വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

പേജ് നമ്പർ:close

external-link copy
87 : 12

یٰبَنِیَّ اذْهَبُوْا فَتَحَسَّسُوْا مِنْ یُّوْسُفَ وَاَخِیْهِ وَلَا تَایْـَٔسُوْا مِنْ رَّوْحِ اللّٰهِ ؕ— اِنَّهٗ لَا یَایْـَٔسُ مِنْ رَّوْحِ اللّٰهِ اِلَّا الْقَوْمُ الْكٰفِرُوْنَ ۟

ಓ ನನ್ನ ಪುತ್ರರೇ ನೀವು ಹೋಗಿ ಯೂಸುಫ್ ಮತ್ತು ಅವನ ಸಹೋದರನನ್ನು ಹುಡುಕಿರಿ ಮತ್ತು ನೀವು ಅಲ್ಲಾಹನ ಕೃಪೆಯಿಂದ ನಿರಾಶರಾಗದಿರಿ. ನಿಸ್ಸಂಶಯವಾಗಿಯೂ ಸತ್ಯನಿಷÉÃಧಿಗಳ ಹೊರತು ಅಲ್ಲಾಹನ ಕೃಪೆಯಿಂದ ಬೇರಾರೂ ನಿರಾಶರಾಗಲಾರರು. info
التفاسير:

external-link copy
88 : 12

فَلَمَّا دَخَلُوْا عَلَیْهِ قَالُوْا یٰۤاَیُّهَا الْعَزِیْزُ مَسَّنَا وَاَهْلَنَا الضُّرُّ وَجِئْنَا بِبِضَاعَةٍ مُّزْجٰىةٍ فَاَوْفِ لَنَا الْكَیْلَ وَتَصَدَّقْ عَلَیْنَا ؕ— اِنَّ اللّٰهَ یَجْزِی الْمُتَصَدِّقِیْنَ ۟

ಅನಂತರ ಅವರು ಯೂಸುಫ್‌ರವರ ಬಳಿಗೆ ತಲುಪಿದಾಗ ಹೇಳಿದರು; ಓ ರಾಜನೆ ನಮಗೂ ನಮ್ಮ ಕುಟುಂಬಕ್ಕೂ ಸಂಕಷ್ಟ ಭಾದಿಸಿದೆ, ಮತ್ತು ನಾವು ಅತ್ಯಲ್ಪ ಬಂಡವಾಳದೊAದಿಗೆ ಬಂದಿರುತ್ತೇವೆ. ಆದ್ದರಿಂದ ನೀವು ನಮಗೆ ಸಂಪೂರ್ಣ ಧಾನ್ಯವನ್ನು ನೀಡಿರಿ, ಮತ್ತು ನಮ್ಮ ಮೇಲೆ ದಾನ ಧರ್ಮವನ್ನು ಮಾಡಿರಿ. ಖಂಡಿತವಾಗಿಯೂ ಅಲ್ಲಾಹನು ದಾನ-ಧರ್ಮ ನೀಡುವವರಿಗೆ ಪ್ರತಿಫಲವನ್ನು ನೀಡುವನು. info
التفاسير:

external-link copy
89 : 12

قَالَ هَلْ عَلِمْتُمْ مَّا فَعَلْتُمْ بِیُوْسُفَ وَاَخِیْهِ اِذْ اَنْتُمْ جٰهِلُوْنَ ۟

ಯೂಸುಫ್ ಹೇಳಿದರು; ನೀವು ಅಜ್ಞಾನಿಗಳಾಗಿದ್ದಾಗ ಯೂಸುಫ್ ಮತ್ತು ಅವನ ಸಹೋದರನೊಂದಿಗೆ ಹೇಗೆ ವರ್ತಿಸಿದ್ದೀರೆಂದು ನಿಮಗೆ ತಿಳಿದಿದೆಯೇ ? info
التفاسير:

external-link copy
90 : 12

قَالُوْۤا ءَاِنَّكَ لَاَنْتَ یُوْسُفُ ؕ— قَالَ اَنَا یُوْسُفُ وَهٰذَاۤ اَخِیْ ؗ— قَدْ مَنَّ اللّٰهُ عَلَیْنَا ؕ— اِنَّهٗ مَنْ یَّتَّقِ وَیَصْبِرْ فَاِنَّ اللّٰهَ لَا یُضِیْعُ اَجْرَ الْمُحْسِنِیْنَ ۟

ಅವರು ಹೇಳಿದರು; ನಿಜವಾಗಿಯೂ ನೀವೇ ಯೂಸುಫ್‌ರವರೇ ? ಅವರು ಉತ್ತರಿಸಿದರು ಹೌದು ನಾನೇ ಯೂಸುಫ್, ಇವನು ನನ್ನ ಸಹೋದರನು ಅಲ್ಲಾಹನು ನಮ್ಮ ಮೇಲೆ ಅನುಗ್ರಹವನ್ನು ಮಾಡಿರುತ್ತಾನೆ. ವಾಸ್ತವದಲ್ಲಿ ಭಯ-ಭಕ್ತಿಯನ್ನಿರಿಸುವವರಿಗೆ ಮತ್ತು ಸಹನಶೀಲತೆ ತೋರಿಸುವ ಸಜ್ಜನರ ಪ್ರತಿಫಲವನ್ನು ಅಲ್ಲಾಹನು ವ್ಯರ್ಥಗೊಳಿಸುವುದಿಲ್ಲ. info
التفاسير:

external-link copy
91 : 12

قَالُوْا تَاللّٰهِ لَقَدْ اٰثَرَكَ اللّٰهُ عَلَیْنَا وَاِنْ كُنَّا لَخٰطِـِٕیْنَ ۟

ಅವರು ಹೇಳಿದರು ಅಲ್ಲಾಹನಾಣೆ ಅಲ್ಲಾಹನು ನಿಮಗೆ ನಮ್ಮ ಮೇಲೆ ಶ್ರೇಷÀ್ಠತೆಯನ್ನು ನೀಡಿರುವನು ಮತ್ತು ನಾವು ತಪ್ಪಿತಸ್ಥರೇ ಆಗಿದ್ದೆವು. info
التفاسير:

external-link copy
92 : 12

قَالَ لَا تَثْرِیْبَ عَلَیْكُمُ الْیَوْمَ ؕ— یَغْفِرُ اللّٰهُ لَكُمْ ؗ— وَهُوَ اَرْحَمُ الرّٰحِمِیْنَ ۟

ಅವರು ಉತ್ತರಿಸಿದರು; ಇಂದು ನಿಮ್ಮ ಮೇಲೆ ಯಾವ ದೋಷಾರೋಪಣೆ ಇಲ್ಲ ಅಲ್ಲಾಹನು ನಿಮಗೆ ಕ್ಷಮಿಸಲಿ. ಅವನು ಸಕಲ ಕಾರುಣ್ಯವಂತರಲ್ಲಿ ಮಹಾ ಕಾರುಣ್ಯವಂತನಾಗಿದ್ದಾನೆ. info
التفاسير:

external-link copy
93 : 12

اِذْهَبُوْا بِقَمِیْصِیْ هٰذَا فَاَلْقُوْهُ عَلٰی وَجْهِ اَبِیْ یَاْتِ بَصِیْرًا ۚ— وَاْتُوْنِیْ بِاَهْلِكُمْ اَجْمَعِیْنَ ۟۠

ನೀವು ನನ್ನ ಅಂಗಿಯನ್ನು ತೆಗೆದುಕೊಂಡು ಹೋಗಿರಿ, ಅದನ್ನು ನನ್ನ ತಂದೆಯವರ ಮುಖದ ಮೇಲೆ ಹಾಕಿ, ಅವರ ದೃಷ್ಟಿ ಮರಳಿ ಬರುವುದು ನಂತರ ನಿಮ್ಮ ಎಲ್ಲಾ ಕುಟುಂಬದವರನ್ನು ನನ್ನ ಬಳಿಗೆ ಕರೆತನ್ನಿರಿ. info
التفاسير:

external-link copy
94 : 12

وَلَمَّا فَصَلَتِ الْعِیْرُ قَالَ اَبُوْهُمْ اِنِّیْ لَاَجِدُ رِیْحَ یُوْسُفَ لَوْلَاۤ اَنْ تُفَنِّدُوْنِ ۟

ಆಗ ಈ ಯಾತ್ರಾ ತಂಡವು (ಈಜಿಪ್ಟಿನಿಂದ) ಹೊರಟಾಗ ಅವರ ತಂದೆಯೂ ಹೇಳಿದರು; ನಾನು ಯೂಸುಫ್‌ನ ಸುಗಂಧವನ್ನು ಪಡೆಯುತ್ತಿದ್ದೇನೆ, ನೀವು ನನ್ನನ್ನು ಅರಳು ಮರುಳಾದವನೆಂದು ತಿಳಿಯದಿದ್ದರೆ! info
التفاسير:

external-link copy
95 : 12

قَالُوْا تَاللّٰهِ اِنَّكَ لَفِیْ ضَلٰلِكَ الْقَدِیْمِ ۟

ಅವರು ಹೇಳಿದರು ಅಲ್ಲಾಹನಾಣೆ ತಮ್ಮ ಅದೇ ಹಳೆಯ ತಪ್ಪು ಗ್ರಹಿಕೆಯಲ್ಲಿದ್ದೀರಿ. info
التفاسير: