Kilniojo Korano reikšmių vertimas - Vertimas į kanadiečių k. - Hamza Batūr

Puslapio numeris:close

external-link copy
148 : 4

لَا یُحِبُّ اللّٰهُ الْجَهْرَ بِالسُّوْٓءِ مِنَ الْقَوْلِ اِلَّا مَنْ ظُلِمَ ؕ— وَكَانَ اللّٰهُ سَمِیْعًا عَلِیْمًا ۟

ಕೆಟ್ಟ ಪದಗಳನ್ನು ಜೋರಾಗಿ ಹೇಳುವುದನ್ನು ಅಲ್ಲಾಹು ಇಷ್ಟಪಡುವುದಿಲ್ಲ. ಆದರೆ ಅನ್ಯಾಯಕ್ಕೆ ಗುರಿಯಾದವನು ಇದರಿಂದ ಹೊರತಾಗಿದ್ದಾನೆ. ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ. info
التفاسير:

external-link copy
149 : 4

اِنْ تُبْدُوْا خَیْرًا اَوْ تُخْفُوْهُ اَوْ تَعْفُوْا عَنْ سُوْٓءٍ فَاِنَّ اللّٰهَ كَانَ عَفُوًّا قَدِیْرًا ۟

ನೀವು ಬಹಿರಂಗವಾಗಿ ಅಥವಾ ರಹಸ್ಯವಾಗಿ ಒಳಿತು ಮಾಡಿದರೂ, ಅಥವಾ ಒಂದು ದುಷ್ಕರ್ಮವನ್ನು ಕ್ಷಮಿಸಿದರೂ—ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಸರ್ವಶಕ್ತನಾಗಿದ್ದಾನೆ. info
التفاسير:

external-link copy
150 : 4

اِنَّ الَّذِیْنَ یَكْفُرُوْنَ بِاللّٰهِ وَرُسُلِهٖ وَیُرِیْدُوْنَ اَنْ یُّفَرِّقُوْا بَیْنَ اللّٰهِ وَرُسُلِهٖ وَیَقُوْلُوْنَ نُؤْمِنُ بِبَعْضٍ وَّنَكْفُرُ بِبَعْضٍ ۙ— وَّیُرِیْدُوْنَ اَنْ یَّتَّخِذُوْا بَیْنَ ذٰلِكَ سَبِیْلًا ۙ۟

ನಿಶ್ಚಯವಾಗಿಯೂ ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ನಿಷೇಧಿಸುವವರು, ಅಲ್ಲಾಹು ಮತ್ತು ಅವನ ಸಂದೇಶವಾಹಕರ ನಡುವೆ ಬೇಧ ಮಾಡಲು ಬಯಸುವವರು, ನಾವು ಕೆಲವರನ್ನು ನಂಬುತ್ತೇವೆ ಮತ್ತು ಕೆಲವರನ್ನು ನಿಷೇಧಿಸುತ್ತೇವೆ ಎಂದು ಹೇಳುವವರು ಹಾಗೂ ಅದರ ಮಧ್ಯೆ ಒಂದು ಮಾರ್ಗವನ್ನು ಸ್ವೀಕರಿಸಲು ಬಯಸುವವರು ಯಾರೋ, info
التفاسير:

external-link copy
151 : 4

اُولٰٓىِٕكَ هُمُ الْكٰفِرُوْنَ حَقًّا ۚ— وَاَعْتَدْنَا لِلْكٰفِرِیْنَ عَذَابًا مُّهِیْنًا ۟

ಅವರೇ ನಿಜವಾದ ಸತ್ಯನಿಷೇಧಿಗಳು. ಆ ಸತ್ಯನಿಷೇಧಿಗಳಿಗೆ ನಾವು ಅವಮಾನಕರ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ. info
التفاسير:

external-link copy
152 : 4

وَالَّذِیْنَ اٰمَنُوْا بِاللّٰهِ وَرُسُلِهٖ وَلَمْ یُفَرِّقُوْا بَیْنَ اَحَدٍ مِّنْهُمْ اُولٰٓىِٕكَ سَوْفَ یُؤْتِیْهِمْ اُجُوْرَهُمْ ؕ— وَكَانَ اللّٰهُ غَفُوْرًا رَّحِیْمًا ۟۠

ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡುವವರು, ಮತ್ತು ಅವರಲ್ಲಿ ಯಾರ ನಡುವೆಯೂ ಬೇಧ ಮಾಡದವರು ಯಾರೋ—ಅವರಿಗೆ ಅಲ್ಲಾಹು ಅರ್ಹ ಪ್ರತಿಫಲವನ್ನು ನೀಡುವನು. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. info
التفاسير:

external-link copy
153 : 4

یَسْـَٔلُكَ اَهْلُ الْكِتٰبِ اَنْ تُنَزِّلَ عَلَیْهِمْ كِتٰبًا مِّنَ السَّمَآءِ فَقَدْ سَاَلُوْا مُوْسٰۤی اَكْبَرَ مِنْ ذٰلِكَ فَقَالُوْۤا اَرِنَا اللّٰهَ جَهْرَةً فَاَخَذَتْهُمُ الصّٰعِقَةُ بِظُلْمِهِمْ ۚ— ثُمَّ اتَّخَذُوا الْعِجْلَ مِنْ بَعْدِ مَا جَآءَتْهُمُ الْبَیِّنٰتُ فَعَفَوْنَا عَنْ ذٰلِكَ ۚ— وَاٰتَیْنَا مُوْسٰی سُلْطٰنًا مُّبِیْنًا ۟

ಗ್ರಂಥದವರು ನಿಮ್ಮೊಂದಿಗೆ—ಅವರಿಗೆ ಆಕಾಶದಿಂದ ಒಂದು ಗ್ರಂಥವನ್ನು ಇಳಿಸಿಕೊಡಬೇಕೆಂದು ಕೇಳುತ್ತಾರೆ. ಅವರು ಮೂಸಾರೊಡನೆ ಇದಕ್ಕಿಂತಲೂ ದೊಡ್ಡ ಸಂಗತಿಯನ್ನು ಕೇಳಿದ್ದರು. ಅವರು ಹೇಳಿದರು: “ನಮಗೆ ಅಲ್ಲಾಹನನ್ನು ಪ್ರತ್ಯಕ್ಷವಾಗಿ ತೋರಿಸಿಕೊಡಿ.” ಆಗ ಅವರು ಮಾಡಿದ ಅನ್ಯಾಯದಿಂದಾಗಿ ಮಿಂಚು ಅವರ ಮೇಲೆರಗಿತು. ನಂತರ ಅವರಿಗೆ ಸ್ಪಷ್ಟ ಸಾಕ್ಷ್ಯಾಧಾರಗಳು ತಲುಪಿದ ಬಳಿಕವೂ ಅವರು ಕರುವನ್ನು (ದೇವರನ್ನಾಗಿ) ಸ್ವೀಕರಿಸಿದರು. ಆದರೂ ನಾವು ಅದನ್ನು ಕ್ಷಮಿಸಿದೆವು. ಮೂಸಾರಿಗೆ ನಾವು ಸ್ಪಷ್ಟ ಸಾಕ್ಷ್ಯಾಧಾರಗಳನ್ನು ನೀಡಿದ್ದೆವು. info
التفاسير:

external-link copy
154 : 4

وَرَفَعْنَا فَوْقَهُمُ الطُّوْرَ بِمِیْثَاقِهِمْ وَقُلْنَا لَهُمُ ادْخُلُوا الْبَابَ سُجَّدًا وَّقُلْنَا لَهُمْ لَا تَعْدُوْا فِی السَّبْتِ وَاَخَذْنَا مِنْهُمْ مِّیْثَاقًا غَلِیْظًا ۟

ಅವರಿಂದ ಕರಾರು ಪಡೆಯಲು ನಾವು ಅವರ ಮೇಲೆ ತೂರ್ ಪರ್ವತವನ್ನು ಎತ್ತಿಹಿಡಿದೆವು. ತಲೆಬಾಗುತ್ತಾ ದ್ವಾರವನ್ನು ಪ್ರವೇಶಿಸಿರಿ ಎಂದು ನಾವು ಅವರಿಗೆ ಆದೇಶಿಸಿದೆವು. ಸಬ್ಬತ್ ದಿನದಲ್ಲಿ ಅತಿರೇಕವೆಸಗಬೇಡಿ ಎಂದು ಅವರೊಡನೆ ಹೇಳಿದೆವು. ನಾವು ಅವರಿಂದ ಪ್ರಬಲ ಕರಾರನ್ನು ಪಡೆದೆವು. info
التفاسير: