ ಅಲ್ಲಾಹನ ಇದೇ ಕ್ರಮವು ಜಾರಿಯಲ್ಲಿತ್ತು ಮತ್ತು ನೀವು ಅಲ್ಲಾಹನ ಕ್ರಮದಲ್ಲಿ ಯಾವುದೇ ಬದಲಾವಣೆಯನ್ನು ಕಾಣಲಾರಿರಿ. info
التفاسير: