വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

പേജ് നമ്പർ:close

external-link copy
42 : 30

قُلْ سِیْرُوْا فِی الْاَرْضِ فَانْظُرُوْا كَیْفَ كَانَ عَاقِبَةُ الَّذِیْنَ مِنْ قَبْلُ ؕ— كَانَ اَكْثَرُهُمْ مُّشْرِكِیْنَ ۟

ಹೇಳಿರಿ: ನೀವು ಭೂಮಿಯಲ್ಲಿ ಸಂಚರಿಸಿ ನಿಮಗಿಂತ ಮುಂಚೆ ಗತಿಸಿದವರ ಪರಿಣಾಮವು ಹೇಗಾಯಿತೆಂಬುದನ್ನು ನೋಡಿರಿ. ಅವರಲ್ಲಿ ಹೆಚ್ಚಿನವರು ಬಹುದೇವಾರಾಧಕರಾಗಿದ್ದರು. info
التفاسير:

external-link copy
43 : 30

فَاَقِمْ وَجْهَكَ لِلدِّیْنِ الْقَیِّمِ مِنْ قَبْلِ اَنْ یَّاْتِیَ یَوْمٌ لَّا مَرَدَّ لَهٗ مِنَ اللّٰهِ یَوْمَىِٕذٍ یَّصَّدَّعُوْنَ ۟

ಆದ್ದರಿಂದ ಯಾರಿಂದಲೂ ತಡೆಯಲಾಗದಂತಹ ಒಂದು ದಿನ ಅಲ್ಲಾಹನ ಕಡೆಯಿಂದ ಬರುವುದಕ್ಕೆ ಮುಂಚೆ ನೀವು ನಿಮ್ಮ ಮುಖವನ್ನು ರುಜುವಾದ ಧರ್ಮದೆಡೆಗೇ ಕೇಂದ್ರೀಕರಿಸಿರಿ. ಆ ದಿನ ಜನರೆಲ್ಲರೂ ವಿಭಿನ್ನ ಗುಂಪುಗಳಾಗಿ ಬಿಡುವರು. info
التفاسير:

external-link copy
44 : 30

مَنْ كَفَرَ فَعَلَیْهِ كُفْرُهٗ ۚ— وَمَنْ عَمِلَ صَالِحًا فَلِاَنْفُسِهِمْ یَمْهَدُوْنَ ۟ۙ

ಸತ್ಯನಿಷೇಧ ತಾಳುವವರ ಮೇಲೆ ಅವರ ಸತ್ಯನಿಷೇಧದ ವಿಪತ್ತು ಇರುವುದು ಮತ್ತು ಸತ್ಕರ್ಮಗಳನ್ನು ಕೈಗೊಳ್ಳುವವರು ತಮ್ಮದೇ ಒಳಿತಿನ ಮಾರ್ಗವನ್ನು ಸುಗಮಗೊಳಿಸುತ್ತಿದ್ದಾರೆ. info
التفاسير:

external-link copy
45 : 30

لِیَجْزِیَ الَّذِیْنَ اٰمَنُوْا وَعَمِلُوا الصَّلِحٰتِ مِنْ فَضْلِهٖ ؕ— اِنَّهٗ لَا یُحِبُّ الْكٰفِرِیْنَ ۟

ಇದು ಸತ್ಯವಿಶ್ವಾಸಿವಿರಿಸಿ, ಸತ್ಕರ್ಮಗಳನ್ನು ಕೈಗೊಂಡವರಿಗೆ ಅಲ್ಲಾಹನು ತನ್ನ ಅನುಗ್ರಹದಿಂದ ಪ್ರತಿಫಲವನ್ನು ನೀಡಲೆಂದಾಗಿದೆ. ಖಂಡಿತವಾಗಿಯೂ ಅವನು ಸತ್ಯನಿಷೇಧಿಗಳನ್ನು ಮೆಚ್ಚುವುದಿಲ್ಲ. info
التفاسير:

external-link copy
46 : 30

وَمِنْ اٰیٰتِهٖۤ اَنْ یُّرْسِلَ الرِّیٰحَ مُبَشِّرٰتٍ وَّلِیُذِیْقَكُمْ مِّنْ رَّحْمَتِهٖ وَلِتَجْرِیَ الْفُلْكُ بِاَمْرِهٖ وَلِتَبْتَغُوْا مِنْ فَضْلِهٖ وَلَعَلَّكُمْ تَشْكُرُوْنَ ۟

(ಮಳೆಯ) ಸುವಾರ್ತೆಯನ್ನು ನೀಡುವಂತಹ ಮಾರುತಗಳನ್ನು ಕಳುಹಿಸುವುದು ಅವನ ನಿದರ್ಶನಗಳಲ್ಲೊಂದಾಗಿದೆ. ಇದು ಅವನು ಅವರಿಗೆ ತನ್ನ ಕಾರುಣ್ಯದ ಸವಿಯನ್ನುಣ್ಣಿಸಲೆಂದೂ ಅವನ ಆದೇಶದ ಮೇರೆಗೆ ಹಡಗು ಸಂಚರಿಸಲೆAದೂ ಅವನ ಅನುಗ್ರಹವನ್ನು ನೀವು ಅರಸಲೆಂದೂ ಮತ್ತು ನೀವು ಕೃತಜ್ಞತೆ ಸಲ್ಲಿಸಲೆಂದೂ ಆಗಿದೆ. info
التفاسير:

external-link copy
47 : 30

وَلَقَدْ اَرْسَلْنَا مِنْ قَبْلِكَ رُسُلًا اِلٰى قَوْمِهِمْ فَجَآءُوْهُمْ بِالْبَیِّنٰتِ فَانْتَقَمْنَا مِنَ الَّذِیْنَ اَجْرَمُوْا ؕ— وَكَانَ حَقًّا عَلَیْنَا نَصْرُ الْمُؤْمِنِیْنَ ۟

ನಿಶ್ಚಯವಾಗಿಯು ನಾವು ನಿಮಗಿಂತ ಮುಂಚೆ ಅನೇಕ ಸಂದೇಶವಾಹಕರನ್ನು ಅವರ ಜನಾಂಗಗಳೆಡೆಗೆ ಕಳುಹಿಸಿದ್ದೆವು. ಅವರು (ಪೈಗಂಬರರು) ಅವರ ಬಳಿಗೆ ಸುಸ್ಪಷ್ಟ ಪುರಾವೆಗಳನ್ನು ತಂದಿದ್ದರು. ಅನಂತರ ನಾವು ಆ ಅಪರಾಧಿಗಳೊಂದಿಗೆ ಪ್ರತಿಕಾರ ಪಡೆದೆವು. ಸತ್ಯವಿಶ್ವಾಸಿಗಳಿಗೆ ನೆರವಾಗುವುದು ನಮ್ಮ ಹೊಣೆಯಾಗಿದೆ. info
التفاسير:

external-link copy
48 : 30

اَللّٰهُ الَّذِیْ یُرْسِلُ الرِّیٰحَ فَتُثِیْرُ سَحَابًا فَیَبْسُطُهٗ فِی السَّمَآءِ كَیْفَ یَشَآءُ وَیَجْعَلُهٗ كِسَفًا فَتَرَی الْوَدْقَ یَخْرُجُ مِنْ خِلٰلِهٖ ۚ— فَاِذَاۤ اَصَابَ بِهٖ مَنْ یَّشَآءُ مِنْ عِبَادِهٖۤ اِذَا هُمْ یَسْتَبْشِرُوْنَ ۟

ಅಲ್ಲಾಹನು ಮಾರುತಗಳನ್ನು ಕಳುಹಿಸುತ್ತಾನೆ. ಅವುಗಳು ಮೋಡಗಳನ್ನು ಹೊತ್ತುಕೊಳ್ಳುತ್ತವೆ. ಅನಂತರ ಅಲ್ಲಾಹನು ತನ್ನಇಚ್ಛೆಯ ಪ್ರಕಾರ ಅವುಗಳನ್ನು ಆಕಾಶದಲ್ಲಿ ಹಬ್ಬಿಸುತ್ತಾನೆ ಮತ್ತು ಅವುಗಳನ್ನು ತುಣುಕು ತುಣುಕುಗಳನ್ನಾಗಿ ಮಾಡುತ್ತಾನೆ. ಅನಂತರ ನೀವು ಅವುಗಳಿಂದ ಮಳೆ ಹನಿಗಳು ಹೊರಬರುವುದನ್ನು ಕಾಣುವಿರಿ ಮತ್ತು ಅಲ್ಲಾಹನು ಇಚ್ಛಿಸುವ ತನ್ನ ದಾಸರ ಮೇಲೆ ಅದನ್ನು ವರ್ಷಿಸಿದಾಗ ಅವರು ಹರ್ಷಗೊಳ್ಳುವರು. info
التفاسير:

external-link copy
49 : 30

وَاِنْ كَانُوْا مِنْ قَبْلِ اَنْ یُّنَزَّلَ عَلَیْهِمْ مِّنْ قَبْلِهٖ لَمُبْلِسِیْنَ ۟

ವಸ್ತುತಃ ಅವರು ತಮ್ಮ ಮೇಲೆ ಮಳೆ ಸುರಿಯವ ಮುನ್ನ ಹತಾಶರಾಗಿದ್ದರು. info
التفاسير:

external-link copy
50 : 30

فَانْظُرْ اِلٰۤی اٰثٰرِ رَحْمَتِ اللّٰهِ كَیْفَ یُحْیِ الْاَرْضَ بَعْدَ مَوْتِهَا ؕ— اِنَّ ذٰلِكَ لَمُحْیِ الْمَوْتٰى ۚ— وَهُوَ عَلٰى كُلِّ شَیْءٍ قَدِیْرٌ ۟

ಆದ್ದರಿಂದ ನೀವು ಅಲ್ಲಾಹನ ಕಾರುಣ್ಯದ ಕುರುಹುಗಳನ್ನು ನೋಡಿರಿ. ಅಲ್ಲಾಹನು ಭೂಮಿಯನ್ನು ಅದರ ನಿರ್ಜೀವದ ಬಳಿಕ ಅದನ್ನು ಹೇಗೆ ಸಜೀವಗೊಳಿಸುತ್ತಾನೆ. ನಿಸ್ಸಂಶಯವಾಗಿಯೂ ಅವನೇ ಮೃತರನ್ನು ಜೀವಂತಗೊಳಿಸುವವನಾಗಿದ್ದಾನೆ ಮತ್ತು ಅವನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ. info
التفاسير: