വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

പേജ് നമ്പർ:close

external-link copy
23 : 33

مِنَ الْمُؤْمِنِیْنَ رِجَالٌ صَدَقُوْا مَا عَاهَدُوا اللّٰهَ عَلَیْهِ ۚ— فَمِنْهُمْ مَّنْ قَضٰی نَحْبَهٗ وَمِنْهُمْ مَّنْ یَّنْتَظِرُ ۖؗ— وَمَا بَدَّلُوْا تَبْدِیْلًا ۟ۙ

ಸತ್ಯವಿಶ್ವಾಸಿಗಳ ಪೈಕಿ ಕೆಲವರು ತಾವು ಅಲ್ಲಾಹನೊಂದಿಗೆ ಮಾಡಿರುವ ಒಪ್ಪಂದವನ್ನು ನಿಜ ಮಾಡಿ ತೋರಿಸಿರುತ್ತಾರೆ. ಕೆಲವರು ಹುತಾತ್ಮರಾಗುವ ಮೂಲಕ ತಮ್ಮ ಪ್ರತಿಜ್ಞೆಯನ್ನು ಪೂರ್ತಿಕರಿಸಿರುತ್ತಾರೆ ಮತ್ತು ಕೆಲವರು ಅವಕಾಶದ ನಿರೀಕ್ಷೆಯಲ್ಲಿದ್ದಾರೆ ಮತ್ತು ಅವರು ಕರಾರಿನಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. info
التفاسير:

external-link copy
24 : 33

لِّیَجْزِیَ اللّٰهُ الصّٰدِقِیْنَ بِصِدْقِهِمْ وَیُعَذِّبَ الْمُنٰفِقِیْنَ اِنْ شَآءَ اَوْ یَتُوْبَ عَلَیْهِمْ ؕ— اِنَّ اللّٰهَ كَانَ غَفُوْرًا رَّحِیْمًا ۟ۚ

ಇದು ಅಲ್ಲಾಹನು ಸತ್ಯವಂತರಿಗೆ ಅವರ ಸತ್ಯತೆಯ ಪ್ರತಿಫಲವನ್ನು ನೀಡಲೆಂದೂ, ಕಪಟ ವಿಶ್ವಾಸಿಗಳಿಗೆ ತಾನಿಚ್ಛಿಸಿದರೆ ಶಿಕ್ಷೆ ನೀಡಲೆಂದೂ ಅಥವಾ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಲೆಂದಾಗಿದೆ. ಅಲ್ಲಾಹನು ಮಹಾ ಕ್ಷಮಾಶೀಲನು, ಕರುಣಾನಿಧಿಯು ಆಗಿದ್ದಾನೆ. info
التفاسير:

external-link copy
25 : 33

وَرَدَّ اللّٰهُ الَّذِیْنَ كَفَرُوْا بِغَیْظِهِمْ لَمْ یَنَالُوْا خَیْرًا ؕ— وَكَفَی اللّٰهُ الْمُؤْمِنِیْنَ الْقِتَالَ ؕ— وَكَانَ اللّٰهُ قَوِیًّا عَزِیْزًا ۟ۚ

ಮತ್ತು ಅಲ್ಲಾಹನು ಸತ್ಯನಿಷೇಧಿಗಳನ್ನು ಅವರ ಕೋಪದೊಂದಿಗೆ (ವಿಫಲರಾಗಿ) ಮರಳಿಸಿದನು. ಅವರು ಯಾವುದೇ ಒಳಿತನ್ನು ಪಡೆಯಲಿಲ್ಲ ಹಾಗೂ ಯುದ್ದದಲ್ಲಿ ಸತ್ಯವಿಶ್ವಾಸಿಗಳಿಗೆ ಅಲ್ಲಾಹನೇ ಸಾಕು. ಅಲ್ಲಾಹನು ಮಹಾಶಕ್ತಿವಂತನೂ, ಪ್ರಚಂಡನೂ ಆಗಿದ್ದಾನೆ. info
التفاسير:

external-link copy
26 : 33

وَاَنْزَلَ الَّذِیْنَ ظَاهَرُوْهُمْ مِّنْ اَهْلِ الْكِتٰبِ مِنْ صَیَاصِیْهِمْ وَقَذَفَ فِیْ قُلُوْبِهِمُ الرُّعْبَ فَرِیْقًا تَقْتُلُوْنَ وَتَاْسِرُوْنَ فَرِیْقًا ۟ۚ

ಮತ್ತು ಗ್ರಂಥದವರ ಪೈಕಿ ಅವರಿಗೆ (ಸತ್ಯ ನಿಷೇಧಿಗಳಿಗೆ) ಬೆಂಬಲ ನೀಡಿದವರನ್ನು ಅವನು ಅವರ ಕೋಟೆಗಳಿಂದ ಕೆಳಗಿಳಿಸಿದನು. ಹಾಗೂ ಅವರ ಹೃದಯಗಳಲ್ಲಿ ಭೀತಿಯನ್ನು ಹಾಕಿಬಿಟ್ಟನು. ಅವರ ಒಂದು ಗುಂಪನ್ನು ನೀವು ವಧಿಸುತ್ತಿರುವಿರಿ ಮತ್ತು ಇನ್ನೊಂದು ಗುಂಪನ್ನು ಬಂಧಿಗಳನ್ನಾಗಿ ಮಾಡುತ್ತಿರುವಿರಿ. info
التفاسير:

external-link copy
27 : 33

وَاَوْرَثَكُمْ اَرْضَهُمْ وَدِیَارَهُمْ وَاَمْوَالَهُمْ وَاَرْضًا لَّمْ تَطَـُٔوْهَا ؕ— وَكَانَ اللّٰهُ عَلٰی كُلِّ شَیْءٍ قَدِیْرًا ۟۠

ಮತ್ತು ಅವನು ನಿಮ್ಮನ್ನು ಅವರ ಭೂಮಿಯ, ಅವರ ಮನೆಮಠಗಳ, ಅವರ ಸಂಪತ್ತುಗಳ ವಾರೀಸುದಾರರನ್ನಾಗಿ ಮಾಡಿದನು ಮತ್ತು ಈ ಹಿಂದೆ ನೀವು ಕಾಲಿಟ್ಟಿರದ ಭೂಮಿಯನ್ನೂ ಸಹ ದಯಪಾಲಿಸಿದನು. ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ. info
التفاسير:

external-link copy
28 : 33

یٰۤاَیُّهَا النَّبِیُّ قُلْ لِّاَزْوَاجِكَ اِنْ كُنْتُنَّ تُرِدْنَ الْحَیٰوةَ الدُّنْیَا وَزِیْنَتَهَا فَتَعَالَیْنَ اُمَتِّعْكُنَّ وَاُسَرِّحْكُنَّ سَرَاحًا جَمِیْلًا ۟

ಓ ಪೈಗಂಬರರೇ, ತಮ್ಮ ಪತ್ನಿಯರಿಗೆ ಹೇಳಿರಿ: ನೀವು ಈ ಇಹಲೋಕ ಜೀವನವನ್ನು ಮತ್ತು ಅದರ ಅಲಂಕಾರವನ್ನು ಬಯಸುತ್ತೀರಾದರೆ ಬನ್ನಿರಿ, ನಾನು ನಿಮಗೆ ಏನಾದರೂ ನೀಡಿ ನಿಮ್ಮನ್ನು ಉತ್ತಮ ರೀತಿಯಲ್ಲಿ ವಿಚ್ಛೇದನೆ ಕೊಟ್ಟುಬಿಡುತ್ತೇನೆ. info
التفاسير:

external-link copy
29 : 33

وَاِنْ كُنْتُنَّ تُرِدْنَ اللّٰهَ وَرَسُوْلَهٗ وَالدَّارَ الْاٰخِرَةَ فَاِنَّ اللّٰهَ اَعَدَّ لِلْمُحْسِنٰتِ مِنْكُنَّ اَجْرًا عَظِیْمًا ۟

ಇನ್ನು ನೀವು ಅಲ್ಲಾಹನನ್ನು, ಅವನ ಸಂದೇಶವಾಹಕರನ್ನು ಹಾಗೂ ಪರಲೋಕ ಭವನವನ್ನು ಬಯಸಿದರೆ, ಖಂಡಿತವಾಗಿಯು ನಿಮ್ಮ ಪೈಕಿಯ ಒಳಿತನ ಪಾಲಕಿಯರಿಗೆ ಅಲ್ಲಾಹನು ಮಹಾ ಪ್ರತಿಫಲವನ್ನು ಸಿದ್ಧಮಾಡಿಬಿಟ್ಟಿರುತ್ತಾನೆ. info
التفاسير:

external-link copy
30 : 33

یٰنِسَآءَ النَّبِیِّ مَنْ یَّاْتِ مِنْكُنَّ بِفَاحِشَةٍ مُّبَیِّنَةٍ یُّضٰعَفْ لَهَا الْعَذَابُ ضِعْفَیْنِ ؕ— وَكَانَ ذٰلِكَ عَلَی اللّٰهِ یَسِیْرًا ۟

ಓ ಪೈಗಂಬರರ, ಪತ್ನಿಯರೇ ನಿಮ್ಮಲ್ಲಿ ಯಾರಾದರೂ ಪ್ರತ್ಯಕ್ಷವಾಗಿರುವ ನಿರ್ಲಜ್ಜೆಯ ಕೃತ್ಯವನ್ನು ಎಸಗಿದರೆ, ಅವರಿಗೆ ಇಮ್ಮಡಿ ಶಿಕ್ಷೆಯನ್ನು ನೀಡಲಾಗುವುದು ಮತ್ತು ಇದು ಅಲ್ಲಾಹನಿಗೆ ಸರಳ ಕಾರ್ಯವಾಗಿದೆ. info
التفاسير: