വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

പേജ് നമ്പർ:close

external-link copy
51 : 30

وَلَىِٕنْ اَرْسَلْنَا رِیْحًا فَرَاَوْهُ مُصْفَرًّا لَّظَلُّوْا مِنْ بَعْدِهٖ یَكْفُرُوْنَ ۟

ಮತ್ತು ನಾವು ಪ್ರತಿಕೂಲ ಮಾರುತವನ್ನು ಕಳುಹಿಸಿದರೆ (ಇದರಕಾರಣ) ಅವರು ಹೊಲಗಳನ್ನು ತನ್ಮೂಲಕ (ಬಾಡಿ) ಹಳದಿಯಾಗಿ ಕಂಡಾಗ ಖಂಡಿತ ಅವರು ಅದರ ನಂತರ ಕೃತಘ್ನತೆ ತೋರುವರು. info
التفاسير:

external-link copy
52 : 30

فَاِنَّكَ لَا تُسْمِعُ الْمَوْتٰى وَلَا تُسْمِعُ الصُّمَّ الدُّعَآءَ اِذَا وَلَّوْا مُدْبِرِیْنَ ۟

ನಿಸ್ಸಂದೇಹವಾಗಿಯೂ ನೀವು ಮೃತರನ್ನು ಕೇಳಿಸಲಾರಿರಿ ಮತ್ತು ಬೆನ್ನು ತಿರುಗಿಸಿ ಹೋಗುತ್ತಿರುವ ಕಿವುಡರಿಗೆ ಕೇಳಿಸಲಾರಿರಿ; info
التفاسير:

external-link copy
53 : 30

وَمَاۤ اَنْتَ بِهٰدِ الْعُمْیِ عَنْ ضَلٰلَتِهِمْ ؕ— اِنْ تُسْمِعُ اِلَّا مَنْ یُّؤْمِنُ بِاٰیٰتِنَا فَهُمْ مُّسْلِمُوْنَ ۟۠

ನೀವು ಕುರುಡರನ್ನು ಅವರ ಪಥಭ್ರಷ್ಟತೆಯಿಂದ ಸನ್ಮಾರ್ಗಕ್ಕೆ ಮುನ್ನಡೆಸುವವರಲ್ಲ. ನೀವು ಕೇವಲ ನಮ್ಮ ದೃಷ್ಟಾಂತಗಳನ್ನು ವಿಶ್ವಾಸವಿರಿಸುವವರಿಗೆ ಕೇಳಿಸಬಲ್ಲಿರಿ. ಆದ್ದರಿಂದ ಅವರೇ ವಿಧೇಯತೆ ತೋರುವವರಾಗಿದ್ದಾರೆ. info
التفاسير:

external-link copy
54 : 30

اَللّٰهُ الَّذِیْ خَلَقَكُمْ مِّنْ ضُؔعْفٍ ثُمَّ جَعَلَ مِنْ بَعْدِ ضُؔعْفٍ قُوَّةً ثُمَّ جَعَلَ مِنْ بَعْدِ قُوَّةٍ ضُؔعْفًا وَّشَیْبَةً ؕ— یَخْلُقُ مَا یَشَآءُ ۚ— وَهُوَ الْعَلِیْمُ الْقَدِیْرُ ۟

ನಿಮ್ಮನ್ನು ಬಲಹೀನ ಸ್ಥಿತಿಯಲ್ಲಿ ಸೃಷ್ಟಿಸಿದವನು ಅಲ್ಲಾಹನು. ತರುವಾಯ ಆ ಬಲಹೀನತೆಯ ನಂತರ ಶಕ್ತರನ್ನಾಗಿ ಮಾಡಿದನು. ನಂತರ ಆ ಶಕ್ತಿಯ ಬಳಿಕ ಬಲಹೀನತೆ ಮತ್ತು ವೃದ್ಧಾಪ್ಯವನ್ನು ನಿಶ್ಚಯಿಸಿದನು. ಅವನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ ಮತ್ತು ಅವನು ಸಂಪೂರ್ಣ ಅರಿವುಳ್ಳವನೂ, ಸರ್ವಶಕ್ತನೂ ಆಗಿರುವನು. info
التفاسير:

external-link copy
55 : 30

وَیَوْمَ تَقُوْمُ السَّاعَةُ یُقْسِمُ الْمُجْرِمُوْنَ ۙ۬— مَا لَبِثُوْا غَیْرَ سَاعَةٍ ؕ— كَذٰلِكَ كَانُوْا یُؤْفَكُوْنَ ۟

ಅಂತ್ಯ ಗಳಿಗೆ ಸಂಭವಿಸುವ ದಿನ ಅಪರಾಧಿಗಳು ನಾವು (ಭೂಲೋಕದಲ್ಲಿ) ಒಂದು ಗಳಿಗೆಗಿಂತ ಹೆಚ್ಚು ಕಾಲ ತಂಗಿರಲಿಲ್ಲವೆAದು ಆಣೆ ಹಾಕಲಿದ್ದಾರೆ. ಇದೇ ಪ್ರಕಾರ ಅವರು ದಾರಿತಪ್ಪಿದವರಾಗಿಯೇ ಇದ್ದರು. info
التفاسير:

external-link copy
56 : 30

وَقَالَ الَّذِیْنَ اُوْتُوا الْعِلْمَ وَالْاِیْمَانَ لَقَدْ لَبِثْتُمْ فِیْ كِتٰبِ اللّٰهِ اِلٰى یَوْمِ الْبَعْثِ ؗ— فَهٰذَا یَوْمُ الْبَعْثِ وَلٰكِنَّكُمْ كُنْتُمْ لَا تَعْلَمُوْنَ ۟

ಜ್ಞಾನ ಹಾಗೂ ಸತ್ಯವಿಶ್ವಾಸ ನೀಡಲಾದವರು ಉತ್ತರಿಸುವರು: ನೀವಂತು ಅಲ್ಲಾಹನ ದಾಖಲೆಯಲ್ಲಿರುವ ಪ್ರಕಾರ ಪುನರುತ್ಥಾನ ದಿನದವರೆಗೆ ತಂಗಿರುವಿರಿ. ಇದೇ ಪುನರುತ್ಥಾನದ ದಿನವಾಗಿದೆ. ಆದರೆ ನೀವು ತಿಳಿದಿರಲಿಲ್ಲ. info
التفاسير:

external-link copy
57 : 30

فَیَوْمَىِٕذٍ لَّا یَنْفَعُ الَّذِیْنَ ظَلَمُوْا مَعْذِرَتُهُمْ وَلَا هُمْ یُسْتَعْتَبُوْنَ ۟

ಆದ್ದರಿಂದ ಆ ದಿನ ಅಕ್ರಮವೆಸಗಿದವರಿಗೆ ಅವರ ನೆಪಗಳು ಪ್ರಯೋಜನ ನೀಡದು ಮತ್ತು ಅವರಿಂದ ಪಶ್ಚಾತ್ತಾಪ ಪಡಲೂ ಹೇಳಲಾಗದು. info
التفاسير:

external-link copy
58 : 30

وَلَقَدْ ضَرَبْنَا لِلنَّاسِ فِیْ هٰذَا الْقُرْاٰنِ مِنْ كُلِّ مَثَلٍ ؕ— وَلَىِٕنْ جِئْتَهُمْ بِاٰیَةٍ لَّیَقُوْلَنَّ الَّذِیْنَ كَفَرُوْۤا اِنْ اَنْتُمْ اِلَّا مُبْطِلُوْنَ ۟

ನಿಸ್ಸಂಶಯವಾಗಿಯು ನಾವು ಈ ಕುರ್‌ಆನಿನಲ್ಲಿ ಜನರ ಮಾರ್ಗದರ್ಶನಕ್ಕಾಗಿ ಎಲ್ಲಾ ತರಹದ ಉಪಮೆಗಳನ್ನು ವಿವರಿಸಿ ಕೊಟ್ಟಿದ್ದೇವೆ ಮತ್ತು ನೀವು ಅವರ ಬಳಿಗೆ ಯಾವ ದೃಷ್ಟಾಂತವನ್ನು ತಂದರೂ ಈ ಸತ್ಯನಿಷೇಧಿಗಳು ನೀವು ಮಿಥ್ಯವಾದಿಗಳಾಗಿರುವಿರಿ ಎನ್ನುವರು. info
التفاسير:

external-link copy
59 : 30

كَذٰلِكَ یَطْبَعُ اللّٰهُ عَلٰى قُلُوْبِ الَّذِیْنَ لَا یَعْلَمُوْنَ ۟

ಇದೇ ಪ್ರಕಾರ ಅಲ್ಲಾಹನು ಅಜ್ಞಾತ ಜನರ ಹೃದಯಗಳ ಮೇಲೆ ಮುದ್ರೆಯೊತ್ತಿ ಬಿಡುವನು. info
التفاسير:

external-link copy
60 : 30

فَاصْبِرْ اِنَّ وَعْدَ اللّٰهِ حَقٌّ وَّلَا یَسْتَخِفَّنَّكَ الَّذِیْنَ لَا یُوْقِنُوْنَ ۟۠

ಇನ್ನು ನೀವು ಸಹನೆವಹಿಸಿರಿ. ನಿಜವಾಗಿಯು ಅಲ್ಲಾಹನ ವಾಗ್ದಾನವು ಸತ್ಯವಾಗಿದೆ ಮತ್ತು ದೃಢವಿಶ್ವಾಸವಿಲ್ಲದವರು ನಿಮ್ಮನ್ನು ಚಂಚಲಗೊಳಿಸದಿರಲಿ. info
التفاسير: