വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

പേജ് നമ്പർ:close

external-link copy
23 : 12

وَرَاوَدَتْهُ الَّتِیْ هُوَ فِیْ بَیْتِهَا عَنْ نَّفْسِهٖ وَغَلَّقَتِ الْاَبْوَابَ وَقَالَتْ هَیْتَ لَكَ ؕ— قَالَ مَعَاذَ اللّٰهِ اِنَّهٗ رَبِّیْۤ اَحْسَنَ مَثْوَایَ ؕ— اِنَّهٗ لَا یُفْلِحُ الظّٰلِمُوْنَ ۟

ಯೂಸುಫ್‌ರವರು ವಾಸಿಸುತ್ತಿದ್ದ ಮನೆಯೊಡತಿ ಅವರನ್ನು ಫುಸಲಾಯಿಸಿದಳು ಒಮ್ಮೆ ಬಾಗಿಲುಗಳನ್ನು ಮುಚ್ಚಿ "ಇತ್ತ ಬಾ" ಎಂದಳು. ಯೂಸುಫ್ ಹೇಳಿದರು "ಅಲ್ಲಾಹನ ಅಭಯ ನಿಶ್ಚಯವಾಗಿ ನನ್ನ ಒಡೆಯನು ನನ್ನನ್ನು ಅತ್ಯುತ್ತಮವಾಗಿ ಇಟ್ಟಿದ್ದಾನೆ, ಖಂಡಿತವಾಗಿಯೂ ಅನ್ಯಾಯ ಮಾಡುವವರು ಯಶಸ್ಸು ಪಡೆಯುವುದಿಲ್ಲ. info
التفاسير:

external-link copy
24 : 12

وَلَقَدْ هَمَّتْ بِهٖ وَهَمَّ بِهَا لَوْلَاۤ اَنْ رَّاٰ بُرْهَانَ رَبِّهٖ ؕ— كَذٰلِكَ لِنَصْرِفَ عَنْهُ السُّوْٓءَ وَالْفَحْشَآءَ ؕ— اِنَّهٗ مِنْ عِبَادِنَا الْمُخْلَصِیْنَ ۟

ಆಕೆ ಅವರನ್ನು(ನೀಚ ಕೃತ್ಯಕ್ಕೆ) ಬಯಸಿದಳು ಆದರೆ ತಮ್ಮ ಪ್ರಭುವಿನ ದೃಷ್ಟಾಂತವನ್ನು ಯೂಸುಫ್‌ರವರು ಕಾಣದಿರುತ್ತಿದ್ದರೆ ಅವರೂ ಸಹ ಅವಳನ್ನು ಬಯಸುತ್ತಿದ್ದರು. ನಾವು ಅವರಿಂದ ಕೆಡುಕನ್ನು ನೀಚ ಕೃತ್ಯವನ್ನು ದೂರ ಮಾಡಲೆಂದು ಹೀಗೆ ಮಾಡಿದೆವು ನಿಸ್ಸಂಶಯವಾಗಿಯೂ ಅವರು ನಮ್ಮ ಆಯ್ಕೆಯಾದ ದಾಸರಲ್ಲಾಗಿದ್ದರು. info
التفاسير:

external-link copy
25 : 12

وَاسْتَبَقَا الْبَابَ وَقَدَّتْ قَمِیْصَهٗ مِنْ دُبُرٍ وَّاَلْفَیَا سَیِّدَهَا لَدَا الْبَابِ ؕ— قَالَتْ مَا جَزَآءُ مَنْ اَرَادَ بِاَهْلِكَ سُوْٓءًا اِلَّاۤ اَنْ یُّسْجَنَ اَوْ عَذَابٌ اَلِیْمٌ ۟

ಅವರಿಬ್ಬರೂ ಬಾಗಿಲಿನತ್ತ ಓಡಿದರು. ಆಕೆ ಹಿಂದಿನಿAದ ಅವರ ಅಂಗಿಯನ್ನು ಹರಿದಳು. ಅವರಿಬ್ಬರೂ ಬಾಗಿಲ ಬಳಿಯೇ ಅವಳ ಪತಿಯನ್ನು ಉಪಸ್ಥಿತರಿರುವುದಾಗಿ ಕಂಡರು, ಆಗ ಅವಳು ಹೇಳಿದಳು ನಿಮ್ಮ ಮಡದಿಯೊಂದಿಗೆ ಕೆಡುಕನ್ನು ಬಯಸಿದವರಿಗೆ ಸೆರೆಗೆ ತಳ್ಳುವುದು ಅಥವಾ ವೇದನಾಯುಕ್ತ ಶಿಕ್ಷೆಯಲ್ಲದೆ ಬೇರೆ ಪ್ರತಿಫಲವೇನಿದೆ ? info
التفاسير:

external-link copy
26 : 12

قَالَ هِیَ رَاوَدَتْنِیْ عَنْ نَّفْسِیْ وَشَهِدَ شَاهِدٌ مِّنْ اَهْلِهَا ۚ— اِنْ كَانَ قَمِیْصُهٗ قُدَّ مِنْ قُبُلٍ فَصَدَقَتْ وَهُوَ مِنَ الْكٰذِبِیْنَ ۟

ಯೂಸುಫ್ ಹೇಳಿದರು; ಇವಳೇ ನನ್ನನ್ನು ಫುಸಲಾಯಿಸಿದ್ದಳು ಆಗ ಆಕೆಯ ಕುಟುಂಬದಿAದಲೇ ಒಬ್ಬ ವ್ಯಕ್ತಿಯು ಸಾಕ್ಷಿ ವಹಿಸಿದನು. ಅವರ ಅಂಗಿಯೂ ಮುಂಭಾಗದಿAದ ಹರಿದು ಹೋಗಿದ್ದರೆ ಇವಳು ಸತ್ಯವಂತಳಾಗಿದ್ದಾಳೆ, ಮತ್ತು ಯೂಸುಫ್ ಸುಳ್ಳುಗಾರರಲ್ಲಾಗಿರುವರು. info
التفاسير:

external-link copy
27 : 12

وَاِنْ كَانَ قَمِیْصُهٗ قُدَّ مِنْ دُبُرٍ فَكَذَبَتْ وَهُوَ مِنَ الصّٰدِقِیْنَ ۟

ಇನ್ನು ಇವರ ಅಂಗಿಯೂ ಹಿಂಭಾಗದಿAದ ಹರಿದು ಹೋಗಿದ್ದರೆ ಇವಳು ಸುಳ್ಳುಗಾರ್ತಿಯಾಗಿದ್ದು ಮತ್ತು ಯೂಸುಫ್ ಸತ್ಯವಂತರಲ್ಲಾಗಿರುವರು. info
التفاسير:

external-link copy
28 : 12

فَلَمَّا رَاٰ قَمِیْصَهٗ قُدَّ مِنْ دُبُرٍ قَالَ اِنَّهٗ مِنْ كَیْدِكُنَّ ؕ— اِنَّ كَیْدَكُنَّ عَظِیْمٌ ۟

ಅವರ ಅಂಗಿಯೂ ಹಿಂಭಾಗದಿAದ ಹರಿದು ಹೋಗಿರುವುದನ್ನು ಆಕೆಯ ಪತಿ ಕಂಡಾಗ ಸ್ಪಷ್ಟವಾಗಿ ಹೇಳಿಬಿಟ್ಟನು: ಇದಂತೂ ನಿಮ್ಮ ಹೆಂಗಸರ ಕುತಂತ್ರವಾಗಿದೆ. ನಿಸ್ಸಂದೇಹವಾಗಿಯೂ ನಿಮ್ಮ ಕುತಂತ್ರವೂ ಅತಿ ದೊಡ್ಡದಾಗಿರುತ್ತದೆ. info
التفاسير:

external-link copy
29 : 12

یُوْسُفُ اَعْرِضْ عَنْ هٰذَا ٚ— وَاسْتَغْفِرِیْ لِذَنْۢبِكِ ۖۚ— اِنَّكِ كُنْتِ مِنَ الْخٰطِـِٕیْنَ ۟۠

ಓ ಯೂಸುಫ್! ಈ ವಿಷಯವನ್ನು ಕಡೆಗಣಿಸಿರಿ ಮತ್ತು( ಓ ಸ್ತಿçÃಯೇ) ನೀನು ನಿನ್ನ ತಪ್ಪಿಗಾಗಿ ಕ್ಷಮೆಯಾಚಿಸು, ಖಂಡಿತವಾಗಿಯೂ ನೀನೇ ತಪ್ಪಿತಸ್ಥೆಯಾಗಿದ್ದೆ. info
التفاسير:

external-link copy
30 : 12

وَقَالَ نِسْوَةٌ فِی الْمَدِیْنَةِ امْرَاَتُ الْعَزِیْزِ تُرَاوِدُ فَتٰىهَا عَنْ نَّفْسِهٖ ۚ— قَدْ شَغَفَهَا حُبًّا ؕ— اِنَّا لَنَرٰىهَا فِیْ ضَلٰلٍ مُّبِیْنٍ ۟

ಆ ಪಟ್ಟಣದ ಸ್ತಿçÃಯರು ಪರಸ್ಪರ ಚರ್ಚೆ ಮಾಡತೊಡಗಿದರು, ರಾಜನ ಪತ್ನಿ ತನ್ನ ತರುಣ ಸೇವಕನನ್ನು ಪುಸಲಾಯಿಸುವುದರಲ್ಲಿ ತಲ್ಲಿನಳಾಗಿದ್ದಾಳೆ. ಅವಳ ಹೃದಯದಲ್ಲಿ ಆ ತರುಣನ ಪ್ರೇಮವು ನೆಲೆಯೂರಿದೆ ನಮ್ಮ ಅಭಿಪ್ರಾಯದಲ್ಲಿ ಅವಳು ಸ್ಪಷ್ಟ ಮಾರ್ಗಚ್ಯುತಿಯಲ್ಲಿದ್ದಾಳೆ. info
التفاسير: